ಹೈದರಾಬಾದ್: ಚಾಟ್ಜಿಪಿಟಿ ಸೃಷ್ಟಿಕರ್ತ ಸ್ಯಾಮ್ ಆಲ್ಟಮನ್ ಅವರ ಓಪನ್ಎಐ ಸಂಸ್ಥೆ ಭಾರತದ ಮೊದಲ ಉದ್ಯೋಗಿಯನ್ನು ನೇಮಿಸಿದೆ. ಪ್ರಗ್ಯಾ ಮಿಶ್ರಾ ಓಪನ್ಎಐನ ಸರ್ಕಾರಿ ಸಂಬಂಧ ಮುಖ್ಯಸ್ಥರಾಗಿ ಮತ್ತು ಭಾರತದಲ್ಲಿ ಪಾಲುದಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವಿಶ್ವಾದ್ಯಂತ ವೇಗವಾಗಿ ಪ್ರಗತಿ ಹೊಂದುತ್ತಿರುವ ತಂತ್ರಜ್ಞಾನವನ್ನು ನಿಯಂತ್ರಿಸುವ ಕಾರ್ಯದಲ್ಲಿ ಸರ್ಕಾರಗಳು ಮುಂದಾಗಿದ್ದು, ಈ ನಿಯಮಗಳಿಗೆ ಅನುಕೂಲಕರವಾದ ಸಲಹೆ ನೀಡುವ ಓಪನ್ಎಐ ಪ್ರಯತ್ನದ ಕಾರ್ಯತಂತ್ರವನ್ನು ಈ ನೇಮಕಾತಿ ಎತ್ತಿ ತೋರಿಸುತ್ತದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಯಾರು ಇದು ಪ್ರಗ್ಯಾ ಮಿಶ್ರಾ: ಪ್ರಗ್ಯಾ ಈ ಹಿಂದೆ ಟ್ರೂ ಕಾಲರ್ ಮತ್ತು ಮೆಟಾ ಫ್ಲಾಟ್ಫಾರಂ ಇಂಕ್ನಲ್ಲಿ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿದ್ದಾರೆ. ಸರ್ಕಾರದ ಸಚಿವಾಲಯದೊಂದಿಗೆ ಹೂಡಿಕೆದಾರರು, ಪ್ರಮುಖ ಮಧ್ಯಸ್ಥಗಾರರು ಮತ್ತು ಮಾಧ್ಯಮ ಪಾಲುದಾರರೊಂದಿಗೆ ನಿಕಟವಾಗಿ ಸಹಭಾಗಿತ್ವ ಹೊಂದಿದ್ದಾರೆ.
2018ರಲ್ಲಿ ವಾಟ್ಸಾಪ್ನ ತಪ್ಪು ಮಾಹಿತಿಗಳ ವಿರುದ್ಧದ ಅಭಿಯಾನದಲ್ಲಿ ಅರ್ನ್ಸ್ಟ್ ಮತ್ತು ಯಂಗ್ ಜೊತೆಗೆ ದೆಹಲಿಯ ರಾಯಲ್ ಡ್ಯಾನಿಶ್ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡಿದರು.
ಶಿಕ್ಷಣ: ಮಿಶ್ರಾ 2012ರಲ್ಲಿ ಇಂಟರ್ ನ್ಯಾಷನಲ್ ಮ್ಯಾನೇಜ್ಮೆಂಟ್ ಇನ್ಸಿಟಿಟ್ಯೂಟ್ನಿಂದ ಎಂಬಿಎ ಪದವಿ ಪಡೆದಿದ್ದಾರೆ. ಜೊತೆಗೆ ದೆಹಲಿ ಯುನಿವರ್ಸಿಟಿಯಿಂದ ವಾಣಿಜ್ಯ ಪದವಿ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಪೊಲಿಟಿಕಲ್ ಸೈನ್ಸ್‌ನಿಂದ ಬಾರ್ಗೇನಿಂಗ್ ಅಂಡ್ ನೆಗೋಷಿಯೇಷನ್ಸ್‌ನಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ.
ಜೊತೆಗೆ ಪೋಡಾಕಾಸ್ಟರ್ ಮತ್ತು ಇನ್ಸ್ಟಾಗ್ರಾಂ ಇನ್ಫುಯೆನ್ಸರ್ ಆಗಿದ್ದು 35 ಸಾವಿರ ಬೆಂಬಲಿಗರನ್ನು ಹೊಂದಿದ್ದಾರೆ. ಪ್ರಗ್ಯಾನ್ ಪೋಡಾಕಾಸ್ಟ್ನಲ್ಲಿ ಧ್ಯಾನ ಮತ್ತು ಪ್ರಜ್ಞೆ ಕುರಿತು ತಿಳಿಸುತ್ತಾರೆ. ಭಾರತದ ಟೆಕ್ ಮಾರುಕಟ್ಟೆಯ ಹೆಚ್ಚಿಸಲು ಓಪನ್ಎಐ ತಮ್ಮ ಕಾರ್ಯತಂತ್ರದ ಭಾಗವಾಗಿ ಮಿಶ್ರಾ ಅವರನ್ನು ನೇಮಿಸಲಾಗಿದೆ. ದೇಶದಲ್ಲಿ ಗೂಗಲ್ ಎಐ ಮಾದರಿ ಸ್ಪರ್ಧೆ ಹಿನ್ನಲೆ ಇದು ಇವರ ನೇಮಕವೂ ಅತ್ಯಂತ ಮಹತ್ವ ಪೂರ್ವ ಬೆಳವಣಿಗೆ ಆಗಿದೆ.
ಸಿಇಒ ಸ್ಯಾಮ್ ಆಲ್ಟಮನ್ ಕಳೆದ ವರ್ಷ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆರೋಗ್ಯ ರಕ್ಷಣೆಯಂತಹ ಕ್ಷೇತ್ರಗಳಲ್ಲಿ ಸರ್ಕಾರಿ ಸೇವೆಯಲ್ಲಿ ಎಐನಲ್ಲಿ ಸಂಯೋಜಿಸು ಪ್ರಾಮುಖ್ಯತೆಯನ್ನು ತಿಳಿಸಿದ್ದರು. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಈ ತಂತ್ರಜ್ಞಾನಕ್ಕೆ ನಿಯಮಗಳನ್ನು ರೂಪಿಸುವಲ್ಲಿ ಸರ್ಕಾರಗಳು ಹೆಚ್ಚು ಪೂರ್ವಭಾವಿ ಪಾತ್ರವನ್ನು ವಹಿಸುವ ಅಗತ್ಯವನ್ನು ಅವರು ತಿಳಿಸಿದ್ದರು. (ಐಎಎನ್ಎಸ್)
ಇದನ್ನೂ ಓದಿ: ಎಐ ಚಾಲಿತ ಹೊಸ ಡೆಲ್ ಲ್ಯಾಪ್ಟಾಪ್, ವರ್ಕ್ಸ್ಟೇಷನ್ ಬಿಡುಗಡೆ