ETV Bharat / technology

ಕಾರ್ಯಾಚರಣೆ ಬಂದ್​ ಮಾಡಿದ ಬೆಂಗಳೂರು ಮೂಲದ ಸ್ವದೇಶಿ ಆ್ಯಪ್​ 'ಕೂ' - Koo shut down opertaion

author img

By ETV Bharat Karnataka Team

Published : Jul 3, 2024, 3:22 PM IST

ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಸಂಸ್ಥೆ ಹಲವು ಕಂಪನಿಗಳೊಂದಿಗೆ ನಡೆಸಿದ ಸಹಭಾಗಿತ್ವದ ಮಾತುಕತೆ ವಿಫಲವಾದ ಹಿನ್ನೆಲೆ ಸಂಸ್ಥೆ ಈ ನಿರ್ಧಾರ ಪ್ರಕಟಿಸಿದೆ.

indias Microblogging app Koo shut down after partnership talks fell through
ಕೂ ಆ್ಯಪ್​ (IANS)

ನವದೆಹಲಿ: ಟ್ವಿಟರ್​ (ಈಗಿನ ಎಕ್ಸ್​)ಗೆ ಪರ್ಯಾಯವಾಗಿ ಹುಟ್ಟಿಕೊಂಡಿದ್ದ ಸ್ವದೇಶಿ ಮೈಕ್ರೋ ಬ್ಲಾಗಿಂಗ್​​ ಆ್ಯಪ್​ 'ಕೂ' ಇದೀಗ ತನ್ನ ಕಾರ್ಯಾಚರಣೆ ನಿಲ್ಲಿಸಲು ಸಜ್ಜಾಗಿದೆ. ಕನ್ನಡ ಸೇರಿದಂತೆ 10 ಸ್ಥಳೀಯ ಭಾಷೆಗಳಲ್ಲಿ ಸೇವೆ ನೀಡುತ್ತಿದ್ದ ಈ ಸಾಮಾಜಿಕ ಜಾಲತಾಣದ ವೇದಿಕೆ 2020ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿಕೊಂಡಿತ್ತು.

ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಸಂಸ್ಥೆ ಹಲವು ಕಂಪನಿಗಳೊಂದಿಗೆ ನಡೆಸಿದ ಸಹಭಾಗಿತ್ವದ ಮಾತುಕತೆ ವಿಫಲವಾದ ಹಿನ್ನೆಲೆ ಈ ಸಾಮಾಜಿಕ ಜಾಲತಾಣ ಸಾರ್ವಜನಿಕ ಸೇವೆಯಿಂದ ಹೊರ ನಡೆದಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಘೋಷಿಸಿದ್ದಾರೆ.

ಲಿಂಕ್ಡಿನ್​ನಲ್ಲಿ ಈ ಕುರಿತು ಪ್ರಕಟಿಸಿರುವ ಸಂಸ್ಥೆಯ ಸಂಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ ಮತ್ತು ಮಯಾಂಕ್​ ಬುಡಲತ್ಕಾ, ಅನೇಕ ದೊಡ್ಡ ದೊಡ್ಡ ಇಂಟರ್ನೆಟ್​ ಕಂಪನಿಗಳು, ಸಂಘಟಿತ ಸಂಸ್ಥೆ ಮತ್ತು ಮಾಧ್ಯಮ ಸಂಸ್ಥೆಗಳೊಂದಿಗೆ ಪಾಲುದಾರಿಕೆಗೆ ಹುಡುಕಾಟ ನಡೆಸಿದೆವು. ಆದರೆ, ಇದು ಫಲ ನೀಡಲಿಲ್ಲ. ಬಹುತೇಕರು ನಮ್ಮ ಬಳಕೆದಾರ ರಚಿತ ವಿಷಯ ಮತ್ತು ಸಾಮಾಜಿಕ ಸಂಸ್ಥೆಯ ಕೆಲಸದ ಪ್ರವೃತ್ತಿಯೊಂದಿಗೆ ಕಾರ್ಯ ನಿರ್ವಹಿಸುವ ಆಸಕ್ತಿ ತೋರಲಿಲ್ಲ ಎಂದು ತಿಳಿಸಿದ್ದಾರೆ.

ಟೈಗರ್​ ಗ್ಲೋಬಲ್​ ಮತ್ತು ಎಕ್ಸೆಲ್​ ಸೇರಿದಂತೆ ಪ್ರಮುಖ ಕಂಪನಿಗಳ ಹೂಡಿಕೆಯಿಂದ ಕೂ 60 ಮಿಲಿಯನ್​ ಡಾಲರ್​ ಸಂಗ್ರಹಿಸಿದರೂ ಸಂಸ್ಥೆ ಕಳೆದ ವರ್ಷಗಳಲ್ಲಿ ಬಳಕೆದಾರರ ಮತ್ತು ಆದಾಯದ ವಿಚಾರದಲ್ಲಿ ಕೆಲವು ಸವಾಲಗಳನ್ನು ಎದುರಿಸಿ, ಆರ್ಥಿಕ ಸಂಕಷ್ಟಕ್ಕೆ ಒಳಗಾಗಿತ್ತು. ಕಳೆದ ಫೆಬ್ರವರಿಯಲ್ಲಿ ಡೈಲಿಹಂಟ್​ ಮಾಧ್ಯಮ ಸಂಸ್ಥೆ ಕೂವನ್ನು ಕೊಳ್ಳುವ ಕುರಿತು ಅಂತಿಮ ಹಂತದ ಮಾತುಕತೆ ನಡೆಸಿತು. ಆದರೆ, ಇದು ಕೂಡ ಫಲ ನೀಡಲಿಲ್ಲ.

ಇನ್ನು ಪೋಸ್ಟ್​ನಲ್ಲಿ ಮುಂದುವರೆದು ತಿಳಿಸಿರುವ ಸಂಸ್ಥಾಪಕರು, ನಮ್ಮ ಉತ್ತುಂಗ ಕಾಲದಲ್ಲಿ ನಾವು ದಿನಕ್ಕೆ 2.1 ಮಿಲಿಯನ್​ ಸಕ್ರಿಯ ಬಳಕೆದಾರರನ್ನು ಹೊಂದಿದ್ದು, 10 ಮಿಲಿಯನ್​ ಮಾಸಿಕ ಸಕ್ರಿಯ ಬಳಕೆದಾರರಿದ್ದರು. ಅನೇಕ ಕ್ಷೇತ್ರಗಳಲ್ಲಿ ಪ್ರಮುಖ ವ್ಯಕ್ತಿಗಳು ಸೇರಿದಂತೆ 9000 ವಿಐಪಿಗಳು ಕೂಡ ಬಳಕೆದಾರರಾಗಿದ್ದರು. ಜುಲೈ 2022ರಲ್ಲಿ ಆ್ಯಪ್​ ಮಾಸಿಕ ಸಕ್ರಿಯ ಬಳಕೆದಾರರು 9 ಮಿಲಿಯನ್​ಗಿಂತ ಹೆಚ್ಚಿದ್ದರು. ಆದರೂ ಸಂಸ್ಥೆಯು ಹೆಚ್ಚುವರಿ ಧನ ಸಂಗ್ರಹ ನಡೆಸುವಲ್ಲಿ ವಿಫಲವಾಗಿತ್ತು. ಇದರ ಪರಿಣಾಮವಾಗಿ ವೆಚ್ಚ ಕಡಿತಗೊಳಿಸಲು ಉದ್ಯೋಗಿಗಳ ಸಂಖ್ಯೆಯಲ್ಲೂ ಕಡಿತ ಮಾಡಲಾಗಿತ್ತು. (ಐಎಎನ್​ಎಸ್​)

ಇದನ್ನೂ ಓದಿ:ವಿದೇಶಿ ಆ್ಯಪ್​​ಗಳ ನಡುವೆ ಜನಪ್ರಿಯತೆ ಪಡೆಯುತ್ತಿರುವ ಕನ್ನಡದ 'ಕೂ' ಆ್ಯಪ್​​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.