ETV Bharat / technology

ದೇಶದಲ್ಲಿ ಹೆಚ್ಚುತ್ತಿದೆ ಹ್ಯಾಕಿಂಗ್​; ನಾಲ್ವರಲ್ಲಿ ಒಬ್ಬರ ಮೇಲೆ ಸೈಬರ್​ ದಾಳಿ! - Indians faced hacking attacks

ದೇಶದಲ್ಲಿ 22.9ರಷ್ಟು ವೆಬ್​ ಬಳಕೆದಾರರು ವೆಬ್​ ಆಧಾರಿತ ಬೆದರಿಕೆಯ ದಾಳಿಗೆ ಒಳಗಾಗುತ್ತಿದ್ದಾರೆ ಎಂದು ಅಧ್ಯಯನಯೊಂದು ತಿಳಿಸಿದೆ.

Nearly one in four Indians faced hacking attacks
ದೇಶದಲ್ಲಿ ಹೆಚ್ಚುತ್ತಿದೆ ಹ್ಯಾಕಿಂಗ್​; ನಾಲ್ವರಲ್ಲಿ ಒಬ್ಬರ ಮೇಲೆ ಸೈಬರ್​ ದಾಳಿ! (IANS)
author img

By ETV Bharat Karnataka Team

Published : May 18, 2024, 10:41 AM IST

ನವದೆಹಲಿ: ಡಿಜಿಟಲ್​ ಜಗತ್ತು ಹೆಚ್ಚು ಹೆಚ್ಚು ಅಭಿವೃದ್ಧಿ ಹೊಂದಿದಂತೆ ದೇಶದಲ್ಲಿ ಸೈಬರ್​ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಂದರೆ ಜನವರಿಯಿಂದ ಮಾರ್ಚ್​ ಅವಧಿಯವರೆಗೆ ದೇಶದ ನಾಲ್ವರಲ್ಲಿ ಒಬ್ಬರು ಹ್ಯಾಕಿಂಗ್​ ದಾಳಿಗೆ ತುತ್ತಾಗುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ. ಜೊತೆಗೆ ಈ ದಾಳಿಯಲ್ಲಿ ಮಾಲ್​ವೇರ್​​​ ಪ್ರಮುಖ ಸೈಬರ್​​ ಬೆದರಿಕೆಯಾಗಿ ಮುಂದುವರೆದಿದೆ.

ಜಾಗತಿಕ ಭದ್ರತಾ ಕಂಪನಿಯಾಗಿರುವ ಕ್ಯಾಸ್ಪರ್ಸ್ಕಿ ಈ ಕುರಿತು ದತ್ತಾಂಶ ಬಿಡುಗಡೆ ಮಾಡಿದ್ದು, ದೇಶದಲ್ಲಿ 22.9ರಷ್ಟು ವೆಬ್​ ಬಳಕೆದಾರರು ವೆಬ್​ ಆಧಾರಿತ ಬೆದರಿಕೆಯ ದಾಳಿಗೆ ಒಳಗಾಗುತ್ತಿದ್ದಾರೆ. ಸುಮಾರು ಶೇ 20.1ರಷ್ಟು ಬಳಕೆದಾರರು ಸ್ಥಳೀಯ ಬೆದರಿಕೆಗಳಿಗೆ ಗುರಿಯಾಗುತ್ತಿದ್ದಾರೆ.

ಭಾರತದಲ್ಲಿನ ವೆಬ್​ ಬಳಕೆದಾರರಿಗೆ ಮಾಲ್‌ವೇರ್ ಪ್ರಮುಖ ಬೆದರಿಕೆಯಾಗಿದೆ. ಉದ್ದೇಶಿತ ಮಾಲ್‌ವೇರ್ ದಾಳಿಗಳು ಸಂಸ್ಥೆಗಳು ಮತ್ತು ಬಳಕೆದಾರರಿಗೆ ಇದು ಪ್ರಮುಖ ಚಿಂತೆಯೂ ಆಗಿದೆ ಎಂದು ವರದಿಯಾಗಿದೆ.

ಸೈಬರ್ ಅಪರಾಧಿಗಳು ಬ್ರೌಸರ್‌ಗಳು ಮತ್ತು ಅವುಗಳ ಪ್ಲಗಿನ್‌ಗಳಲ್ಲಿನ ದೋಷಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ಫೈಲ್ ಲೆಸ್​ ಮಾಲ್​ವೇರ್​​ಗಳು ಅತ್ಯಂತ ಅಪಾಯಕಾರಿ ವೆಬ್​ ಬೆದರಿಕೆಯಾಗಿವೆ. ಈ ದಾಳಿಯ ವಿಶ್ಲೇಷಣೆಗೆ ಯಾವುದೇ ಕುರುಹುಗಳನ್ನು ಬಿಡುವುದಿಲ್ಲ ಎಂದು ಅಧ್ಯಯನದ ಫಲಿತಾಂಶ ತಿಳಿಸಿದೆ.

ಫಿಶಿಂಗ್, ಬೈಟಿಂಗ್ ಮತ್ತು ನೆಪ ಹೇಳುವಿಕೆಯಂತಹ ಸಾಮಾಜಿಕ ಎಂಜಿನಿಯರಿಂಗ್ ಕೂಡ ಭಾರತೀಯ ಬಳಕೆದಾರರ ಮೇಲೆ ಸೈಬರ್ ದಾಳಿಗೆ ತುತ್ತಾಗುತ್ತಿರುವ ಉದಾಹರಣೆ ಕಾಣಬಹುದು. ಇದರಲ್ಲಿ ಫಿಶಿಂಗ್​ ಅತ್ಯಂತ ಸಾಮಾನ್ಯ ಸೈಬರ್​ ಅಪರಾಧವಾಗಿದೆ. ರ್ಯಾನ್​ಸಮ್​ವೈರ್​ ಬೆಳೆಯುತ್ತಿರುವ ಬೆದರಿಕೆಯಾಗಿದೆ.

ಜನವರಿಯಿಂದ ಮಾರ್ಚ್ ಅವಧಿಯಲ್ಲಿ 12,454,797 ವಿವಿಧ ಇಂಟರ್ನೆಟ್​ ಹರಡುತ್ತಿರುವ ಸೈಬರ್ ಬೆದರಿಕೆಗಳನ್ನು ನಿರ್ಬಂಧಿಸಿರುವುದಾಗಿ ಕ್ಯಾಸ್ಪರ್ಸ್ಕಿ ತಿಳಿಸಿದೆ. ಇದೇ ವೇಳೆ ಇದು ಕಂಪ್ಯೂಟರ್‌ಗಳಲ್ಲಿ 16,751,049 ಸ್ಥಳೀಯ ಘಟನೆಗಳನ್ನು ಪತ್ತೆಹಚ್ಚಿ ನಿರ್ಬಂಧಿಸಿರುವುದಾಗಿ ತಿಳಿಸಿದೆ.

ಡಿಜಿಟಲ್​ ಜಗತ್ತಿನಲ್ಲಿ ಸೈಬರ್​ ದಾಳಿ ಎಂಬುದು ಸಂಸ್ಥೆಗಳ ಮಹತ್ವದ ಡೇಟಾ ಸಂರಕ್ಷಣೆಯ ಮೇಲಿನ ಬಹುದೊಡ್ಡ ಬೆದರಿಕೆ. ಆಧುನಿಕ ಸೈಬರ್​ ದಾಳಿಗಳನ್ನು ಉನ್ನತ ಮಟ್ಟದಲ್ಲಿ ಯಶಸ್ವಿಯಾಗಿ ಎದುರಿಸಲು ಭಾರತದ ಶೇ.4ರಷ್ಟು ಸಂಸ್ಥೆಗಳಷ್ಟೇ ಸಾಮರ್ಥ್ಯ ಹೊಂದಿವೆ ಎಂದು ಮತ್ತೊಂದು ವರದಿ ತಿಳಿಸಿದೆ. ಅಲ್ಲದೇ, ಶೇ.82ರಷ್ಟು ಮಂದಿ ತಮ್ಮ ಉದ್ಯಮದ ಮೇಲೆ ಮುಂದಿನ 12 ರಿಂದ 24 ತಿಂಗಳಲ್ಲಿ ಸೈಬರ್​ ದಾಳಿ ತೀವ್ರ ಅಡ್ಡಿ ಉಂಟುಮಾಡಲಿದೆ ಎಂಬ ಆತಂಕವನ್ನು ಭಾರತೀಯರು ಹೊಂದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: 2024ರಲ್ಲಿ ಎಐ ಚಾಲಿತ ಸೈಬರ್​ದಾಳಿಗಳು ಹೆಚ್ಚಾಗುವ ಸಾಧ್ಯತೆ; ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.