One Crore fraud numbers disconnected: ಫ್ರಾಡ್ ಮೊಬೈಲ್ ಕನೆಕ್ಷನ್ಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಸಂಚಾರ ಸಾಥಿ ನೆರವಿನಿಂದ 1 ಕೋಟಿಗೂ ಹೆಚ್ಚು ಮೊಬೈಲ್ ಸಂಪರ್ಕಗಳನ್ನು ಬಂದ್ ಮಾಡಲಾಗಿದೆ ಎಂದು ಸಂವಹನ ಸಚಿವಾಲಯ ತಿಳಿಸಿದೆ. ದೂರಸಂಪರ್ಕ ಸೇವೆಗಳನ್ನು ಸುಧಾರಿಸಲು TRAI ಮತ್ತು DoT ಕ್ರಮಗಳನ್ನು ಕೈಗೊಂಡಿವೆ. ಸಂಚಾರ್ ಸಾಥಿ ಪೋರ್ಟಲ್ ಸೈಬರ್ ವಂಚನೆಯ ವಿರುದ್ಧ ಹೋರಾಡಲು ರಚಿಸಲಾದ ನಾಗರಿಕ-ಕೇಂದ್ರಿತ ವೆಬ್ ಪೋರ್ಟಲ್ ಆಗಿದ್ದು, ನಾಗರಿಕರಿಗೆ ಅನುಮಾನಾಸ್ಪದ ಕರೆಗಳು ಮತ್ತು ಸಂದೇಶಗಳನ್ನು ವರದಿ ಮಾಡಲು ಅನುವು ಮಾಡಿಕೊಡುತ್ತದೆ.
"ಸಂಚಾರ್ ಸಾಥಿ ಮೂಲಕ 1 ಕೋಟಿಗೂ ಅಧಿಕ ಫ್ರಾಡ್ ನಂಬರ್ಗಳ ಸಂಖ್ಯೆಗಳ ಸಂಪರ್ಕ ಕಡಿತಗೊಳಿಸಲಾಗಿದೆ" ಎಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ DoT ಪೋಸ್ಟ್ ಮಾಡಿದೆ. ಸ್ಪ್ಯಾಮ್ ಕರೆಗಳ ಬೆದರಿಕೆಯನ್ನು ತಡೆಯುವ ಪ್ರಯತ್ನದ ಸಂಬಂಧ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಸಹ ಫ್ರಾಡ್ ಸಂಖ್ಯೆಗಳ ಸಂಪರ್ಕ ಕಡಿತಗೊಳಿಸಲು ಮತ್ತು ಯೂನಿಟ್ಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಟೆಲಿಕಾಂ ಆಪರೇಟರ್‌ಗಳಿಗೆ ನಿರ್ದೇಶನ ನೀಡಿದೆ.
ದೂರಸಂಪರ್ಕ ಸೇವೆಯನ್ನು ಸುಧಾರಿಸಲು TRAI ಮತ್ತು DoT ಈ ನಿರ್ಧಾರವನ್ನು ತೆಗೆದುಕೊಂಡಿದೆ. ಸಚಿವಾಲಯವು ನೆಟ್‌ವರ್ಕ್ ಲಭ್ಯತೆ, ಕರೆ ಡ್ರಾಪ್ ದರಗಳು ಮತ್ತು ಪ್ಯಾಕೆಟ್ ಡ್ರಾಪ್ ದರಗಳನ್ನು ಹೈಲೈಟ್ ಮಾಡಿದೆ. ಅವುಗಳನ್ನು ಸುಧಾರಿಸಲು ಸಾಧ್ಯ ಇರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇಲ್ಲಿಯವರೆಗೆ 1 ಕೋಟಿಗೂ ಹೆಚ್ಚು ಮೊಬೈಲ್ ಸಂಪರ್ಕಗಳನ್ನು ಮುಚ್ಚಲಾಗಿದೆ ಎಂದು ಸಚಿವಾಲಯ ಹೇಳಿದೆ.
ರೋಬೋ ಕರೆಗಳು ಮತ್ತು ಪ್ರಿ - ರೆಕಾರ್ಡ್ ಕರೆಗಳು ಸಹ ಇದರಲ್ಲಿ ಸೇರಿದ್ದಾವೆ. ಇತ್ತೀಚಿನ ದಿನಗಳಲ್ಲಿ ಸುಮಾರು ಮೂರೂವರೆ ಲಕ್ಷ ಸಂಖ್ಯೆಗಳು ಸ್ವಿಚ್ಡ್ ಆಫ್ ಆಗಿವೆ. ಇದರಲ್ಲಿ 50 ಯೂನಿಟ್ಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಸುಮಾರು 3.5 ಲಕ್ಷ ಪರಿಶೀಲಿಸದ SMS ಹೆಡರ್‌ಗಳು ಮತ್ತು 12 ಲಕ್ಷ ಕಂಟೆಂಟ್ ಟೆಂಪ್ಲೇಟ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಸಂಚಾರ ಸಾಥಿ ಸಹಾಯದಿಂದ ಸುಮಾರು 2.27 ಲಕ್ಷ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ನಿರ್ಬಂಧಿಸಲಾಗಿದೆ. ಇವರೆಲ್ಲರೂ ಸೈಬರ್ ಕ್ರೈಮ್ ಮತ್ತು ಹಣಕಾಸು ವಂಚನೆಯಲ್ಲಿ ಭಾಗಿಯಾಗಿದ್ದರು. ನೆಟ್‌ವರ್ಕ್ ಸುಧಾರಿಸಲು ಸಂವಹನ ಸಚಿವಾಲಯವು ನಿರಂತರ ಕೆಲಸ ಮಾಡುತ್ತಿದೆ. TRAI ನಿಂದ ನಿಯಂತ್ರಣವನ್ನು ಸಹ ಸುಧಾರಿಸಲಾಗಿದೆ. ಆದರೂ ಇದರ ನಂತರವೂ, ನೆಟ್ವರ್ಕ್ನಲ್ಲಿ ಗುರುತಿಸುವಿಕೆಯನ್ನು ಇನ್ನೂ ಮಾಡಲಾಗುತ್ತಿದೆ. ಈ ನಿಬಂಧನೆಗಳನ್ನು ಅಕ್ಟೋಬರ್ 1, 2024 ರಿಂದ ಜಾರಿಗೊಳಿಸಲಾಗಿದೆ ಮತ್ತು ಏಪ್ರಿಲ್ 1, 2025 ರಿಂದ ಪ್ರತಿ ತಿಂಗಳು ಕಾರ್ಯಕ್ಷಮತೆ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ನಿಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ಇತರ ವಿಷಯಗಳಿಗೆ ಬಳಸಬೇಡಿ. ಪ್ರಚಾರದ ಕರೆಗಳನ್ನು ಸಹ ಇದರಲ್ಲಿ ಸೇರಿಸಲಾಗಿದೆ. ನೀವು ಅದನ್ನು ಬಳಸಬಾರದು. ಹೀಗೆ ಮಾಡುವುದರಿಂದ ಟೆಲಿಕಾಂ ಕಂಪನಿಗಳ ಹಿಟ್ ಲಿಸ್ಟ್ ನಲ್ಲಿ ನೀವೂ ಬರಬಹುದು ಮತ್ತು ನಿಮ್ಮ ನಂಬರ್ ಬ್ಲಾಕ್ ಆಗಬಹುದಾಗಿದೆ.
ದೂರಸಂಪರ್ಕ ಇಲಾಖೆಯ (DoT) ಸಂಚಾರ್ ಸಾಥಿ ಪೋರ್ಟಲ್ ನಾಗರಿಕ - ಕೇಂದ್ರಿತ ವೆಬ್ ಪೋರ್ಟಲ್ ಆಗಿದ್ದು, ಸೈಬರ್ ವಂಚನೆಗಳ ವಿರುದ್ಧ ಹೋರಾಡಲು ವಿನ್ಯಾಸಗೊಳಿಸಲಾಗಿದೆ. ಅನುಮಾನಾಸ್ಪದ ಕರೆಗಳು ಮತ್ತು ಸಂದೇಶಗಳನ್ನು ಇದು ಪತ್ತೆ ಮಾಡಲು ಅನುವು ಮಾಡಿಕೊಡುತ್ತದೆ.
ಓದಿ: ಮಹಿಳೆಯರ ಭದ್ರತೆಗಾಗಿ 'ನಿರ್ಭಯ್ ರಿಂಗ್ ಗನ್' ತಯಾರಿಸಿದ ವಿದ್ಯಾರ್ಥಿನಿಯರು! ಹೇಗಿದೆ ಗೊತ್ತಾ? - Nirbhay Ring Gun