ETV Bharat / technology

50 ಎಂಪಿ ಕ್ಯಾಮೆರಾ ಹೊಂದಿರುವ ನಥಿಂಗ್​​ನ CMF Phone 1 ಬಿಡುಗಡೆ: ಬೆಲೆ ಎಷ್ಟು ಅಂತಾ ನಿಮಗೆ ಗೊತ್ತಾ? - Nothing CMF Phone 1

ನಥಿಂಗ್ ತನ್ನ ಹೊಸ ಸಿಎಂಎಫ್​ ಬ್ರಾಂಡ್​ನ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದೆ. ಬನ್ನಿ ಈ ಫೋನ್​​ನಲ್ಲಿ ಏನೇನು ವಿಶೇಷತೆ ಇದೆ ಎಂಬುದನ್ನು ತಿಳಿಯೋಣ.

ಸಿಎಂಎಫ್ ಫೋನ್ 1
ಸಿಎಂಎಫ್ ಫೋನ್ 1 (IANS)
author img

By ETV Bharat Karnataka Team

Published : Jul 8, 2024, 5:07 PM IST

ನವದೆಹಲಿ: Launched a new smartphone- ಲಂಡನ್ ಮೂಲದ ಗ್ರಾಹಕ ಟೆಕ್ ಬ್ರಾಂಡ್ ನಥಿಂಗ್ ಸೋಮವಾರ ತನ್ನ ಉಪ ಬ್ರಾಂಡ್ ಸಿಎಂಎಫ್ ಅಡಿ 50 ಎಂಪಿ ಕ್ಯಾಮೆರಾ ಹೊಂದಿರುವ ಹೊಸ ಸ್ಮಾರ್ಟ್ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 6 ಜಿಬಿ + 128 ಜಿಬಿ ಮತ್ತು 8 ಜಿಬಿ + 128 ಜಿಬಿ ಹೀಗೆ ಎರಡು ಮಾದರಿಗಳಲ್ಲಿ ಬಿಡುಗಡೆಯಾದ ಹೊಸ ಸ್ಮಾರ್ಟ್​ಪೋನ್​ ಸಿಎಂಎಫ್ ಫೋನ್ 1,15,999 ರೂ. ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿದೆ. ಸ್ಮಾರ್ಟ್​ಪೋನ್ ಜೊತೆಗೆ, ಕಂಪನಿಯು ಸಿಎಂಎಫ್ ವಾಚ್ ಪ್ರೊ 2 ಮತ್ತು ಸಿಎಂಎಫ್ ಬಡ್ಸ್ ಪ್ರೊ 2 ಗಳನ್ನು ಸಹ ಬಿಡುಗಡೆ ಮಾಡಿದೆ.

"ಸಿಎಂಎಫ್ ಫೋನ್ 1, ಸಿಎಂಎಫ್ ವಾಚ್ ಪ್ರೊ 2 ಮತ್ತು ಸಿಎಂಎಫ್ ಬಡ್ಸ್ ಪ್ರೊ 2 ವಿನ್ಯಾಸಗಳು ಸೃಜನಶೀಲತೆ, ಪ್ರಾಯೋಗಿಕತೆ ಮತ್ತು ವೈಯಕ್ತೀಕರಣವನ್ನು ಸಂಯೋಜಿಸುವ ನಥಿಂಗ್​​ನ ವಿಶಿಷ್ಟ ವಿಧಾನವನ್ನು ಪ್ರದರ್ಶಿಸುತ್ತವೆ" ಎಂದು ನಥಿಂಗ್ ಸಿಇಒ ಕಾರ್ಲ್ ಪೀ ಹೇಳಿದರು.

50MP rear camera, the smartphone: 50 ಎಂಪಿ ಹಿಂಭಾಗದ ಕ್ಯಾಮೆರಾ ಹೊಂದಿರುವ ಸ್ಮಾರ್ಟ್​ಪೋನ್, ಮೀಡಿಯಾಟೆಕ್ ಡೈಮೆನ್ಸಿಟಿ 7300 5ಜಿ ಪ್ರೊಸೆಸರ್, 6.67 ಇಂಚಿನ ಸೂಪರ್ ಅಮೋಲೆಡ್ ಡಿಸ್​ ಪ್ಲೇ, 5000 ಎಂಎಎಚ್ ಬ್ಯಾಟರಿ ಮತ್ತು 16 ಎಂಪಿ ಸೆಲ್ಫಿ ಕ್ಯಾಮೆರಾಗಳನ್ನು ಒಳಗೊಂಡಿದೆ. ತಡೆರಹಿತ ಸಂವಹನಗಳಿಗಾಗಿ ಇದು 120 Hz ಹೊಂದಾಣಿಕೆಯ ರಿಫ್ರೆಶ್ ದರವನ್ನು ಸಹ ಹೊಂದಿದೆ.

ಇದು 120 ಕ್ಕೂ ಹೆಚ್ಚು ಸ್ಪೋರ್ಟ್ಸ್​ ಮೋಡ್ ಮತ್ತು 5 ಕ್ರೀಡೆಗಳ ಅಟೊಮ್ಯಾಟಿಕ್ ರಿಕಗ್ನಿಶನ್ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಹೃದಯ ಬಡಿತ, ರಕ್ತದ ಆಮ್ಲಜನಕದ ಸ್ಯಾಚುರೇಶನ್ (ಎಸ್ ಪಿಒ 2) ಮತ್ತು ಒತ್ತಡದ ಮಟ್ಟಗಳ ದಿನದ 24 ಗಂಟೆಯೂ ಮೇಲ್ವಿಚಾರಣೆ ಒದಗಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಇದಲ್ಲದೇ, ಸಿಎಂಎಫ್ ಬಡ್ಸ್ ಪ್ರೊ 2 ಡ್ಯುಯಲ್ ಡ್ರೈವರ್ ಗಳಿಂದ ನಿಯಂತ್ರಿಸಲ್ಪಡುತ್ತದೆ. ಇದು 11 ಎಂಎಂ ಬಾಸ್ ಡ್ರೈವರ್ ಮತ್ತು 6 ಎಂಎಂ ಟ್ವೀಟರ್ ಅನ್ನು ಒಳಗೊಂಡಿದೆ. 50 ಡಿಬಿ ವರೆಗೆ ಸುಧಾರಿತ ಹೈಬ್ರಿಡ್ ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಮತ್ತು 5000 Hz ವರೆಗೆ ವಿಸ್ತಾರವಾದ ಆವರ್ತನ ಶ್ರೇಣಿಯ ಅನುಭವವನ್ನು ಈ ಸಾಧನ ನೀಡುತ್ತದೆ.

ಕಂಪನಿಯ ಪ್ರಕಾರ, ಇಯರ್ ಬಡ್ ಗಳು ಒಟ್ಟು 43 ಗಂಟೆಗಳ ಬ್ಯಾಟರಿ ಬಾಳಿಕೆ ಹೊಂದಿವೆ ಮತ್ತು 10 ನಿಮಿಷ ಕ್ವಿಕ್ ಚಾರ್ಜ್ ಮಾಡುವ ಮೂಲಕ 7 ಗಂಟೆಗಳ ಕಾಲ ಪ್ಲೇಬ್ಯಾಕ್ ಮಾಡಬಹುದು. ಸಿಎಂಎಫ್ ವಾಚ್ ಪ್ರೊ 2 ಡಾರ್ಕ್ ಗ್ರೇ ಮತ್ತು ಆ್ಯಶ್ ಗ್ರೇ ಬಣ್ಣದಲ್ಲಿ 4,999 ರೂ., ಬ್ಲೂ ಮತ್ತು ಆರೆಂಜ್ ಬಣ್ಣದಲ್ಲಿ 5,499 ರೂ. ಬೆಲೆಗಳಲ್ಲಿ ಲಭ್ಯವಿವೆ. ಸಿಎಂಎಫ್ ಬಡ್ಸ್ ಪ್ರೊ 2 ಬೆಲೆ 4,299 ರೂ. ಗಳಾಗಿದೆ.

ಇದನ್ನೂ ಓದಿ : ಸೈಬರ್ ಸುರಕ್ಷತೆಗಾಗಿ ಎಐ ತಂತ್ರಜ್ಞಾನ ಅಳವಡಿಕೆಗೆ ಶೇ 73ರಷ್ಟು ಕಂಪನಿಗಳ ಒಲವು: ವರದಿ - GenAI for Security

ETV Bharat Logo

Copyright © 2024 Ushodaya Enterprises Pvt. Ltd., All Rights Reserved.