Infinix XPad LTE launched: Infinix ಭಾರತದಲ್ಲಿ ತನ್ನ ಮೊದಲ ಟ್ಯಾಬ್ಲೆಟ್ XPad ಅನ್ನು ಬಿಡುಗಡೆ ಮಾಡಿದೆ. Infinix XPad LTE ಕಂಪನಿಯ ಪ್ರವೇಶ ಮಟ್ಟದ ಟ್ಯಾಬ್ ಆಗಿದೆ. ಇದು ಮೆಟಲ್ ಯುನಿಬಾಡಿ ವಿನ್ಯಾಸದೊಂದಿಗೆ ಮೂಡಿ ಬಂದಿದೆ. Infinix Xpad LTE 11 ಇಂಚಿನ FullHD+ ಡಿಸ್ಪ್ಲೇ, 7000mAh ಬ್ಯಾಟರಿ ಮತ್ತು 128GB ಸ್ಟೋರೇಜ್ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
Infinix XPad LTE ಬೆಲೆ: Infinix XPad LTE ನ 4 GB RAM ಮತ್ತು 128 GB ಸ್ಟೋರೇಜ್ ರೂಪಾಂತರದ ಬೆಲೆ 10,999 ರೂ.ಗೆ ಮಾರಾಟ ಮಾಡುಲಾಗುತ್ತಿದೆ. ಈ ಟ್ಯಾಬ್ಲೆಟ್‌ನ ಮಾರಾಟವು 26 ಸೆಪ್ಟೆಂಬರ್ 2024 ರಂದು ಮಧ್ಯಾಹ್ನ 12 ಗಂಟೆಯಿಂದ ಪ್ರಾರಂಭವಾಗುತ್ತದೆ. ಟ್ಯಾಬ್ಲೆಟ್ ಅನ್ನು ಟೈಟಾನ್ ಗೋಲ್ಡ್, ಸ್ಟೆಲ್ಲರ್ ಗ್ರೇ ಮತ್ತು ಫ್ರಾಸ್ಟ್ ಬ್ಲೂ ಬಣ್ಣಗಳಲ್ಲಿ ಖರೀದಿಸಬಹುದು. ಬ್ಯಾಂಕ್ ಆಫರ್ಗಳೊಂದಿಗೆ ಈ ಹ್ಯಾಂಡ್ ಸೆಟ್ ಅನ್ನು 9,899 ರೂ.ಗೆ ಪಡೆಯುವ ಅವಕಾಶವಿದೆ.
Infinix XPad LTE ವೈಶಿಷ್ಟ್ಯಗಳು: Infinix XPad ನ Wi-Fi ಮತ್ತು LTE ರೂಪಾಂತರಗಳನ್ನು ಮೆಟಲ್ ಯುನಿಬಾಡಿ ವಿನ್ಯಾಸದೊಂದಿಗೆ ಪರಿಚಯಿಸಲಾಗಿದೆ. ಈ ಸಾಧನವು 11 ಇಂಚಿನ FullHD + 90 Hz ರಿಫ್ರೆಶ್ ರೇಟ್ ಡಿಸ್ಪ್ಲೇ ಹೊಂದಿದೆ. ಡಿಸ್ಪ್ಲೇ 1200 x 1920 ಪಿಕ್ಸೆಲ್ಸ್ ರೆಸಲ್ಯೂಶನ್ ನೀಡುತ್ತದೆ. ಅಷ್ಟೇ ಅಲ್ಲ ಡಿಸ್ಪಲ್ 83 ಪ್ರತಿಶತದಷ್ಟು ಸ್ಕ್ರೀನ್-ಟು-ಬಾಡಿ ಅನುಪಾತ ಹೊಂದಿದೆ ಮತ್ತು 440 nits ನ ಗರಿಷ್ಠ ಬ್ರೈಟ್ನೆಸ್ ಹೊಂದಿದೆ.
7000mAh ಬ್ಯಾಟರಿ: MediaTek Helio G99 ಪ್ರೊಸೆಸರ್ Infinix XPad LTE ನಲ್ಲಿ ಲಭ್ಯವಿದೆ. ಸಾಧನವನ್ನು ಪವರ್ ಮಾಡಲು, 18W USB ಟೈಪ್-C ಚಾರ್ಜಿಂಗ್ ಅನ್ನು ಸಪೋರ್ಟ್ನ 7000mAh ಬ್ಯಾಟರಿಯನ್ನು ಒದಗಿಸಲಾಗಿದೆ. ಈ ಟ್ಯಾಬ್ಲೆಟ್ 4 GB RAM ಮತ್ತು 8 GB RAM ಜೊತೆಗೆ 128 ಮತ್ತು 256 GB ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿದೆ. ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್ ವಿಸ್ತರಿಸಬಹುದಾಗಿದೆ.
ಡಿಟಿಎಸ್ ಆಡಿಯೊ ಪ್ರೊಸೆಸಿಂಗ್: ಇನ್ಫಿನಿಕ್ಸ್‌ನ ಈ ಕೈಗೆಟುಕುವ ಟ್ಯಾಬ್ಲೆಟ್‌ನಲ್ಲಿ ಡಿಟಿಎಸ್ ಆಡಿಯೋ ಪ್ರೊಸೆಸಿಂಗ್, 4 ಸ್ಪೀಕರ್‌ಗಳು ಮತ್ತು 4 ಸೌಂಡ್ ಮೋಡ್‌ಗಳನ್ನು ಅಳವಡಿಸಲಾಗಿದೆ. ಈ ಟ್ಯಾಬ್ಲೆಟ್ 8 ಮೆಗಾಪಿಕ್ಸೆಲ್ ಹಿಂಭಾಗ ಮತ್ತು 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಈ ಸಾಧನದಲ್ಲಿ ChatGPT ಚಾಲಿತ ಫೋಲಾಕ್ಸ್ ಧ್ವನಿ ಸಹಾಯಕ ಲಭ್ಯವಿದೆ. Xpad G-Sensor, E-compass, Gyroscope ಹೊಂದಿದೆ. ಕನೆಕ್ಟಿವಿಟಿಗಾಗಿ ಇದು 2G, 3G, 4G, Wi-Fi 5, ಬ್ಲೂಟೂತ್ 5.0 ಮತ್ತು 3.5 mm ಆಡಿಯೋ ಜಾಕ್ ಅನ್ನು ನೀಡಲಾಗಿದೆ. ಸಾಧನವು Android 14 ಆಧಾರಿತ XOS ನೊಂದಿಗೆ ಬರುತ್ತದೆ. ಈ ಕೈಗೆಟುಕುವ ಟ್ಯಾಬ್ಲೆಟ್ 257.04 x 168.62 x 7.58 ಮಿಮೀ ಅಳತೆ ಮತ್ತು 496 ಗ್ರಾಂ ತೂಗುತ್ತದೆ.