ETV Bharat / technology

iQOO Z9 ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ 17,999 ರೂ.ಗಳಿಂದ ಆರಂಭ

ಐಕ್ಯೂ ತನ್ನ ಹೊಸ ಸ್ಮಾರ್ಟ್​ಫೋನ್ ಝಡ್ 9 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

iQOO launches new smartphone under its Z series in India

author img

By ETV Bharat Karnataka Team

Published : Mar 12, 2024, 4:42 PM IST

ನವದೆಹಲಿ: ಜಾಗತಿಕ ಸ್ಮಾರ್ಟ್ ಫೋನ್ ಬ್ರಾಂಡ್ ಐಕ್ಯೂ ಮಂಗಳವಾರ ತನ್ನ ಝಡ್ ಸರಣಿಯ ಝಡ್ 9 ಶ್ರೇಣಿಯ ಅಡಿ ಹೊಸ ಸ್ಮಾರ್ಟ್ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ಸ್ಮಾರ್ಟ್ ಫೋನ್ ಬ್ರಷ್ ಗ್ರೀನ್ ಮತ್ತು ಗ್ರ್ಯಾಫೀನ್ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಇದು ಐಕ್ಯೂ ಇ- ಸ್ಟೋರ್ ಮತ್ತು Amazon ಡಾಟ್ in ಎರಡರಲ್ಲೂ 8 ಜಿಬಿ + 128 ಜಿಬಿಗೆ 17,999 ರೂ ಮತ್ತು 8 ಜಿಬಿ + 256 ಜಿಬಿಗೆ 19,999 ರೂ. ಬೆಲೆ ಶ್ರೇಣಿಗಳಲ್ಲಿ ಲಭ್ಯವಿದೆ. ಮಾರ್ಚ್ 13 ರಿಂದ ಅಮೆಜಾನ್ ಪ್ರೈಮ್ ಗ್ರಾಹಕರಿಗೆ ಮತ್ತು ಮಾರ್ಚ್ 14 ರಿಂದ ಇತರ ಎಲ್ಲ ಗ್ರಾಹಕರಿಗೆ ಲಭ್ಯವಿರುತ್ತದೆ.

"ಜೆನ್ ಝಡ್ ಯುವಜನತೆಗಾಗಿ ವಿನ್ಯಾಸಗೊಳಿಸಲಾದ ಈ ಸಾಧನವು ಶೈಲಿ ಮತ್ತು ಕಾರ್ಯಕ್ಷಮತೆಯ ಸಂಯೋಜನೆಯಾಗಿದೆ. ಕಾಲೇಜು ವಿದ್ಯಾರ್ಥಿಗಳು ಹೆಮ್ಮೆಯಿಂದ ಬಳಸಬಹುದಾದ ಪರಿಪೂರ್ಣ ಸ್ಮಾರ್ಟ್​ಫೋನ್ ಇದಾಗಿದೆ" ಎಂದು ಐಕ್ಯೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಪುನ್ ಮರ್ಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸ್ಮಾರ್ಟ್ ಫೋನ್ segment -first 50 ಎಂಪಿ ಸೋನಿ ಐಎಂಎಕ್ಸ್ 882 ಒಐಎಸ್ ಹಿಂಭಾಗದ ಕ್ಯಾಮೆರಾ ಹೊಂದಿದೆ. ಹೆಚ್ಚುವರಿಯಾಗಿ 16 ಎಂಪಿ ಮುಂಭಾಗದ ಕ್ಯಾಮೆರಾ ಮತ್ತು 2 ಎಂಪಿ ಬೊಕೆ ಕ್ಯಾಮೆರಾ ಸೆಟಪ್ ಇದರಲ್ಲಿದೆ. ಈ ಸಾಧನವು ಭಾವಚಿತ್ರ ಛಾಯಾಗ್ರಹಣದಲ್ಲಿ (portrait photography) 2x ಜೂಮ್ ಸಾಮರ್ಥ್ಯಗಳನ್ನು ಸಹ ನೀಡುತ್ತದೆ. ಇದು ಚಿತ್ರದ ತೀಕ್ಷ್ಣತೆ ಮತ್ತು ಸಂಯೋಜನೆ ಹೆಚ್ಚಿಸುತ್ತದೆ.

ಐಕ್ಯೂ ಝಡ್9 ಮೀಡಿಯಾಟೆಕ್ ಡೈಮೆನ್ಸಿಟಿ 7200 5ಜಿ 4 ಎನ್ಎಂ ಪ್ರೊಸೆಸರ್​ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಒಐಎಸ್ ಸಾಮರ್ಥ್ಯದೊಂದಿಗೆ 4 ಕೆ ವೀಡಿಯೊ ರೆಕಾರ್ಡಿಂಗ್ ಮತ್ತು 1800 ನಿಟ್ಸ್ ಗರಿಷ್ಠ ಪ್ರಕಾಶದೊಂದಿಗೆ ಪ್ರಕಾಶಮಾನವಾದ 120 ಹರ್ಟ್ಜ್ ಅಮೋಲೆಡ್ ಡಿಸ್ ಪ್ಲೇ ಹೊಂದಿದೆ.

ಇದಲ್ಲದೆ, ಶಕ್ತಿಯುತ 44 ವ್ಯಾಟ್ ಫ್ಲ್ಯಾಶ್ ಚಾರ್ಜ್ ತಂತ್ರಜ್ಞಾನ ಹೊಂದಿರುವ ಈ ಫೋನ್​ನಲ್ಲಿ 5000 ಎಂಎಎಚ್ ಬ್ಯಾಟರಿ ಇದೆ. ಹೀಗಾಗಿ ಇದನ್ನು ತಡೆರಹಿತವಾಗಿ ಒಂದೇ ಚಾರ್ಜ್​ನಲ್ಲಿ ದಿನವಿಡೀ ಬಳಸಬಹುದು. ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 14 ಆಧಾರಿತ ಫನ್ ಟಚ್ ಓಎಸ್ 14 ಅನ್ನು ಒಳಗೊಂಡಿದೆ.

ಇದನ್ನೂ ಓದಿ : ಸ್ಯಾಮ್​ಸಂಗ್ Galaxy S24 ಸ್ಮಾರ್ಟ್​​ಫೋನ್ ಮಾರಾಟ ಶೇ 8ರಷ್ಟು ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.