ETV Bharat / technology

ಐಒಎಸ್​ 18 ಅಪ್ಡೇಟ್​: ಐಫೋನ್​ಗಳಲ್ಲಿ ಕನ್ನಡ ಸೇರಿ ಭಾರತೀಯ ಭಾಷೆ ಬಳಸುವ ವೈಶಿಷ್ಟ್ಯ ಪರಿಚಯಿಸಿದ ಆ್ಯಪಲ್ - Indian Languages in iPhone - INDIAN LANGUAGES IN IPHONE

ಆ್ಯಪಲ್​ ಹೊಸ ಅಪ್ಡೇಟ್​ ಮೂಲಕ ತನ್ನ ಫೋನ್​ಗಳಲ್ಲಿ ಭಾರತೀಯ ಭಾಷೆಗಳನ್ನು ಬೆಂಬಲಿಸುವ ವೈಶಿಷ್ಟ್ಯಗಳನ್ನು ಪರಿಚಯಿಸಿದೆ.

ಐಫೋನ್​ಗಳಲ್ಲಿ ಭಾರತೀಯ ಭಾಷೆ ಬಳಸುವ ವೈಶಿಷ್ಟ್ಯ ಪರಿಚಯಿಸಿದ ಆ್ಯಪಲ್
ಐಫೋನ್​ಗಳಲ್ಲಿ ಭಾರತೀಯ ಭಾಷೆ ಬಳಸುವ ವೈಶಿಷ್ಟ್ಯ ಪರಿಚಯಿಸಿದ ಆ್ಯಪಲ್ (IANS)
author img

By ETV Bharat Karnataka Team

Published : Jul 2, 2024, 5:32 PM IST

ನವದೆಹಲಿ: ಭಾರತದಲ್ಲಿ ಬಳಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಆ್ಯಪಲ್ ತನ್ನ ಸ್ಮಾರ್ಟ್​ಫೋನ್​ಗಳಲ್ಲಿ ಹಲವಾರು ಭಾರತೀಯ ಭಾಷೆಗಳನ್ನು ಬಳಸುವ ವೈಶಿಷ್ಟ್ಯಗಳನ್ನು ಪರಿಚಯಿಸಿದೆ.

ತನ್ನ ಹೊಸ ಐಒಎಸ್ ಅಪ್ಡೇಟ್​ ಮೂಲಕ ಹೊಸ ಭಾರತೀಯ ಫಾಂಟ್​ಗಳು ಮತ್ತು ಸಂಖ್ಯೆಗಳು, ಇನ್ಪುಟ್​ಗಾಗಿ ಬಹುಭಾಷಾ ಕೀಬೋರ್ಡ್​, ಸುಧಾರಿತ ಭಾಷೆ ಆಧರಿತ ಹುಡುಕಾಟ ಮತ್ತು ಬಹುಭಾಷಾ ಸಿರಿ ಅಸಿಸ್ಟಂಟ್​ ಬೆಂಬಲದೊಂದಿಗೆ ಫೋನ್ ಮತ್ತು ಸಂವಹನದಾದ್ಯಂತ ಗ್ರಾಹಕರಿಗೆ ಮತ್ತಷ್ಟು ಅನುಕೂಲ ಕಲ್ಪಿಸಲು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ ಎಂದು ಕಂಪನಿ ಮಂಗಳವಾರ ತಿಳಿಸಿದೆ.

"ಐಒಎಸ್ 18 ಅಪ್ಡೇಟ್​ ಐಫೋನ್ ಅನ್ನು ಹಿಂದೆಂದಿಗಿಂತಲೂ ಹೆಚ್ಚು ವೈಯಕ್ತಿಕ, ಸಮರ್ಥ ಮತ್ತು ಬುದ್ಧಿವಂತ ಸಾಧನವನ್ನಾಗಿ ಮಾಡುತ್ತದೆ. ಇದು ಹೆಚ್ಚಿನ ಕಸ್ಟಮೈಸೇಶನ್ ಆಯ್ಕೆಗಳು, ಫೋಟೋ ಅಪ್ಲಿಕೇಶನ್​ನ ಅತಿದೊಡ್ಡ ಮರುವಿನ್ಯಾಸ, ಮೇಲ್​ನಲ್ಲಿ ತಮ್ಮ ಇನ್ ಬಾಕ್ಸ್ ಅನ್ನು ನಿರ್ವಹಿಸಲು ಹೊಸ ಮಾರ್ಗಗಳು ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡಿರುವ ಪ್ರಮುಖ ಅಪ್ಡೇಟ್​ ಆಗಿದೆ" ಎಂದು ಆ್ಯಪಲ್ ಹೇಳಿಕೆಯಲ್ಲಿ ತಿಳಿಸಿದೆ.

ಇತ್ತೀಚಿನ ಅಪ್ಡೇಟ್​ನಲ್ಲಿ ಬಳಕೆದಾರರು ಈಗ ಅರೇಬಿಕ್, ಅರೇಬಿಕ್ ಇಂಡಿಕ್, ಬಾಂಗ್ಲಾ, ದೇವನಾಗರಿ, ಗುಜರಾತಿ, ಗುರುಮುಖಿ, ಕನ್ನಡ, ಮಲಯಾಳಂ, ಮೀಟಿ, ಒಡಿಯಾ, ಓಲ್ ಚಿಕಿ, ತೆಲುಗು ಹೀಗೆ 12 ಭಾರತೀಯ ಭಾಷೆಗಳಲ್ಲಿ ಭಾರತೀಯ ಸಂಖ್ಯೆಗಳೊಂದಿಗೆ ಲಾಕ್ ಸ್ಕ್ರೀನ್​​ನಲ್ಲಿ ಟೈಮ್ ಅನ್ನು ಕಸ್ಟಮೈಸ್ ಮಾಡಬಹುದು ಮತ್ತು ತಮ್ಮ ಕಾಂಟ್ಯಾಕ್ಟ್ ಪೋಸ್ಟರ್​ಗಳಿಗೆ ಗ್ರಾಹಕರು ತಾವು ಬಯಸುವ ಲುಕ್ ನೀಡಲು ಫಾಂಟ್ ಬಣ್ಣ ಮತ್ತು ಕಾಂಟ್ರಾಸ್ಟ್​ಗಳನ್ನು ಸರಿ ಹೊಂದಿಸಬಹುದು.

ಐಒಎಸ್ 18 ಭಾರತೀಯ ಇಂಗ್ಲಿಷ್​ನಲ್ಲಿ ಲೈವ್ ವಾಯ್ಸ್​ಮೇಲ್ ಟ್ರಾನ್ಸ್​ ಸ್ಕ್ರಿಪ್ಷನ್, ಲೈವ್ ಕಾಲರ್ ಐಡಿ ಬೆಂಬಲ, ಜೊತೆಗೆ ಸ್ಮಾರ್ಟ್ ಕಾಲ್ ಹಿಸ್ಟರಿ ಹುಡುಕಾಟ ಮತ್ತು ಹೊಸ ಫೋನ್ ಕೀಪ್ಯಾಡ್ ಹುಡುಕಾಟ ಮತ್ತು ಡಯಲಿಂಗ್ ವೈಶಿಷ್ಟ್ಯಗಳನ್ನು ಕೂಡ ಪರಿಚಯಿಸಿದೆ. ಹೊಸ ಅಪ್ಡೇಟ್​ನಿಂದ ಬಳಕೆದಾರರು ಈಗ ಬಹುಭಾಷಾ ಕೀಬೋರ್ಡ್ ಅನ್ನು ಬಳಸಲು ಸಾಧ್ಯವಾಗಲಿದೆ.

ಐಫೋನ್ 12 ಮತ್ತು ನಂತರದ ಫೋನ್ ಬಳಕೆದಾರರು ಈಗ ಇಂಗ್ಲಿಷ್​ನಲ್ಲಿ ಲ್ಯಾಟಿನ್ ಅಕ್ಷರಗಳೊಂದಿಗೆ ಮತ್ತು ತ್ರಿಭಾಷಾ ಮುನ್ಸೂಚನೆ ಟೈಪಿಂಗ್ ಅನುಭವಕ್ಕಾಗಿ ಎರಡು ಹೆಚ್ಚುವರಿ ಭಾರತೀಯ ಭಾಷೆಗಳೊಂದಿಗೆ ಫೊನೆಟಿಕ್ ಆಗಿ ಟೈಪ್ ಮಾಡಬಹುದು. ಇದು ಮೆಸೇಜ್​ಗಳು, ನೋಟ್​ಗಳು ಮತ್ತು ಬಳಕೆದಾರರು ಕೀಬೋರ್ಡ್ ಬಳಸಬಹುದಾದ ಕಡೆಯೆಲ್ಲ ಲಭ್ಯವಿದೆ. ಬಹುಭಾಷಾ ಕೀಬೋರ್ಡ್ ಕ್ವಿಕ್ ಪಾಥ್ ಮತ್ತು ಎಮೋಜಿ ಪ್ರಿಡಿಕ್ಷನ್ ಅನ್ನು ಸಹ ಬೆಂಬಲಿಸುತ್ತದೆ.

ಇದನ್ನೂ ಓದಿ : ಟಿಎನ್​ಟಿಗಿಂತ ದುಪ್ಪಟ್ಟು ಶಕ್ತಿಶಾಲಿ 'ಸೆಬೆಕ್ಸ್​ 2' ಸ್ಪೋಟಕ ಸಿದ್ಧ: ಭಾರತದ ಸಮರ ಸನ್ನದ್ಧತೆಗೆ ಮತ್ತೊಂದು ಗರಿ - Sebex 2 Explosives Technology

ETV Bharat Logo

Copyright © 2024 Ushodaya Enterprises Pvt. Ltd., All Rights Reserved.