Biogas Powered CBG Tractor: ದೇಶದ ಆಟೋ ಕ್ಷೇತ್ರ ತಾಂತ್ರಿಕವಾಗಿ ಹೆಚ್ಚು ಬಲಿಷ್ಠವಾಗುತ್ತಿದೆ. ತಂತ್ರಜ್ಞಾನದ ಪ್ರಗತಿ ರಸ್ತೆಗಳ ಮೂಲಕ ಹೊಲಗಳನ್ನೂ ತಲುಪುತ್ತಿದೆ. ಇದೀಗ ದೇಶದ ಪ್ರಮುಖ ಟ್ರ್ಯಾಕ್ಟರ್ ತಯಾರಿಕಾ ಸಂಸ್ಥೆ ಮಹೀಂದ್ರಾ ಟ್ರಾಕ್ಟರ್ಸ್ ಕಂಪ್ರೆಸ್ಡ್ ಬಯೋಗ್ಯಾಸ್ (CBG) ಟ್ರಾಕ್ಟರ್ ಅನ್ನು ಪರಿಚಯಿಸಿದೆ.
ಕಂಪನಿಯು ಹೊಸ ಟ್ರ್ಯಾಕ್ಟರ್‌ಗೆ ಮಹೀಂದ್ರ ಯುವೋ ಟೆಕ್ ಪ್ಲಸ್ (Yuvo Tech+) ಎಂದು ಹೆಸರಿಟ್ಟಿದೆ. ಇದರಿಂದ ರೈತರಿಗೆ ಅನೇಕ ರೀತಿಯಲ್ಲಿ ಲಾಭವಾಗಲಿದೆ. ಶಕ್ತಿಶಾಲಿ ಎಂಜಿನ್ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಟ್ರ್ಯಾಕ್ಟರ್ ಬಿಡುಗಡೆ ಸಮಾರಂಭದಲ್ಲಿ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು.
ಮಹೀಂದ್ರ ಯುವೋ ಟೆಕ್+ ಹೇಗಿದೆ?: ನೋಟ ಮತ್ತು ವಿನ್ಯಾಸದಲ್ಲಿ ಇದು ಸಾಮಾನ್ಯ ಟ್ರಾಕ್ಟರ್ ಅನ್ನು ಹೋಲುತ್ತದೆ. ಕಾರ್ಯವಿಧಾನವು ಡೀಸೆಲ್ ಟ್ರಾಕ್ಟರ್ನಂತಿದೆ. ಆದರೆ, ವ್ಯತ್ಯಾಸವೆಂದರೆ ಡೀಸೆಲ್ ಬದಲಿಗೆ ಜೈವಿಕ ಅನಿಲವನ್ನು ಇದರಲ್ಲಿ ಇಂಧನವಾಗಿ ಬಳಸಲಾಗುತ್ತದೆ.
ಸದ್ಯ ಇದು ಪರಿಕಲ್ಪನೆಯ ಹಂತದಲ್ಲಿದೆ. ಪ್ರೊಡಕ್ಷನ್ ರೆಡಿ ಮಾಡೆಲ್ ಬರಲು ಸಮಯ ಹಿಡಿಯಲಿದೆ. ಮಹೀಂದ್ರಾ ಈ ಟ್ರಾಕ್ಟರ್‌ನಲ್ಲಿ ಕೆಲಸ ಮಾಡುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ದೇಶದ ರೈತರಿಗೆ ಸುಲಭ ಮತ್ತು ಕೈಗೆಟುಕುವ ದರದಲ್ಲಿ ಇದು ಲಭ್ಯವಾಗಲಿದೆ.
Thanking Hon. Union Minister Shri @nitin_gadkari Ji for unveiling Mahindra Tractors' pioneering #CBGTractor with our CEO at India Bio Energy & Tech Expo, Delhi. It's another testament of #MahindraTractors' commitment towards sustainable agriculture.@MahindraRise @hsikka1 pic.twitter.com/lN8s51lkKp
— Mahindra Tractors (@TractorMahindra) September 2, 2024
ಸಾಂಪ್ರದಾಯಿಕ ಡೀಸೆಲ್ ಟ್ರಾಕ್ಟರ್ ತಂತ್ರಜ್ಞಾನಕ್ಕೆ ಸಮಾನವಾದ ಶಕ್ತಿ ಮತ್ತು ಕಾರ್ಯಕ್ಷಮತೆ ಒದಗಿಸುವ ಸಾಮರ್ಥ್ಯವನ್ನು ಮಹೀಂದ್ರ ಯುವೋ ಟೆಕ್ + CBG ಟ್ರಾಕ್ಟರ್ ಹೊಂದಿದೆ ಎಂದು ಹೇಳಲಾಗುತ್ತಿದೆ. ಕೃಷಿ ಮತ್ತು ಸಾರಿಗೆ ಕೆಲಸಗಳನ್ನು ನಿರ್ವಹಿಸಲು ಇದು ಸಂಪೂರ್ಣವಾಗಿ ಸಿದ್ಧವಾಗಿದೆ. ಸಿಬಿಜಿ ಟ್ರಾಕ್ಟರ್ ತಂತ್ರಜ್ಞಾನವು ರೈತ ಸಮುದಾಯ ಮತ್ತು ಪರಿಸರ ಎರಡಕ್ಕೂ ಪ್ರಯೋಜನ ನೀಡುವ ಗುರಿ ಹೊಂದಿದೆ ಎಂದು ಕಂಪನಿಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಮಹೀಂದ್ರ CBG ಟ್ರಾಕ್ಟರ್ ಮಾಲಿನ್ಯ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.
ಜೈವಿಕ ಅನಿಲ ಎಂದರೇನು?: ಜೈವಿಕ ಅನಿಲವು ಅನೇಕ ಬಾರಿ ಬಳಸಬಹುದಾದ ಶಕ್ತಿಯ ಮೂಲ. ಇದನ್ನು ದೇಶೀಯ ಮತ್ತು ಕೃಷಿ ಉದ್ದೇಶಗಳಿಗಾಗಿಯೂ ಬಳಸಬಹುದು. ಜೈವಿಕ ರಾಸಾಯನಿಕ ಪ್ರಕ್ರಿಯೆಯ ಮೂಲಕ ಜೈವಿಕ ಅನಿಲವನ್ನು ಉತ್ಪಾದಿಸಲಾಗುತ್ತದೆ. ಆಹಾರ, ಸಸ್ಯಗಳು ಮತ್ತು ಇತರ ತ್ಯಾಜ್ಯ ವಸ್ತುಗಳಂತಹ ಜೈವಿಕ ವಿಘಟನೀಯ ವಸ್ತುಗಳು ಕೊಳೆಯಲ್ಪಟ್ಟಾಗ, ಅದರಿಂದಾಗುವ ಪ್ರಕ್ರಿಯೆಯ ಮೂಲಕ ಕೆಲವು ವಿಶೇಷ ರೀತಿಯ ಬ್ಯಾಕ್ಟೀರಿಯಾಗಳು ಸಾವಯವ ತ್ಯಾಜ್ಯವನ್ನು ಜೈವಿಕ ಅನಿಲವಾಗಿ ಪರಿವರ್ತಿಸುತ್ತವೆ. ಈ ಅನಿಲವು ಜೈವಿಕ ಪ್ರಕ್ರಿಯೆಯಿಂದ ಉತ್ಪತ್ತಿಯಾಗುತ್ತದೆ. ಆದ್ದರಿಂದ ಇದನ್ನು ಜೈವಿಕ ಅನಿಲ ಎಂದು ಕರೆಯಲಾಗುತ್ತದೆ.
ಭಾರತದಲ್ಲಿ ಜೈವಿಕ ಅನಿಲದ ಉತ್ತಮ ಉತ್ಪಾದನೆಗೆ ಅಪಾರ ಸಾಮರ್ಥ್ಯವಿದೆ. ಆದರೆ ಯಾವುದೇ ವಾಹನದಲ್ಲಿ ಈ ಅನಿಲವನ್ನು ಬಳಸಲು, ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಅಷ್ಟೇ ಮುಖ್ಯ. ಮಹೀಂದ್ರಾ ಹೊರತಾಗಿ, ಮಾರುತಿ ಸುಜುಕಿ ಕೂಡ ಜೈವಿಕ ಅನಿಲದಿಂದ ಚಲಿಸುವ ಕಾರನ್ನು ತಯಾರಿಸುವ ಕೆಲಸ ಮಾಡುತ್ತಿದೆ. ಕಂಪನಿಯು ಕಳೆದ ಆಟೋ ಎಕ್ಸ್‌ಪೋದಲ್ಲಿ ವ್ಯಾಗನ್ ಆರ್ (ಸಿಬಿಜಿ) ಪರಿಚಯಿಸಿತು. ಆದರೆ ಬಯೋಗ್ಯಾಸ್ ಸಾಮಾನ್ಯವಾಗಿ ಮಾರಾಟವಾಗುವ CNGನಂತೆ ಎಲ್ಲೆಡೆ ಲಭ್ಯವಾಗದ ಹೊರತು ಆಟೋ ವಲಯಕ್ಕೆ ದೈನಂದಿನ ಜೀವನದಲ್ಲಿ ಉಪಯುಕ್ತವಾಗುವುದಿಲ್ಲ.
ಮಹೀಂದ್ರಾದ ಈ CBG ಟ್ರಾಕ್ಟರ್ ಪ್ರಸ್ತುತ ಅದರ ಆರಂಭಿಕ ಹಂತದಲ್ಲಿದೆ. ಕಂಪನಿಯ ಈ ಯೋಜನೆಗೆ ಸಂಬಂಧಿಸಿದ ಮೂಲವೊಂದು ತಂತ್ರಜ್ಞಾನ ಸಿದ್ಧವಾಗಿದೆ ಮತ್ತು ಇನ್ಫ್ರಾಗಾಗಿ ಕಾಯುತ್ತಿದೆ ಎಂದು ಹೇಳುತ್ತದೆ. ಅಂದರೆ, ವಾಣಿಜ್ಯ ವಾಹನಗಳಲ್ಲಿ ಬಯೋಗ್ಯಾಸ್ ಬಳಕೆಗೆ ಲಭ್ಯವಾಗುತ್ತಿದ್ದಂತೆ, ಈ ಟ್ರ್ಯಾಕ್ಟರ್ ಕೂಡ ಮಾರಾಟಕ್ಕೆ ಲಭ್ಯವಾಗಲಿದೆ. ಮಹೀಂದ್ರಾ ತನ್ನ ಹೊಸ ತಂತ್ರಜ್ಞಾನದೊಂದಿಗೆ ಕೃಷಿ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಡೀಸೆಲ್ ಹೊರತುಪಡಿಸಿ, ಕಂಪನಿಯು ಸಿಎನ್‌ಜಿ, ಎಲ್‌ಪಿಜಿ ಮತ್ತು ಡ್ಯುಯಲ್-ಇಂಧನದಲ್ಲಿ ಚಲಿಸುವ ಟ್ರಾಕ್ಟರ್‌ಗಳನ್ನು ಸಹ ಪ್ರದರ್ಶಿಸಿದೆ.
ಇದನ್ನೂ ಓದಿ: ಪೆಟ್ರೋಲ್ ಅಲ್ಲ, ಫ್ಲೆಕ್ಸ್-ಫ್ಯೂಯಲ್ ಪಲ್ಸರ್ ಪರಿಚಯಿಸಿದ ಬಜಾಜ್! ಏನಿದರ ವಿಶೇಷತೆ? - Bajaj Pulsar Bike Flex Fuel