ETV Bharat / technology

ಕೈಗೆಟುಕುವ ದರದಲ್ಲಿ ಮೊದಲ ಬಾರಿಗೆ ಫೋಲ್ಡಬಲ್ ಫೋನ್​ ಪರಿಚಯಿಸಿದ ಇನ್ಫಿನಿಕ್ಸ್! - INFINIX FOLDABLE MOBILE LAUNCH

Infinix First Foldable Mobile Launch: ಮೊಟ್ಟ ಮೊದಲ ಬಾರಿಗೆ ಇನ್ಫಿನಿಕ್ಸ್ ಫ್ಲಿಪ್​ ಫೋನ್​ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದು ಕೈಗೆಟುಕುವ ದರದಲ್ಲಿ, ಇದರ ವಿಶೇಷತೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ..

INFINIX ZERO FLIP  INFINIX ZERO FLIP PRICE  INFINIX ZERO FLIP FEATURES  INFINIX ZERO FLIP PHONE RATE
ಮೊಟ್ಟ ಮೊದಲ ಬಾರಿಗೆ ಫೋಲ್ಡಬಲ್ ಫೋನ್​ ಪರಿಚಯಿಸಿದ ಇನ್ಫಿನಿಕ್ಸ್ (Infinix)
author img

By ETV Bharat Tech Team

Published : Oct 19, 2024, 2:55 PM IST

Infinix First Foldable Mobile Launch: ಟೆಕ್ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಗ್ರಾಹಕರ ಅಭಿರುಚಿ ಮತ್ತು ಆಸಕ್ತಿಗೆ ಅನುಗುಣವಾಗಿ ಕಾಲಕಾಲಕ್ಕೆ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಬೇಕು. ಪ್ರಸ್ತುತ, ಫೋಲ್ಡಬಲ್​ ಮೊಬೈಲ್‌ಗಳು ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿದೆ. ಇವುಗಳ ಕ್ರೇಜ್ ಬೇರೆ ಲೆವೆಲ್. ಇದರೊಂದಿಗೆ ಎಲ್ಲಾ ಮೊಬೈಲ್ ತಯಾರಿಕಾ ಕಂಪನಿಗಳು ಅದೇ ಫೀಚರ್‌ಗಳನ್ನು ಹೊಂದಿರುವ ಇತ್ತೀಚಿನ ಫೋಲ್ಡಬಲ್ ಮೊಬೈಲ್‌ಗಳನ್ನು ಮಾರುಕಟ್ಟೆಗೆ ತರಲು ಆಸಕ್ತಿ ತೋರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಇನ್ಫಿನಿಕ್ಸ್ ತನ್ನ ಮೊದಲ ಫ್ಲಿಪ್ ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

Infinix Zero Flip ಈ ಸ್ಮಾರ್ಟ್‌ಫೋನ್ ಅನ್ನು ಎರಡು ಬಣ್ಣಗಳಲ್ಲಿ ಹೊರತಂದಿದೆ. ಕಂಪನಿಯು ಇದನ್ನು 50MP ರಿಯರ್​ ಕ್ಯಾಮೆರಾದೊಂದಿಗೆ ಆಕರ್ಷಕ ನೋಟದಲ್ಲಿ ವಿನ್ಯಾಸಗೊಳಿಸಿದೆ. 8GB + 512GB ವೇರಿಯಂಟ್‌ನೊಂದಿಗೆ ಮಾರುಕಟ್ಟೆಗೆ ಬಂದಿರುವ ಈ ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳೋಣ..

ಇನ್ಫಿನಿಕ್ಸ್ ಝೀರೋ ಫ್ಲಿಪ್ ಫೋನ್ ವೈಶಿಷ್ಟ್ಯಗಳು:

  • ಡ್ಯುಯಲ್ ಸಿಮ್ ಸೌಲಭ್ಯ
  • ಬ್ಯಾಟರಿ: 4,720mAh
  • ಪ್ರೊಸೆಸರ್: ಮೀಡಿಯಾ ಟೆಕ್ ಡೈಮೆನ್ಶನ್ 8200
  • ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್​
  • ರಿಯರ್​ ಕ್ಯಾಮೆರಾ: 50MP
  • ಅಲ್ಟ್ರಾ ವೈಡ್ ಕ್ಯಾಮೆರಾ: 50MP
  • ಸೆಲ್ಫಿ ಕ್ಯಾಮೆರಾ: ಎಕ್ಸ್​ಟರ್ನಲ್​ ಸ್ಕ್ರೀನ್​ನಲ್ಲಿ 50MP
  • 70W ವೇಗದ ಚಾರ್ಜಿಂಗ್
  • ಈ ಹೊಸ ಫೋಲ್ಡಬಲ್ ಮೊಬೈಲ್‌ನಿಂದ 4K ವರೆಗೆ ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದು ಎಂದು Infinix ಹೇಳಿದೆ.

ಮುಂಭಾಗದಲ್ಲಿ:

  • ಫ್ರಂಟ್​ ಡಿಸ್​​ಪ್ಲೇ: 6.9 ಇಂಚಿನ ಫುಲ್​ HD+ LTPO AMOLED
  • ರಿಫ್ರೆಶ್ ರೇಟ್​: 120Hz
  • ಟಚ್​ ಸ್ಲಾಂಪಿಂಗ್​ ರೇಟ್​: 360Hz

ಹಿಂಭಾಗದಲ್ಲಿ:

  • ರಿಯರ್​ ಡಿಸ್​ಪ್ಲೇ: 3.64 ಇಂಚಿನ AMOLED
  • ರಿಫ್ರೆಶ್ ರೇಟ್​: 120Hz
  • ಟಚ್​ ಸ್ಲಾಂಪಿಂಗ್​ ರೇಟ್​: 240Hz
  • Infinix Zero Flip ಮೊಬೈಲ್‌ನಲ್ಲಿ ಬಣ್ಣದ ಆಯ್ಕೆಗಳು
  • ಬ್ಲಾಸಮ್ ಗ್ಲೋ
  • ರಾಕ್ ಬ್ಲ್ಯಾಕ್

Infinix Zero Flip ಬೆಲೆ: ರೂ. 49,999

5 ಸಾವಿರ ರೂಪಾಯಿಗಳ ಭಾರೀ ರಿಯಾಯಿತಿ: ಡ್ಯುಯಲ್ ಸಿಮ್ ಸೌಲಭ್ಯವನ್ನು ಹೊಂದಿರುವ ಈ ಹೊಸ Infinix Zero Flip ಮೊಬೈಲ್ Android 14 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಹೊಸ Infinix Zero Flip ಸ್ಮಾರ್ಟ್‌ಫೋನ್‌ನ ಮಾರಾಟವು ಅಕ್ಟೋಬರ್ 24 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಾರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ. ಎಸ್‌ಬಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಖರೀದಿ ಮಾಡುವ ಗ್ರಾಹಕರು ರೂ.5,000 ರಿಯಾಯಿತಿ ಪಡೆಯಬಹುದು ಎಂದು ಇನ್ಫಿನಿಕ್ಸ್ ಪ್ರಕಟಿಸಿದೆ. ಅಂದ್ರೆ ನೀವು ಈ ಮೊಬೈಲ್​ ಅನ್ನು ಕೇವಲ 44,999 ರೂ.ಗೆ ಖರೀದಿಸಬಹುದಾಗಿದೆ.

ಓದಿ: ಭಾರತದ ಡ್ರೋನ್ ನಗರವಾಗಲಿದೆ 'ಅಮರಾವತಿ'!; ದೇಶದಲ್ಲಿಯೇ ಮೊದಲ ಬಾರಿಗೆ 5,500 ಡ್ರೋನ್‌ಗಳ ಪ್ರದರ್ಶನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.