ETV Bharat / technology

ನೆಹರು ತಾರಾಲಯದಲ್ಲಿ ಆದಿತ್ಯ ಎಲ್-1 ಉಪಗ್ರಹದ ನೈಜ ಪ್ರತಿರೂಪ ಅಳವಡಿಕೆ: ಸಚಿವ ಭೋಸರಾಜು - National Space Day

author img

By ETV Bharat Tech Team

Published : Aug 23, 2024, 2:09 PM IST

ತಾರಾಲಯದ ಆಕರ್ಷಣೆಯನ್ನು ಇಮ್ಮಡಿಗೊಳಿಸಲು ಆದಿತ್ಯ ಎಲ್-1 ಉಪಗ್ರಹದ ನೈಜ ಪ್ರತಿರೂಪದ ಅಳವಡಿಕೆ ಮಾಡಲಾಗುವುದು ಎಂದು ಸಚಿವ ಭೋಸರಾಜು ತಿಳಿಸಿದರು.

NATIONAL SPACE DAY CELEBRATION  JAWAHARLAL NEHRU PLANETARIUM  BENGALURU  CHANDRAYAAN 3 SUCCESS
ಸಚಿವ ಭೋಸರಾಜು (ETV Bharat)

ಬೆಂಗಳೂರು: ಜವಾಹರಲಾಲ್‌ ನೆಹರು ತಾರಾಲಯದ ಆವರಣವನ್ನು ಇನ್ನಷ್ಟು ಆಕರ್ಷಕಗೊಳಿಸುವ ನಿಟ್ಟಿನಲ್ಲಿ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಸೂರ್ಯನ ಅಧ್ಯಯನಕ್ಕೆ ತೆರಳಿರುವ ಆದಿತ್ಯ ಎಲ್‌ 1 ಉಪಗ್ರಹದ ನೈಜ ಗಾತ್ರದ ಪ್ರತಿರೂಪವನ್ನು ತಾರಾಲಯದ ಆವರಣದಲ್ಲಿ ಅಳವಡಿಸಲಿದ್ದೇವೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್​ಎಸ್‌ ಭೋಸರಾಜು ತಿಳಿಸಿದರು.

ಶುಕ್ರವಾರ ಜವಾಹರಲಾಲ್‌ ನೆಹರು ತಾರಾಲಯದಲ್ಲಿ ನಡೆದ ರಾಷ್ಟ್ರೀಯ ಅಂತರಿಕ್ಷ ದಿನಾಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೆಚ್ಚಿಸಲು, ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ನಮ್ಮ ಸರಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ರಾಜ್ಯದ 833 ವಸತಿ ಶಾಲೆಗಳಿಗೆ ಟೆಲಿಸ್ಕೋಪ್‌ಗಳನ್ನು ಒದಗಿಸುತ್ತಿದ್ದೇವೆ. ಇದರಿಂದ ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನ ಹಾಗೂ ಅರ್ಥ ಮಾಡಿಕೊಳ್ಳುವ ಶಕ್ತಿ ಇನ್ನಷ್ಟು ಮೊನಚಾಗುತ್ತದೆ ಎಂದರು.

National Space Day Celebration  Jawaharlal Nehru Planetarium  Bengaluru  chandrayaan 3 success
ಆದಿತ್ಯ ಎಲ್‌ 1 ಉಪಗ್ರಹದ ನೈಜ ಗಾತ್ರದ ಪ್ರತಿರೂಪ ವೀಕ್ಷಿಸುತ್ತಿರುವ ಸಚಿವ (ETV Bharat)

ಜವಾಹರಲಾಲ್‌ ನೆಹರು ತಾರಾಲಯದ ಆವರಣವನ್ನು ಇನ್ನಷ್ಟು ಆಕರ್ಷಕಗೊಳಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸೂರ್ಯನ ಅಧ್ಯಯನಕ್ಕೆ ತೆರಳಿರುವ ಆದಿತ್ಯ ಎಲ್‌ 1 ಉಪಗ್ರಹದ ನೈಜ ಗಾತ್ರದ ಪ್ರತಿರೂಪವನ್ನು ತಾರಾಲಯದ ಆವರಣದಲ್ಲಿ ಅಳವಡಿಸಲಿದ್ದೇವೆ. ಇಸ್ರೋ ಸಂಸ್ಥೆಯ ಜೊತೆ ಈಗಾಗಲೇ ತಾರಾಲಯದ ಅಧಿಕಾರಿಗಳು ಮಾತುಕತೆ ನಡೆಸಿದ್ದು, ತಾರಾಲಯದ ಆವರಣದಲ್ಲಿ ಜಾಗವನ್ನು ಸಿದ್ಧಗೊಳಿಸಿದ ನಂತರ ಇದನ್ನು ತರಲಾಗುವುದು ಎಂದು ತಿಳಿಸಿದರು.

ತಾರಾಲಯದ ಆವರಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಬೋಧನಾ ಕೊಠಡಿಗಳು, ಆಡಿಯೋ, ವಿಡಿಯೋ ವಿಷ್ಯೂಯಲ್‌ ಸಲಕರಣೆಗಳನ್ನು ಅಳವಡಿಸಿರುವ ಕಟ್ಟಡದ ಕಾಮಗಾರಿ ಅಂತಿಮ ಹಂತದಲ್ಲಿದೆ. ಮುಂದಿನ ತಿಂಗಳು ಇದರ ಉದ್ಘಾಟನೆ ಮಾಡಿಸುವ ನಿಟ್ಟಿನಲ್ಲಿ ಅಗತ್ಯ ತಯಾರಿಯನ್ನು ನಡೆಸಲಾಗಿದೆ. ವಿದ್ಯಾರ್ಥಿಗಳು ವಿಜ್ಞಾನವನ್ನು ಚಟುವಟಿಕೆಯ ಮೂಲಕ ಕಲಿಯಲು ಅನುವು ಮಾಡಿಕೊಡುವ ಸ್ಟ್ರೀಮ್‌ ಲ್ಯಾಚ್​ಗಳ ಪ್ರಾರಂಭಕ್ಕೂ ನಮ್ಮ ಇಲಾಖೆಯ ವತಿಯಿಂದ ಯೋಜನೆಯನ್ನು ರೂಪಿಸಲಾಗುತ್ತಿದೆ. ಹೊಸ ಯೋಜನೆಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ನಮ್ಮ ಸರಕಾರ ಸಿದ್ದವಿದೆ ಎಂದು ಹೇಳಿದರು.

ಭಾರತದ ತಾಂತ್ರಿಕ ಸಾಮರ್ಥ್ಯವನ್ನ ಇಡೀ ಜಗತ್ತಿಗೆ ಸಾರಿ ಹೇಳಿದ ಈ ದಿನವನ್ನು ರಾಷ್ಟ್ರೀಯ ಅಂತರಿಕ್ಷ ದಿನ ಎಂದು ಆಚರಿಸಲಾಗುತ್ತಿದೆ. ಚಂದ್ರನ ದಕ್ಷಿಣ ದ್ರುವ ಪ್ರದೇಶದ ಮೇಲೆ ನೌಕೆಯನ್ನು ಇಳಿಸಿದ ಮೊದಲ ದೇಶ ಎನ್ನುವ ಹೆಗ್ಗಳಿಕೆ ಪಾತ್ರವಾಗುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳು ವಿಜ್ಞಾನ ಮತ್ತು ಅಂತರಿಕ್ಷ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದುವಂತೆ ಪ್ರೇರೇಪಿಸಿದೆ. 100 ಕ್ಕೂ ಹೆಚ್ಚು ಉಪಗ್ರಹಗಳನ್ನು ಇಸ್ರೋ ಕಳುಹಿಸಿದೆ. ಚಂದ್ರಯಾನ- 1,2 ಮತ್ತು 3 ರ ಮೂಲಕ ವಿಶ್ವದ ಅಂತರಿಕ್ಷ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಮೈಲುಗಲ್ಲನ್ನ ನೆಟ್ಟಿದೆ ಎಂದರು.

ಕಾರ್ಯಕ್ರಮದಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ರಿಜ್ವಾನ್‌ ಅರ್ಷದ್‌, ಬೆಂಗಳೂರು ಅಸೋಸಿಯೇಷನ್‌ ಫಾರ್‌ ಸೈನ್ಸ್‌ ಎಜುಕೇಷನ್‌ ಉಪಾಧ್ಯಕ್ಷ ಡಾ. ಟಿ.ಕೆ ಆಲೆಕ್ಸ್‌, ಜವಾಹರಲಾಲ್‌ ನೆಹರು ತಾರಾಲಯದ ನಿರ್ದೇಶಕ ಡಾ. ಗುರುಪ್ರಸಾದ್‌ ಸೇರಿದಂತೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಓದಿ: ರಾಷ್ಟ್ರೀಯ ಬಾಹ್ಯಾಕಾಶ ದಿನ: ದೇಶದ ಸಾಧನೆ ಪ್ರದರ್ಶಿಸಿ, ಯುವ ಜನರಲ್ಲಿ ಸ್ಫೂರ್ತಿ ತುಂಬಲು ಹಲವು ಕಾರ್ಯಕ್ರಮಗಳು - National Space Day

ETV Bharat Logo

Copyright © 2024 Ushodaya Enterprises Pvt. Ltd., All Rights Reserved.