ETV Bharat / technology

‘ಪುಷ್ಪಕ್’ ನೌಕೆ ಯಶಸ್ವಿ ಸೇಫ್​​ ಲ್ಯಾಂಡಿಂಗ್​ಗೆ ಆಗ್ರಾದ ಈ ಬ್ರೇಕ್ ಪ್ಯಾರಾಚೂಟೇ ಕಾರಣ!​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​ - brake parachute - BRAKE PARACHUTE

ನಿನ್ನೆ ಚಿತ್ರದುರ್ಗದಲ್ಲಿ ಅಂತಿಮ ಪ್ರಯೋಗ ಕಂಡ ‘ಪುಷ್ಪಕ್’ ನೌಕೆಯ ಸಕ್ಸ್​ಸ್​ನಲ್ಲಿ ಆಗ್ರಾದ ಏರಿಯಲ್​​ ಡೆಲಿವರಿ ರಿಸರ್ಚ್​​ ಅಂಡ್​​ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ ವಿಜ್ಞಾನಿಗಳ ಪಾತ್ರ ಪ್ರಮುಖವಾಗಿದೆ.

‘ಪುಷ್ಪಕ್’ ನೌಕೆ ಯಶಸ್ವಿ ಲ್ಯಾಂಡಿಂಗ್​ಗೆ ಆಗ್ರಾದ ಬ್ರೇಕ್ ಪ್ಯಾರಾಚೂಟೇ ಕಾರಣ!​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​
‘ಪುಷ್ಪಕ್’ ನೌಕೆ ಯಶಸ್ಸಲ್ಲಿ ಆಗ್ರಾದ ಬ್ರೇಕ್ ಪ್ಯಾರಾಚೂಟೇ ಪಾತ್ರ​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​ (ETV Bharat)
author img

By ETV Bharat Karnataka Team

Published : Jun 24, 2024, 11:01 AM IST

ಆಗ್ರಾ(ಉತ್ತರ ಪ್ರದೇಶ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ-ISRO) ಜೂನ್​ 23ರಂದು ಅಂದರೆ ಭಾನುವಾರ ಮರು ಬಳಕೆ ಉಡಾವಣಾ ವಾಹನ ಅಥವಾ ‘ಪುಷ್ಪಕ್’ ನೌಕೆಯ(Reusable Launch Vehicle - RLV) ಲ್ಯಾಂಡಿಂಗ್ ಪ್ರಯೋಗದ(ಎಲ್‌ಇಎಕ್ಸ್)ಅಂತಿಮ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ. ಈ ಸಾಧನೆಯ ಬಗ್ಗೆ ವಿಶ್ವದಾದ್ಯಂತ ಚರ್ಚೆಯಾಗುತ್ತಿದೆ. ಆದರೆ ‘ಪುಷ್ಪಕ್’ ನೌಕೆ ಯಶಸ್ವಿಯಾಗಿ ಲ್ಯಾಂಡಿಂಗ್​ ಆಗುವಲ್ಲಿ ಆಗ್ರಾದ ಕೊಡುಗೆಯೂ ಬಹುಮುಖ ಪಾತ್ರವಹಿಸಿದೆ.

ಹೌದು.. ಆಗ್ರಾದ ಏರಿಯಲ್​​ ಡೆಲಿವರಿ ರಿಸರ್ಚ್​​ ಅಂಡ್​​ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ಎಡಿಆರ್‌ಡಿಇ) ವಿಜ್ಞಾನಿಗಳು 'ಪುಷ್ಪಕ್' ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಬ್ರೇಕ್ ಪ್ಯಾರಾಚೂಟ್​ ಅನ್ನು ತಯಾರಿಸಿದ್ದಾರೆ. ಈ ಪ್ಯಾರಾಚೂಟ್​ ಮೂಲಕ ಇಸ್ರೋ RLV LEX-3 ಮಿಷನ್​​ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.

ನಮ್ಮ ಹೆಮ್ಮೆಯ ಕರ್ನಾಟಕದ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ (Aeronautical Test Range - ATR)ನಲ್ಲಿ ಭಾನುವಾರ ಬೆಳಗ್ಗೆ 07:10ಕ್ಕೆ 'ಪುಷ್ಪಕ್' ನೌಕೆಯ ಪ್ರಯೋಗ ನಡೆಸಲಾಯಿತು. ಇದು ಲ್ಯಾಂಡಿಂಗ್​​ ಸಾಮರ್ಥ್ಯವನ್ನು ಪ್ರದರ್ಶಿಸುವ ಎಲ್‌ಇಎಕ್ಸ್-03 ತಂತ್ರಜ್ಞಾನದ ಸರಣಿಯಲ್ಲಿ ಅಂತಿಮ ಹಾಗೂ ಸತತ ಮೂರನೇ ಯಶಸ್ವಿ ಪ್ರಯೋಗವಾಗಿದೆ. ಈ ಯಶಸ್ವಿಗೆ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್​ ಅವರು ತಮ್ಮ ತಂಡವನ್ನು ಅಭಿನಂದಿಸಿದ್ದಾರೆ. ಇದರೊಂದಿಗೆ ಆಗ್ರಾದ ಎಡಿಆರ್‌ಡಿಇ ವಿಜ್ಞಾನಿಗಳ ಶ್ರಮವೂ ಪ್ರಶಂಸೆಗೆ ಪಾತ್ರವಾಗಿದೆ.

ನಿಮಗೆ ಇದು ಗೊತ್ತೇ: ನಿನ್ನೆ ಯಶಸ್ವಿಯಾಗಿರುವ ಪುಷ್ಪಕ್​ ನೌಕೆಯ ಲ್ಯಾಂಡಿಂಗ್ ವೇಗವು 320 kmph ಗಿಂತ ಹೆಚ್ಚಿತ್ತು. ಸಾಮಾನ್ಯವಾಗಿ ವಾಣಿಜ್ಯ ವಿಮಾನಗಳ ಲ್ಯಾಂಡಿಂಗ್​ ವೇಗ ಗಂಟೆಗೆ 260 ಕಿಮೀ ಮತ್ತು ಸಾಮಾನ್ಯ ಯುದ್ಧ ವಿಮಾನಗಳ ವೇಗ 280 ಕಿಮೀ. ಆಗಿರುತ್ತದೆ. ಈ ಸಂದರ್ಭ ಬ್ರೇಕ್ ಪ್ಯಾರಾಚೂಟ್​ಗಳನ್ನು ಲ್ಯಾಂಡಿಂಗ್ ನಂತರ ವೇಗವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ.

ಈ ಬಗ್ಗೆ ಆಗ್ರಾದ ಎಡಿಆರ್‌ಡಿಇ ಪ್ರೊ ಪ್ರದೀಪ್ ಪಾಲ್ ಮಾತನಾಡಿ, "ಎಡಿಆರ್‌ಡಿಇಯ ವಿಜ್ಞಾನಿಗಳು ಮತ್ತು ತಜ್ಞರ ತಂಡ ಅಭಿವೃದ್ಧಿಪಡಿಸಿದ ಬ್ರೇಕ್ ಪ್ಯಾರಾಚೂಟ್‌ಗಳು ಪುಷ್ಪಕ್ ನೌಕೆಯನ್ನು ಪೂರ್ವಯೋಜಿತ ದೂರದಲ್ಲಿ ನಿಲ್ಲಿಸಲು ಯಶಸ್ವಿಯಾಗಿ ಸಹಾಯ ಮಾಡಿದೆ ಎಂದು ಶ್ಲಾಘಿಸಿದ್ದಾರೆ.

ಇನ್ನು ಪುಷ್ಪಕ್ ನೌಕೆಗೆ ಬ್ರೇಕ್ ಪ್ಯಾರಾಚೂಟ್ ತಯಾರಿಸಿದ ತಂಡದ ಸದಸ್ಯರಾದ ವಿವೇಕ್ ಮರೋಥಿಯಾ, ಡಾ.ಮಹೇಂದ್ರ ಪ್ರತಾಪ್, ಸುಧಾಕರ ಪ್ರಸಾದ್, ಪ್ರದೀಪ್ ಪಾಲ್, ಅನಿಮೇಶ್ ಸಿಂಗ್, ಮನೋಜ್ ಕುಮಾರ್ ಅಲ್ಲದೇ ಪ್ಯಾರಾಚೂಟ್ ವಿನ್ಯಾಸ ತಂಡ ಹಾಗೂ ಪಿಇಟಿ ತಂಡದ ಸದಸ್ಯರನ್ನು ಎಡಿಆರ್​ಡಿಇ ನಿರ್ದೇಶಕ ಡಾ.ಮನೋಜ್ ಕುಮಾರ್ ಅಭಿನಂದಿಸಿದ್ದಾರೆ.

ಇದನ್ನೂ ಓದಿ: ಇಸ್ರೋ ಮತ್ತೊಂದು ಮೈಲಿಗಲ್ಲು: ಚಿತ್ರದುರ್ಗದಲ್ಲಿ ಮರುಬಳಕೆ ಉಡಾವಣಾ ವಾಹನದ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ - RLV LEX 03 mission

ETV Bharat Logo

Copyright © 2025 Ushodaya Enterprises Pvt. Ltd., All Rights Reserved.