ETV Bharat / technology

3ನೇ ತ್ರೈಮಾಸಿಕದಲ್ಲಿ 21.9 ಬಿಲಿಯನ್ ಡಾಲರ್ ನಿವ್ವಳ ಆದಾಯ ಗಳಿಸಿದ ಮೈಕ್ರೊಸಾಫ್ಟ್​ - MICROSOFT revenue - MICROSOFT REVENUE

ಮೂರನೇ ತ್ರೈಮಾಸಿಕದಲ್ಲಿ ಮೈಕ್ರೊಸಾಫ್ಟ್​ 21 ಬಿಲಿಯನ್ ಡಾಲರ್ ನಿವ್ವಳ ಆದಾಯ ಗಳಿಸಿದೆ.

Microsoft posts $21.9 billion in net income, bets big on AI

author img

By ETV Bharat Karnataka Team

Published : Apr 26, 2024, 12:35 PM IST

ನವದೆಹಲಿ: ಮೈಕ್ರೊಸಾಫ್ಟ್ ತನ್ನ ಮೂರನೇ ತ್ರೈಮಾಸಿಕದಲ್ಲಿ 61.9 ಬಿಲಿಯನ್ ಡಾಲರ್ ಆದಾಯವನ್ನು ದಾಖಲಿಸಿದೆ. ಇದು ಶೇಕಡಾ 17 ರಷ್ಟು ಏರಿಕೆಯಾಗಿದೆ. ಕಂಪನಿಯು 21.9 ಬಿಲಿಯನ್ ಡಾಲರ್ ನಿವ್ವಳ ಆದಾಯ ಗಳಿಸಿದ್ದು, ಇದು ಶೇಕಡಾ 20 ರಷ್ಟು ಏರಿಕೆಯಾಗಿದೆ.

"ಮೈಕ್ರೊಸಾಫ್ಟ್​ನ ಕೋಪೈಲಟ್ ಮತ್ತು ಕೋಪೈಲಟ್ ಸ್ಟ್ಯಾಕ್ ಎಐ ತಂತ್ರಜ್ಞಾನಗಳು ಹೊಸ ಯುಗಕ್ಕೆ ಮುನ್ನುಡಿ ಬರೆಯುತ್ತಿವೆ. ನಮ್ಮ ಎಐ ಆವಿಷ್ಕಾರಗಳು ನಮ್ಮ ವ್ಯೂಹಾತ್ಮಕ ಪಾಲುದಾರ ಕಂಪನಿಯಾದ ಓಪನ್ ಎಐ ನೊಂದಿಗೆ ಬೆಳವಣಿಗೆ ಹೊಂದಲಿವೆ. ಫಾರ್ಚೂನ್ 500ರ ಪಟ್ಟಿಯಲ್ಲಿರುವ ಶೇ 65ಕ್ಕಿಂತಲೂ ಹೆಚ್ಚು ಕಂಪನಿಗಳು ಈಗ ಮೈಕ್ರೊಸಾಫ್ಟ್​ನ ಅಜುರ್ ಓಪನ್ ಎಐ ಸರ್ವೀಸ್​ ಅನ್ನು ಬಳಸುತ್ತಿವೆ" ಎಂದು ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾದೆಲ್ಲಾ ಹೇಳಿದರು.

ಮಾರ್ಚ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಮೈಕ್ರೋಸಾಫ್ಟ್ ಕ್ಲೌಡ್ ಆದಾಯವು 35.1 ಬಿಲಿಯನ್ ಡಾಲರ್ ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇಕಡಾ 23 ರಷ್ಟು ಹೆಚ್ಚಾಗಿದೆ. ಮೈಕ್ರೋಸಾಫ್ಟ್ ಈಗ 3,50,000 ಕ್ಕೂ ಹೆಚ್ಚು ಪಾವತಿಸಿದ ಗ್ರಾಹಕರನ್ನು ಹೊಂದಿದೆ. ಗಿಟ್ ಹಬ್ ಕೋಪೈಲೆಟ್​ನಲ್ಲಿ 1.8 ಮಿಲಿಯನ್ ಪಾವತಿಸಿದ ಚಂದಾದಾರರಿದ್ದು, ಇದರ ಬೆಳವಣಿಗೆಯು ತ್ರೈಮಾಸಿಕದಲ್ಲಿ ಶೇಕಡಾ 35 ಕ್ಕಿಂತ ಹೆಚ್ಚಾಗಿದೆ.

ಸಾಧನಗಳ ವಿಷಯಕ್ಕೆ ಬಂದಾಗ, ವಿಂಡೋಸ್ ಕೋಪೈಲಟ್ ಈಗ ಸುಮಾರು 225 ಮಿಲಿಯನ್ ವಿಂಡೋಸ್ 10 ಮತ್ತು ವಿಂಡೋಸ್ 11 ಪಿಸಿಗಳಲ್ಲಿ ಲಭ್ಯವಿದೆ. ಈ ಪ್ರಮಾಣ ತ್ರೈಮಾಸಿಕದಲ್ಲಿ ಎರಡು ಪಟ್ಟು ಹೆಚ್ಚಾಗಿದೆ.

ಸುಮಾರು 3 ಬಿಲಿಯನ್ ಡಾಲರ್ ಷೇರು ಮಾರುಕಟ್ಟೆ ಮೌಲ್ಯ ಹೊಂದಿರುವ ಮೈಕ್ರೊಸಾಫ್ಟ್ ವಿಶ್ವದ ಅತಿದೊಡ್ಡ ಸಾರ್ವಜನಿಕ ಕಂಪನಿಯಾಗಿದೆ. ಕಂಪನಿಯ ಷೇರುಗಳ ಮೌಲ್ಯ ಕಳೆದ ವರ್ಷದಲ್ಲಿ ಶೇ 30 ಕ್ಕಿಂತ ಅಧಿಕ ಹೆಚ್ಚಾಗಿದೆ. ಇದು ಅಮೆಜಾನ್ ಮತ್ತು ಗೂಗಲ್​ನ ವೇಗಕ್ಕಿಂತ ಕಡಿಮೆಯಾದರೂ ಪ್ರಭಾವಶಾಲಿ ಏರಿಕೆಯಾಗಿದೆ. ಅಮೆಜಾನ್ ಮತ್ತು ಗೂಗಲ್ ಷೇರುಗಳ ಮೌಲ್ಯ ಕ್ರಮವಾಗಿ ಶೇ 60 ಮತ್ತು ಶೇ 40 ಕ್ಕಿಂತ ಹೆಚ್ಚಾಗಿವೆ.

ಮಾರ್ಚ್​ನಲ್ಲಿ, ಕಂಪನಿಯು ಗೂಗಲ್​ನ ಡೀಪ್ ಮೈಂಡ್ ಎಐ ಅಂಗಸಂಸ್ಥೆ ಸಹ -ಸಂಸ್ಥಾಪಕ ಮುಸ್ತಫಾ ಸುಲೇಮಾನ್ ಅವರನ್ನು ನೇಮಿಸಿಕೊಂಡಿತು. ಚಾಟ್ ಜಿಪಿಟಿ ತಯಾರಿಕಾ ಕಂಪನಿಯಾದ ಓಪನ್ ಎಐನಲ್ಲಿ ಬಹುಕೋಟಿ ಡಾಲರ್ ಹೂಡಿಕೆ ಮಾಡಿರುವ ಮೈಕ್ರೊಸಾಫ್ಟ್​ ಜಾಗತಿಕವಾಗಿ ಎಐ ತಂತ್ರಜ್ಞಾನದಲ್ಲಿ ಪಾರಮ್ಯ ಸಾಧಿಸಲು ಪ್ರಯತ್ನಿಸುತ್ತಿದೆ.

ಇದನ್ನೂ ಓದಿ : BMW ಎಲೆಕ್ಟ್ರಿಕ್ ಕಾರು ಬಿಡುಗಡೆ: ಬೆಲೆ 1 ಕೋಟಿಗಿಂತ ಸ್ವಲ್ಪ ಜಾಸ್ತಿ! - BMW Electric Car

ETV Bharat Logo

Copyright © 2025 Ushodaya Enterprises Pvt. Ltd., All Rights Reserved.