ನವದೆಹಲಿ: ದೇಶದ ಆಯ್ದ ಗೇಮರ್ಸ್ಗಳೊಂದಿಗೆ ಇಂದು ಸಂವಾದ ನಡೆಸಿದ ಪ್ರಧಾನಿ ಮೋದಿ ಅವರು, ಹೊಸತನದ ಆವಿಷ್ಕಾರದಲ್ಲಿ ಹವಾಮಾನ ಬದಲಾವಣೆ, ಶುಚಿತ್ವದಂತಹ ಜಾಗತಿಕ ವಿಚಾರಗಳ ಕುರಿತು ಗೇಮ್ಗಳನ್ನು ರೂಪಿಸುವಂತೆ ಸಲಹೆ ನೀಡಿದರು.
ಭಾರತದ ಪ್ರಮುಖ ಗೇಮರ್ಸ್ಗಳಾದ ಅನಿಮೇಶ್ ಅಗರ್ವಾಲ್, ಮಿಥಿಲೇಶ್ ಪಾಟಂಕರ್, ಪಾಯಲ್ ಧರೆ, ನಮನ್ ಮಾಥುರ್ ಮತ್ತು ಅಂಶು ಬಿಶ್ತ್ ಅವರನ್ನು ಭೇಟಿಯಾಗಿ ಗೇಮಿಂಗ್ ಜಗತ್ತಿನ ಕುರಿತು ಮಾತನಾಡಿದ ಅವರು, ಪಾಶ್ಚಿಮಾತ್ಯ ಜಗತ್ತಿನ ಉತ್ಪಾದಕರಂತೆ ಶೂಟಿಂಗ್ ಗೇಮ್ಸ್ನ ಹೊರತಾಗಿ ನಮ್ಮ ಗೇಮರ್ಗಳು ನೈಜ ಜೀವನದ ವಿಷಯಗಳನ್ನಾಗಿ ಬದಲಾಯಿಸಬೇಕು ಎಂದು ಸಲಹೆ ನೀಡಿದರು.
ವಿಶ್ವದ ನಾಯಕರು ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆ ಮತ್ತು ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅನೇಕ ಮಾದರಿಗಳ ಕುರಿತು ಮಾತನಾಡಿದ್ದು, ಈ ನಿಟ್ಟಿನಲ್ಲಿ ನಾವು ಸಾಗಬೇಕಿದೆ. 'ಮಿಷನ್ ಲೈಫ್: ಲೈಫ್ಸ್ಟೈಲ್ ಫಾರ್ ಎನ್ವರ್ನಾಮೆಂಟ್' ಎಂಬ ಪರ್ಯಾಯ ವಿಷಯವನ್ನು ರೂಪಿಸಿದ್ದೇನೆ ಎಂದು ಮೋದಿ ಹೇಳಿದರು.
ಜಗತ್ತಿನ ಪ್ರಮುಖ ಸಮಸ್ಯೆಗಳಾದ ಜಾಗತಿಕ ಹವಾಮಾನ ಬಿಕ್ಕಟ್ಟು ಪರಿಹರಿಸುವ ಗುರಿಯನ್ನು ಆಟಗಾರರು ಹೊಂದಿರಬೇಕು. ಅಲ್ಲದೇ ಅಲ್ಲಿ ಸಮರ್ಥನೀಯ ವಿಧಾನವನ್ನು ಗುರುತಿಸಿ, ಅದಕ್ಕೆ ಪರಿಹಾರವನ್ನು ಹುಡುಕಬೇಕು. ಜೊತೆಗೆ ಈ ಗೇಮ್ಗಳ ಮೂಲಕ ನಾವು ಯಾರನ್ನು ತಲುಪಬೇಕು ಎಂದು ತಿಳಿದು, ಇದಕ್ಕೆ ಉತ್ತಮ ವಿಧಾನಗಳ ಮೂಲಕ ಪರಿಹಾರ ನೀಡಬೇಕು ಎಂದರು.
ಅದೇ ರೀತಿ ಗೇಮ್ಗಳ ಮೂಲಕ ಸ್ವಚ್ಛತೆಯ ಮಹತ್ವ ತಿಳಿಸಬೇಕು. ದೇಶದ ಪ್ರತಿಯೊಂದು ಮಗುವು ಅಂತಹ ಆಟಗಳನ್ನು ಆಡಬೇಕು ಮತ್ತು ಗೇಮಿಂಗ್ ಮೂಲಕ ಸ್ವಚ್ಛತೆಯ ನಿಜವಾದ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು. ಕೇವಲ ಸ್ಥಳೀಯ ಸಮಸ್ಯೆ ಪರಿಹಾರ ನೀಡುವ ಗೇಮ್ಗಳನ್ನು ಮಾತ್ರವಲ್ಲದೇ ಜಾಗತಿಕ ವಿಷಯಗಳ ಪರಿಹರಿಸುವ ಗೇಮ್ಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಪ್ರಧಾನಿ ಮೋದಿ ಇದೇ ವೇಳೆ ಪ್ರತಿಪಾದಿಸಿದರು.
ಕಾನೂನಾತ್ಮಕ ರಚನೆ ಅಡಿ ಬೆಳೆಯಿರಿ: ಕೌಶಲ್ಯಾಧರಿತ ಗೇಮ್ಗಳಿಗೆ ಯಾವುದೇ ನಿಯಮಗಳ ಅವಶ್ಯಕತೆ ಇಲ್ಲ. ಅವರು ಸ್ವಾತಂತ್ರ್ಯವಾಗಿದ್ದು, ಕಾನೂನಾತ್ಮಕ ರಚನೆಯ ಅಡಿ ಬೆಳವಣಿಗೆ ಕಾಣಬಹುದಾಗಿದೆ. ಈ ಮೂಲಕ ಯುವಜನತೆ ವಿಶ್ವ ದರ್ಜೆಯ ಆವಿಷ್ಕಾರವನ್ನು ಈ ವಲಯದಲ್ಲಿ ನಡೆಸಬಹುದಾಗಿದೆ ಎಂದು ತಿಳಿಸಿದರು.
ಗೇಮಿಂಗ್ ಅನೇಕ ಯುವ ಜನರಿಗೆ ಸ್ಥಳವನ್ನು ಸೃಷ್ಟಿಸುತ್ತದೆ. ಇದರಲ್ಲಿ ಅನೇಕ ವೃತ್ತಿ ಆಯ್ಕೆಯನ್ನು ಕಾಣ ಬಹುದಾಗಿದೆ. ಯುವಕರಿಗೆ ಅನೇಕ ವೃತ್ತಿ ಆಯ್ಕೆಗಳನ್ನು ರಚಿಸಬಹುದಾದ ಇಸ್ಪೋರ್ಟ್ ಉದ್ಯಮಕ್ಕೆ ನಿಯಂತ್ರಣವು ಸಹಾಯ ಮಾಡುವುದಿಲ್ಲ. ಇದು ಸಂಘಟನೆ ಅಡಿ, ಕಾನೂನಾತ್ಮಕ ರಚನೆ ಅಡಿ ಬೆಳವಣಿಗೆ ಕಾಣಬೇಕು. ಗೇಮಿಂಗ್ ಜಗತ್ತನ್ನು ಅರ್ಥ ಮಾಡಿಕೊಳ್ಳುವ ಸಮಯ ಇದಾಗಿದೆ ಎಂದರು. (ಐಎಎನ್ಎಸ್)
ಇದನ್ನೂ ಓದಿ: ದೇಶಾದ್ಯಂತ ಬಿಸಿಗಾಳಿ ಅಬ್ಬರ: ಪ್ರಧಾನಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ, ಪರಿಸ್ಥಿತಿಯ ಸನ್ನದ್ಧತೆ ಪರಿಶೀಲನೆ