ETV Bharat / technology

ಮಾರುಕಟ್ಟೆಗೆ ಲಗ್ಗೆಯಿಟ್ಟ ಜಾವಾ ನ್ಯೂ ಮಾಡೆಲ್​: ಎನ್​ಫೀಲ್ಡ್​ ಹೊಸ ಬೈಕ್​ಗೆ ಟಕ್ಕರ್​ ನೀಡುತ್ತಾ ಜಾವಾ 42 FJ350? - New Jawa 42 FJ350 launch - NEW JAWA 42 FJ350 LAUNCH

New Java 42 FJ350: ಹೊಸ ಜಾವಾ 42 FJ350 ಇಂದು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇದರಲ್ಲಿ ಅದರ ಹಲವು ವೈಶಿಷ್ಟ್ಯಗಳನ್ನು ನೋಡಲು ಲಭ್ಯವಿದೆ. ಹೊಸ ಬೈಕಿನ ಬಳಕೆಗೆ ಅನುಗುಣವಾಗಿ ಎಂಜಿನ್ ಅನ್ನು ತಯಾರಿಸಲಾಗಿದೆ. ಇದು ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350ಗೆ ಟಕ್ಕರ್​ ನೀಡಲಿದೆ ಎಂಬ ಮಾತಿದೆ.

JAWA 42 FJ350 ENGINE DETAILS  JAWA 42 FJ350 COLOURS  JAWA 42 FJ350 FEATURES  NEW JAWA 42 FJ350 PRICE
ಮಾರುಕಟ್ಟೆಗೆ ಲಗ್ಗೆಯಿಟ್ಟ ಜಾವಾ ನ್ಯೂ ಮಾಡೆಲ್ (jawamotorcycles.com)
author img

By ETV Bharat Tech Team

Published : Sep 3, 2024, 3:52 PM IST

New Java 42 FJ350: ಜಾವಾ 42 ತನ್ನ ಹೊಸ ರೂಪಾಂತರವನ್ನು ಹೊರ ತಂದಿದೆ. ಇದಕ್ಕೆ ಸಂಬಂಧಿಸಿದಂತೆ ಕಂಪನಿಯು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಮಾಹಿತಿಗಳನ್ನು ಹಂಚಿಕೊಂಡಿದೆ. ಇತ್ತೀಚೆಗಷ್ಟೇ ಬೈಕ್‌ನ ಟೀಸರ್ ಅನ್ನು ಬ್ರ್ಯಾಂಡ್‌ನಿಂದ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಬೈಕ್‌ನ ಕೆಲವು ಭಾಗಗಳು ಗೋಚರಿಸಿದ್ದವು. ಇದರೊಂದಿಗೆ ಬೈಕ್‌ನ ಕೆಲವು ವೈಶಿಷ್ಟ್ಯಗಳನ್ನು ನೋಡಬಹುದಾಗಿತ್ತು. ಈ ಬೈಕ್​ನಲ್ಲಿ ಏನೆಲ್ಲಾ ವಿಶೇಷತೆ ಇರಲಿದೆ ಎಂಬುದನ್ನು ತಿಳಿಯೋಣ ಬನ್ನಿ..

ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಮಂಗಳವಾರ ಹೊಸ ಜಾವಾ 42 ಎಫ್‌ಜೆ 350 ಅನ್ನು ರೂ. 1,99,142 ಕ್ಕೆ ಬಿಡುಗಡೆ ಮಾಡಿದೆ (ದೆಹಲಿ ಎಕ್ಸ್ ಶೋ ರೂಂ). ಬೈಕ್‌ಗೆ ಅದರ ಸಂಸ್ಥಾಪಕ ಫ್ರಾಂಟಿಸೆಕ್ ಜಾನೆಚೆಕ್ ಹೆಸರನ್ನು ಇಡಲಾಗಿದೆ. ಅಷ್ಟೇ ಅಲ್ಲ, ಮುಂದಿನ ತಿಂಗಳು ಹಬ್ಬದ ಸೀಸನ್ ಪ್ರಾರಂಭವಾಗುವ ಮೊದಲು ಜಾವಾ ದೇಶಾದ್ಯಂತ 100 ಹೊಸ ಸ್ಟೋರ್‌ಗಳನ್ನು ತೆರೆಯಲಿದೆ ಎಂದು ಕಂಪನಿ ಪ್ರಕಟಿಸಿದೆ.

ಜಾವಾ 42 ವೈಶಿಷ್ಟ್ಯಗಳು: ಮೋಟಾರ್‌ಸೈಕಲ್ ಉಕ್ಕಿನ ಚಾಸಿಸ್‌ನೊಂದಿಗೆ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಟ್ವಿನ್ ಶಾಕ್ ಅಬ್ಸಾರ್ಬರ್‌ಗಳಿಂದ ಹೊಂದಿಸಲಾಗಿದೆ. ಆಫ್‌ಸೆಟ್ ಸ್ಪೀಡೋಮೀಟರ್, ಉತ್ತಮ ನಿರ್ವಹಣೆಗಾಗಿ ಡಬಲ್ ಗ್ರಿಲ್ ಫ್ರೇಮ್, ಫ್ಲಾಟ್ ಟಾರ್ಕ್‌ಗಾಗಿ ಆಲ್ಫಾ 2 ಪವರ್ ಚೈನ್ ಅನ್ನು ಅಳವಡಿಸಲಾಗಿದೆ. ಬೈಕ್‌ನಲ್ಲಿ ಮುಂಭಾಗದ ಡಿಸ್ಕ್ ಬ್ರೇಕ್‌ಗಳು, ಕಾಂಟಿನೆಂಟಲ್ ಎಬಿಎಸ್ ಸಿಸ್ಟಮ್ ಮತ್ತು ಹೈಸ್ಪೀಡ್ ವಾಹನದ ಸುರಕ್ಷತೆಗಾಗಿ ಬ್ರಾಂಬೋ ಬ್ರೇಕ್‌ಗಳಿವೆ.

ಜಾವಾ 42 ಬೈಕ್​ನಲ್ಲಿ ಹೊಸದೇನಿದೆ?: 2024ರ ಜಾವಾ 42 ಬೈಕಿನ ಸ್ಪೋರ್ಟಿ ಆವೃತ್ತಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ರೋಡ್‌ಸ್ಟರ್ ಸ್ಪೋರ್ಟಿಯಾಗಿರಲಿದೆ. ಹೊಸ ಜಾವಾ 42 ರಲ್ಲಿ ಟಿಯರ್‌ಡ್ರಾಪ್-ಆಕಾರದ ಇಂಧನ ಟ್ಯಾಂಕ್ ಆಕರ್ಷಕವಾಗಿದೆ. ಈ ರೂಪಾಂತರದಲ್ಲಿ ಫ್ಯೂಯಲ್ ಟ್ಯಾಂಕ್‌ನಲ್ಲಿ ಬೃಹತ್ JAWA ಲೋಗೋದೊಂದಿಗೆ ಸ್ಪೋರ್ಟಿ ಅಂಚನ್ನು ನಾವು ನೋಡಬಹುದು. ಅಂಡರ್-ಸೀಟ್ ಗ್ರಾಬ್ ರೈಲ್‌ಗಳೊಂದಿಗೆ ಸ್ಪೋರ್ಟಿ ಸಿಂಗಲ್-ಪೀಸ್ ರೈಸ್ಡ್ ಸೀಟ್, ಅಪ್-ಸ್ವೆಪ್ಟ್ ಎಕ್ಸಾಸ್ಟ್ ಮತ್ತು ಡ್ಯುಯಲ್-ನೊಂದಿಗೆ ಹೊಸ ಅಲಾಯ್ ವ್ಹೀಲ್‌ಗಳಿವೆ.

ಇತರೆ ಬಣ್ಣಗಳಲ್ಲಿ ಜಾವಾ 42 FJ350 ಬೆಲೆ:

  • Jawa 42 FJ350 ಐದು ಬಣ್ಣಗಳಲ್ಲಿ ಮೂಡಿ ಬಂದಿದೆ.
  • ಅರೋರ್ ಗ್ರೀನ್ ಮ್ಯಾಟ್ ಬೆಲೆ 2,10,142 ರೂ.
  • ಕಾಸ್ಮೊ ಬ್ಲೂ ಮ್ಯಾಟ್ 2,15,142 ರೂ.
  • ಮಿಸ್ಟಿಕ್ ಕಾಪರ್​ 2,15,142 ರೂ.
  • ಡೀಪ್ ಬ್ಲ್ಯಾಕ್- ರೆಡ್ ಕ್ಲಾಡ್ 2,20,142 ರೂ.
  • ಡೀಪ್ ಬ್ಲ್ಯಾಕ್- ಬ್ಲ್ಯಾಕ್ ಕ್ಲಾಡ್ 2,20, 142 ರೂ.

ಜಾವಾ 42 FJ350 ಎಂಜಿನ್ ಹೇಗಿದೆ?: Jawa 42 FJ350 334cc, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದ್ದು ಅದು 21.45bhp ಮತ್ತು 29.62Nm ನ ಗರಿಷ್ಠ ಟಾರ್ಕ್​ ಉತ್ಪಾದಿಸುತ್ತದೆ. ಎಂಜಿನ್ ಅನ್ನು ಆರು-ವೇಗದ ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ. 2 bhp ಮತ್ತು 26.84 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಜಾವಾ 42 ಬೆಲೆ ಎಷ್ಟು?: ಹೊಸ ಜಾವಾ 42 ಇಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಬೈಕಿನ ಎಕ್ಸ್ ಶೋ ರೂಂ ಬೆಲೆ ಸುಮಾರು 1.99 ರಿಂದ ಆರಂಭಗೊಳ್ಳಲಿದೆ. ಹೊಸ ಜಾವಾ 42 ಬೈಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ವಿರುದ್ಧ ತನ್ನ ಪೈಪೋಟಿ ಹೆಚ್ಚಿಸಲು ಬಿಡುಗಡೆಗೊಳಿಸಲಾಗಿದೆ.

ಓದಿ: ಈ ಸೆಪ್ಟೆಂಬರ್​ನಲ್ಲಿ ಭಾರತದ ದ್ವಿಚಕ್ರ ಮಾರುಕಟ್ಟೆಗೆ ಲಗ್ಗೆಯಿಡಲಿರುವ 5 ಬೈಕ್​ಗಳಿವು! - Top 5 Bikes Launch In Sept

ETV Bharat Logo

Copyright © 2025 Ushodaya Enterprises Pvt. Ltd., All Rights Reserved.