Kia Syros Launched in India: ಕೊನೆಗೂ ಕಿಯಾ ಮೋಟಾರ್ಸ್ ದೇಶಿಯ ಮಾರುಕಟ್ಟೆಗೆ ತನ್ನ ಬಹು ನಿರೀಕ್ಷಿತ ಸವೆನ್ ಸೀಟರ್ ಸಿರೋಸ್ ಅನ್ನು ಪರಿಚಯಿಸಿದೆ. ಇದು ಸಬ್ 4m SUV ಆಗಿದ್ದು, ಸೋನೆಟ್‌ಗಿಂತ ಸ್ವಲ್ಪ ದೊಡ್ಡದಾಗಿದೆ. ಆದರೆ ಸೆಲ್ಟೋಸ್‌ಗಿಂತ ಹೆಚ್ಚಿನ ಸ್ಥಳವನ್ನು ಹೊಂದಿದೆ. Kia Sciros ನ ಡಿಲಿವೆರಿಗಳು ಮುಂದಿನ ವರ್ಷ ಫೆಬ್ರವರಿಯಲ್ಲಿ ಪ್ರಾರಂಭವಾಗಲಿದೆ. ಅದರ ಬೆಲೆಗಳನ್ನು ಜನವರಿ 2025 ರಲ್ಲಿ ಬಹಿರಂಗಪಡಿಸಲಾಗುತ್ತದೆ.
ಕಿಯಾ ಸಿರೋಸ್‌ನ ವಿನ್ಯಾಸ ಮತ್ತು ವೈಶಿಷ್ಟ್ಯ: ಕಿಯಾ ಸೈರಸ್ ಭಾರತದಲ್ಲಿ ಐದನೇ ಎಸ್ಯುವಿ ಆಗಿದೆ. ಇದರ ವಿನ್ಯಾಸವು ಸಾಕಷ್ಟು ವಿಭಿನ್ನವಾಗಿದೆ ಮತ್ತು ಪ್ರೀಮಿಯಂ ಲುಕ್ ಹೊಂದಿದೆ. ಈ ಸಬ್-ಕಾಂಪ್ಯಾಕ್ಟ್ ಎಸ್ಯುವಿ ಡ್ಯುಯಲ್-ಸ್ಕ್ರೀನ್ ಸೆಟಪ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಡಿಜಿಟಲ್ ಡ್ರೈವರ್ ಡಿಸ್ಪ್ಲೇಯಂತಹ ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಸಿರೋಸ್ 3,995 ಮಿಮೀ ಉದ್ದ, 1,800 ಎಂಎಂ ಅಗಲ ಮತ್ತು 1,665 ಎಂಎಂ ಎತ್ತರವಿದೆ.
ಪವರ್ಟ್ರೇನ್ ಮತ್ತು ಕಲರ್: ಕಿಯಾ ಸಿರೋಸ್‌ನ ಪವರ್‌ಟ್ರೇನ್ ಕುರಿತು ಮಾತನಾಡುವುದಾದರೆ, ಇದು 1.0 ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ರೂಪಾಂತರದಲ್ಲಿ 1.5 ಲೀಟರ್ ಎಂಜಿನ್‌ನ ಪವರ್ ಹೊಂದಿದೆ. ಇದು 6 - ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ. ಕಲರ್ ಆಯ್ಕೆಗಳ ಬಗ್ಗೆ ಮಾತನಾಡುವುದಾದರೆ, ನೀವು ಫ್ರಾಸ್ಟ್ ಬ್ಲೂ, ಪ್ಯೂಟರ್ ಆಲಿವ್, ಅರೋರಾ ಬ್ಲ್ಯಾಕ್ ಪರ್ಲ್, ಇಂಟೆನ್ಸ್ ರೆಡ್, ಗ್ರಾವಿಟಿ ಗ್ರೇ, ಇಂಪೀರಿಯಲ್ ಬ್ಲೂ, ಸ್ಪಾರ್ಕ್ಲಿಂಗ್ ಸಿಲ್ವರ್ ಮತ್ತು ಗ್ಲೇಸಿಯರ್ ವೈಟ್ ಪರ್ಲ್ ಕಲರ್ಗಳನ್ನು ಪಡೆಯುತ್ತೀರಿ.
ಕಾರಿನ ಇಂಟಿರಿಯರ್ ಬಗ್ಗೆ ಮಾತನಾಡುವುದಾದರೆ, ಇದು ವೆಂಟಿಲೆಟೆಡ್ ಸೀಟ್‌ಗಳೊಂದಿಗೆ ಉತ್ತಮ ಬೂಟ್ ಸ್ಪೇಸ್ ಅನ್ನು ಹೊಂದಿರಲಿದೆ. ಏರ್‌ಕ್ರಾಫ್ಟ್ ಥ್ರೊಟಲ್‌ನಂತಹ ಗೇರ್ ಶಿಫ್ಟರ್ ಮತ್ತು 360 ಡಿಗ್ರಿ ಕ್ಯಾಮೆರಾ ಪಾರ್ಕಿಂಗ್ ಅನ್ನು ಒದಗಿಸಲಾಗಿದೆ. ಜೊತೆಗೆ ಮಲ್ಟಿ ಟೈಪ್-ಸಿ ಯುಎಸ್‌ಪಿ ಪೋರ್ಟ್‌ಗಳು, ವೈರ್‌ಲೆಸ್ ಚಾರ್ಜಿಂಗ್ ಆಯ್ಕೆಯೂ ಸಹ ಕಾರಿನಲ್ಲಿ ಲಭ್ಯವಿದೆ. ಈ ಸವೆನ್ ಸೀಟರ್ ಕಿಯಾದಲ್ಲಿ, ನಿಮಗೆ ಪನೋರಮಿಕ್ ಸನ್‌ರೂಫ್ ನೀಡಲಾಗಿದೆ.
ಕಾರಿನ ಇತರ ಫೀಚರ್ಗಳು: ಕಾರಿನ ಇತರ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ರೆ, ಸಿರೋಸ್ ಫ್ಲಶ್ ಡೋರ್ ಹ್ಯಾಂಡಲ್‌ಗಳು ಮತ್ತು ಟಾಪ್-ಎಂಡ್ ಟ್ರಿಮ್‌ಗಾಗಿ 17-ಇಂಚಿನ ವ್ಹೀಲ್ಗಳು ಮತ್ತು ಎಲ್-ಆಕಾರದ ಟೈಲ್ - ಲ್ಯಾಂಪ್‌ಗಳನ್ನು ಸಹ ಪಡೆಯುತ್ತದೆ. ಇದು ADAS ಲೆವೆಲ್ 2, ರಿಕ್ಲೈನಿಂಗ್ ರಿಯರ್ ಸೀಟುಗಳು, 8 ಸ್ಪೀಕರ್ ಆಡಿಯೋ ಸಿಸ್ಟಮ್ ಮತ್ತು ಪವರ್ಡ್ ಹ್ಯಾಂಡ್‌ಬ್ರೇಕ್ ಅನ್ನು ಹೊಂದಿದೆ.
ಓದಿ: ನಾಳೆ ನಿಮ್ಮ ಪ್ಲಾನ್ಗಳ ಬಗ್ಗೆ ಇರಲಿ ಎಚ್ಚರ !: ಆ ದಿನ 8 ಗಂಟೆಯಷ್ಟೇ ಹಗಲು, 16 ಗಂಟೆ ರಾತ್ರಿ!! ಕಾರಣವೇನು?