NVIDIA OVERTAKES APPLE: ಎನ್ವಿಡಿಯಾ ಆಪಲ್ ಹಿಂದಿಕ್ಕಿ ಮುಂದೆ ಸಾಗುತ್ತಿದೆ. ಎನ್ವಿಡಿಯಾದ ಷೇರು ಮಾರುಕಟ್ಟೆ ಮೌಲ್ಯವು $3.53 ಟ್ರಿಲಿಯನ್‌ಗೆ ತಲುಪಿದೆ. ಇದು ಆಪಲ್ ಮತ್ತು ಮೈಕ್ರೋಸಾಫ್ಟ್‌ನಂತಹ ಪ್ರಮುಖ ತಂತ್ರಜ್ಞಾನ ಕಂಪನಿಗಳನ್ನು ಮೀರಿಸಿದೆ. ಆಪಲ್ ಷೇರು ಪ್ರಸ್ತುತ $3.52 ಟ್ರಿಲಿಯನ್ ಮತ್ತು ಮೈಕ್ರೋಸಾಫ್ಟ್ನ ಮಾರುಕಟ್ಟೆ ಪಾಲು $3.20 ಟ್ರಿಲಿಯನ್ ಆಗಿದೆ. ಕಳೆದ ಹಲವು ತಿಂಗಳುಗಳಿಂದ ಈ ಮೂರು ಕಂಪನಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಜೂನ್‌ನಲ್ಲಿಯೂ ಎನ್ವಿಡಿಯಾ ಕೆಲವು ದಿನಗಳವರೆಗೆ ತನ್ನ ಫೇಮ್ ಕ್ರಿಯೆಟ್ ಮಾಡಿತ್ತು. ಈಗ ಮತ್ತೊಮ್ಮೆ ಎನ್ವಿಡಿಯಾ ಆಪಲ್ ಮತ್ತು ಮೈಕ್ರೋಸಾಫ್ಟ್‌ನಂತಹ ದೈತ್ಯ ಕಂಪನಿಗಳನ್ನು ಹಿಂದಿಕ್ಕಿದೆ.
ಹೆಚ್ಚುತ್ತಿದೆ AI ಚಿಪ್‌ಗಳ ಬೇಡಿಕೆ: LSEG ಡೇಟಾ ಪ್ರಕಾರ, ಹೊಸ ಸೂಪರ್‌ಕಂಪ್ಯೂಟಿಂಗ್ AI ಚಿಪ್‌ಗಳಿಗೆ ಹೆಚ್ಚಿನ ಬೇಡಿಕೆಯಿಂದಾಗಿ ಕಂಪನಿಯ ಷೇರುಗಳು ಬಲವಾದ ಏರಿಕೆಯನ್ನು ಕಾಣುತ್ತಿವೆ. ಇದು ಅದರ ಮೌಲ್ಯಮಾಪನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಎನ್ವಿಡಿಯಾದ ಷೇರುಗಳು ಈ ತಿಂಗಳು ಅಕ್ಟೋಬರ್‌ನಲ್ಲಿ ಶೇಕಡ 18ರಷ್ಟು ಅಧಿಕ ಗಳಿಸಿವೆ. ಕೆಲವು ದಿನಗಳ ಹಿಂದೆ, ಚಾಟ್‌ಜಿಪಿಟಿ ಮಾಲೀಕ ಓಪನ್‌ಎಐ ಕೂಡ ನಿಧಿಯನ್ನು ಘೋಷಿಸಿತು. ಇದು ಕಂಪನಿಯ ಮೌಲ್ಯಮಾಪನದ ಮೇಲೂ ಪರಿಣಾಮ ಬೀರಿತು. ಎನ್ವಿಡಿಯಾ GPT 4 ಅನ್ನು ಟ್ರೈನಿಂಗ್ ಮಾಡಲು ಚಿಪ್ ಅನ್ನು ನಿರ್ಮಿಸುತ್ತಿದೆ. ಇದು OpenAI ನ ಅತ್ಯಂತ ಸುಧಾರಿತ ಅಡಿಪಾಯ ಮಾದರಿ ಆಗಿದೆ.
ಎನ್ವಿಡಿಯಾ ಷೇರುಗಳು ಮತ್ತಷ್ಟು ಏರಿಕೆ: ಎಜೆ ಬೆಲ್‌ನ ಹೂಡಿಕೆ ನಿರ್ದೇಶಕ ರಸ್ ಮೋಲ್ಡ್, ಈಗ ಹೆಚ್ಚು ಹೆಚ್ಚು ಕಂಪನಿಗಳು ತಮ್ಮ ದೈನಂದಿನ ಕಾರ್ಯಾಚರಣೆಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು (ಎಐ) ಅಳವಡಿಸಿಕೊಳ್ಳುತ್ತಿವೆ. ಈ ಕಾರಣದಿಂದಾಗಿ ಎನ್ವಿಡಿಯಾ ಚಿಪ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಭವಿಷ್ಯದಲ್ಲಿ ಎನ್ವಿಡಿಯಾ ಷೇರುಗಳು ಏರುತ್ತಲೇ ಇರುತ್ತವೆ. ದೊಡ್ಡ ಕಂಪನಿಗಳು AI ಕ್ಷೇತ್ರದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲು AI ಗೆ ಆದ್ಯತೆ ನೀಡುತ್ತಿವೆ. ಇದಕ್ಕಾಗಿ ಅವರಿಗೆ ಚಿಪ್ಸ್ ಅಗತ್ಯವಿದೆ. ಇದರಿಂದ ಕಂಪನಿ ಹೆಚ್ಚು ಲಾಭ ಪಡೆಯುತ್ತಿದೆ ಎಂದು ಹೇಳಿದರು.
ಗರಿಷ್ಠ ಮಟ್ಟಕ್ಕೆ ತಲುಪಿದ ಎನ್ವಿಡಿಯಾ ಷೇರುಗಳು: ಎನ್ವಿಡಿಯಾ ಷೇರುಗಳು ಮಂಗಳವಾರ ಗರಿಷ್ಠ ಮಟ್ಟವನ್ನು ತಲುಪಿದವು. ವಿಶ್ವದ ಅತಿದೊಡ್ಡ ಒಪ್ಪಂದದ ಚಿಪ್ ತಯಾರಕರಾದ TSMC, AI ಯಲ್ಲಿ ಬಳಸುವ ಚಿಪ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ತ್ರೈಮಾಸಿಕ ಲಾಭದಲ್ಲಿ ಸರಿಸುಮಾರು 54% ಜಿಗಿತವನ್ನು ವರದಿ ಮಾಡಿದೆ. ಇದಾದ ನಂತರ ಸ್ಟಾಕ್‌ನಲ್ಲಿ ತೀವ್ರ ಏರಿಕೆ ಕಂಡುಬಂದಿದೆ. LSEG ಸಂಗ್ರಹಿಸಿದ ಮಾಹಿತಿಯ ಪ್ರಕಾರ ಎನ್ವಿಡಿಯಾ ಆಗಸ್ಟ್‌ನಲ್ಲಿ ಮೂರನೇ ತ್ರೈಮಾಸಿಕ ಆದಾಯ $32.5 ಶತಕೋಟಿ, 2% ಎಂದು ಮುನ್ಸೂಚನೆ ನೀಡಿದೆ. ವಿಶ್ಲೇಷಕರು ಸರಾಸರಿ $32.90 ಬಿಲಿಯನ್ ಆದಾಯವನ್ನು ನಿರೀಕ್ಷಿಸುತ್ತಿದ್ದರು.
ಓದಿ: ಮೊದಲ ಹಿಂದಿ ಭಾಷೆಯ ಎಐ ಮಾಡೆಲ್ Nemotron 4 Mini Hindi 4B ಬಿಡುಗಡೆಗೊಳಿಸಿದ ಎನ್ವಿಡಿಯಾ