ETV Bharat / technology

ಇಂದಿನಿಂದ ಪಿಎಂ ಇ - ಡ್ರೈವ್​ ಯೋಜನೆ ಆರಂಭ: ಇವಿ ಖರೀದಿಗಾರರಿಗೆ ಸಿಗಲಿದೆ ಭಾರಿ ಡಿಸ್ಕೌಂಟ್​! - Pm E Drive Scheme - PM E DRIVE SCHEME

PM E-DRIVE: ವಾಹನ ಪ್ರಿಯರಿಗೆ ಗುಡ್​ ನ್ಯೂಸ್​. ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ತಂದಿರುವ ಪಿಎಂ ಇ-ಡ್ರೈವ್ ಯೋಜನೆ ಇಂದಿನಿಂದ ಅಂದ್ರೆ ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ.

HUGE DISCOUNTS ON ELECTRIC VEHICLES  ELECTRIC VEHICLES IN INDIA  PM E DRIVE SCHEME KANNADA  PM E DRIVE SCHEME IMPLEMENTATION
ಇಂದಿನಿಂದ ಪಿಎಂ ಇ-ಡ್ರೈವ್​ ಯೋಜನೆ ಆರಂಭ (IANS)
author img

By ETV Bharat Tech Team

Published : Oct 1, 2024, 10:46 AM IST

PM E-DRIVE: ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸುವುದರ ಜೊತೆಗೆ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ರಚಿಸಲು PM E-DRIVE ಯೋಜನೆಯು ಅಕ್ಟೋಬರ್ 1 ರಿಂದ ಅಂದ್ರೆ ಇಂದಿನಿಂದ ಜಾರಿಗೆ ಬರಲಿದೆ. ಈ ಯೋಜನೆಯ ಉದ್ಘಾಟನಾ ಸಮಾರಂಭ ಮಂಗಳವಾರ ದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಖಾತೆ ಸಚಿವ ಭೂಪತಿ ರಾಜು ಶ್ರೀನಿವಾಸ ವರ್ಮ ಭಾಗವಹಿಸಲಿದ್ದಾರೆ.

10,900 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸುತ್ತಿರುವ ಈ ಯೋಜನೆಯು ಅಕ್ಟೋಬರ್ 1, 2024 ರಿಂದ ಮಾರ್ಚ್ 31, 2026 ರವರೆಗೆ ಜಾರಿಯಲ್ಲಿರುತ್ತದೆ ಎಂದು ಕೇಂದ್ರವು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಿದೆ. ಪಿಎಂ ಇ-ಡ್ರೈವ್ ಯೋಜನೆಯ ಭಾಗವಾಗಿ, ಕೇಂದ್ರವು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಇ-ಆಂಬ್ಯುಲೆನ್ಸ್‌ಗಳು ಮತ್ತು ಇ-ಟ್ರಕ್‌ಗಳಿಗೆ ಸಬ್ಸಿಡಿ ನೀಡುತ್ತದೆ.

ಯಾವುದಕ್ಕೆ ಎಷ್ಟು ಸಬ್ಸಿಡಿ?: ಯೋಜನೆ ಜಾರಿಯಲ್ಲಿರುವ ಅವಧಿಯಲ್ಲಿ ಬಸ್‌ಗಳಿಗೆ 4,391 ರೂ. ಕೋಟಿ ಪಾವತಿಸಲಾಗುವುದು, ಕೇಂದ್ರವು ದ್ವಿಚಕ್ರ ವಾಹನಗಳಿಗೆ ರೂ.1772 ಕೋಟಿ ವೆಚ್ಚ ಮಾಡುವ ಗುರಿ ಹೊಂದಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನಗಳ ವರ್ಗಕ್ಕೆ 2024-25 ಆರ್ಥಿಕ ವರ್ಷದಲ್ಲಿ ಪ್ರತಿ ಕಿಲೋವ್ಯಾಟ್‌ಗೆ ರೂ.5,000 ಮತ್ತು ಮುಂದಿನ ವರ್ಷದಲ್ಲಿ ರೂ.2,500 ದರದಲ್ಲಿ ಪಾವತಿಸಲಾಗುತ್ತದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಕ್ಕೆ ಗರಿಷ್ಠ ರೂ.10,000 ಮತ್ತು ಇ-ರಿಕ್ಷಾಕ್ಕೆ ಗರಿಷ್ಠ ರೂ.25,000 ಪಾವತಿಸಲಾಗುತ್ತದೆ. ಮುಂದಿನ ವರ್ಷ ದ್ವಿಚಕ್ರ ವಾಹನಗಳಿಗೆ 5,000 ಮತ್ತು ಇ-ರಿಕ್ಷಾಗಳಿಗೆ 12,500 ರೂ. ಸಬ್ಸಿಡಿ ದೊರೆಯಲಿದೆ.

2015ರಲ್ಲೇ ಘೇಮ್​ 1 ಪ್ರಾರಂಭ: ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳನ್ನು ಉತ್ತೇಜಿಸಲು ರೂ.795 ಕೋಟಿ ಬಜೆಟ್‌ನೊಂದಿಗೆ ಫೇಮ್-1 ಯೋಜನೆಯನ್ನು ಏಪ್ರಿಲ್ 1, 2015 ರಂದು ಪ್ರಾರಂಭಿಸಲಾಯಿತು. ಈ ಯೋಜನೆಯು ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿತು. ಮತ್ತೆ, ಏಪ್ರಿಲ್ 1, 2019 ರಂದು ರೂ.11,500 ಕೋಟಿಗಳೊಂದಿಗೆ ಫೇಮ್-2 ಯೋಜನೆಯನ್ನು ತರಲಾಯಿತು.

ಈ ಯೋಜನೆಯು 31 ಮಾರ್ಚ್ 2024 ರವರೆಗೆ ಮಾನ್ಯವಾಗಿರುತ್ತದೆ. ನಂತರ, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳನ್ನು ಬೆಂಬಲಿಸಲು ಎಲೆಕ್ಟ್ರಿಕ್ ಮೊಬಿಲಿಟಿ ಪ್ರಚಾರ ಯೋಜನೆ 2024 ಅನ್ನು ಮಧ್ಯದಲ್ಲಿ ಘೋಷಿಸಲಾಯಿತು. 778 ಕೋಟಿ ರೂ.ಗಳೊಂದಿಗೆ ತಂದ ಈ ಯೋಜನೆಯು ಸೆಪ್ಟೆಂಬರ್ 30 ರಂದು ಕೊನೆಗೊಳ್ಳಲಿದೆ. ಪಿಎಂ ಇ-ಡ್ರೈವ್ ಯೋಜನೆಯು ಇಂದಿನಿಂದ ಸುಮಾರು ಎರಡು ವರ್ಷಗಳವರೆಗೆ ಜಾರಿಯಲ್ಲಿರುತ್ತದೆ.

ಓದಿ: ರೇಂಜ್ ರೋವರ್ SV Ranthambore ಬಿಡುಗಡೆ, ಮಾರಾಟದ ಒಂದು ಭಾಗ ವನ್ಯಜೀವಿ ಟ್ರಸ್ಟ್‌ಗೆ ನೀಡಲಿರುವ ಕಂಪನಿ - Range Rover SV New Edition

ETV Bharat Logo

Copyright © 2025 Ushodaya Enterprises Pvt. Ltd., All Rights Reserved.