ಹೈದರಾಬಾದ್: ಅಭಿವೃದ್ಧಿ ಹೊಂದಿರುವ ತಂತ್ರಜ್ಞಾನದಿಂದ ಇಂದಿನ ದಿನಗಳಲ್ಲಿ ಹ್ಯಾಕರ್ಗಳು ಸುಲಭವಾಗಿ ವೈಯಕ್ತಿಕ ಡೇಟಾವನ್ನು ಕದಿಯುತ್ತಾರೆ. ಅಷ್ಟೇ ಅಲ್ಲದೆ, ವೈರ್ಲೆಸ್ ವೈಫೈ ಅನ್ನು ಕೂಡ ಸುಲಭವಾಗಿ ಹ್ಯಾಕ್ ಮಾಡಿ, ವೈಯಕ್ತಿಕ ದತ್ತಾಂಶವನ್ನು ಕದ್ದು, ದುರ್ಬಳಕೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಸೈಬರ್ ದಾಳಿಕೋರರಿಂದ ವೈಫೈ ರಕ್ಷಣೆ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿವೆ ಕೆಲವು ಸಲಹೆಗಳು.
ಲಾಗಿನ್ ಮಾಹಿತಿ ಬದಲಾಯಿಸಿ: ವೈಫೈ ರೂಟರ್ ಅಳವಡಿಸಿದಾಗ ಸಾಮಾನ್ಯ ಲಾಗಿನ್ ಮಾಹಿತಿಗಳನ್ನು ನೀಡಲಾಗಿರುತ್ತದೆ. ಆದರೆ, ಇವುಗಳನ್ನು ಮೊದಲು ಬದಲಾಯಿಸುವುದು ಅವಶ್ಯಕವಾಗಿದೆ. ಇಲ್ಲದಿದ್ದರೆ ರೂಪಟ್ನಿಂದ ದತ್ತಾಂಶವನ್ನು ಸುಲಭವಾಗಿ ಹ್ಯಾಕರ್ಗಳು ಕದಿಯಬಹುದು.
ಪದೇ ಪದೇ ಪಾಸ್‌ವರ್ಡ್ ಬದಲಾಯಿಸಿ: ರೂಟರ್ ಸೆಕ್ಯೂರಿಟಿಯು ವೈಫೈ ಪಾಸ್‌ವರ್ಡ್ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಆಗಾಗ್ಗೆ ವೈಫೈ ಪಾಸ್‌ವರ್ಡ್ ಬದಲಾಯಿಸಿ, ಸುರಕ್ಷಿತ ಪಾಸ್‌ವರ್ಡ್ ಹಾಕಿ. 8 ಪದಗಳ ಅಲ್ಫಾನ್ಯೂಮರಿಕ್ ಪಾಸ್‌ವರ್ಡ್ ಅನ್ನು ನೀಡಿ. ಜೊತೆಗೆ ರೂಟರ್ ಹೆಸರನ್ನು ಬದಲಾಯಿತು. ಇದರಿಂದ ಹ್ಯಾಕ್ ಮಾಡುವುದು ಕಷ್ಟವಾಗಲಿದೆ.
ಯಾರೊಂದಿಗೂ ಮಾಹಿತಿ ಹಂಚಿಕೊಳ್ಳಬೇಡಿ: ಮನೆಯಲ್ಲಿ ವೈಫೈ ಇದ್ದಾಗ ಎಚ್ಚರದಿಂದ ಇರಿ. ನಿಮ್ಮ ಅಕ್ಕಪಕ್ಕದ ಮನೆಯರಿಗೆ ಪಾಸ್‌ವರ್ಡ್ ತಿಳಿದರೆ ಅವರು ಬಳಕೆ ಮಾಡುವುದು. ಅಥವಾ ನೀವೇ ಏನಾದರೂ ವೈ-ಫೈ ಪಾಸ್‌ವರ್ಡ್ ಹಂಚಿಕೊಂಡಿದ್ದರೆ ಕೆಲಸವಾದ ಬಳಿಕ ತಕ್ಷಣಕ್ಕೆ ಬದಲಾಯಿಸಿ. ವೈಫೈನ ರಿಮೋಟ್ ಲಭ್ಯತೆಯನ್ನು ನಿಲ್ಲಿಸಿ.
ಏನಾಗುತ್ತದೆ ಬೇರೆಯವರು ತಿಳಿದರೆ?: ಸ್ಮಾರ್ಟ್‌ಫೋನ್, ಪಿಸಿ, ಲ್ಯಾಪ್‌ಟಾಪ್, ಸ್ಮಾರ್ಟ್ ಟಿವಿ, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ವಾಚ್‌ನಲ್ಲಿ ನಿಮ್ಮ ವೈಫೈ ಯಾರು ಬಳಕೆ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಬಹುದು. ಅಪರಿಚಿತರು ನಿಮ್ಮ ಪಾಸ್‌ವರ್ಡ್ ಬಳಸುತ್ತಿದ್ದಾರೆ ಎಂದರೆ, ನಿರ್ಬಂಧಿಸಿ ಅಥವಾ ನಿಷ್ಕ್ರಿಯಗೊಳಿಸಿ. ಕೂಡಲೇ ಹಳೆಯ ಪಾಸ್‌ವರ್ಡ್ ಬದಲಾಯಿಸಿ, ಹೊಸ ಪಾಸ್‌ವರ್ಡ್ ಹಾಕಿ.
ಬಲವಾದ ಫೈರ್ವಾಲ್: ಇತ್ತೀಚಿನ ದಿನಗಳಲ್ಲಿ ಬಹುತೇಕ ವೈಫೈ ರೂಟರ್‌ಗಳನ್ನು ಫೈರ್‌ವಾಲ್‌ನೊಂದಿಗೆ ಸ್ಥಾಪಿಸಲಾಗಿದೆ. ಆದಾಗ್ಯೂ, ಕೆಲವು ಹಳೆಯ ಮಾದರಿಯ ರೂಟರ್‌ಗಳು ಈ ಸೌಲಭ್ಯ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಹ್ಯಾಕಿಂಗ್ ತಡೆಯಲು ಬಲವಾದ ಫೈರ್ವಾಲ್ ಅನ್ನು ಸ್ಥಾಪಿಸಿ, ನಿಯಮಿತವಾಗಿ ನವೀಕರಿಸಬೇಕು.
ಉಚಿತ ವೈಫೈ ಬಳಕೆ ಬೇಡ: ಎಲ್ಲಿಯಾದರೂ ಉಚಿತ ವೈ-ಫೈ ಬಳಕೆ ಮಾಡುತ್ತಿದ್ದರೆ, ಇದರಿಂದ ಲಾಭಕ್ಕಿಂತ ಹೆಚ್ಚು ಅಪಾಯ ಇರುತ್ತದೆ. ಇದರಿಂದ ಸುಲಭವಾಗಿ ಸೈಬರ್ ಅಪರಾಧಿಗಳು ನಿಮ್ಮ ನೆಟ್ವರ್ಕ್ ಪ್ರವೇಶಿಸಿ, ದತ್ತಾಂಶ ಕದಿಯಬಹುದು. ಹೀಗಾಗಿ ಸಾರ್ವಜನಿಕ ವೈಫೈ ಬಳಕೆ ಬೇಡ. ತುರ್ತು ಸಂದರ್ಭದಲ್ಲಿ ವಿಪಿಎನ್ ಬಳಕೆ ಮಾಡಿ.
ಇದನ್ನೂ ಓದಿ: ಸ್ಪೈವೇರ್ ದಾಳಿ: ಭಾರತ ಸೇರಿದಂತೆ 91 ದೇಶದಲ್ಲಿ ಐಫೋನ್ ಬಳಕೆದಾರರಿಗೆ ಆಪಲ್ ಎಚ್ಚರಿಕೆ ಸಂದೇಶ ರವಾನೆ