ETV Bharat / technology

ಹೊಸ ಕ್ರ್ಯಾಶ್ ಟೆಸ್ಟ್ ಪ್ಲಾಂಟ್​, ಬ್ಯಾಟರಿ ಸೆಲ್ ರಿಸರ್ಚ್ ಲ್ಯಾಬ್ ಉದ್ಧಾಟಿಸಿದ ಮಹೀಂದ್ರಾ

Mahindra new crash test plant: ತಮಿಳುನಾಡಿನ ಕಾಂಚೀಪುರಂನಲ್ಲಿ ಮಹೀಂದ್ರಾ & ಮಹೀಂದ್ರಾ ಎರಡು ಹೊಸ ಪರೀಕ್ಷಾ ಸೌಲಭ್ಯಗಳನ್ನು ಉದ್ಘಾಟಿಸಿದೆ. ಇದರಲ್ಲಿ ವಿವಿಧ ರೀತಿಯ ಪರೀಕ್ಷೆಗಳನ್ನು ನಡೆಸಲಾಗುವುದು.

NEW CRASH TEST PLANT MAHINDRA  MAHINDRA NEW CRASH TEST  MAHINDRA AND MAHINDRA COMPANY
ಮಹೀಂದ್ರಾ (Mahindra)
author img

By ETV Bharat Tech Team

Published : Oct 26, 2024, 10:08 AM IST

Mahindra new crash test plant: SUV ತಯಾರಕರಾದ ಮಹೀಂದ್ರ & ಮಹೀಂದ್ರಾ ತಮಿಳುನಾಡಿನ ಕಾಂಚೀಪುರಂನಲ್ಲಿರುವ ಎರಡು ಹೊಸ ಪರೀಕ್ಷಾ ಸೌಲಭ್ಯಗಳನ್ನು ಉದ್ಘಾಟಿಸಿದೆ. ಇದು ನಿಷ್ಕ್ರಿಯ ಸುರಕ್ಷತಾ ಲ್ಯಾಬ್ (PSL), ಸೆಲ್​ ರಿಸರ್ಚ್​ ಲ್ಯಾಬೊರೆಟರಿ ಮತ್ತು ಬ್ಯಾಟರಿ ಪ್ರೋಟೋ ಬಿಲ್ಡ್ ಶಾಪ್ ಒಳಗೊಂಡಿದೆ. ಇದಕ್ಕಾಗಿ ಕಂಪನಿಯು 300 ಕೋಟಿಗೂ ಹೆಚ್ಚು ಹೂಡಿಕೆ ಮಾಡಿದೆ.

ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (BNCAP) ಹಾಗೂ ಆಸ್ಟ್ರೇಲಿಯಾ ಮತ್ತು ಯುರೋಪಿಯನ್ NCAP ಮಾನದಂಡಗಳಿಗೆ ಅನುಗುಣವಾಗಿ PSL ಅನ್ನು ಕ್ರ್ಯಾಶ್ ಟೆಸ್ಟ್ ಮಾಡಲಾಗಿದೆ. ಇದಲ್ಲದೇ, ಮಹೀಂದ್ರಾ ಬ್ಯಾಟರಿ ಮತ್ತು ಸೆಲ್ ರಿಸರ್ಚ್ ಲ್ಯಾಬ್ ಬ್ಯಾಟರಿ ಸೆಲ್‌ಗಳು, ಮಾಡ್ಯೂಲ್‌ಗಳು ಮತ್ತು ಪ್ಯಾಕ್‌ಗಳ ಸಂಶೋಧನೆ, ವಿಶ್ಲೇಷಣೆ ಮತ್ತು ಅಭಿವೃದ್ಧಿಯಲ್ಲೂ ಕೆಲಸ ಮಾಡುತ್ತದೆ.

ವರದಿಗಳ ಪ್ರಕಾರ, ಪಿಎಸ್ಎಲ್ ಎರಡು ಕ್ರ್ಯಾಶ್​ಗಳನ್ನು ಒಳಗೊಂಡಿತ್ತು. ಇದು 100 ಟನ್ ಸಾಮರ್ಥ್ಯದ ಚಲಿಸಬಲ್ಲ ಬ್ಲಾಕ್ ಹೊಂದಿದೆ. ಎರಡನೆಯದು 306 ಮೀ ಪರಿಣಾಮಕಾರಿ ಟ್ರ್ಯಾಕ್ ಉದ್ದದೊಂದಿಗೆ ಸ್ಥಿರ ಬ್ಲಾಕ್ ಆಗಿದೆ. ಈ ಸೌಲಭ್ಯವು ಗಂಟೆಗೆ 120 ಕಿ.ಮೀ ವೇಗದಲ್ಲಿ 4 ಟನ್ ತೂಕದ ವಾಹನಗಳನ್ನು ಪರೀಕ್ಷಿಸುವ ಸಾಮರ್ಥ್ಯ ಹೊಂದಿದೆ.

ಪ್ರಯೋಗಾಲಯದಲ್ಲಿ ಹಲವಾರು ರೀತಿಯ ಕ್ರ್ಯಾಶ್ ಪರೀಕ್ಷೆಗಳು:

  • ಆಫ್‌ಸೆಟ್ ಡಿಫಾರ್ಮೇಶನ್ ಇಂಪೆಡೆನ್ಸ್ ಟೆಸ್ಟ್
  • ಸೈಡ್ ಮೂವಬಲ್ ಡಿಫಾರ್ಮಬಲ್ ಬ್ಯಾರಿಯರ್ ಟೆಸ್ಟ್
  • ಫ್ಲೈಯಿಂಗ್ ಫ್ಲೋರ್‌ನೊಂದಿಗೆ ಪೋಲ್ ಇಂಪ್ಯಾಕ್ಟ್ ಟೆಸ್ಟ್
  • ರಿಯರ್​ ಇಂಪ್ಯಾಕ್ಟ್ ಟೆಸ್ಟ್ (ನಿಯಂತ್ರಕ ಅಗತ್ಯತೆಗಳು ಮತ್ತು BNCAP ಪ್ರಕಾರ)

ಇನ್ನಿತರ ಪರೀಕ್ಷೆಗಳು:

  • ಚಲಿಸಬಲ್ಲ ಪ್ರಗತಿಶೀಲ ಡಿಫಾರ್ಮಬಲ್​ ಬ್ಯಾರಿಯರ್​ ಟೆಸ್ಟ್​
  • ಅಡ್ವಾನ್ಸ್ಡ್ ಸೈಡ್ ಮೂವಬಲ್ ಡಿಫಾರ್ಮಬಲ್ ಬ್ಯಾರಿಯರ್ ಟೆಸ್ಟ್
  • ಫುಲ್​ ಫ್ರಾಂಟಲ್​ ಟೆಸ್ಟ್​ (ಯುರೋ ಎನ್‌ಸಿಎಪಿಗೆ ಅನುಗುಣವಾಗಿ)

ವಿಶೇಷವಾಗಿ ಎಲೆಕ್ಟ್ರಿಕ್ ವಾಹನಗಳಿಗೆ (ಇವಿ) ವಿಶೇಷ ಕ್ರ್ಯಾಶ್ ಟೆಸ್ಟ್ ಪ್ರದೇಶ ಅಭಿವೃದ್ಧಿಪಡಿಸಿದೆ ಎಂದು ಮಹೀಂದ್ರಾ ಹೇಳಿದೆ. ಇದು ವಿವರವಾದ ತಪಾಸಣೆಗಾಗಿ ಸ್ಥಿರ ಬ್ಲಾಕ್ ಮತ್ತು ಗ್ಯಾರೇಜ್ ಅನ್ನು ಸಹ ಒಳಗೊಂಡಿದೆ. ಸೌಲಭ್ಯವು ಕಾರ್ಯಾಗಾರಗಳು, ಪೇಂಟಿಂಗ್​ ವಲಯಗಳನ್ನು ಸಹ ಒಳಗೊಂಡಿದೆ. ಕೋನೀಯ ಕಾರ್ - ಟು - ಕಾರ್ ಟೆಸ್ಟ್ ರೋಲ್‌ಓವರ್ ಪರೀಕ್ಷೆಗಳಿಗೆ ಭವಿಷ್ಯದ ನವೀಕರಣಗಳಿಗಾಗಿ ಮಹೀಂದ್ರಾ ನಿಬಂಧನೆಗಳನ್ನು ಮಾಡಿದೆ.

ಇತ್ತೀಚೆಗೆ ಆಟೋಮೊಬೈಲ್ ಕಂಪನಿ ಮಹೀಂದ್ರಾ ಮತ್ತು ಮಹೀಂದ್ರಾ ಹೊಸದಾಗಿ ಮಹೀಂದ್ರ ಥಾರ್ ರಾಕ್ಸ್ ಬಿಡುಗಡೆ ಮಾಡಿತ್ತು. ಬಿಡುಗಡೆ ಮಾಡಿದ್ದ ಗಂಟೆಯೊಳಗೆ ಒಂದೂವರೆ ಲಕ್ಷಕ್ಕೂ ಹೆಚ್ಚು ಬುಕಿಂಗ್‌ಗಳು ದಾಖಲಾಗಿದ್ದವು. ಈ ಬಗ್ಗೆ ಮಹೀಂದ್ರ ಕಂಪನಿ ತಿಳಿಸಿತ್ತು.

ಓದಿ: ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ TVS ರೈಡರ್ 125 iGo- ಇದರ ಬೆಲೆ, ವೈಶಿಷ್ಟ್ಯಗಳು ಹೀಗಿವೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.