ನವದೆಹಲಿ: ಆಂಡ್ರಾಯ್ಡ್ ಫ್ಲ್ಯಾಗ್ಶಿಪ್ (ಉತ್ಕೃಷ್ಟ) ಸ್ಮಾರ್ಟ್ಫೋನ್ಗಳಿಗೆ ಅಗತ್ಯವಾದ ಸ್ನ್ಯಾಪ್ ಡ್ರಾಗನ್ 8 ಎಸ್ ಜೆನ್ 3 (Snapdragon 8s Gen 3) ಮೊಬೈಲ್ ಚಿಪ್ ತಯಾರಿಸಿರುವುದಾಗಿ ಚಿಪ್ ತಯಾರಕ ಕಂಪನಿ ಕ್ವಾಲ್ಕಾಮ್ ಸೋಮವಾರ ಘೋಷಿಸಿದೆ. ಸ್ನ್ಯಾಪ್ ಡ್ರಾಗನ್ 8ಎಸ್ ಜೆನ್ 3 ಅನ್ನು ಹಾನರ್, ಐಕ್ಯೂಒ, ರಿಯಲ್ ಮಿ, ರೆಡ್ಮಿ ಮತ್ತು ಶಿಯೋಮಿ ಸೇರಿದಂತೆ ಪ್ರಮುಖ ಕಂಪನಿಗಳು ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ಅಳವಡಿಸಿಕೊಳ್ಳಲಿದ್ದು, ಈ ಬಗ್ಗೆ ಶೀಘ್ರದಲ್ಲೇ ಘೋಷಿಸುವ ನಿರೀಕ್ಷೆಯಿದೆ.
ಜನರೇಟಿವ್ ಎಐ ವೈಶಿಷ್ಟ್ಯಗಳಿಗೆ ಬೆಂಬಲ, ಆಲ್ವೇಸ್ ಸೆನ್ಸಿಂಗ್ ಐಎಸ್ಪಿ, ಹೈಪರ್-ರಿಯಲಿಸ್ಟಿಕ್ ಮೊಬೈಲ್ ಗೇಮಿಂಗ್, ಬ್ರೇಕ್ ಥ್ರೂ ಕನೆಕ್ಟಿವಿಟಿ ಮತ್ತು ನಷ್ಟವಿಲ್ಲದ ಹೈ-ಡೆಫಿನಿಷನ್ ಸೌಂಡ್ ಈ ಚಿಪ್ನ ಪ್ರಮುಖ ವೈಶಿಷ್ಟ್ಯಗಳಲ್ಲಿ ಸೇರಿವೆ ಎಂದು ಕಂಪನಿ ತಿಳಿಸಿದೆ. ಈ ಪ್ಲಾಟ್ ಫಾರ್ಮ್ ಬೈಚುವಾನ್ -7 ಬಿ, ಲಾಮಾ 2 ಮತ್ತು ಜೆಮಿನಿ ನ್ಯಾನೊದಂತಹ ಜನಪ್ರಿಯ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ಗಳು (ಎಲ್ ಎಲ್ ಎಂ) ಸೇರಿದಂತೆ ಎಐ ಮಾದರಿಗಳ ವಿಶಾಲ ಶ್ರೇಣಿಯನ್ನು ಬೆಂಬಲಿಸುತ್ತದೆ.
"ಆನ್-ಡಿವೈಸ್ ಜನರೇಟಿವ್ ಎಐ ಮತ್ತು ಸುಧಾರಿತ ಛಾಯಾಗ್ರಹಣ ವೈಶಿಷ್ಟ್ಯಗಳ ಸಾಮರ್ಥ್ಯಗಳೊಂದಿಗೆ, ಸ್ನ್ಯಾಪ್ ಡ್ರಾಗನ್ 8 ಎಸ್ ಜೆನ್ 3 ಅನ್ನು ಬಳಕೆದಾರರ ಅನುಭವಗಳನ್ನು ಹೆಚ್ಚಿಸಲು, ಅವರ ದೈನಂದಿನ ಜೀವನದಲ್ಲಿ ಸೃಜನಶೀಲತೆ ಮತ್ತು ಉತ್ಪಾದಕತೆಯನ್ನು ಬೆಳೆಸಲು ವಿನ್ಯಾಸಗೊಳಿಸಲಾಗಿದೆ" ಎಂದು ಕ್ವಾಲ್ಕಾಮ್ ಟೆಕ್ನಾಲಜೀಸ್ನ ಮೊಬೈಲ್ ಹ್ಯಾಂಡ್ಸೆಟ್ ವಿಭಾಗದ ಹಿರಿಯ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ಕ್ರಿಸ್ ಪ್ಯಾಟ್ರಿಕ್ ಹೇಳಿದರು. ಸ್ನ್ಯಾಪ್ ಡ್ರಾಗನ್ 8 ಎಸ್ ಜೆನ್ 3 ಹೊಂದಿರುವ ಮೊದಲ ಸ್ಮಾರ್ಟ್ ಪೋನ್ ಇದೇ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ.
ಹೊಸ ಮೊಬೈಲ್ ಚಿಪ್ ನಮ್ಮ ಗ್ರಾಹಕರಿಗೆ ವೈಯಕ್ತಿಕಗೊಳಿಸಿದ ಪ್ರೀಮಿಯಂ ಅನುಭವವನ್ನು ಒದಗಿಸಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ಶಿಯೋಮಿ ಕಾರ್ಪೊರೇಷನ್ ನ ಪಾಲುದಾರ ಮತ್ತು ಅಧ್ಯಕ್ಷ, ಅಂತರರಾಷ್ಟ್ರೀಯ ವ್ಯವಹಾರ ವಿಭಾಗದ ಅಧ್ಯಕ್ಷ ವಿಲಿಯಂ ಲು ಹೇಳಿದ್ದಾರೆ.
ಮೊಬೈಲ್ ಫೋನ್ ಗಳು ಎಂಬೆಡೆಡ್ ಚಿಪ್ ಸೆಟ್ ಗಳು ಎಂದು ಕರೆಯಲ್ಪಡುವ ಚಿಪ್ನಿಂದ ಕೆಲಸ ಮಾಡುತ್ತವೆ. ಇವುಗಳನ್ನು ಒಂದು ಅಥವಾ ಕೆಲ ಮೀಸಲಾದ ಕಾರ್ಯಗಳನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಅತ್ಯಧಿಕ ಜನಪ್ರಿಯತೆ ಹೊಂದಿರುವ ಸ್ಮಾರ್ಟ್ ಫೋನ್ ಗಳು ಹೆಚ್ಚು ಸುಧಾರಿತ ಎಂಬೆಡೆಡ್ ಚಿಪ್ ಸೆಟ್ ಗಳನ್ನು ಹೊಂದಿದ್ದು, ಅವುಗಳ ಪ್ರೋಗ್ರಾಮಿಂಗ್ ಅನ್ನು ಅವಲಂಬಿಸಿ ಅನೇಕ ವಿಭಿನ್ನ ಕಾರ್ಯಗಳನ್ನು ಮಾಡಬಹುದು.
ಇದನ್ನೂ ಓದಿ : ಕಳೆದ ವರ್ಷ ಭಾರತದಲ್ಲಿ ದಾಖಲೆಯ 1 ಲಕ್ಷ ಪೇಟೆಂಟ್ ನೋಂದಣಿ