ETV Bharat / international

ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಮೇಲಿನ ದಾಳಿ: ಮೂರು ದೇವಾಲಯಗಳಲ್ಲಿನ ವಿಗ್ರಹಗಳು ಧ್ವಂಸ - BANGLA HINDU TEMPLES

ಉತ್ತರ ಬಾಂಗ್ಲಾದೇಶದ ಸುನಮ್‌ಗಂಜ್ ಜಿಲ್ಲೆಯಲ್ಲಿ ಹಿಂದೂ ದೇವಾಲಯ ಮತ್ತು ಸಮುದಾಯದವರ ಮನೆಗಳು ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ.

BANGLA HINDU TEMPLES
ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಮೇಲಿನ ದಾಳಿ: ಮೂರು ದೇವಾಲಯಗಳಲ್ಲಿನ ವಿಗ್ರಹಗಳು ಧ್ವಂಸ (ANI)
author img

By PTI

Published : Dec 21, 2024, 6:33 AM IST

ಢಾಕಾ, ಬಾಂಗ್ಲಾದೇಶ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿ ನಿಲ್ಲುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಹೊಸ ಘಟನೆಗಳಲ್ಲಿ ದುಷ್ಕರ್ಮಿಗಳು ಬಾಂಗ್ಲಾದೇಶದ ಮೈಮೆನ್‌ಸಿಂಗ್ ಮತ್ತು ದಿನಾಜ್‌ಪುರದಲ್ಲಿ ಮೂರು ಹಿಂದೂ ದೇವಾಲಯಗಳಲ್ಲಿ ಎಂಟು ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಮಾಧ್ಯಮ ವರದಿಯೊಂದು ಶುಕ್ರವಾರ ವರದಿ ಮಾಡಿದೆ.

ವ್ಯಕ್ತಿ ಬಂಧನ: ದೇವಸ್ಥಾನವೊಂದರಲ್ಲಿನ ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ವಿರುದ್ಧದ ಘಟನೆಗಳ ಸರಣಿಯಲ್ಲಿ ಇವು ಇತ್ತೀಚಿನ ವರದಿಗಳಾಗಿವೆ.

ಮೈಮೆನ್‌ಸಿಂಗ್‌ನ ಹಲುಘಾಟ್ ಉಪಜಿಲ್ಲೆಯಲ್ಲಿ ಗುರುವಾರ ಮತ್ತು ಶುಕ್ರವಾರ ಎರಡು ದೇವಾಲಯಗಳ ಮೂರು ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ. ದೇವಸ್ಥಾನದ ಮೂಲಗಳು ಮತ್ತು ಸ್ಥಳೀಯರನ್ನು ಉಲ್ಲೇಖಿಸಿ, ಹಲುಘಾಟ್ ಪೊಲೀಸ್ ಠಾಣೆಯ ಅಧಿಕಾರಿ (OC) ಅಬುಲ್ ಖಯೇರ್ ಈ ಮಾಹಿತಿ ನೀಡಿದ್ದಾರೆ. ಶುಕ್ರವಾರ ಮುಂಜಾನೆ ಹಲುಘಾಟ್‌ನ ಶಾಕುವಾಯ್ ಯೂನಿಯನ್‌ನಲ್ಲಿರುವ ಬೋಂಡರ್‌ಪಾರಾ ದೇವಾಲಯದ ಎರಡು ವಿಗ್ರಹಗಳನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಮತ್ತು ಈ ಸಂಬಂಧ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಖಯೇರ್​ ಹೇಳಿದ್ದಾರೆ.

ಮತ್ತೊಂದು ಘಟನೆಯಲ್ಲಿ, ಗುರುವಾರ ಮುಂಜಾನೆ ಹಲುಘಾಟ್‌ನ ಬೀಳ್‌ದೊರಾ ಯೂನಿಯನ್‌ನಲ್ಲಿರುವ ಪೊಲಾಷ್‌ಕಂಡ ಕಾಳಿ ದೇವಸ್ಥಾನದಲ್ಲಿ ದುಷ್ಕರ್ಮಿಗಳು ವಿಗ್ರಹವನ್ನು ನಾಶಪಡಿಸಿದ್ದಾರೆ.ಘಟನೆ ಸಂಬಂಧ ಪೋಲಷ್ಕಂಡ ಗ್ರಾಮದ 27 ವರ್ಷದ ಯುವಕನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ವಿಚಾರಣೆ ವೇಳೆ ಅಲಾಲ್ ಉದ್ದೀನ್ ಎಂಬಾತ ಆರೋಪವನ್ನು ಒಪ್ಪಿಕೊಂಡಿದ್ದಾನೆ ಎಂದು ಒಸಿ ತಿಳಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಅವರನ್ನು ಮೈಮೆನ್‌ಸಿಂಗ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಒಸು ಅದು ಅವರನ್ನು ಜೈಲಿಗೆ ಕಳುಹಿಸಿದೆ ಎಂದು ಅವರು ಹೇಳಿದರು.

ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲು: ಗುರುವಾರ ಮುಂಜಾನೆ ಪೋಲಷ್ಕಂಡ ಕಾಳಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಸುವಾಶ್ಚಂದ್ರ ಸಾರ್ಕರ್ ಅವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದಿನಾಜ್‌ಪುರದ ಬಿರ್‌ಗಂಜ್ ಉಪಜಿಲ್ಲೆಯಲ್ಲಿ ಮಂಗಳವಾರ ಜರ್ಬರಿ ಶಶನ್ ಕಾಳಿ ದೇವಸ್ಥಾನದಲ್ಲಿ ಐದು ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ.ವರದಿಯ ಪ್ರಕಾರ ಈ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪ್ರಭಾರಿ ಅಧಿಕಾರಿ ಅಬ್ದುಲ್ ಗಫೂರ್ ತಿಳಿಸಿದ್ದಾರೆ.

ನಾಲ್ವರ ಬಂಧನ: ಕಳೆದ ವಾರ ಉತ್ತರ ಬಾಂಗ್ಲಾದೇಶದ ಸುನಮ್‌ಗಂಜ್ ಜಿಲ್ಲೆಯಲ್ಲಿ ಹಿಂದೂ ದೇವಾಲಯ ಮತ್ತು ಸಮುದಾಯದವರ ಮನೆಗಳು ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಕಾನೂನು ಜಾರಿ ಸಂಸ್ಥೆಗಳು ಬಂಧಿಸಿವೆ. ಹೆಚ್ಚುತ್ತಿರುವ ಹಿಂದೂ ವಿರೋಧಿ ಘಟನೆಗಳು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ ಧಕ್ಕೆ ತಂದಿದ್ದು, ಭಾರತ ಬಾಂಗ್ಲಾದೇಶಕ್ಕೆ ಕಠಿಣ ಸಂದೇಶನ್ನೂ ರವಾನಿಸಿದೆ. ಕಲಹಕ್ಕೆ ಕಾರಣವಾಗಿವೆ.

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಇತ್ತೀಚೆಗೆ ಮಾತನಾಡಿ, ಢಾಕಾದಲ್ಲಿ ಬಾಂಗ್ಲಾದೇಶದ ನಾಯಕತ್ವದೊಂದಿಗಿನ ಸಭೆಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಯ ಬಗ್ಗೆ ಪ್ರಸ್ತಾಪಿಸಿ, ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ:ಸಿರಿಯಾ ಗಡಿಯಲ್ಲಿ ಟರ್ಕಿ ಸೈನ್ಯ ಜಮಾವಣೆ: ಶಸ್ತ್ರ ಕೈಗೆತ್ತಿಕೊಳ್ಳುವಂತೆ ನಾಗರಿಕರಿಗೆ ಕರೆ ನೀಡಿದ ಕುರ್ದಿಶ್ ಪಡೆ

ನೇಪಾಳದಲ್ಲಿ 4.8 ರಷ್ಟು ತೀವ್ರತೆಯ ಭೂಕಂಪನ: ಸಾವು ನೋವಿನ ವರದಿ ಇಲ್ಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.