ETV Bharat / technology

2035ಕ್ಕೆ ಮಂಗಳನ ಅಂಗಳಕ್ಕೆ ಮಾನವರನ್ನ ಕಳುಹಿಸಲು ನಾಸಾ ಸರ್ವ ಸನ್ನದ್ಧ - NASA ARTEMIS MISSION

ಆರ್ಟೆಮಿಸ್ III, ಪ್ರಸ್ತುತ 2026 ರಲ್ಲಿ ಉಡಾವಣೆ ಮಾಡಲು ಯೋಜಿಸಿರುವ ನಾಸಾದ ಯೋಜನೆಯಾಗಿದೆ. 50 ವರ್ಷಗಳಿಗಿಂತಲೂ ಹೆಚ್ಚು ಕಾಲದ ಬಳಿಕ ಚಂದ್ರನ ಅಂಗಳಕ್ಕೆ ಮತ್ತೆ ಮಾನವನನ್ನು ಕಳುಹಿಸಲು ನಾಸಾ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

NASA Artemis mission to send human on Mars by 2035
2035ಕ್ಕೆ ಮಂಗಳ ಅಂಗಳಕ್ಕೆ ಮಾನವರನ್ನ ಕಳುಹಿಸಲು ನಾಸಾ ಸರ್ವ ಸನ್ನದ್ಧ ((NASA/JPL-Caltech/ASU/MSSS))
author img

By ETV Bharat Tech Team

Published : Oct 11, 2024, 6:58 AM IST

ಚಂದ್ರನಂತೆ ಮಂಗಳವು ವೈಜ್ಞಾನಿಕ ಆವಿಷ್ಕಾರಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಮಾನವರು ಭೂಮಿಯಿಂದ ದೂರ ಪ್ರಯಾಣಿಸಲು ಮತ್ತು ಹೊಸ ಅನ್ವೇಷಣೆಗಳಿಗೆ ತಾಣವಾಗಿ ಮಾರ್ಪಾಡು ಮಾಡಲು, ಹಾಗೂ ತಂತ್ರಜ್ಞಾಗಳ ಚಾಲಕ ತಾಣವಾಗಿ ಮಂಗಳನನ್ನು ವಿಜ್ಞಾನಿಗಳು ನೋಡುತ್ತಿದ್ದಾರೆ. NASA 2035 ರಲ್ಲಿ ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸುವ ಮಹತ್ವಾಕಾಂಕ್ಷೆಯ ಗುರಿಯೊಂದನ್ನು ಹೊಂದಿದೆ.

ಈ ಕಾರ್ಯಾಚರಣೆಯು ಆರರಿಂದ ಏಳು ತಿಂಗಳ ಕಾಲ ಸುಮಾರು 402 ಮಿಲಿಯನ್ ಕಿಲೋಮೀಟರ್ ಸುತ್ತಿನ ಪ್ರವಾಸವನ್ನು ಒಳಗೊಂಡಿರುತ್ತದೆ. ಗಗನಯಾತ್ರಿಗಳು ಮಂಗಳನ ಮೇಲ್ಮೈಯಲ್ಲಿ 500 ದಿನಗಳವರೆಗೆ ಉಳಿದುಕೊಳ್ಳಬಹುದಾದ ಯೋಜನೆಯೊಂದನ್ನು ನಾಸಾ ಸಿದ್ದಪಡಿಸುತ್ತಿದೆ. ಭೂಮಿಗೆ ಹಿಂದಿರುಗುವ ಮೊದಲು ಅಮೂಲ್ಯವಾದ ವೈಜ್ಞಾನಿಕ ಅಂಕಿ- ಅಂಶಗಳನ್ನು ಸಂಗ್ರಹಿಸುವ ಪ್ಲಾನ್​ ವೊಂದನ್ನು ನಾಸಾ ವಿಜ್ಞಾನಿಗಳು ಸಿದ್ಧಪಡಿಸುತ್ತಿದ್ದಾರೆ.

ಏನಿದು ಆರ್ಟೆಮಿಸ್​ ಪ್ರೋಗ್ರಾಂ: ಆರ್ಟೆಮಿಸ್ ಪ್ರೋಗ್ರಾಂ ಮಂಗಳಯಾನಕ್ಕಾಗಿ ಗಗನಯಾತ್ರಿಗಳನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿದೆ. ಏಕೆಂದರೆ ಅವರು ಬಾಹ್ಯಾಕಾಶದಲ್ಲಿ ದೀರ್ಘಕಾಲ ಕೆಲಸ ಮಾಡಬೇಕಾಗುತ್ತದೆ. ಈ ಉದ್ದೇಶಕ್ಕಾಗಿ, ನಾಸಾ ಗಗನಯಾತ್ರಿಗಳನ್ನು ಚಂದ್ರನಲ್ಲಿಗೆ ಕಳುಹಿಸಲಾಗುತ್ತಿದೆ. ಈ ಮೂಲಕ ಕೆಂಪು ಗ್ರಹದ ರಹಸ್ಯಗಳನ್ನು ಬಹಿರಂಗಪಡಿಸಲು ಮಂಗಳ ಗ್ರಹದ ಪ್ರಯಾಣಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇಲ್ಲಿ ಜೀವಿಗಳು ಬದುಕಬಹುದಾ ಎಂದು ತಿಳಿಯುವುದು ಹಾಗೂ ಜೀವಸಂಕುಲದ ಇರುವಿಕೆಯನ್ನು ಪತ್ತೆ ಹಚ್ಚುವುದೇ ಈ ವಿಷನ್​ನ ಮೊದಲ ಗುರಿಯಾಗಿದೆ.

ಚಂದ್ರನ ಮೇಲೆ ನಿರಂತರ ಮಾನವ ಅಸ್ತಿತ್ವವನ್ನು ಸ್ಥಾಪಿಸಲು NASA ವಾಣಿಜ್ಯ ಮತ್ತು ಅಂತಾರಾಷ್ಟ್ರೀಯ ಘಟಕಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡು ಅಧ್ಯಯನಗಳನ್ನು ಮುಂದುವರೆಸಿದೆ. ನೈಸರ್ಗಿಕ ಉಪಗ್ರಹದ ಅನ್ವೇಷಣೆಯೊಂದಿಗೆ ಇಲ್ಲಿ ಹೊಸ ಹೊಸ ಕಲಿಕೆಯನ್ನು ಮಾಡಿಕೊಳ್ಳುತ್ತಿದೆ. ಅಷ್ಟೇ ಅಲ್ಲ, ಚಂದ್ರನ ಪರೀಕ್ಷೆಯ ಮೂಲಕವೇ ಮಂಗಳನಲ್ಲಿಗೆ ಅದು ಮೊದಲ ಗಗನಯಾತ್ರಿಗಳನ್ನು ಕಳುಹಿಸುವ ಗುರಿ ಇಟ್ಟುಕೊಂಡಿದೆ.

ಇದನ್ನು ಓದಿ: ಮಾರುಕಟ್ಟೆಯಲ್ಲಿ ಮಹೀಂದ್ರ ಥಾರ್ 'ರಾಕ್ಸ್' - ಗಂಟೆಯೊಳಗೆ 1.76 ಲಕ್ಷಕ್ಕೂ ಹೆಚ್ಚು ಬು‘ಕಿಂಗ್’! - Mahindra Thar ROXX Bookings

ಚಂದ್ರನಡೆಗೆ ಆರ್ಟೆಮಿಸ್​​ 3: ಎರಡು ಆರ್ಟೆಮಿಸ್ ಪರೀಕ್ಷಾ ಕಾರ್ಯಾಚರಣೆಗಳನ್ನು ಮಾಡಲಾಗುತ್ತಿದ್ದು, ಪ್ರಸ್ತುತ 2026 ಕ್ಕೆ ಯೋಜಿಸಲಾದ ಆರ್ಟೆಮಿಸ್ III ರನ್ನು ಚಂದ್ರನಡೆಗೆ ಕಳುಹಿಸಲಾಗುತ್ತಿದೆ. 50 ವರ್ಷಗಳಿಗಿಂತಲೂ ಹೆಚ್ಚು ದೀರ್ಘಾವಧಿಯ ಬಳಿಕ ಅಮೆರಿಕ ಮೊದಲ ಬಾರಿಗೆ ಚಂದ್ರನ ಮೇಲ್ಮೈಗೆ ಮಾನವರನ್ನು ಕಳುಹಿಸುತ್ತಿದೆ. ನವೆಂಬರ್ 2022 ರಲ್ಲಿ ಪೂರ್ಣಗೊಂಡ ಸಂಕೀರ್ಣ ಪರೀಕ್ಷಾರ್ಥ ಪ್ರಯೋಗಗಳ ಸರಣಿಯಲ್ಲಿ ಆರ್ಟೆಮಿಸ್ I ಮೊದಲನೆಯದು. ಆರ್ಟೆಮಿಸ್ III ಸಿಬ್ಬಂದಿ ಆರ್ಟೆಮಿಸ್ II ಹಾರಾಟದ ಪರೀಕ್ಷೆಯನ್ನು ಮಾಡಿ ಮುಗಿಸಿದೆ. 2026 ಕ್ಕೆ ಹೊಂದಿಸಲಾದ ಮಾನವ ಲ್ಯಾಂಡಿಂಗ್ ಸಿಸ್ಟಮ್‌ನೊಂದಿಗೆ ಹೊಸ ಸಾಮರ್ಥ್ಯಗಳನ್ನು ಪರೀಕ್ಷಿಸಲಾಗುತ್ತಿದೆ. ಅಲ್ಲಿ ಗಗನಯಾತ್ರಿಗಳು ಚಂದ್ರನ ಮೇಲೆ ಇಳಿಯುತ್ತಾರೆ. ಮಂಗಳ ಗ್ರಹದಲ್ಲಿ ಬದುಕಲು ಅಗತ್ಯವಾದ ಅನುಭವವನ್ನು ಪಡೆಯುವ ಉದ್ದೇಶದಿಂದ ಚಂದ್ರನ ದಕ್ಷಿಣ ಧ್ರುವದಲ್ಲಿ ಗಗನಯಾನಿಗಳು ಇಳಿಯಲಿದ್ದಾರೆ.

ಮಂಗಳನೆಡೆಗೆ ಹೋಗಲು ಚಂದ್ರನ ಮೇಲೆ ಪ್ರಯೋಗ: ಆರ್ಟೆಮಿಸ್ III ಮಿಷನ್ ನಂತರ, ಚಂದ್ರನ ದಕ್ಷಿಣ ಧ್ರುವದ ಬಳಿ ಜನರನ್ನು ಇಳಿಸಲು ನಾಸಾ ಯೋಜಿಸಿದೆ. ಆರ್ಟೆಮಿಸ್ IV ನಲ್ಲಿರುವ ಗಗನಯಾತ್ರಿಗಳು ಮೊದಲ ಚಂದ್ರನ ಬಾಹ್ಯಾಕಾಶ ನಿಲ್ದಾಣವಾದ ಗೇಟ್‌ವೇಯಲ್ಲಿ ವಾಸಿಸುತ್ತಾರೆ ಮತ್ತು ಕೆಲಸ ಮಾಡುತ್ತಾರೆ. ಇದು ವೈಜ್ಞಾನಿಕ ಸಂಶೋಧನೆ ಮತ್ತು ಮಂಗಳ ಗ್ರಹಕ್ಕೆ ಮಾನವನನ್ನು ಕಳುಹಿಸುವ ಭಾಗವಾಗಿ ನಡೆಸಲಾಗುವ ಪರೀಕ್ಷಾರ್ಥ ಪ್ರಯೋಗವಾಗಿರಲಿದೆ. ಈ ಕಾರ್ಯಾಚರಣೆಯು ಚಂದ್ರನ ಕಕ್ಷೆಯಲ್ಲಿ ಬಹು ಉಡಾವಣೆಗಳು ಮತ್ತು ಬಾಹ್ಯಾಕಾಶ ನೌಕೆ ಡಾಕಿಂಗ್‌ಗಳನ್ನು ಒಳಗೊಂಡಿರುತ್ತದೆ. NASA ಅದರ SLS - ಸ್ಪೇಸ್ ಲಾಂಚ್ ಸಿಸ್ಟಮ್ ರಾಕೆಟ್‌ನ ದೊಡ್ಡ ಮತ್ತು ಹೆಚ್ಚು ಶಕ್ತಿಶಾಲಿ ಆವೃತ್ತಿಯ ಚೊಚ್ಚಲ ಪ್ರವೇಶವನ್ನು ಒಳಗೊಂಡಿರುತ್ತದೆ. ಜೊತೆಗೆ ಹೊಸ ಮೊಬೈಲ್ ಲಾಂಚರ್ ಒಳಗೊಂಡಿರುತ್ತದೆ.

ಮಂಗಳನಡೆಗೆ ನಾಸಾ ಕಣ್ಣು: ಆರ್ಟೆಮಿಸ್ ಕಾರ್ಯಕ್ರಮದಡಿ ನಾಸಾ ಅಭಿವೃದ್ಧಿಪಡಿಸುತ್ತಿರುವ ಯೋಜನೆ, ಚಂದ್ರನಲ್ಲಿಗೆ ಮಾನವನನ್ನು ಕಳುಹಿಸುವುದಕ್ಕಿಂತ ಮಂಗಳನಲ್ಲಿಗೆ ಮಾನವನನ್ನು ಕಳುಹಿಸುವ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಿದೆ. ಮಂಗಳಯಾನಗಳಿಗೆ ಗಮನಾರ್ಹವಾಗಿ ಹೆಚ್ಚಿನ ಶಕ್ತಿ (ಪ್ರೊಪೆಲ್ಲೆಂಟ್ ಮಾಸ್) ಹಾಗೂ ಹೆಚ್ಚು ದೀರ್ಘವಾದ ಸೇವಾ ಜೀವನ ಮತ್ತು ಹೆಚ್ಚು ಕಟ್ಟುನಿಟ್ಟಾದ ನಿರ್ಗಮನ ವಿಂಡೋ ನಿರ್ಬಂಧಗಳು ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ನಾಸಾ ವಿಜ್ಞಾನಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ.

ಈಗೇಕೆ ಮಂಗಳನ ಅನ್ವೇಷಣೆ: 60 ವರ್ಷಗಳಿಗೂ ಹೆಚ್ಚು ಕಾಲ NASA ಮಂಗಳ ಗ್ರಹದ ಸಂಭಾವ್ಯ ವಾಸಯೋಗ್ಯ ತಾಣವೇ ಎಂದು ಅನ್ವೇಷಿಸಲು ಮತ್ತು ಅರ್ಥಮಾಡಿಕೊಳ್ಳಲು ಅಧ್ಯಯನ ನಿರತವಾಗಿದೆ. ಮಂಗಳಯಾನಕ್ಕೆ ಚಾಲನೆ ನೀಡುವ ಪ್ರಮುಖ ಆದ್ಯತೆ ಎಂದರೆ ಮಂಗಳವು ಎಂದಾದರೂ ವಾಸಯೋಗ್ಯ ಪ್ರಪಂಚವಾಗಿದೆಯೇ ಎಂಬುದನ್ನು ಕಂಡುಕೊಳ್ಳುವುದಾಗಿದೆ. ಸೂರ್ಯನ ಬೆಳಕನ್ನು ಮೀರಿ ಮಂಗಳ ಗ್ರಹದಲ್ಲಿ ಸಂಭಾವ್ಯ ಶಕ್ತಿಯ ಮೂಲಗಳನ್ನು ಗುರುತಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಭೂಮಿಯ ಮೇಲಿನ ಜೀವನವು ಸೂರ್ಯನ ಬೆಳಕು ಇಲ್ಲದ ಪರಿಸರದಲ್ಲಿ ಅಭಿವೃದ್ಧಿ ಹೊಂದುತ್ತದೆ, ಉದಾಹರಣೆಗೆ ಡಾರ್ಕ್ ಸಾಗರದ ಆಳಗಳು, ಬಂಡೆಗಳ ಒಳಗೆ ಮತ್ತು ಮೇಲ್ಮೈಯಿಂದ ಆಳವಾಗಿ ಬೆಳೆಯುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಈ ಜೀವ ರೂಪಗಳು ಸಾಮಾನ್ಯವಾಗಿ ರಾಸಾಯನಿಕ ಮತ್ತು ಭೂಶಾಖದ ಶಕ್ತಿಯಂತಹ ಪರ್ಯಾಯ ಶಕ್ತಿ ಮೂಲಗಳನ್ನು ಅವಲಂಬಿಸಿವೆ. ಈ ತಿಳಿವಳಿಕೆಯನ್ನು ನೀಡಿದರೆ, ಮಂಗಳ ಗ್ರಹದ ಮೇಲಿನ ಸಣ್ಣ, ಭೂಗರ್ಭದ ಸೂಕ್ಷ್ಮಜೀವಿಗಳು ಜೀವವನ್ನು ಉಳಿಸಿಕೊಳ್ಳಲು ಇದೇ ರೀತಿಯ ಶಕ್ತಿಯ ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಸಾಧ್ಯತೆಯನ್ನು ವಿಜ್ಞಾನಿಗಳು ಅನ್ವೇಷಿಸುತ್ತಿದ್ದಾರೆ.

ಇವುಗಳನ್ನು ಓದಿ: ಗೂಗಲ್​ ಡೀಪ್​ಮೈಂಡ್​ನ ವಿಜ್ಞಾನಿಗಳಿಬ್ಬರಿಗೆ 2024ರ ರಸಾಯನ ಶಾಸ್ತ್ರ ನೊಬೆಲ್ ಪ್ರಶಸ್ತಿ

ಮತ್ತೆ ಭೂಮಿಗೆ ಮರಳಿದೆ 104 ಉಪಗ್ರಹಗಳನ್ನು ಹೊತ್ತು ವಿಶ್ವ ದಾಖಲೆ ಮಾಡಿದ್ದ ರಾಕೆಟ್​ನ ಮೇಲಿನ ಭಾಗ!

ವೇಗವಾಗಿ ಬೆಳೆಯುತ್ತಿದೆ ಸೆಮಿಕಂಡಕ್ಟರ್​ ವಲಯ: ದೇಶೀಯ ಕಂಪನಿಗಳಿಗೂ ಆಕರ್ಷಕ ಅವಕಾಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.