ನವದೆಹಲಿ: ಭಾರತೀಯ ಆಟಿಕೆ ಉದ್ಯಮವು ಕಳೆದ 10 ವರ್ಷಗಳಿಂದಿಚೆಗೆ ಅಭೂತಪೂರ್ವ ಬೆಳವಣಿಗೆ ಕಂಡಿದೆ. ಇದರ ರಫ್ತು ಮೌಲ್ಯ 523.24 ಮಿಲಿಯನ್ ಡಾಲರ್ ತಲುಪಿದೆ. ಸರ್ಕಾರದ ಉಪಕ್ರಮಗಳ ಮೂಲಕ 517.71 ಮಿಲಿಯನ್ ಡಾಲರ್ ಆಮದನ್ನು ತಗ್ಗಿಸಿದೆ.
ಕೆಲವು ವರ್ಷಗಳ ಹಿಂದೆ ಭಾರತದ ಆಟಿಕೆ ಮಾರುಕಟ್ಟೆಯಲ್ಲಿ ಚೀನಾ ನಿರ್ಮಿತ ವಸ್ತುಗಳು ಅಧಿಪತ್ಯ ಸಾಧಿಸಿದ್ದವು. ಆದರೆ, ಇದೀಗ ಚಿತ್ರಣ ಬದಲಾಗಲಾರಂಭಿಸಿದೆ. 2011-12ರ ಆರ್ಥಿಕ ವರ್ಷದಲ್ಲಿ ಭಾರತ 422.79 ಮಿಲಿಯನ್ ಆಟಿಕೆಗಳನ್ನು ಆಮದು ಮಾಡಿಕೊಂಡಿತ್ತು. ಇದೇ ವೇಳೆ ರಫ್ತು ಮಾಡಿದ ಉತ್ಪನ್ನಗಳ ಮೇಲಿನ ಅಂಕಿ ಅಂಶದ ಅರ್ಧಕ್ಕಿಂತ ಕಡಿಮೆ ಇದೆ.
ದೇಶಿಯ ಆಟಿಕೆ ಉದ್ಯಮವು ವಿಸ್ತರಣೆ ಕಾಣುತ್ತಿದ್ದು, ಅಮೆರಿಕ, ಬ್ರಿಟನ್, ಜರ್ಮನಿ, ದಿ ನೆದರ್ಲ್ಯಾಂಡ್, ಡೆನ್ಮಾರ್ಕ್ ಮತ್ತು ಚೀನಾಗೆ ರಫ್ತಾಗುತ್ತಿವೆ. ಮುಂದಿನ ಹಂತದಲ್ಲಿ ಆನ್‌ಲೈನ್ ಮಾಧ್ಯಮಗಳ ಪರಿಣಾಮಕಾರಿ ಬಳಕೆಯ ಮೂಲಕ ಅಂತಾರಾಷ್ಟ್ರೀಯ ಗ್ರಾಹಕರನ್ನು ತಲುಪಲಾಗುವುದು ಎಂದು ಸರ್ಕಾರ ತಿಳಿಸಿದೆ.
ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುವಂತೆ, ಭಾರತದ ಆಟಿಕೆ ಉದ್ಯಮದ ರಫ್ತುಗಳಲ್ಲಿ ವಸ್ತುಗಳು ಕಾಣುತ್ತಿವೆ. ಉತ್ಪಾದನಾ ಪರಿಸರ ವ್ಯವಸ್ಥೆಯ ದೃಢತೆ ಮತ್ತು ಕಡಿಮೆ ಆಮದು ಅವಲಂಬನೆಯನ್ನು ಇದು ಪ್ರತಿಬಿಂಬಿಸುತ್ತದೆ.
ಆಟಿಕೆ ಉದ್ಯಮದಲ್ಲಿ ಉತ್ತಮ ಪರಿಸರ ವ್ಯವಸ್ಥೆ ಸೃಷ್ಟಿಸಲು ಬಲವಾದ ಬದ್ಧತೆಯ ಭಾಗವಾಗಿ, ಸರ್ಕಾರವು 'ಭಾರತದಲ್ಲಿ ತಯಾರಿಸಿದ' ಆಟಿಕೆಗಳಿಗೆ ಜಾಗತಿಕ ಮಾರುಕಟ್ಟೆಯನ್ನು ಸೃಷ್ಟಿಸುತ್ತಿದೆ. ಇದು ದೀರ್ಘಾವಧಿಯ ದೃಷ್ಟಿಯೊಂದಿಗೆ ಇದನ್ನು ಚಾಂಪಿಯನ್ ವಲಯದಲ್ಲಿ ಗುರುತಿಸುವುದಾಗಿದೆ.
ಕಡ್ಡಾಯ ಗುಣಮಟ್ಟದ ಮಾನದಂಡಗಳು, ಕಸ್ಟಮ್ಸ್ ಸುಂಕದಲ್ಲಿ ಹೆಚ್ಚಳ ಮತ್ತು ಆಟಿಕೆಗಳ ಮೇಲಿನ ರಾಷ್ಟ್ರೀಯ ಕ್ರಿಯಾ ಯೋಜನೆಯಂತಹ ಸರ್ಕಾರದ ಉಪಕ್ರಮಗಳನ್ನು ನಡೆಸಿದೆ. ಇದರಿಂದಾಗಿ ಉತ್ತಮ ಗುಣಮಟ್ಟದ ಉತ್ಪನ್ನಗಳ ತಯಾರಿಕೆಯಲ್ಲಿ ಸಹಾಯ ಆಗಿದ್ದು, ಜಾಗತಿಕ ವೇದಿಕೆಯಲ್ಲಿ ಭಾರತದ ಆಟಿಕೆಗಳು ಮೆಚ್ಚುಗೆ ಗಳಿಸಿವೆ.
2014-15ರಿಂದ 2022-23ರ ವರೆಗೆ ಭಾರತ ಆಟಿಕೆ, ಗೇಮ್ಸ್, ಕ್ರೀಡಾ ಲೇಖನಗಳನ್ನು ಶೇ. 239ರಷ್ಟು ಹೆಚ್ಚಿಸಿದೆ. ಇದೇ ವೇಳೆ ಆಮದು ಶೇ. 52ರಷ್ಟು ಕುಸಿದಿದೆ ಎಂದು ಉದ್ಯಮದ ಅಂಕಿ ಅಂಶಗಳು ತಿಳಿಸಿವೆ.
ಸದ್ಯ ಭಾರತದ ಆಟಿಕೆ ಉದ್ಯಮದ ಮಾರುಕಟ್ಟೆ ಗಾತ್ರ 1.7 ಬಿಲಿಯನ್ ಡಾಲರ್ ಆಗಿದ್ದು, 2032ರ ಹೊತ್ತಿಗೆ ಇದರ ವಾರ್ಷಿಕ ಬೆಳವಣಿಗೆ ದರ 10.5ರಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ.
ದೇಶಿಕ ಆಟಿಕೆ ರಫ್ತುಗಾರರು ಹೇಳುವಂತೆ, ಅಮೆರಿಕ, ಬ್ರಿಟನ್, ದಕ್ಷಿಣ ಆಫ್ರಿಕಾ ಮತ್ತು ಜರ್ಮನಿ ತಮ್ಮ ಉತ್ಪನ್ನದ ಬಗ್ಗೆ ಆಸಕ್ತಿಯನ್ನು ಹೊಂದಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಗ್ರಾಹಕರಿಂದ ಆಕ್ಷೇಪ: ಎಐ ರಚಿತ ಚಿತ್ರ ತೆಗೆದುಹಾಕಲು ನಿರ್ಧರಿಸಿದ ಜೊಮ್ಯಾಟೊ