Snapdragon 8 Elite: ಕ್ವಾಲ್ಕಾಮ್ ತನ್ನ ಅತ್ಯಂತ ಶಕ್ತಿಶಾಲಿ ಮೊಬೈಲ್ ಪ್ರೊಸೆಸರ್ ಸ್ನಾಪ್ಡ್ರಾಗನ್ 8 ಎಲೈಟ್ ಅನ್ನು ಸ್ನಾಪ್ಡ್ರಾಗನ್ ಶೃಂಗಸಭೆಯಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಚಿಪ್‌ಸೆಟ್ ಅನ್ನು ಮಿಂಚಿನ ವೇಗದಲ್ಲಿ ಕಾರ್ಯ ನಿರ್ವಹಿಸಲು, ಮೊಬೈಲ್ ಅನುಭವವನ್ನು ಸುಧಾರಿಸಲು ಮತ್ತು OnePlus 13 ಮತ್ತು iQOO 13 ನಂತಹ ಮುಂಬರುವ ಪ್ರಮುಖ ಫೋನ್‌ಗಳಿಗೆ ಶಕ್ತಿ ನೀಡಲು ವಿನ್ಯಾಸಗೊಳಿಸಲಾಗಿದೆ.
ಸ್ನಾಪ್‌ಡ್ರಾಗನ್ 8 ಎಲೈಟ್ ಕ್ವಾಲ್‌ಕಾಮ್‌ನಿಂದ ಇದುವರೆಗೆ ಮಾಡಿದ ಅತ್ಯಂತ ವೇಗದ ಮೊಬೈಲ್ ಪ್ರೊಸೆಸರ್ ಆಗಿದೆ. ಈ ಹೊಸ ಚಿಪ್ ಫೋನ್ನ ಮೆದುಳಿನಂತಿರುತ್ತೆ. ಇದು ಅನೇಕ ಕಾರ್ಯಗಳನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ನೀವು ಗೇಮಿಂಗ್, ಸ್ಟ್ರೀಮಿಂಗ್ ವಿಡಿಯೋಗಳು ಅಥವಾ AI (ಕೃತಕ ಬುದ್ಧಿಮತ್ತೆ) ಬಳಸುವ ಅಪ್ಲಿಕೇಶನ್‌ಗಳನ್ನು ಉಪಯೋಗಿಸುತ್ತಿರುವಾಗ Snapdragon 8 Elite ಎಲ್ಲವನ್ನೂ ಸುಲಭ ಮತ್ತು ವೇಗವಾಗಿ ಮಾಡಲು ಭರವಸೆ ನೀಡುತ್ತದೆ.
The next generation of mobile experiences is here. #Snapdragon 8 Elite features the fastest mobile CPU in the world thanks to the @Qualcomm Oryon CPU, paired with the most powerful on-device #AI ever for a smartphone. pic.twitter.com/OwLlB7oNM4
— Snapdragon (@Snapdragon) October 21, 2024
ಪ್ರೊಸೆಸರ್‌ನ ಹೃದಯಭಾಗದಲ್ಲಿ ಕ್ವಾಲ್ಕಾಮ್‌ನ ಕಸ್ಟಮ್-ಬಿಲ್ಟ್ ಓರಿಯನ್ CPU (ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್) ಇದೆ. ಇದು ನಿಮ್ಮ ಸಾಧನದ ಪ್ರಮುಖ ಕಾರ್ಯಾಚರಣೆಗಳಿಗೆ ಕಾರಣವಾಗಿದೆ. Oryon CPU ಹಿಂದಿನ ಚಿಪ್‌ಗಳಿಗಿಂತ 45 ಪ್ರತಿಶತ ಉತ್ತಮ ಕಾರ್ಯಕ್ಷಮತೆ ನೀಡುತ್ತದೆ. ಅಂದರೆ ಅಪ್ಲಿಕೇಶನ್‌ಗಳನ್ನು ತೆರೆಯುವುದು ಮತ್ತು ವೆಬ್ ಬ್ರೌಸಿಂಗ್‌ನಂತಹ ಕಾರ್ಯಗಳು ಗಮನಾರ್ಹವಾಗಿ ವೇಗಗೊಳಿಸುತ್ತದೆ. ಇದು 44 ಪ್ರತಿಶತ ಹೆಚ್ಚಿನ ಪವರ್ ದಕ್ಷತೆ ಸಹ ನೀಡುತ್ತದೆ. ಆದ್ದರಿಂದ ಈ ಹೆಚ್ಚಿನ ವೇಗದ ಕಾರ್ಯಗಳನ್ನು ನಿರ್ವಹಿಸುವಾಗ ನಿಮ್ಮ ಫೋನ್ ಬ್ಯಾಟರಿಯನ್ನು ತ್ವರಿತವಾಗಿ ಡೌನ್ ಆಗುವುದಿಲ್ಲ.
AI-ಚಾಲಿತ ವೈಶಿಷ್ಟ್ಯಗಳು: ಸ್ನಾಪ್‌ಡ್ರಾಗನ್ 8 ಎಲೈಟ್‌ನಲ್ಲಿ ಅತ್ಯಾಕರ್ಷಕ AI (ಕೃತಕ ಬುದ್ಧಿಮತ್ತೆ) ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ನವೀಕರಿಸಿದ ಹೆಕ್ಸಾಗೊನ್ NPU (ನ್ಯೂರಲ್ ಪ್ರೊಸೆಸಿಂಗ್ ಯುನಿಟ್) ನಿಮ್ಮ ಫೋನ್ನ ಕಾರ್ಯಾಚರಣೆಗಳನ್ನು ಅರ್ಥಮಾಡಿಕೊಳ್ಳಬಹುದು ಮತ್ತು ನಿಮ್ಮ ಬಳಕೆಯ ಆಧಾರದ ಮೇಲೆ ಸ್ಮಾರ್ಟ್ ಸಲಹೆಗಳನ್ನು ಮಾಡಬಹುದು. ಉದಾಹರಣೆಗೆ, ನಿಮ್ಮ ಅಪ್ಲಿಕೇಶನ್‌ಗಳನ್ನು ನೀವು ಹೇಗೆ ಬಳಸುತ್ತೀರಿ ಎಂಬುದನ್ನು ಪ್ರೊಸೆಸರ್ ಕಲಿಯಬಹುದು ಮತ್ತು ವಿಷಯಗಳನ್ನು ಹೆಚ್ಚು ಅನುಕೂಲಕರವಾಗಿಸಲು ಶಾರ್ಟ್‌ಕಟ್‌ಗಳನ್ನು ನೀಡುತ್ತದೆ.
Fine-tuned for sharper visuals and smoother gameplay, our first-ever sliced architecture Adreno GPU inside of #Snapdragon 8 Elite features higher clock-speed frequencies for more raw power, higher frame rates & improved gameplay. 🙌 👾 pic.twitter.com/Bo0KErlikE
— Snapdragon (@Snapdragon) October 21, 2024
ನಿರಂತರ ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲದೇ ಕೆಲಸ ಮಾಡಲು ಈ ವೈಶಿಷ್ಟ್ಯವನ್ನು ವಿನ್ಯಾಸಗೊಳಿಸಲಾಗಿದೆ. ನಿಮ್ಮ ವೈಯಕ್ತಿಕ ಡೇಟಾ ಪ್ರೈವೇಟ್ ಆಗಿ ಉಳಿಯುತ್ತದೆ ಎಂದು ಖಚಿತಪಡಿಸುತ್ತದೆ. ಚಿಪ್‌ನ AI ಎಂಜಿನ್ ಫೋಟೋ ಮತ್ತು ವಿಡಿಯೋ ಸಾಮರ್ಥ್ಯಗಳನ್ನು ಸಹ ಹೆಚ್ಚಿಸುತ್ತದೆ.
ರಿಯಲ್-ಟೈಂ AI ರಿಲೈಟಿಂಗ್‌ನಂತಹ ವೈಶಿಷ್ಟ್ಯಗಳೊಂದಿಗೆ ನಿಮ್ಮ ಸೆಲ್ಫಿಗಳು ಮತ್ತು ವಿಡಿಯೋಗಳ ಬೆಳಕಿನ ಪರಿಸ್ಥಿತಿಗಳನ್ನು ಸುಧಾರಿಸಲು ಆಟೋಮೆಟಿಕ್ ಆಗಿ ಸರಿ ಹೊಂದಿಸಬಹುದು, ವಿಡಿಯೋ ಕಾಲ್ ಅಥವಾ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ನೀವು ಹೆಚ್ಚು ವೃತ್ತಿಪರರಾಗಿ ಕಾಣುವಂತೆ ಮಾಡುತ್ತದೆ. ಜೊತೆಗೆ, ವಿಡಿಯೋ ಆಬ್ಜೆಕ್ಟ್ ಎರೇಸರ್ ಕೇವಲ ಒಂದು ಟ್ಯಾಪ್ ಮೂಲಕ ವಿಡಿಯೋದಲ್ಲಿರುವ ಅನಗತ್ಯ ದೃಶ್ಯಗಳನ್ನು ತೆಗೆದು ಹಾಕಬಹುದು.
ಉನ್ನತ ಮಟ್ಟದ ಗೇಮಿಂಗ್ ಕಾರ್ಯಕ್ಷಮತೆ: ನೀವು ಮೊಬೈಲ್ ಗೇಮಿಂಗ್‌ನಲ್ಲಿ ಆಸಕ್ತಿ ಹೊಂದಿದ್ದರೆ, Snapdragon 8 Elite ನಿಮ್ಮ ಅನುಭವ ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ. ಪ್ರೊಸೆಸರ್ ನವೀಕರಿಸಿದ ಅಡ್ರಿನೊ ಜಿಪಿಯು (ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್) ನೊಂದಿಗೆ ಬರುತ್ತದೆ. ಇದು ಹಿಂದಿನ ಪೀಳಿಗೆಯ ಚಿಪ್‌ಸೆಟ್‌ಗೆ ಹೋಲಿಸಿದರೆ 40 ಪ್ರತಿಶತ ಉತ್ತಮ ಕಾರ್ಯಕ್ಷಮತೆ ನೀಡುತ್ತದೆ.
GPU ರೇ ಟ್ರೇಸಿಂಗ್ ಸಹ ಬೆಂಬಲಿಸುತ್ತದೆ. ಇದು ಗೇಮಿಂಗ್ಗಳಲ್ಲಿ ಲೈಟಿಂಗ್ ಮತ್ತು ಶೇಡ್ಸ್ ವರ್ಧಿಸುವ ವೈಶಿಷ್ಟ್ಯವಾಗಿದೆ. ದೃಶ್ಯಗಳನ್ನು ಹೆಚ್ಚು ನೈಜವಾಗಿ ಮಾಡುತ್ತದೆ. ಮತ್ತೊಂದು ಉತ್ತಮ ವೈಶಿಷ್ಟ್ಯ ಎಂದರೆ ಗೇಮ್ ಸೂಪರ್ ರೆಸಲ್ಯೂಶನ್ 2.0, ಇದು ನಿಮ್ಮ ಆಟಗಳ ಗುಣಮಟ್ಟವನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲ ಸ್ನಾಪ್‌ಡ್ರಾಗನ್ 8 ಎಲೈಟ್ ನಿಮ್ಮ ಬ್ಯಾಟರಿ ಖಾಲಿ ಮಾಡದ ಅನುಭವ ನೀಡುತ್ತದೆ.
ವೇಗದ ಸಂಪರ್ಕ: ಸ್ನಾಪ್‌ಡ್ರಾಗನ್ 8 ಎಲೈಟ್ ಕ್ವಾಲ್ಕಾಮ್‌ನ X80 5G ಮೋಡೆಮ್‌ನೊಂದಿಗೆ ಸಜ್ಜುಗೊಂಡಿದೆ. ಇದು 10 Gbps (ಸೆಕೆಂಡಿಗೆ ಗಿಗಾಬಿಟ್) ವರೆಗೆ ಅಲ್ಟ್ರಾ-ಫಾಸ್ಟ್ ಇಂಟರ್ನೆಟ್ ವೇಗವನ್ನು ನೀಡುತ್ತದೆ. ಇದರರ್ಥ ದೊಡ್ಡ ಫೈಲ್‌ಗಳನ್ನು ಡೌನ್‌ಲೋಡ್ ಮಾಡುವುದು, ಉತ್ತಮ ಗುಣಮಟ್ಟದ ವಿಡಿಯೋಗಳನ್ನು ಸ್ಟ್ರೀಮಿಂಗ್ ಮಾಡುವುದು ಮತ್ತು ಆನ್‌ಲೈನ್ ಗೇಮಿಂಗ್ ಎಂದಿಗಿಂತಲೂ ವೇಗವಾಗಿ ಮತ್ತು ಸುಗಮವಾಗಿರುತ್ತದೆ.
ಚಿಪ್ Wi-Fi 7 ಅನ್ನು ಸಹ ಬೆಂಬಲಿಸುತ್ತದೆ. ಇದು Wi-Fi ನ ಹೊಸ ಮತ್ತು ಅತ್ಯಂತ ಶಕ್ತಿಯುತ ಆವೃತ್ತಿಯಾಗಿದೆ. ಆದ್ದರಿಂದ ನೀವು ವಿಮಾನ ನಿಲ್ದಾಣ ಅಥವಾ ಸಂಗೀತ ಕಚೇರಿಯಂತಹ ಕಿಕ್ಕಿರಿದ ಸ್ಥಳದಲ್ಲಿರುವಾಗ ನಿಮ್ಮ ಫೋನ್ ಇನ್ನೂ ಹೆಚ್ಚಿನ ವೇಗದಲ್ಲಿ ಸಂಪರ್ಕಗೊಳ್ಳುತ್ತದೆ.
ಪ್ರಭಾವಶಾಲಿ ಕ್ಯಾಮೆರಾ ಸಾಮರ್ಥ್ಯ: ಕ್ವಾಲ್ಕಾಮ್‌ನ ಸ್ಪೆಕ್ಟ್ರಾ AI ISP (ಇಮೇಜ್ ಸಿಗ್ನಲ್ ಪ್ರೊಸೆಸರ್) ಸ್ನಾಪ್‌ಡ್ರಾಗನ್ 8 ಎಲೈಟ್‌ನಿಂದ ಚಾಲಿತ ಫೋನ್‌ಗಳಿಗೆ ಸುಧಾರಿತ ಕ್ಯಾಮೆರಾ ವೈಶಿಷ್ಟ್ಯಗಳನ್ನು ತರುತ್ತದೆ. ಇದು ಕಡಿಮೆ ಬೆಳಕಿನ ಪರಿಸ್ಥಿತಿಗಳಲ್ಲಿ ಅಲ್ಟ್ರಾ-ಸ್ಪಷ್ಟ ಫೋಟೋಗಳನ್ನು ಸೆರೆ ಹಿಡಿಯಬಹುದು ಮತ್ತು ಟ್ರೂಪಿಕ್ ಫೋಟೋ ಕ್ಯಾಪ್ಚರ್ ವೈಶಿಷ್ಟ್ಯವು ನೀವು ತೆಗೆದುಕೊಳ್ಳುವ ಫೋಟೋಗಳು ಅಧಿಕೃತವಾಗಿದೆ ಎಂದು ಖಚಿತಪಡಿಸುತ್ತದೆ. ಚಿಪ್‌ನ ಅಲ್ಟ್ರಾ-ಲೋ ಲೈಟ್ ವಿಡಿಯೋ ಕ್ಯಾಪ್ಚರ್ ನೀವು ಕಡಿಮೆ ಲೈಟಿಂಗ್ನಲ್ಲಿಯೂ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯಬಹುದು ಎಂದು ಖಚಿತಪಡಿಸುತ್ತದೆ.
ಓದಿ: ಒನ್ಪ್ಲಸ್ ಅಭಿಮಾನಿಗಳಿಗೆ ಗುಡ್ನ್ಯೂಸ್: OnePlus 13 ಬಿಡುಗಡೆ ದಿನಾಂಕ ಘೋಷಿಸಿದ ಕಂಪನಿ