ETV Bharat / international

ನೇಪಾಳದಲ್ಲಿ 4.8 ರಷ್ಟು ತೀವ್ರತೆಯ ಭೂಕಂಪನ: ಉತ್ತರಾಖಂಡ್​​​​​ನಲ್ಲೂ ನಡುಗಿದ ಭೂಮಿ - EARTHQUAKE STRIKES NEPAL

ನೆರೆಯ ರಾಷ್ಟ್ರ ನೇಪಾಳದಲ್ಲಿ ಲಘು ಭೂಕಂಪನ ಸಂಭವಿಸಿದೆ. ತಕ್ಷಣಕ್ಕೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ

Earthquake of magnitude 4.8 strikes Nepal
ನೇಪಾಳದಲ್ಲಿ 4.8 ರಷ್ಟು ತೀವ್ರತೆಯ ಭೂಕಂಪನ: ಸಾವು ನೋವಿನ ವರದಿ ಇಲ್ಲ (ANI)
author img

By ANI

Published : Dec 21, 2024, 6:07 AM IST

ಕಠ್ಮಂಡು,ನೇಪಾಳ/ಪಿಥೋರಗಢ: ಶನಿವಾರ ಬೆಳ್ಳಂ ಬೆಳಗ್ಗೆ ನೇಪಾಳದಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ವರದಿ ಮಾಡಿದೆ.

ಭಾರತೀಯ ಕಾಲಮಾನ (IST) 3:59ಕ್ಕೆ ಈ ಭೂಕಂಪ ಸಂಭವಿಸಿದೆ ಎಂದು NCS ಹೇಳಿದೆ. ಭೂಕಂಪವು 10 ಕಿಲೋಮೀಟರ್ ಆಳದಲ್ಲಿ ಅಂದರೆ ಅಕ್ಷಾಂಶ 29.17 N ಮತ್ತು ರೇಖಾಂಶ 81.59ರಲ್ಲಿ ದಾಖಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಇದನ್ನು ಓದಿ:ಜೈಪುರ ಅಗ್ನಿ ಅವಘಡದಲ್ಲಿ 11 ಸಾವು: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ

ಉತ್ತರಾಖಂಡದಲ್ಲೂ ಕಂಪಿಸಿದ ಭೂಮಿ: ಉತ್ತರಾಖಂಡದಲ್ಲೂ ಭೂಕಂಪನದ ಅನುಭವವಾಗಿದೆ. ಉತ್ತರಾಖಂಡದ ಗಡಿನಾಡಿನ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಭೂಮಿ ಕಂಪಿಸಿದೆ. ಇದು ಜನರಲ್ಲಿ ಭೀತಿ ಮೂಡಿಸಿದ್ದು, ಚಳಿಯ ನಡುವೆಯೇ ಜನರು ಮನೆಯಿಂದ ಹೊರಬಂದು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಭೂಕಂಪದಿಂದ ಎಲ್ಲಿಯೂ ಹಾನಿಯಾಗಿರುವ ಬಗ್ಗೆ ಯಾವುದೇ ಸುದ್ದಿ ಬಂದಿಲ್ಲ.

ನೇಪಾಳ ಭೂಕಂಪದ ಕೇಂದ್ರ ಬಿಂದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಭೂಪೇಂದ್ರ ಮಹಾರ್ ತಿಳಿಸಿದ್ದಾರೆ. ಇದರ ತೀವ್ರತೆ 4.8 ರಿಕ್ಟರ್ ಆಗಿತ್ತು. ಜಿಲ್ಲೆಯಲ್ಲಿ ಎಲ್ಲಿಯೂ ನಷ್ಟವಾಗಿಲ್ಲ. ಚಂಪಾವತ್ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.