ETV Bharat / technology

ಅಳಿವಿನಂಚಿನಲ್ಲಿರುವ ನಾರ್ಥನ್​ ಬಾಲ್ಡ್​ ಐಬಿಸ್​ ಪಕ್ಷಿಗಳು: ವಲಸೆ ಮಾರ್ಗದ ಪಾಠ ಮಾಡುತ್ತಿರುವ ತಜ್ಞರು - Bird Species Extinct In Europ

author img

By ETV Bharat Karnataka Team

Published : Aug 26, 2024, 12:14 PM IST

ತಮ್ಮ ಪೂರ್ವಜರ ಮಾರ್ಗದರ್ಶನ ಇಲ್ಲದೇ ವಲಸೆ ಮಾರ್ಗ ತಿಳಿಯದ ಈ ಪಕ್ಷಿಗಳಿಗೆ ಮನುಷ್ಯರೇ ವಲಸೆ ಮಾರ್ಗದ ಪಾಠ ಹೇಳಿಕೊಡುತ್ತಿದ್ದಾರೆ. ಹೇಗಿದೆ ಗೊತ್ತಾ ಜೀವಿಶಾಸ್ತ್ರಜ್ಞರ ಪಾಠ. ಎಲ್ಲ ಮಾಹಿತಿಗಾಗಿ ಈ ಸುದ್ದಿಯನ್ನೊಮ್ಮೆ ಓದಿ

northern-bald-ibis-bird-species-extinct-in-europe-now-it-is-back-humans-must-help-it-migrate
ನಾರ್ಥನ್​ ಬಾಲ್ಡ್​ ಐಬಿಸ್​ ಪಕ್ಷಿ (AP)

ಬರ್ಲಿನ್​, ಜರ್ಮನಿ: ನಾರ್ಥನ್​ ಬಾಲ್ಡ್​​ ಐಬಿಸ್​ ಎಂಬ ಪಕ್ಷಿ 17ನೇ ಶತಮಾನದ ಅಳಿವಿನಂಚಿನಲ್ಲಿತ್ತು. ಕಳೆದೆರಡು ಶತಮಾನಗಳಿಂದ ಈ ಹಕ್ಕಿ ಸಂತಾನೋತ್ಪತ್ತಿಯಿಂದ ಮತ್ತೆ ಪುನರುಜ್ಜೀವನ ಕಂಡಿದೆ. ಕಪ್ಪು ಮತ್ತು ಗಾಢ ಹಸಿರಿನ ಪುಕ್ಕ ಹೊಂದಿರುವ ಈ ಹಕ್ಕಿ ಮೊನಚಾದ ಉದ್ದವಾದ ಕೊಕ್ಕು ಹೊಂದಿದೆ. ಕಾಡಿನಲ್ಲಿ ಜನಿಸುವ ಈ ಹಕ್ಕಿಗೆ ತನ್ನ ಪೂರ್ವಜರ ಮಾರ್ಗದರ್ಶನವಿಲ್ಲದೇ ಎತ್ತ ವಲಸೆ ಹೋಗ ಬೇಕು ಎಂಬುದು ತಿಳಿದಿಲ್ಲ. ಈ ಹಿನ್ನಲೆ ಇದೀಗ ಹಕ್ಕಿ ಸಂರಕ್ಷಣಾ ತಜ್ಞರು ಮತ್ತು ವಿಜ್ಞಾನಿಗಳು ಅದರ ಸಾಕು ಪೋಷಕರಾಗಿ ಹಕ್ಕಿಗೆ ಹಾರಾಟ ಸೇರಿದಂತೆ ವಲಸೆ ಕುರಿತು ಮಾರ್ಗದರ್ಶನ ನೀಡಲು ಸಜ್ಜಾಗಿದ್ದಾರೆ.

ಈ ಕುರಿತು ಮಾತನಾಡಿರುವ ಜೀವಶಾಸ್ತ್ರಜ್ಞ ಜೋಹಾನ್ಸ್ ಫ್ರಿಟ್ಜ್, ನಾವು ಅವುಗಳಿಗೆ ವಲಸೆ ಮಾರ್ಗವನ್ನು ರೂಪಿಸಿ ದಿಕ್ಸೂಚಿಯನ್ನು ನೀಡಬೇಕಿದೆ. ನಾರ್ಥ್​ ಬಾಲ್ಡ್​ ಐಬಿಸ್​​ ಪಕ್ಷಿಗಳು ಸಂಖ್ಯೆ ಉತ್ತರ ಆಫ್ರಿಕಾ, ಅರೇಬಿಯನ್ ಪೆನಿನ್ಸುಲಾ ಮತ್ತು ದಕ್ಷಿಣ ಜರ್ಮನಿಯ ಬವೇರಿಯಾ ಒಮ್ಮೆ ಏರಿಕೆ ಕಂಡಿತಾದರೂ ಬಳಿಕ ಕ್ಷೀಣಿಸಿತು. ಜರ್ಮನ್ ಭಾಷೆಯಲ್ಲಿ ವಾಲ್ಡ್ರಾಪ್ ಎಂದು ಕರೆಯುವ ಈ ಪಕ್ಷಿ ಯುರೋಪಿನಲ್ಲಿ ಕಣ್ಮರೆಯಾಗಿದ್ದು, ಕೆಲವು ಕಡೆ ಇದನ್ನು ಕಾಣಬಹುದು.

ಫ್ರಿಟ್ಜ್​ ಮತ್ತು ವಾಲ್ಡ್ರಪ್​ ತಂಡದ ಪ್ರಯತ್ನದಿಂದ ಇದೀಗ ಈ ಹಕ್ಕಿಗಳನ್ನು ಆಸ್ಟ್ರೀಯಾದಲ್ಲಿ ಸಂರಕ್ಷಣೆ ಮಾಡಿ ಸಂಶೋಧನೆ ನಡೆಸಲಾಗುತ್ತಿದೆ. ಸೆಂಟ್ರಲ್​ ಯುರೋಪಿಯನ್​ನಲ್ಲಿ ಶೂನ್ಯವಾಗಿದ್ದ ಈ ಹಕ್ಕಿಗಳ ಸಂಖ್ಯೆ ಇದೀಗ 2002ರಲ್ಲಿ ಆರಂಭಿಸಲಾದ ಯೋಜನೆಯಿಂದ 300ಕ್ಕೆ ಏರಿಕೆ ಕಂಡಿದೆ.

ತೀವ್ರವಾಗಿ ಅಳಿವಿನಂಚಿನಲ್ಲಿದ್ದ ಈ ಪಕ್ಷಿಗಳು ಇದೀಗ ಅಳಿವಿನಂಚಿನ ಪಕ್ಷಿಗಳಾಗಿದೆ. ಈ ಯೋಜನೆಯು ಅಳಿವಿನಂಚಿನಲ್ಲಿರುವ ವಲಸೆ ಪಕ್ಷಿ ಪ್ರಭೇದಗಳನ್ನು ಮರುಪರಿಚಯಿಸುವ ಮೊದಲ ಪ್ರಯತ್ನವಾಗಿದೆ. ಆದರೆ, ನಾರ್ಥನ್​ ಬಾಲ್ಡ್​ ಐಬಿಸ್​​ ನೈಸರ್ಗಿಕವಾಗಿ ವಲಸೆ ಹೋಗವ ಕುರಿತು ತಿಳಿಯಬೇಕಿದೆ. ಅವುಗಳ ಹಿರಿಯ ಹಕ್ಕಿಗಳ ಮಾರ್ಗದರ್ಶನವಿಲ್ಲದೇ, ಯಾವ ದಿಕ್ಕಿನತ್ತ ವಲಸೆ ಹೋಗಬೇಕು ಎಂಬುದು ಅವುಗಳಿಗೆ ತಿಳಿದಿಲ್ಲ. ವಾಲ್ಡ್ರಪ್​ ತಂಡ ಈ ಮೊದಲು ಈ ಕುರಿತು ಪ್ರಯತ್ನ ನಡೆಸಿತಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಕಾರಣ, ಅವುಗಳಿಗೆ ವಲಸೆ ತಿಳಿಯದ ಹಿನ್ನೆಲೆ ಅವುಗಳನ್ನು ಹಾರಲು ಬಿಟ್ಟಾಗ ಕಣ್ಮರೆಯಾಗತ್ತಿದೆ. ಅವುಗಳು ಇಟಲಿಯ ಟಸ್ಕನಿಯಂತಹ ಸೂಕ್ತ ಪ್ರದೇಶಕ್ಕೆ ಹಾರುವ ಬದಲಾಗಿ ವಿರುದ್ಧ ದಿಕ್ಕಿನಲ್ಲಿ ಹಾರಾಟ ನಡೆಸುವುದರಿಂದ ಅವು ಸಾಯುತ್ತಿವೆ.

ಹಕ್ಕಿಗಳಿಗೆ ಹಾರಾಟ ಕಲಿಸುತ್ತಿರುವ ಜೀವಶಾಸ್ರ್ರಜ್ಞರು: ಈ ಹಿನ್ನೆಲೆ ವಾಲ್ಡ್ರಾಪ್ ​ತಂಡ ಇದೀಗ ಅವುಗಳು ಹಿರಿಯ ಪೋಷಕರಾಗಿ ಅವುಗಳಿಗೆ ವಲಸೆಯ ದಿಕ್ಕಿನತ್ತ ಹಾರಾಟ ನಡೆಸುವುದಕ್ಕೆ ಕಲಿಸುತ್ತಿದೆ. ಸೆಂಟ್ರಲ್​ ಯುರೋಪ್​ ಸ್ಥಳಗಳಿಗೆ ಅವುಗಳಯ ವಲಸೆ ಹೋಗುವುದನ್ನು ಹೇಳಿಕೊಡಲಾಗುತ್ತಿದ್ದು, ಅಲ್ಲಿ ಅವು ವಲಸೆ ಗುಂಪುಗಳನ್ನು ಸೃಷ್ಟಿಸುವ ಭರವಸೆ ಕಾಣಲಾಗುತ್ತಿದೆ. ಈ ವರ್ಷ 17ನೇ ಬಾರಿಗೆ ಮನುಷ್ಯರ ನೇತೃತ್ವದ ವಲಸೆ ಮಾರ್ಗದರ್ಶನ ನಡೆಸಲಾಗಿದೆ. ಎರಡನೇ ಬಾರಿಗೆ ಈ ಹಕ್ಕಿಗಳು ಹವಾಮಾನ ಬದಲಾವಣೆಯಿಂದ ಸ್ಪೇನ್​ಗೆ ಹೊಸ ಮಾರ್ಗದಲ್ಲಿ ಕರೆತರಲಾಗಿದೆ.

ಈ ರೀತಿ ಪ್ರಯಾಣಕ್ಕೆ ಸಜ್ಜಾಗಿಸಲು ಸಂತಾನೋತ್ಪತ್ತಿ ಬಳಿಕ ಮರಿಗಳನ್ನು ಬೇರ್ಪಡಿಸಲಾಗುತ್ತದೆ. ಸಾಕು ಪೋಷಕರ ಮೇಲ್ವಿಚಾರಣೆಯಲ್ಲಿ ಪಂಜರದಲ್ಲಿ ಅವುಗಳನ್ನು ಬೆಳಸಿ, ಮನುಷ್ಯರೊಂದಿಗೆ ಸಂಬಂಧ ಹೊಂದುವಂತೆ ಮಾಡಲಾಗುತ್ತದೆ. ಇವು ಮನುಷ್ಯರನ್ನು ನಂಬಿದ ಮೇಲೆ ವಲಸೆ ಮಾರ್ಗದ ಮೂಲಕ ಹಾರಾಟಕ್ಕೆ ಸಜ್ಜು ಮಾಡಲಾಗುತ್ತದೆ.

ಈ ಕುರಿತು ಮಾತನಾಡಿರುವ ವಾಲ್ಡ್ರಾಪ್​ ತಂಡ ಸಾಕು ತಾಯಿಯಾಗಿರುವ ಬರ್ಬರ, ಪಕ್ಷಿಯ ತಾಯಿಯಂತೆ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾರೆ. ನಾವು ಅವರಿಗೆ ತಿನಿಸುತ್ತೇವೆ. ಪಕ್ಷಿಗಳನ್ನು ಮತ್ತು ಅದರ ಗೂಡನ್ನು ಸ್ವಚ್ಛ ಮಾಡುತ್ತೇವೆ. ಅವು ಆರೋಗ್ಯಯುತವಾಗಿರುವಂತೆ ಆರೈಕೆ ಮಾಡಲಾಗುವುದು. ಅಲ್ಲದೇ, ನಾವು ಹಕ್ಕಿಗಳೊಂದಿಗೆ ಸಂಪರ್ಕ ಕಲ್ಪಿಸುತ್ತೇವೆ ಎಂದರು.

ಮತ್ತೊಬ್ಬ ಪಕ್ಷಿ ಸಾಕು ಪೋಷಕರಾಗಿ ಆರೈಕೆ ಮಾಡುತ್ತಿರುವ ಸ್ಟೈನಿಂಗರ್ ಮಾತನಾಡಿ, ಪಕ್ಷಿಗಳು ವಲಸೆ ಮಾರ್ಗಸೂಚಿಸುವಾಗ ಮೈಕ್ರೋಲೈಟ್ ವಿಮಾನದ ಹಿಂಭಾಗದಲ್ಲಿ ಕುಳಿತು, ಬುಲ್‌ಹಾರ್ನ್ ಮೂಲಕ ಅವುಗಳ ಹಾರಾಟಕ್ಕೆ ಪ್ರೋತ್ಸಾಹಿಸಲಾಗುವುದು ಎಂದರು.

ವಿಚಿತ್ರ ದೃಶ್ಯ: ಹಕ್ಕಿಗಳಿಗೆ ವಲಸೆ ಮಾರ್ಗ ತೋರಿಸುವ ಏರ್​​ಕ್ರಾಫ್ಟ್ ಗೋ ಕಾರ್ಟಿಂಗ್​​ ರೀತಿಯ ದೊಡ್ಡ ಫ್ಯಾನ್​ ಆಗಿದ್ದು, ಕಪ್ಪು ಮತ್ತು ಹಳದಿ ಪ್ಯಾರಾಚೂಟ್​ ಇರಲಿದೆ. ಮೂರು ಡಜನ್​ ಹಕ್ಕಿಗಳು ಹಾರಾಟ ನಡೆಸುತ್ತದೆ. ಪೈಲಟ್​ ಫ್ರಿಟ್ಜ್​, ಅಲ್ಫೈನ್​ ಹುಲ್ಲುಗಾವಲಿನಲ್ಲಿ ವಿಮಾನ ಹಾರಾಟ ನಡೆಸುತ್ತಾರೆ.

ಫಾದರ್​ ಗೂಸೆ ಬಿಲ್​ ಲಿಶ್ಮಾನ್​ 1988ರಲ್ಲಿ ಅಲ್ಟ್ರಾಲೈಟ್​ ವಿಮಾನದಲ್ಲಿ ಹಾರಾಟದ ಮೂಲಕ ಕೆನಡಾದ ಗೀಸ್​​ಗಳಿಗೆ ನೈಸರ್ಗಿಕವಾಗಿ ಹಾರಾಟ ಕಲಿಸಿದರು. ಬಳಿಕ ಅವರು ಸುರಕ್ಷಿತ ಮಾರ್ಗದ ಮೂಲಕ ಅಳಿವಿನಂಚಿನಲ್ಲಿರುವ ವೂಪಿಂಗ್ ಕ್ರೇನ್‌ಗಳಿಗೆ ಪಾಠ ಮಾಡಿದರು. ಇದಕ್ಕಾಗಿ ಆಪರೇಷನ್ ಮೈಗ್ರೇಶನ್​ ಸ್ಥಾಪಿಸಿದರು. ಇವರ ಈ ಚಟುವಟಿಕೆಯು ಫ್ಲೈ ಅವೇ ಹೋಮ್​ ಚಿತ್ರಕ್ಕೆ ಕೂಡ ಪ್ರೇರೇಪಿಸಿತು.

ಲಿಶ್ಮನ್​ನಂತೆ ಫ್ರಿಟ್ಜ್​ ಮತ್ತು ಅವರ ತಂಡ ಕಾರ್ಯನಿರ್ವಹಿಸುತ್ತಿದೆ. 2011ರಲ್ಲಿ ಟಸ್ಕನಿಯಿಂದ ಬವೇರಿಯಾಗೆ ಮೊದಲ ಹಕ್ಕಿ ಹಾರಾಟ ನಡೆಸಿತು. ಈ ಹಕ್ಕಿಯನ್ನು ಪ್ರತಿವರ್ಷ 550 ಕಿ.ಮೀ ದೂರ ಹಾರಿಸಲಾಯಿತು. ಇದೀಗ ಸೆಂಟ್ರಲ್​ ಯುರೋಪಿಯನ್​ನಲ್ಲಿ 2028ರ ಹೊತ್ತಿಗೆ ಈ ಹಕ್ಕಿಗಳ ಸಂಖ್ಯೆ ಹೆಚ್ಚಿ, ಸ್ವಾವಲಂಬಿಗಳಾಗಬಹುದು ಎಂಬ ನಿರೀಕ್ಷೆಯನ್ನು ತಂಡ ಹೊಂದಿದೆ.

ಇದನ್ನೂ ಓದಿ: ರಾಜ್ಯ ಸ್ಥಾನಮಾನ ಮರು ಸ್ಥಾಪನೆಗೆ ಒತ್ತಾಯಿಸಿ ಲಡಾಖ್​ ಜನರಿಂದ ಲೇಹ್​​ TO ದೆಹಲಿ ಪಾದಯಾತ್ರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.