ETV Bharat / technology

ಗಗನಯಾನ ಯೋಜನೆಗಾಗಿ ಸಿದ್ಧಗೊಳ್ಳುತ್ತಿರುವ ಭಾರತೀಯ ಗಗನಯಾತ್ರಿಗಳು; ಇಲ್ಲಿದೆ ಸಂಪೂರ್ಣ ಮಾಹಿತಿ - space flight project - SPACE FLIGHT PROJECT

ಅಂದಾಜು 9,000 ಕೋಟಿ ರೂಪಾಯಿ ವೆಚ್ಚದ ಗಗನಯಾನ ಯೋಜನೆ ಹಾಗೂ ಅದಕ್ಕೆ ಆಯ್ಕೆಯಾಗಿರುವ ನಾಲ್ವರು ಗಗನಯಾತ್ರಿಗಳ ತಯಾರಿಯ ಬಗ್ಗೆ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ ಅವರು ಈಟಿವಿ ಭಾರತ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

Indian astronauts getting ready for space flight project
ಗಗನಯಾನ ಯೋಜನೆಗಾಗಿ ಸಿದ್ಧಗೊಳ್ಳುತ್ತಿರುವ ಭಾರತೀಯ ಗಗನಯಾತ್ರಿಗಳು
author img

By ETV Bharat Karnataka Team

Published : Mar 28, 2024, 4:55 PM IST

Updated : Mar 28, 2024, 9:39 PM IST

ಫೆಬ್ರವರಿ 27, 2024ರಂದು ಕೇರಳಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಗಗನಯಾನ ಯೋಜನೆಯ ಗಗನಯಾತ್ರಿಗಳಾಗಿ ಆಯ್ಕೆಯಾಗಿರುವ ನಾಲ್ವರು ಭಾರತೀಯ ವಾಯುಪಡೆಯ ಪೈಲಟ್‌ಗಳ ಹೆಸರುಗಳನ್ನು ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ಗಗನಯಾನ ಯೋಜನೆಯ ಅಭಿವೃದ್ಧಿಯನ್ನು ಗಮನಿಸಿ, ಗಗನಯಾತ್ರಿಗಳಾಗಿ ಆಯ್ಕೆಗೊಂಡ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರಿಗೆ "ಆ್ಯಸ್ಟ್ರೋನಾಟ್ ವಿಂಗ್ಸ್" ಬ್ಯಾಜ್ ಕೂಡಾ ನೀಡಿದ್ದಾರೆ.

2024-25ರಲ್ಲಿ ಉಡಾವಣೆಗೊಳ್ಳಲಿರುವ ಗಗನಯಾನ ಯೋಜನೆ ಮೂರು ದಿನಗಳ ಕಾಲ ಭೂಮಿಯಿಂದ 400 ಕಿಲೋಮೀಟರ್‌ಗಳಷ್ಟು ಎತ್ತರಕ್ಕೆ ಗಗನಯಾತ್ರಿಗಳನ್ನು ಒಯ್ದು, ಅಲ್ಲಿಂದ ಮರಳಿ ಭೂಮಿಗೆ ಬಂದು, ಹಿಂದೂ ಮಹಾಸಾಗರದಲ್ಲಿ ಇಳಿಯಲಿದೆ. ಈ ಯೋಜನೆಗೆ ಅಂದಾಜು 9,000 ಕೋಟಿ ರೂಪಾಯಿ (1 ಬಿಲಿಯನ್ ಡಾಲರ್) ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

girish linganna
ಗಿರೀಶ್ ಲಿಂಗಣ್ಣ

ಈಗ ಹೆಸರಿಸಲಾಗಿರುವ ನಾಲ್ವರು ಗಗನಯಾತ್ರಿಗಳ ಪೈಕಿ, ಮೂವರು ಗಗನಯಾತ್ರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅವರು ಮೂವರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಸಲುವಾಗಿ, ಇಸ್ರೋದ ಅತ್ಯಂತ ಶಕ್ತಿಶಾಲಿ ರಾಕೆಟ್ ಆದ ಎಲ್‌ವಿಎಂ ಎಂಕೆ -3 ಅನ್ನು ಮಾನವ ಪ್ರಯಾಣಕ್ಕೆ ಸೂಕ್ತವಾಗುವಂತೆ ಮಾರ್ಪಾಡು ಮಾಡಿದ್ದು, ಅದನ್ನು ಎಚ್ಎಲ್‌ವಿಎಂ-3 ಎಂದು ಹೆಸರಿಸಲಾಗಿದೆ.

ಯೋಜನೆಯ ವಿನ್ಯಾಸ: ಭೂಮಿಯ ಕಕ್ಷೆಗೆ ಪ್ರವೇಶಿಸಲಿರುವ ಸಂಪೂರ್ಣ ಬಾಹ್ಯಾಕಾಶ ನೌಕೆಯನ್ನು ಆರ್ಬಿಟಲ್ ಮಾಡ್ಯುಲ್ ಎನ್ನಲಾಗಿದ್ದು, ಇದರಲ್ಲಿ ಸರ್ವಿಸ್ ಮಾಡ್ಯುಲ್ ಮತ್ತು ಪಿರಮಿಡ್ ಆಕಾರದ, ಸಣ್ಣದಾದ ಕ್ರ್ಯೂ ಮಾಡ್ಯುಲ್ (ಸಿಬ್ಬಂದಿ ಮಾಡ್ಯುಲ್) ಇದ್ದು, ಇದರಲ್ಲಿ ಗಗನಯಾತ್ರಿಗಳು ಇರಲಿದ್ದಾರೆ. ಬಾಹ್ಯಾಕಾಶ ನೌಕೆ ಕಕ್ಷೆಗೆ ಪ್ರವೇಶಿಸಲು ಮತ್ತು ಕಕ್ಷೆಯಿಂದ ಮರಳಿ ಭೂಮಿಗೆ ಇಳಿಯಲು ನೆರವಾಗುವ ರೀತಿಯಲ್ಲಿ ಸರ್ವಿಸ್ ಮಾಡ್ಯುಲ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಭೂಮಿಯ ಕಕ್ಷೆಗೆ ಪ್ರವೇಶಿಸುವ ಮುನ್ನ, ಆರ್ಬಿಟಲ್ ಮಾಡ್ಯುಲ್ ಎಲ್‌ವಿಎಂ3 ನಿಂದ ಬೇರ್ಪಡಲಿದೆ. ಆ ಬಳಿಕ, ಸರ್ವಿಸ್ ಮಾಡ್ಯುಲ್‌ನ ಪ್ರೊಪಲ್ಷನ್ ಸಿಸ್ಟಮ್ ಒಳಗಿರುವ ಐದು ಇಂಜಿನ್‌ಗಳು ಚಾಲನೆಗೊಂಡು, ಆರ್ಬಿಟಲ್ ಮಾಡ್ಯುಲ್ ಅನ್ನು ಕಕ್ಷೆಗೆ ಜೋಡಿಸಲಿವೆ. ಭೂಮಿಗೆ ಮರಳಿ ಪ್ರಯಾಣಿಸುವಾಗ, ಸರ್ವಿಸ್ ಮಾಡ್ಯುಲ್ ಒಳಗಿರುವ ಇಂಜಿನ್‌ಗಳು ಮರಳಿ ಚಾಲ್ತಿಗೊಂಡು, ಕಕ್ಷೆಯಿಂದ‌ ಕೆಳಗಿಳಿದು, ಮಾಡ್ಯುಲ್‌ಗಳು ಭೂಮಿಗೆ ಮರಳುವಂತೆ ಮಾಡುತ್ತವೆ.

ಕ್ರ್ಯೂ ಮಾಡ್ಯುಲ್ ಭೂಮಿಯ ವಾತಾವರಣಕ್ಕೆ ಮರಳಲು ಆರಂಭಗೊಳ್ಳುವ ತನಕ ಸರ್ವಿಸ್ ಮಾಡ್ಯುಲ್ ಅದಕ್ಕೆ ಸಂಪರ್ಕಿತವಾಗಿರುತ್ತದೆ. ಬಳಿಕ ಸರ್ವಿಸ್ ಮಾಡ್ಯುಲ್ ಬೇರ್ಪಟ್ಟು, ವಾತಾವರಣಕ್ಕೆ ಮರಳುವಾಗ ಉಂಟಾಗುವ ಹೆಚ್ಚಿನ ಉಷ್ಣತೆಗೆ ನಾಶ ಹೊಂದುತ್ತದೆ. ಆ ಮೂಲಕ ಕ್ರ್ಯೂ ಮಾಡ್ಯುಲ್ ಮತ್ತಷ್ಟು ಭೂಮಿಯೆಡೆಗೆ ಇಳಿಯಲು ನೆರವಾಗುತ್ತದೆ. ಕ್ರ್ಯೂ ಮಾಡ್ಯುಲ್ ಎನ್ವಿರಾನ್ಮೆಂಟಲ್ ಕಂಟ್ರೋಲ್ ಮತ್ತು ಲೈಫ್ ಸಪೋರ್ಟ್ ಸಿಸ್ಟಮ್‌ಗಳನ್ನು ಹೊಂದಿದ್ದು, ಅವುಗಳು ಆಮ್ಲಜನಕವನ್ನು ಉತ್ಪಾದಿಸುತ್ತವೆ, ಒತ್ತಡವನ್ನು ನಿಯಂತ್ರಿಸುತ್ತವೆ ಮತ್ತು ತಾಪಮಾನವನ್ನು ನಿಯಂತ್ರಿಸುತ್ತವೆ. ಈ ಕ್ರ್ಯೂ ಮಾಡ್ಯುಲ್ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತದೆ.

ಕ್ರ್ಯೂ ಮಾಡ್ಯುಲ್ ಕ್ರ್ಯೂ ಎಸ್ಕೇಪ್ ಸಿಸ್ಟಮ್ (ಸಿಇಎಸ್) ಎಂಬ ಸುರಕ್ಷಾ ವಿಧಾನವನ್ನು ಹೊಂದಿದ್ದು, ಇದು ಉಡಾವಣೆಯ ಸಂದರ್ಭದಲ್ಲಿ ಕಾರ್ಯಾಚರಿಸುತ್ತದೆ. ಭೂಮಿಯ ವಾತಾವರಣದಲ್ಲಿರುವಾಗ ಏನಾದರೂ ತುರ್ತು ಸ್ಥಿತಿ ಎದುರಾದರೆ ಇದನ್ನು ಬಳಸಲಾಗುತ್ತದೆ. ಸುರಕ್ಷಿತವಾಗಿ ಭೂಮಿಗೆ ಇಳಿಯುವ ಸಲುವಾಗಿ ಕ್ರ್ಯೂ ಮಾಡ್ಯುಲ್ ಮೂರು ರೀತಿಯ, ಹತ್ತು ಪ್ಯಾರಾಶೂಟ್‌ಗಳನ್ನು ಹೊಂದಿದೆ. ಕ್ರ್ಯೂ ಮಾಡ್ಯುಲ್ ಭೂಮಿಯ ವಾತಾವರಣಕ್ಕೆ ಮರಳಿದಾಗ ಅವುಗಳು ಕಾರ್ಯಾಚರಣೆ ಆರಂಭಿಸಿ, ಕ್ರ್ಯೂ ಮಾಡ್ಯುಲ್ ವೇಗವನ್ನು ಬಹಳಷ್ಟು ತಗ್ಗಿಸಿ, ಅದು ಸುಗಮವಾಗಿ ಸಮುದ್ರದ ಮೇಲೆ ಇಳಿಯುವಂತೆ ಮಾಡುತ್ತವೆ.

2025ರ ಉಡಾವಣಾ ವೇಳಾಪಟ್ಟಿ: 2025ರ ಕೊನೆಯ ಭಾಗದಲ್ಲಿ ಉಡಾವಣೆಗೆ ಸಿದ್ಧವಾಗಿರುವ ಇಸ್ರೋ, ಇದಕ್ಕಾಗಿ 20ಕ್ಕೂ ಹೆಚ್ಚು ಸಂಕೀರ್ಣ ಪ್ರಯೋಗಗಳನ್ನು ನಡೆಸಲಿದೆ. ಇದರಲ್ಲಿ ರೋಬೋಟ್‌ಗಳನ್ನು ಒಳಗೊಂಡ ಆರಂಭಿಕ ಪರೀಕ್ಷಾ ವಾಹನ ಹಾರಾಟವೂ ಸೇರಿದೆ. ಹಾರಾಟದಲ್ಲಿ ಭಾಗಿಯಾಗುವ ಪ್ರತಿಯೊಂದು ವ್ಯವಸ್ಥೆಯ ಕಾರ್ಯಾಚರಣೆ ಪರಿಶೀಲಿಸಲು ಟಿವಿ-ಡಿ1, ಡಿ2, ಡಿ3, ಮತ್ತು ಡಿ4 ಎಂಬ ನಾಲ್ಕು ಟೆಸ್ಟ್ ಅಬಾರ್ಟ್ ಯೋಜನೆಗಳು ಮತ್ತು ಎರಡು ಮಾನವ ರಹಿತ ಯೋಜನೆಗಳಾದ ಎಲ್‌ವಿಎಂ3-ಜಿ1 ಮತ್ತು ಜಿ2ಗಳನ್ನು ಕೈಗೊಳ್ಳಲಾಗುತ್ತದೆ.

ಯೋಜನಾ ತರಬೇತಿ: ಗಗನಯಾನ ಯೋಜನೆಗೆ ಆಯ್ಕೆಗೊಂಡ ನಾಲ್ವರು ಗಗನಯಾತ್ರಿಗಳು ಪ್ರಸ್ತುತ ಇಸ್ರೋ ನೂತನವಾಗಿ ಬೆಂಗಳೂರಿನಲ್ಲಿ ಸ್ಥಾಪಿಸಿರುವ ಗಗನಯಾತ್ರಿಗಳ ತರಬೇತಿ ಕೇಂದ್ರದಲ್ಲಿ ತೀವ್ರ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇದರಲ್ಲಿ ಅವರು ಬಾಹ್ಯಾಕಾಶ ನೌಕೆಯೊಡನೆ ಪರಿಚಯ ಹೊಂದುತ್ತಿದ್ದು, ಅದರ ಕಾರ್ಯಾಚರಣೆಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಅವರ ತರಬೇತಿ ಬಾಹ್ಯಾಕಾಶ ಹಾರಾಟಕ್ಕೆ ಸಂಬಂದಿಸಿದ ಇಂಜಿನಿಯರಿಂಗ್ ತರಬೇತಿ, ಪ್ರೊಪಲ್ಷನ್ ಮತ್ತು ಏರೋಡೈನಾಮಿಕ್ಸ್ ತರಬೇತಿ, ಯೋಗ ತರಗತಿಗಳು, ಮತ್ತು ಬಾಹ್ಯಾಕಾಶ ನೌಕೆಯ ಅಲುಗಾಟ, ನಿಲ್ಲುವಿಕೆ, ವೇಗ ಮತ್ತು ಇತರ ಅಂಶಗಳನ್ನು ಪ್ರದರ್ಶಿಸುವ ಸಿಮ್ಯುಲೇಟರ್‌ ತರಬೇತಿಗಳನ್ನು ಒಳಗೊಂಡಿದೆ.

ಈ ಹಂತದ ತರಬೇತಿಗೆ ಮುನ್ನ, ಗಗನಯಾತ್ರಿಗಳು ರಷ್ಯಾದ ಮಾಸ್ಕೋ ಒಬ್ಲಾಸ್ಟ್​ನಲ್ಲಿರುವ ಗಗಾರಿನ್ ಕಾಸ್ಮೋನಾಟ್ ಟ್ರೈನಿಂಗ್ ಸೆಂಟರ್‌ನಲ್ಲಿ ಆರಂಭಿಕ ತರಬೇತಿ ಪಡೆದುಕೊಂಡಿದ್ದರು. ಈ ತರಬೇತಿ 2020ರಲ್ಲಿ ಆರಂಭಗೊಂಡಿದ್ದು, ಕೋವಿಡ್ ಸಾಂಕ್ರಾಮಿಕದಾದ್ಯಂತ ಮುಂದುವರಿದಿತ್ತು. ಇದಾದ ಬಳಿಕ, 2021ರಲ್ಲಿ, ಬೆಂಗಳೂರಿನ ಇಸ್ರೋ ಘಟಕದಲ್ಲಿ ಹೆಚ್ಚುವರಿ ತರಬೇತಿ ಆರಂಭಗೊಂಡಿತು. ಗಗನಯಾತ್ರಿಗಳು ನ್ಯಾವಿಗೇಶನ್ (ಸಂಚರಣೆ) ಸಿಸ್ಟಮ್‌ಗಳು ಮತ್ತು ಕ್ರ್ಯೂ ಮಾಡ್ಯುಲ್ ಒಳಗಿರುವ ಬಯೋ ಶೌಚಾಲಯಗಳು ಸೇರಿದಂತೆ, ವಿವಿಧ ವ್ಯವಸ್ಥೆಗಳು ಮತ್ತು ಉಪ ವ್ಯವಸ್ಥೆಗಳ ತರಬೇತಿ ಪಡೆಯುತ್ತಿದ್ದಾರೆ. ಈ ಕ್ರ್ಯೂ ಮಾಡ್ಯುಲ್ ಅನ್ನು ಗಗನಯಾನ ವೆಹಿಕಲ್ ಎಂದೂ ಕರೆಯಲಾಗುತ್ತದೆ.

ಗಗಾರಿನ್ ಸೆಂಟರ್‌ನಲ್ಲಿ ಭಾರತೀಯ ಗಗನಯಾತ್ರಿಗಳು ಶೂನ್ಯ ಗುರುತ್ವಾಕರ್ಷಣೆಯಲ್ಲಿ ಬದುಕುವುದು ಮತ್ತು ಕೆಲಸ ಕಾರ್ಯಗಳನ್ನು ನಡೆಸುವುದು, ವಾತಾವರಣದ ಒತ್ತಡದಲ್ಲಿನ ಬದಲಾವಣೆಗೆ ಹೊಂದಿಕೊಳ್ಳುವುದು, ಸಂಪೂರ್ಣ ಏಕಾಂಗಿತನವನ್ನು ನಿಭಾಯಿಸುವುದರ ತರಬೇತಿ ಪಡೆದರು. ಅವರು ಪ್ಯಾರಾಬಾಲಿಕ್ ಹಾರಾಟದ ಅಭ್ಯಾಸಕ್ಕೆ ಹೆಚ್ಚಿನ ಸಮಯ ನೀಡಿದ್ದರು. ಪ್ಯಾರಾಬಾಲಿಕ್ ಹಾರಾಟದಲ್ಲಿ, 45 ಡಿಗ್ರಿ ಕೋನದಲ್ಲಿ ಮೇಲಕ್ಕೇರಿ, ಕೆಳಗೆ ಇಳಿಯಲಾಗುತ್ತದೆ. ಇದು ಪ್ರಯಾಣಿಕರಿಗೆ ಸಣ್ಣ ಅವಧಿಯ ತೂಕಾರಾಹಿತ್ಯ ಸ್ಥಿತಿ ಮತ್ತು ಹೆಚ್ಚಿನ ಗುರುತ್ವಾಕರ್ಷಣೆಯ ಅನುಭವ ನೀಡುತ್ತದೆ. ಇದು ಒಂದು ರೀತಿ ರೋಲರ್ ಕೋಸ್ಟರ್‌ನಲ್ಲಿ ಚಲಿಸುವ ಅನುಭವದ ರೀತಿಯಲ್ಲಿರುತ್ತದೆ.

ಅದರೊಡನೆ, ಗಗನಯಾತ್ರಿಗಳಿಗೆ ವಿಭಿನ್ನವಾದ, ಪರ್ವತ ಪ್ರದೇಶಗಳು, ಅರಣ್ಯಗಳು, ಜೌಗು ಪ್ರದೇಶಗಳು, ಮರುಭೂಮಿ, ಆರ್ಕ್‌ಟಿಕ್ ಮತ್ತು ಸಮುದ್ರ ಪ್ರದೇಶಗಳು ಸೇರಿದಂತೆ, ಅತ್ಯಂತ ಕಠಿಣ ಹವಾಮಾನ ಮತ್ತು ವಾತಾವರಣದ ಸನ್ನಿವೇಶಗಳಲ್ಲೂ ಬದುಕುಳಿಯುವ ತರಬೇತಿ ನೀಡಲಾಯಿತು. ಭೂಮಿಯ ವಾತಾವರಣಕ್ಕೆ ಮರಳುವ ಸಂದರ್ಭದಲ್ಲಿ, ಅವರೇನಾದರೂ ಉದ್ದೇಶಿತ ತಾಣದ ಬದಲು ಬೇರೆಡೆ ಇಳಿಯುವಂತಾದರೆ ಪಾರಾಗಲು ಈ ತರಬೇತಿ ನೆರವಾಗಲಿದೆ. ಈ ತರಬೇತಿಗಳೊಡನೆ, ಗಗನಯಾತ್ರಿಗಳಿಗೆ ರಷ್ಯಾದಲ್ಲಿ ಕಕ್ಷೀಯ ಚಲನೆಯ ತತ್ವಗಳು, ಆಕಾಶ ಕಾಯಗಳನ್ನು ಗುರುತಿಸಿ ಚಲಿಸುವ "ಆ್ಯಸ್ಟ್ರೋ ನ್ಯಾವಿಗೇಶನ್" ತರಬೇತಿಗಳನ್ನೂ ನೀಡಲಾಗಿದೆ.

ಗಗನಯಾತ್ರಿಗಳು ಭಾರತದಲ್ಲಿ ತರಬೇತಿ ಮುಂದುವರಿಸಿದ್ದು, ಮೂವರು ಗಗನಯಾತ್ರಿಗಳು ಉಳಿದುಕೊಳ್ಳುವ ಪ್ರದೇಶವಾದ ಬಾಹ್ಯಾಕಾಶ ನೌಕೆಯ ಕ್ರ್ಯೂ ಮಾಡ್ಯುಲ್ ಅನ್ನು ಅಭ್ಯಸಿಸುತ್ತಿದ್ದಾರೆ.

ಕ್ರ್ಯೂ ಮಾಡ್ಯುಲ್ ಒಳಗೇನಿದೆ?: ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಗಗನಯಾತ್ರಿಗಳು ಯೋಜನೆಗೆ ಅವಶ್ಯಕವಾದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಬೇತಿಗಳನ್ನು ಪಡೆಯುತ್ತಿದ್ದಾರೆ. ಈ ತರಬೇತಿಯಲ್ಲಿ ಬಾಹ್ಯಾಕಾಶ ಹಾರಾಟಕ್ಕೆ ಸಂಬಂಧಿಸಿದ ಇಂಜಿನಿಯರಿಂಗ್ ಮೂಲಭೂತ ಪಾಠಗಳಾದ ಪ್ರೊಪಲ್ಷನ್ ಮತ್ತು ಏರೋಡೈನಾಮಿಕ್ಸ್, ಗಗನಯಾನ ಯೋಜನೆಯ ಉಪಕರಣಗಳ ಅಭ್ಯಾಸಗಳೂ ಸೇರಿವೆ. ಗಗನಯಾತ್ರಿಗಳು ತಮ್ಮ ತಾಂತ್ರಿಕ ಅಧ್ಯಯನದ ಜೊತೆಗೆ, ಯೋಗಾಭ್ಯಾಸ ಸೇರಿದಂತೆ, ದೈಹಿಕ ಮತ್ತು ಮಾನಸಿಕ ವ್ಯಾಯಾಮಗಳು, ಏರೋ ಮೆಡಿಕಲ್ ತರಬೇತಿಗಳನ್ನೂ ತಮ್ಮ ತರಬೇತಿಯ ಭಾಗವಾಗಿ ಹೊಂದುತ್ತಿದ್ದಾರೆ.

ಹಾರಾಟ ಪ್ರಕ್ರಿಯೆಗೆ ಸಂಬಂಧಿಸಿದ ತರಬೇತಿಯ ಪಠ್ಯ ವಿಚಾರಗಳು, ಕನಿಷ್ಠ ನಾಲ್ಕು ರೀತಿಯ ಸಿಮ್ಯುಲೇಟರ್‌ ತರಬೇತಿಗಳನ್ನು ಒಳಗೊಂಡಿದೆ. ಅವೆಂದರೆ: ಇಂಡಿಪೆಂಡೆಂಟ್‌ ಟ್ರೈನಿಂಗ್ ಸಿಮ್ಯುಲೇಟರ್‌, ವರ್ಚುಯಲ್ ಟ್ರೈನಿಂಗ್ ಸಿಮ್ಯುಲೇಟರ್‌, ಸ್ಟ್ಯಾಟಿಕ್ ಮಾಕಪ್ ಸಿಮ್ಯುಲೇಟರ್‌ ಮತ್ತು ಡೈನಾಮಿಕ್ ಟ್ರೈನಿಂಗ್ ಸಿಮ್ಯುಲೇಟರ್‌.

ಇಂಡಿಪೆಂಡೆಂಟ್ ಟ್ರೈನಿಂಗ್ ಸಿಮ್ಯುಲೇಟರ್‌: ಇದು ಕ್ರ್ಯೂ ಮಾಡ್ಯುಲ್‌ನ ಯೂಸರ್ ಇಂಟರ್‌ಫೇಸ್ ಅನ್ನು ಹೋಲುವ ರೀತಿಯಲ್ಲಿ ವಿನ್ಯಾಸಗೊಳಿಸಿರುವ ಡೆಸ್ಕ್‌ಟಾಪ್ ವ್ಯವಸ್ಥೆಯಾಗಿದೆ. ಇದು ಕ್ರ್ಯೂ ಮಾಡ್ಯುಲ್ ಅನ್ನು ಹೋಲುವ ಡಿಸ್‌ಪ್ಲೇ ಸಿಸ್ಟಮ್‌ಗಳು, ಎಚ್ಚರಿಕೆ ಸಂಕೇತಗಳು, ಮತ್ತು ನಿಯಂತ್ರಣ ಗುಂಡಿಗಳನ್ನು ಹೊಂದಿದ್ದು, ವಿವಿಧ ಚಟುವಟಿಕೆಗಳಿಗೆ ಅವಶ್ಯಕ ತರಬೇತಿ ಒದಗಿಸುತ್ತದೆ.

ವರ್ಚುಯಲ್ ಟ್ರೈನಿಂಗ್ ಸಿಮ್ಯುಲೇಟರ್‌: ಈ ಸಿಮ್ಯುಲೇಟರ್‌ಗಳು ವಿಆರ್ ಹೆಡ್‌ಸೆಟ್‌ಗಳನ್ನು ಬಳಸಿ, ಗಗನಯಾತ್ರಿಗಳಿಗೆ ವಿಶೇಷ ಸಾಫ್ಟ್‌ವೇರ್ ಮತ್ತು ಕೈಯ ನಿಯಂತ್ರಕಗಳನ್ನು ಒದಗಿಸಿ, ಅವರು ಕ್ರ್ಯೂ ಮಾಡ್ಯುಲ್‌ನ ಒಳ ಭಾಗಕ್ಕೆ, ಅದರ ಇಲೆಕ್ಟ್ರಾನಿಕ್ ಬಿಡಿಭಾಗಗಳು ಮತ್ತು ವಿವಿಧ ವಸ್ತುಗಳನ್ನು ಅಳವಡಿಸಿರುವ ರೀತಿಗೆ ಹೊಂದಿಕೊಳ್ಳಲು ನೆರವಾಗುತ್ತದೆ.

ಸ್ಟ್ಯಾಟಿಕ್ ಮಾಕಪ್ ಸಿಮ್ಯುಲೇಟರ್‌:ಈ ಸಿಮ್ಯುಲೇಟರ್‌, ಕ್ರ್ಯೂ ಮಾಡ್ಯುಲ್ ಒಳಗಿರುವ ಏವಿಯಾನಿಕ್ಸ್, ವಾತಾವರಣ ನಿಯಂತ್ರಣ ಮತ್ತು ಜೀವ ಬೆಂಬಲ (ಲೈಫ್ ಸಪೋರ್ಟ್) ಸಿಸ್ಟಮ್‌ಗಳನ್ನು ಹೋಲುತ್ತದೆ. ಇದು ಕ್ರ್ಯೂ ಮಾಡ್ಯುಲ್ ಒಳಗಿರುವ ವಾತಾವರಣದ ಅನುಭವ ನೀಡಿ, ಗಗನಯಾತ್ರಿಗಳಿಗೆ ಅದರ ವಿನ್ಯಾಸ, ಮತ್ತು ವಿವಿಧ ನಿಯಂತ್ರಕಗಳನ್ನು ಪರಿಚಯಿಸುತ್ತದೆ. ಇದು ವಾಸ್ತವ ಕ್ರ್ಯೂ ಮಾಡೆಲ್ ಅನ್ನು ಅತ್ಯಂತ ನಿಖರವಾಗಿ ಹೋಲುತ್ತದೆ.

ಡೈನಾಮಿಕ್ ಟ್ರೈನಿಂಗ್ ಸಿಮ್ಯುಲೇಟರ್‌: ಈ ಸಿಮ್ಯುಲೇಟರ್‌ ಗಗನಯಾತ್ರಿಗಳು ವಾಸ್ತವ ಬಾಹ್ಯಾಕಾಶ ಹಾರಾಟದಲ್ಲಿ ಎದುರಿಸಬಹುದಾದ ದೈಹಿಕ ಅನುಭವಗಳನ್ನು ಹೋಲುವ ರೀತಿಯಲ್ಲಿನ ಅನುಭವ ನೀಡುತ್ತದೆ. ಇದರಲ್ಲಿ ಗಗನಯಾತ್ರಿಗಳಿಗೆ ಬಾಹ್ಯಾಕಾಶದಲ್ಲಿನ ಜರ್ಕ್‌ಗಳು, ಅಲುಗಾಟಗಳು, ರಾಕೆಟ್ ಹಂತಗಳ ಬೇರ್ಪಡುವಿಕೆಯಿಂದ ಉಂಟಾಗುವ ಹೆಚ್ಚಿನ ವೇಗ ಮತ್ತು ಬ್ರೇಕ್, ಪ್ಯಾರಾಶೂಟ್‌ಗಳ ತೆರೆಯುವಿಕೆ, ಭೂಸ್ಪರ್ಶ ಮತ್ತು ಸಿಇಎಸ್ ಕಾರ್ಯಾಚರಿಸುವಿಕೆಯ ಅನುಭವಗಳು ಲಭಿಸುತ್ತವೆ.

ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಇದನ್ನೂ ಓದಿ: ಚಂದ್ರಯಾನ-3 ನೌಕೆ ಇಳಿದ ಸ್ಥಳಕ್ಕೆ 'ಶಿವ ಶಕ್ತಿ' ಹೆಸರಿಡಲು ಖಗೋಳ ಒಕ್ಕೂಟ ಅಸ್ತು - Chandrayaan Landing Site

Last Updated : Mar 28, 2024, 9:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.