ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯೋಮಾನದವರಲ್ಲೂ ಸಾಮಾನ್ಯವಾಗಿರುವ ಚಟ ಎಂದರೆ, ಅದು ಸೆಲ್ ಫೋನ್ ಬಳಕೆ. ಇದನ್ನು ಬಳಸುತ್ತಾ ಕುಳಿತುಕೊಂಡರೆ ಸಮಯ ಕಳೆಯುವುದೇ ತಿಳಿಯುವುದಿಲ್ಲ. ಈ ಸೆಲ್ ಫೋನ್ಗಳ ಅತಿಯಾದ ಬಳಕೆ ಚಟವಾಗಿದ್ದು, ಇದು ಅನೇಕ ಆರೋಗ್ಯ ಸಮಸ್ಯೆ ಮತ್ತು ರೋಗಕ್ಕೆ ಕೂಡ ಕಾರಣವಾಗುತ್ತಿದೆ. ಈ ಬಗ್ಗೆ ವೈದ್ಯರು ಕೂಡ ಕಾಳಜಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಪ್ರಜ್ಞಾಪೂರ್ವಕವಾಗಿ ಇದರ ಬಳಕೆಯಿಂದ ದೂರಾಗುವುದು ಅಗತ್ಯವಾಗಿದೆ. ಈ ಕುರಿತು ಮಾರ್ಗವನ್ನು ಹುಡುಕುತ್ತಿದ್ದರೆ, ಇಲ್ಲಿದೆ ಸರಳ ಉಪಾಯ.
ದಿನದಲ್ಲಿ ಕನಿಷ್ಠ ಕೆಲವು ಗಂಟೆಗಳನ್ನು ಸ್ಮಾರ್ಟ್ಫೋನ್ ಬಳಕೆಯಿಂದ ದೂರು ಇರುವಂತೆ ನೋಡಿಕೊಳ್ಳಿ. ಇದು ಸಾಧ್ಯವಾಗುತ್ತಿಲ್ಲ ಎಂದರೆ ಕ್ವಾಲಿಟಿ ಟೈಮ್ ಅಂಡ್ ಮೊಮೆಟ್ನಂತಹ ಆಪ್ ಡೌನ್ಲೋಡ್ ಮಾಡಿ, ಸೆಲ್ ಫೋನ್ ಬಳಕೆಯನ್ನು ನಿರ್ವಹಿಸಿ. ಜೊತೆಗೆ ಈ ಆಪ್ಗಳ ನೋಟಿಫಿಕೇಷನ್ ಆನ್ನಲ್ಲಿರುವಂತೆ ನೋಡಿಕೊಳ್ಳಿ. ಜೊತೆಗೆ ಇತರ ನಿಮ್ಮ ಹವ್ಯಾಸದ ಮೇಲೆ ಗಮನವಿಡಿ, ಅದರಲ್ಲಿ ತಲ್ಲೀನರಾಗಿ. ಇದರಿಂದ ಫೋನ್ ಚಟದಿಂದ ಕ್ಷಣಕಾಲದವರೆಗೆ ಮುಕ್ತಿ ಪಡೆಯಬಹುದು.
ಬಳಕೆ ಸಮಯ ನಿರ್ವಹಿಸಿ: ನಿತ್ಯ ನೀವು ಎಷ್ಟು ಸಮಯ ಮೊಬೈಲ್ ಬಳಕೆ ಮಾಡುತ್ತೀರಾ ಎಂದು ಪರಿಶೀಲಿಸಿ. ಬಳಿಕ ನಿಧಾನವಾಗಿ ಅದರ ಬಳಕೆಯನ್ನು ದಿನದಿಂದ ದಿನಕ್ಕೆ ಕಡಿಮೆ ಮಾಡಿ. ಕೆಲವು ನಿರ್ದಿಷ್ಟ ಆಪ್ಗಳ ಮೂಲಕ ನಿಮ್ಮ ಬಳಕೆ ಸಮಯವನ್ನು ನಿರ್ವಹಣೆ ಮಾಡಬಹುದಾಗಿದೆ.
ನೋಟಿಫೀಕೇಷನ್ ಆಫ್ ಮಾಡಿ: ನಿಮ್ಮ ಮೊಬೈಲ್ನಲ್ಲಿರುವ ನೋಟಿಫೀಕೇಷನ್ ಅನ್ನು ಆಫ್ ಮಾಡಿ. ಇಲ್ಲದೇ ಹೋದಲ್ಲಿ, ಪ್ರತಿಬಾರಿ ನೋಟಿಫಿಕೇಷನ್ ಬಂದಾಗ ಕೈಗೆ ಎತ್ತಿಕೊಂಡು ಅದರ ಬಳಕೆಗೆ ಮುಂದಾಗಿ ಮಗ್ನರಾಗುತ್ತೀರಿ. ಈ ಹಿನ್ನೆಲೆಯಲ್ಲಿ ಮೊಬೈಲ್ನಲ್ಲಿರುವ ಆ್ಯಪ್ಗಳ ನೋಟಿಫಿಕೇಷನ್ ಆಫ್ ಮಾಡಿ.
ಆಲರಾಂ ಸೆಟ್ ಮಾಡಬೇಡಿ: ಮೊಬೈಲ್ನಲ್ಲಿ ಆಲರಾಂ ಸೆಟ್ ಮಾಡುವುದನ್ನು ನಿಲ್ಲಿಸಿ. ಕಾರಣ ಮೊಬೈಲ್ ಆಲರಾಂ ಹೊಡೆದಾಕ್ಷಣ ಅದನ್ನು ನಿಲ್ಲಿಸಿ, ಅನೇಕ ಮಂದಿ ಸಾಮಾಜಿಕ ಮಾಧ್ಯಮದತ್ತ ಹೊರಳುತ್ತಾರೆ. ಇದರಿಂದ ಬೆಳ್ಳಂಬೆಳಗ್ಗೆಯಿಂದಲೇ ಮೊಬೈಲ್ ಬಳಕೆ ಆರಂಭವಾಗುತ್ತದೆ. ಈ ಹಿನ್ನೆಲೆಯಲ್ಲಿ ಅಲರಾಂಗೆ ಬೇರೆ ಸಾಧನವನ್ನು ಬಳಕೆ ಮಾಡುವುದು ಉತ್ತಮ.
ಸಂದೇಶಕ್ಕೆ ಸಮಯ ನಿಗದಿಸಿ: ಫೇಸ್ಬುಕ್, ವಾಟ್ಸ್ಆ್ಯಪ್ ಮತ್ತು ಕೆಲಸದ ನಿಮಿತ್ತದ ಇ ಮೇಲ್ ಸಂದೇಶಗಳಿಗೆ ಸಂದೇಶ ಕಳುಹಿಸಲು ನಿಯಮಿತ ಸಮಯ ನಿಗದಿ ಮಾಡಿಕೊಳ್ಳಿ. ಇಲ್ಲದೇ ಹೋದಲ್ಲಿ, ಇಡೀ ದಿನ ನೀವು ರಿಪ್ಲೆ ಮಾಡುವುದರಲ್ಲಿಯೇ ದಿನ ಕಳೆದು, ಮೊಬೈಲ್ ಬಳಕೆ ಹೆಚ್ಚಾಗುತ್ತದೆ. ತುರ್ತು ಪ್ರತಿಕ್ರಿಯೆ ಸಂದೇಶದ ಹೊರತಾಗಿ ಉಳಿದವುಗಳಿಗೆ ಸಮಯ ನಿಗದಿಸುವುದು ಉತ್ತಮ ಮಾರ್ಗ ಆಗಲಿದೆ.
ದಿನಕ್ಕೆ ಒಂದಷ್ಟು ಸಮಯ ಮೊಬೈಲ್ ಆಫ್ ಮಾಡಿ: ದಿನದಲ್ಲಿ ಒಂದಷ್ಟು ಸಮಯ ಉದ್ದೇಶ ಪೂರ್ವಕವಾಗಿ ಮೊಬೈಲ್ ಆಫ್ ಮಾಡಿ. ಅದು ಮಧ್ಯಾಹ್ನದ ನಿದ್ರೆ ಅಥವಾ ತಿನ್ನುವ ಸಮಯ ಆಗಿರಬಹುದು. ಇದರಿಂದ ಕೂಡ ಮೊಬೈಲ್ ಬಳಕೆಗೆ ಕಡಿವಾಣ ಹಾಕಬಹುದು.
ಚಾರ್ಜ್ಗೆ ಈ ಕ್ರಮ ಅನುಸರಿಸಿ: ನಿಮ್ಮ ಫೋನ್ ಚಾರ್ಜರ್ ಅನ್ನು ದೂರವಿಡಿ. ಇದರಿಂದ ಚಾರ್ಜಿಂಗ್ ಸಮಯದಲ್ಲಿ ಮೊಬೈಲ್ ಬಳಕೆ ಮಾಡದಂತೆ ಮುನ್ನೆಚ್ಚರಿಕೆ ವಹಿಸಬಹುದು.
ಮಾನಸಿಕ ಸಿದ್ಧತೆ: ಮೊಬೈಲ್ನಿಂದ ದೂರ ಇಡಲು ಏನೇ ಸಲಹೆ ನೀಡಿದರೂ ಅದರ ಪಾಲನೆಗೆ ಮಾನಸಿಕವಾಗಿ ಸಿದ್ಧವಾಗುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ತಯಾರಿ. ಮೊಬೈಲ್ನಿಂದ ದೂರ ಇರಬಲ್ಲೆ ಎಂದು ನಿರ್ಧರಿಸಿ, ಉದ್ದೇಶಪೂರ್ವಕವಾಗಿ ಅದರಿಂದ ದೂರಾಗಿ.
ಈ ರೀತಿ ಯೋಚಿಸಿ: ಅನೇಕ ಜನರು ಸಾಮಾಜಿಕ ಜಾಲತಾಣದ ಮೂಲಕ ಪ್ರಮುಖ ಸುದ್ದಿ, ಅಪ್ಡೇಟ್ಗಳು ಮಿಸ್ ಆಗಬಾರದು ಎಂಬ ಕಾರಣಕ್ಕೆ ಸದಾ ಮೊಬೈಲ್ನಲ್ಲಿಯೇ ಮುಳುಗುತ್ತಾರೆ. ಆದರೆ, ಇವುಗಳನ್ನು ಒಂದೆರಡು ಗಂಟೆ ನೋಡದೇ ಹೋದರೆ, ಯಾವುದೇ ಹಾನಿ ಸಂಭವಿಸುವುದಿಲ್ಲ ಎಂದು ಮನವರಿಕೆ ಮಾಡಿಕೊಳ್ಳಿ. ಇದರಿಂದ ತಕ್ಷಣಕ್ಕೆ ಫೋನ್ ಬಳಕೆಯಿಂದ ದೂರಾಗಬಹುದು.
ಸಾಮಾಜಿಕ ಜಾಲತಾಣದ ಬಳಕೆಗೆ ಇರಲಿ ಮಿತಿ: ಅನೇಕ ಜನರು ಫೋನ್ ಬಳಕೆಗೆ ಕಾರಣ ಸಾಮಾಜಿಕ ಜಾಲತಾಣ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆ ಕಡಿಮೆ ಮಾಡುವುದು ಸರ್ವತೋಮುಖ ಆರೋಗ್ಯಕ್ಕೂ ಕೂಡ ಉತ್ತಮ.
ಮಕ್ಕಳ ಜೊತೆ ಜಾಗೃತಿ ಇರಲಿ: ಅನೇಕ ಮಕ್ಕಳು ಕೂಡ ಇಂದು ಮೊಬೈಲ್ ಚಟಕ್ಕೆ ಒಳಗಾಗುತ್ತಿದ್ದಾರೆ. ಮಕ್ಕಳಿಗೆ ಕೆಲವು ಆ್ಯಪ್ಗಳ ಹೊರತಾಗಿ ಅವರು ಅತಿಯಾಗಿ ನೋಡುವ ಆ್ಯಪ್ಗಳು ಸಿಗದಂತೆ ನಿಯಂತ್ರಿಸಿ. ಜೊತೆಗೆ ಎಷ್ಟು ಸಮಯ ಮೊಬೈಲ್ ನೋಡುವುದರಿಂದ ಏನಾಗಲಿದೆ ಎಂದು ತಿಳಿಸಿದೆ.
ನಿಯಮ ರೂಪಿಸಿ: ಕುಟುಂಬ ಸದಸ್ಯರನ್ನು ದೂರಾಗಿಸಿರುವ ಈ ಫೋನ್ ಅನ್ನು ಸದಸ್ಯರು ಒಟ್ಟಿಗೆ ಸೇರಿದಾಗ ಅದನ್ನು ಸ್ವಿಚ್ಡ್ ಆಫ್ ಮಾಡಬೇಕು. ಅಥವಾ ಸಂಜೆ 7ಗಂಟೆ ಬಳಿಕ ಇಲ್ಲ ಊಟದ ಸಮಯದಲ್ಲಿ ಪ್ರತಿಯೊಬ್ಬರು ಮೊಬೈಲ್ ಬಳಕೆ ಮಾಡದಂತೆ ನಿಯಮ ರೂಪಿಸಿ.
ವಿದ್ಯಾರ್ಥಿಗಳಿಂದ ದೂರವಿಡಿ: ಮಕ್ಕಳು ಶಾಲೆಗೆ ಮೊಬೈಲ್ ಕೊಂಡೊಯ್ಯುತ್ತಿದ್ದರೆ, ಈ ಸಂಬಂಧ ಪ್ರಾಂಶುಪಾಲರಿಗೆ ತಿಳಿಸುವುದಾಗಿ ಹೇಳಿ. ಅವರ ಸಾಮಾಜಿಕ ಜಾಲತಾಣದ ಮೇಲೆ ಒಂದು ಕಣ್ಣೀಡಿ. ಪೇರೇಟ್ಸ್ ಕಂಟ್ರೋಲ್ನ ಕೆಲವು ನೀತಿ ಅನುಸರಿಸಿ.
ಇದನ್ನೂ ಓದಿ: ನಿಮ್ಮ ಮೊಬೈಲ್ ಕಳುವಾಗಿದೆಯೇ ? ಹಾಗಾದ್ರೆ ಸಿಇಐಆರ್ ಪೋರ್ಟಲ್ಗೆ ದೂರು ನೀಡಿ