ETV Bharat / technology

ಫಿಜಿಯಲ್ಲೂ ಲಭ್ಯವಾಗುತ್ತಿರುವ ಸ್ಟಾರ್​ಲಿಂಕ್​ ಅಂತರ್ಜಾಲ ಸೇವೆ; ಮಸ್ಕ್​ ಸಂತಸ - starlink is now available in Fiji - STARLINK IS NOW AVAILABLE IN FIJI

ಇಂಡೋನೇಷ್ಯಾದಲ್ಲಿ ಸ್ಟಾರ್​ ಲಿಂಕ್​ ಉಪಗ್ರಹ ಇಂಟರ್ನೆಟ್ ಸೇವೆ ಪ್ರಾರಂಭವಾದ ದಿನದ ಬಳಿಕ ಇದೀಗ ಪುಟ್ಟ ದ್ವೀಪ ಪಿಜಿಯಲ್ಲೂ ಅಂತರ್ಜಾಲ ಸೇವೆ ಲಭ್ಯವಾಗುತ್ತಿದೆ.

Musk posted in X saying starlink is now available in Fiji
Musk posted in X saying starlink is now available in Fiji (IANS)
author img

By ETV Bharat Karnataka Team

Published : May 20, 2024, 11:39 AM IST

ಹೈದರಾಬಾದ್​: ಇಂಡೋನೇಷ್ಯಾದ ದ್ವೀಪದ ಸಮೂಹದ ಪ್ರದೇಶಗಳಿಗೆ ಇಂಟರ್ನೆಟ್​ ಸೇವೆ ನೀಡುವ ಉದ್ದೇಶದಿಂದ ಸ್ಟಾರ್​ ಲಿಂಕ್​​​ ಇಂಟರ್​ನೆಟ್​ ಸೇವೆಗೆ ಸಂಸ್ಥೆಯ ಸಿಇಒ ಆಗಿರುವ ಎಲಾನ್​ ಮಸ್ಕ್​ ಭಾನುವಾರ ಚಾಲನೆ ನೀಡಿದ್ದಾರೆ. ಇದರಿಂದಾಗಿ ಇಲ್ಲಿನ ಫಿಜಿ ಪ್ರದೇಶದಲ್ಲಿ ಕೈಗೆಟುಕುವ ದರದಲ್ಲಿ ಇಂಟರ್​ನೆಟ್​ ಸೇವೆ ಜನರಿಗೆ ಲಭ್ಯವಾಗುತ್ತಿದೆ.

ಈ ಕುರಿತು ಮಾತನಾಡಿರುವ ಮಸ್ಕ್​, ಇಂಡೋನೇಷ್ಯಾದಲ್ಲಿ ಸ್ಟಾರ್​ ಲಿಂಕ್​ ಉಪಗ್ರಹ ಇಂಟರ್ನೆಟ್ ಸೇವೆ ಪ್ರಾರಂಭವಾದ ದಿನದ ಬಳಿಕ, ಇದೀಗ ಇಲ್ಲಿನ ಕುಗ್ರಾಮದ ಪ್ರದೇಶಗಳಿಗೆ ಇಂಟರ್​ನೆಟ್​ ಸೇವೆ ಲಭ್ಯವಾಗುತ್ತಿದೆ. ಇದರಿಂದ ದೂರದ ಸಮುದಾಯಗಳಲ್ಲಿ ಕೂಡ ಇದೀಗ ಈ ಸೇವೆಯ ಆಮೂಲಾಗ್ರವಾಗಿ ಪ್ರವೇಶದಿಂದ ಶಿಕ್ಷಣ ಮತ್ತು ಆರ್ಥಿಕ ಅವಕಾಶಗಳ ಸುಧಾರಣೆ ಕಾಣಬಹುದಾಗಿದೆ ಎಂದಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಮಸ್ಕ್​, ಇದೀಗ ಫಿಜಿಯಲ್ಲೂ ಸ್ಟಾರ್​ಲಿಂಕ್​ ಲಭ್ಯ ಎಂದು ತಿಳಿಸಿದ್ದಾರೆ.

ಸ್ಪೇಸ್​ ಎಕ್ಸ್​ನ ಇಂಟರ್​ನೆಟ್​ ಸೇವೆ ಇದೀಗ ಫಿಜಿ ಗಣರಾಜ್ಯದ 300ಕ್ಕೂ ಹೆಚ್ಚು ದ್ವೀಪಗಳಲ್ಲಿ ಲಭ್ಯವಾಗುತ್ತಿದೆ. ಸ್ಟಾರ್‌ಲಿಂಕ್‌ನ ಹೈಸ್ಪೀಡ್ ಇಂಟರ್ನೆಟ್ ಸೇವೆ ಲಭ್ಯವಾಗುತ್ತಿರುವ 99ನೇ ದೇಶವಾಗಿ ಇದು ಜಾಗತಿಕ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ ಎಂದಿದ್ದಾರೆ.

ಭಾನುವಾರ ಇಂಡೋನೇಷ್ಯಾಕ್ಕೆ ಭೇಟಿ ನೀಡಿದ ತಮ್ಮ ಸ್ಟಾರ್​ ಲಿಂಕ್​ ಇಂಟರ್​ನೆಟ್​ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಪ್ರದೇಶದಲ್ಲಿ ಇಂಟರ್​ನೆಟ್​ ಸೇವೆಯು ಇಂಡೋನೇಷ್ಯಾದಲ್ಲಿ ಆರೋಗ್ಯ ಮತ್ತು ಶಿಕ್ಷಣದ ಅನುಷ್ಠಾನದಲ್ಲಿ ಡಿಜಿಟಲೀಕರಣ್ಕೆ ಸಹಾಯ ಮಾಡಲಿದೆ ಎಂದಿದ್ದರು.

ಬಾಲಿ ಮತ್ತು ಮಲುಕದಲ್ಲಿನ ಅರು ದ್ವೀಪ ಸೇರಿದಂತೆ ಇಂಡೋನೇಷ್ಯಾದ ಮೂರು ಆರೋಗ್ಯ ಕೇಂದ್ರದಲ್ಲಿ ಸ್ಟಾರ್​ಲಿಂಕ್​ ಸೇವೆಗೆ ಚಾಲನೆ ನೀಡಲಾಗಿದೆ. ಸ್ಟಾರ್‌ಲಿಂಕ್ ಚಿಲ್ಲರೆ ಗ್ರಾಹಕರಿಗಾಗಿ ಇಂಟರ್ನೆಟ್ ಸೇವಾ ಪೂರೈಕೆದಾರರಾಗಿ ಕಾರ್ಯನಿರ್ವಹಿಸಲು ಪರವಾನಗಿಯನ್ನು ಪಡೆದುಕೊಂಡಿತು. ವಿ ಸ್ಟಾಟ್​ ಪರವಾನಿಗೆ ಮೂಲಕ ಇದು ಸೇವೆ ಪಡೆದಿದೆ.

ಇದೇ ವೇಳೆ 10ನೇ ವರ್ಲ್ಡ್ ವಾಟರ್ ಫೋರಂ ಸಮ್ಮೇಳನದಲ್ಲಿ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರನ್ನು ಭೇಟಿಯಾದರು. ವಿಕ್ರಮಸಿಂಘೆ ಅವರು ಶ್ರೀಲಂಕಾದಲ್ಲಿ ಸ್ಟಾರ್‌ಲಿಂಕ್ ಸೇವೆಯ ಅನುಷ್ಠಾನದ ಕುರಿತು ಚರ್ಚಿಸಿದರು. ಜಾಗತಿಕ ಸ್ಟಾರ್‌ಲಿಂಕ್ ನೆಟ್‌ವರ್ಕ್‌ನೊಂದಿಗೆ ದೇಶವನ್ನು ಸಂಪರ್ಕಿಸಲು ಅಪ್ಲಿಕೇಶನ್ ಪ್ರಕ್ರಿಯೆಯನ್ನು ವೇಗಗೊಳಿಸಲು ಬದ್ಧರಾಗಿರುವುದಾಗಿ ತಿಳಿಸಿದರು.

ಸ್ಪೇಸ್‌ಎಕ್ಸ್‌ನ ಸ್ಟಾರ್‌ಲಿಂಕ್, ಭೂಮಿ ಸುತ್ತ ಸುತ್ತುವ 7,500 ಉಪಗ್ರಹಗಳಲ್ಲಿ ಸುಮಾರು ಶೇ 60ರಷ್ಟನ್ನು ಹೊಂದಿದ್ದು, ಇದು ಉಪಗ್ರಹದ ಇಂಟರ್ನೆಟ್​ ಸೇವೆಯಲ್ಲಿ ಅತ್ಯಂತ ಪ್ರಬಲವಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ಹೀಲಿಯಂ ಸೋರಿಕೆ: ಬೋಯಿಂಗ್​ ಸ್ಟಾರ್​ಲೈನರ್​ನ ಮಾನವಸಹಿತ ಉಡಾವಣೆ ಮತ್ತೆ ಮುಂದಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.