ETV Bharat / technology

'ಅಶ್ಲೀಲ ಕಂಟೆಂಟ್'​​: 18 ಒಟಿಟಿ ಫ್ಲಾಟ್​ಫಾರ್ಮ್​, 19 ವೆಬ್​ಸೈಟ್​ ಬ್ಯಾನ್​ ಮಾಡಿದ ಕೇಂದ್ರ

author img

By PTI

Published : Mar 14, 2024, 1:57 PM IST

ಅಸಭ್ಯತೆ ಮತ್ತು ಅಶ್ಲೀಲ ವಿಚಾರಗಳನ್ನು ಈ ಫ್ಲಾಟ್​ಫಾರಂಗಳು ಹೊಂದಿದ್ದ ಹಿನ್ನೆಲೆ ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ministry-of-information-and-broadcasting-blocks-18-ott-platforms-for-vulgar-content

ಬೆಂಗಳೂರು: ಅಶ್ಲೀಲ ಮತ್ತು ಅಸಭ್ಯ ವಿಷಯಗಳನ್ನು ಹೊಂದಿರುವ 18 ಒಟಿಟಿ ಫ್ಲಾಟ್​​ಫಾರ್ಮ್​​ ಮತ್ತು ಸಾಮಾಜಿಕ ಮಾಧ್ಯಮದ ಖಾತೆಗಳ ವಿರುದ್ಧ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಇವುಗಳನ್ನು ಸಂಪೂರ್ಣವಾಗಿ ಸಾರ್ವಜನಿಕರಿಗೆ ಲಭ್ಯವಾಗದಂತೆ ಬ್ಯಾನ್​ ಮಾಡಿ ಆದೇಶಿಸಿದೆ.

ಈ ಕುರಿತು ಹೇಳಿಕೆ ಪ್ರಕಟಿಸಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಅಶ್ಲೀಲ ಮತ್ತು ಅಸಭ್ಯ ವಿಷಯವನ್ನು ಹೊಂದಿರುವ 19 ವೆಬ್​ಸೈಟ್​, 10 ಆ್ಯಪ್​​ (ಏಳು ಗೂಗಲ್​ ಪ್ಲೇ ಸ್ಟೋರ್, ಮೂರು ಆಪಲ್​ ಆ್ಯಪ್​ ಸ್ಟೋರ್​ನಲ್ಲಿ ಲಭ್ಯವಿರುವ​​) ಮತ್ತು 57 ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸಾರ್ವಜನಿಕರಿಗೆ ಲಭ್ಯವಾಗದಂತೆ ತೆಗೆದು ಹಾಕಲಾಗಿದೆ ಎಂದು ತಿಳಿಸಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ 200 ಅಡಿಯಲ್ಲಿ, ಸೆಕ್ಷನ್​ 67 ಮತ್ತು 67ಎ ಉಲ್ಲಂಘನೆ, ಐಪಿಸಿ ಸೆಕ್ಷನ್​ 292 ಮತ್ತು 1986ರ ಮಹಿಳೆಯರ ಅಸಭ್ಯ ಪ್ರಾತಿನಿದ್ಯ (ತಿದ್ದುಪಡಿ) ಕಾಯ್ದೆ ಸೆಕ್ಷನ್​ 4ರ ಅಡಿ ಕ್ರಮ ಕೈಗೊಳ್ಳಲಾಗಿದೆ. ಈ ಒಟಿಟಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಸರ್ಕಾರ ಪ್ರಕಟಣೆ ಹೊರಡಿಸಿದೆ.

ಈ ಕುರಿತು ತಿಳಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಚಿವರಾದ ಅನುರಾಗ್​ ಠಾಕೂರ್​​, ಸೃಜನಾತ್ಮಕತೆ ಅಭಿವ್ಯಕ್ತಿ ಹೆಸರಿನಲ್ಲಿ ಫ್ಲಾಟ್​​ಫಾರ್ಮ್​​ಗಳ ಅಶ್ಲೀಲತೆ ಮತ್ತು ಅಸಭ್ಯತೆ, ದೌರ್ಜನ್ಯದ ಕುರಿತು ಉತ್ತೇಜಿಸಿದಂತೆ ಅವುಗಳ ಜವಾಬ್ದಾರಿ ಕುರಿತು ಒತ್ತಿ ಹೇಳಲಾಗಿದೆ ಎಂದು ತಿಳಿಸಿದ್ದಾರೆ.

ನಿಷೇಧದ ಕಾರಣಗಳ ವಿವರಣೆ ನೀಡಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಈ ಫ್ಲಾಟ್​ಫಾರ್ಮ್​ಗಳಲ್ಲಿ ಗಣನೀಯ ಪ್ರಮಾಣದಲ್ಲಿ ಅಶ್ಲೀಲತೆ, ಅಸಭ್ಯತೆ ಮತ್ತು ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ರೀತಿಯ ಚಿತ್ರಿಸಲಾಗಿದೆ. ಇದರಲ್ಲಿ ಹಲವು ವಿಷಯದಲ್ಲಿ ನಗ್ನ ಮತ್ತು ಲೈಂಗಿಕತೆ ಪ್ರಚೋದಿಸುವ ಕಂಟೆಂಟ್​ ಹೊಂದಿವೆ ಎಂದು ತಿಳಿಸಿದೆ.

ಇದರಲ್ಲಿ ಗೂಗಲ್​ ಸ್ಟೋರ್​ನಲ್ಲಿ ಲಭ್ಯವಿರುವ ಒಂದು ಒಟಿಟಿಯೂ 1 ಕೋಟಿ ಡೌನ್​ಲೋಡ್​ ಕಂಡರೆ, ಎರಡು ಒಟಿಟಿಗಳು 50 ಲಕ್ಷ ಡೌನ್​ಲೋಡ್​ ಆಗಿವೆ. ಇನ್ನು ಸಾಮಾಜಿಕ ಮಾಧ್ಯಮದ ಫ್ಲಾಟ್​​ಫಾರ್ಮ್​ನಲ್ಲಿ 32 ಲಕ್ಷಕ್ಕೂ ಅಧಿಕ ಬಳಕೆದಾರರಿರುವುದು ಕಂಡು ಬಂದಿದೆ. ಸದ್ಯ ಐಎಂಬಿ ಸಚಿವಾಲಯದ ನಿಷೇಧಿಸಿರುವ 57 ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ 12 ಫೇಸ್​ಬುಕ್​ ಅಕೌಂಟ್​, 17 ಇನ್ಸ್ಟಾಗ್ರಾಂ ಖಾತೆ ಮತ್ತು 16 ಎಕ್ಸ್​​ ಹಾಗೂ 12 ಯೂಟ್ಯೂಬ್​​ ಅಕೌಂಟ್ಗಳು ಸೇರಿವೆ.

ಇದನ್ನೂ ಓದಿ: ಎಐನಿಂದ ರಚಿತವಾದ ಡೀಪ್​ಫೇಕ್ ಕುರಿತು ಸಾಮಾಜಿಕ ಜಾಲತಾಣ: ಐಟಿ ದೈತ್ಯರಿಗೆ ಕೇಂದ್ರ ಸರ್ಕಾರದ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.