Oben Rorr EZ Electric Motorcycle: ದೇಶದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕರಲ್ಲಿ ಒಂದಾದ ಒಬೆನ್ ಎಲೆಕ್ಟ್ರಿಕ್ ತನ್ನ ಹೊಸ 'ಒಬೆನ್ ರೋರ್ ಇಝಡ್' ನ ಟೀಸರ್ ಅನ್ನು ಅಂತಿಮವಾಗಿ ಬಿಡುಗಡೆ ಮಾಡಿದೆ. ಟೀಸರ್‌ನಲ್ಲಿ ಕಂಪನಿಯು ಈ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಬಿಡುಗಡೆಯ ಬಗ್ಗೆ ಮಾಹಿತಿ ನೀಡಿದೆ. ಈ ಬೈಕ್ ಈ ವರ್ಷ ನವೆಂಬರ್ 7 ರಂದು ಡೈಲಿ ಕಮ್ಯೂಟರ್ ಸೆಗ್ಮೆಂಟ್ನಲ್ಲಿ ಬಿಡುಗಡೆಯಾಗಲಿದೆ. ಈ ವಿಭಾಗದಲ್ಲಿ ಕ್ರಾಂತಿ ತರಬಹುದು ಎಂದು ಕಂಪನಿ ಹೇಳಿಕೊಂಡಿದೆ.
ಈ ಎಲೆಕ್ಟ್ರಿಕ್ ಬೈಕ್ ಪ್ರಸ್ತುತ ಪರಿಸ್ಥಿತಿಗಳಿಗೆ ಸವಾಲು ಹಾಕುತ್ತದೆ. ಎಲೆಕ್ಟ್ರಿಕ್ ಮೊಬಿಲಿಟಿಯಲ್ಲಿ ಹೊಸ ಆವಿಷ್ಕಾರ ಮತ್ತು ಉತ್ಸಾಹವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಈ ಹೊಸ ಎಲೆಕ್ಟ್ರಿಕ್ ಬೈಕ್‌ನ ವಿವರಗಳನ್ನು ಕಂಪನಿ ಬಹಿರಂಗಪಡಿಸಿಲ್ಲ. ಆದರೆ, ಬೈಕ್ ಸವಾರರು ಎದುರಿಸುವ ಸಾಮಾನ್ಯ ಸಮಸ್ಯೆಗಳನ್ನು ಪರಿಹರಿಸಲು ಈ ಬೈಕ್ ವಿನ್ಯಾಸ, ಕಾರ್ಯಕ್ಷಮತೆ, ಸೌಕರ್ಯ ಮತ್ತು ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಒಬೆನ್ ರೋರ್ EZ ಎಲೆಕ್ಟ್ರಿಕ್ ಬೈಕ್‌ನೊಂದಿಗೆ ದೈನಂದಿನ ಪ್ರಯಾಣದ ಅನುಭವವನ್ನು ಸುಧಾರಿಸಲು ಕಂಪನಿ ಗುರಿ ಹೊಂದಿದೆ.
ಬೈಕ್ ಇತ್ತೀಚಿನ ಪೇಟೆಂಟ್ ಹೊಂದಿದ ಹೈ ಫರ್ಫಾಮೆನ್ಸ್ನ LFP ಬ್ಯಾಟರಿ ತಂತ್ರಜ್ಞಾನದೊಂದಿಗೆ ಬರುತ್ತದೆ. ಇದು ಎಕ್ಸ್ಪ್ಷಿನಲ್ ಹೀಟ್ ರೆಸಿಸ್ಟನ್ಸ್ ಹೊಂದಿದೆ. ಲಾಂಗ್ ಲೈಫ್ ಜೊತೆಗೆ ನಮ್ಮ ದೇಶದಲ್ಲಿ ಹವಾಮಾನ ಬದಲಾವಣೆಗೆ ಸೂಕ್ತವಾಗಿ ಕಾರ್ಯನಿರ್ವಹಿಸುತ್ತೆ ಈ ಬೈಕ್. ಈ ಹಿನ್ನೆಲೆ ಓಬೆನ್ ಎಲೆಕ್ಟ್ರಿಕ್ ಈ ಎಲ್‌ಎಫ್‌ಪಿ ಕೆಮಿಸ್ಟ್ರಿ ಬ್ಯಾಟರಿಗಳನ್ನು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಬಳಸಲು ಪ್ರಾರಂಭಿಸಿದೆ. ಇದು ಅತ್ಯುನ್ನತ ಸುರಕ್ಷತಾ ಮಾನದಂಡಗಳೊಂದಿಗೆ ಉತ್ತಮ ಕಾರ್ಯಕ್ಷಮತೆ ನೀಡುತ್ತದೆ.
ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಕಂಪನಿಯ ಬದ್ಧತೆಯೇ ತನ್ನ ಯಶಸ್ಸಿಗೆ ಕಾರಣ ಎಂದು ಒಬೆನ್ ಎಲೆಕ್ಟ್ರಿಕ್ ಹೇಳಿದೆ. ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳು, ಮೋಟಾರ್‌ಗಳು, ವಾಹನ ನಿಯಂತ್ರಣ ಘಟಕಗಳು ಮತ್ತು ವೇಗದ ಚಾರ್ಜರ್‌ಗಳಂತಹ ನಿರ್ಣಾಯಕ ಘಟಕಗಳನ್ನು ತಯಾರಿಸಲು ಈ ಆರ್ & ಡಿ ಪ್ರಕ್ರಿಯೆಯನ್ನು ಬಳಸಲಾಗಿದೆ ಎಂದು ಕಂಪನಿ ಹೇಳಿದೆ.
ಇದು ಸಮಸ್ಯೆಗಳನ್ನು ಪರಿಹರಿಸಲು, ಹೊಸ ಸರಕು ಮತ್ತು ಸೇವೆಗಳನ್ನು ರಚಿಸಲು ಮೂಲಭೂತ, ಅಪ್ಲೈಡ್ ಸಂಶೋಧನೆಗಳನ್ನು ನಡೆಸುವ ವ್ಯವಸ್ಥಿತ ಚಟುವಟಿಕೆಯಾಗಿದೆ. ಇದೇ ಪ್ರಕ್ರಿಯೆಯಲ್ಲಿ ವಿನ್ಯಾಸಗೊಳಿಸಲಾಗಿರುವ ಮತ್ತು ಪ್ರಸ್ತುತ ಕಂಪನಿಯು ತಂದಿರುವ ಈ ಹೊಸ ಬೈಕ್ ಬಳಕೆದಾರರಿಗೆ ಉತ್ತಮ ರೈಡಿಂಗ್ ಅನುಭವವನ್ನು ನೀಡುವುದಲ್ಲದೆ ಶೇಮ್ಲೆಸ್ ಓನರ್ಶಿಪ್ ಪ್ರಯಾಣವನ್ನು ನೀಡುತ್ತದೆ ಎಂದು ಒಬೆನ್ ಎಲೆಕ್ಟ್ರಿಕ್ ಹೇಳುತ್ತದೆ.