ನವದೆಹಲಿ: ಕೃತಕ ಬುದ್ಧಿಮತ್ತೆ (AI) ಮತ್ತು ಜನರೇಟಿವ್ AI (GenAI)ಗಳ ಅಳವಡಿಕೆಯು ವಿಶ್ವಾದ್ಯಂತ ಹೆಚ್ಚಾಗುತ್ತಿದ್ದಂತೆ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ವೇಗಗೊಳಿಸಲು ಮತ್ತು ಅದರ ಬಳಕೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಲಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
ದೂರಸಂಪರ್ಕ ಇಲಾಖೆಯ (DoT) ಕಾರ್ಯದರ್ಶಿ ಡಾ.ನೀರಜ್ ಮಿತ್ತಲ್ ಪ್ರತಿಕ್ರಿಯಿಸಿ, ಜಾಗತಿಕವಾಗಿ AI ಮತ್ತು GenAI ವೇಗವಾಗಿ ವಿಕಸನಗೊಳ್ಳುತ್ತಿವೆ. ಪ್ರಪಂಚ ಅದರ ಗಮನಾರ್ಹ ಸಾಮರ್ಥ್ಯವನ್ನು ವೀಕ್ಷಿಸುತ್ತಿದೆ ಎಂದು ಹೇಳಿದ್ದಾರೆ.
ಈ ವರ್ಷ ಭಾರತ 'ವರ್ಲ್ಡ್ ಟೆಲಿಕಾಂ ಸ್ಟ್ಯಾಂಡರ್ಡೈಸೇಶನ್ ಟೆಲಿಕಾಂ ಅಸೆಂಬ್ಲಿ' (WTSA-2024) ಜೊತೆಗೆ ಮೊಬೈಲ್ ಕಾಂಗ್ರೆಸ್ (IMC) 2024 ಅನ್ನು ನವದೆಹಲಿಯಲ್ಲಿ ಆಯೋಜಿಸುತ್ತದೆ. ಅಲ್ಲಿ WTSA-2024 AI ಸೇರಿದಂತೆ ವಿಕಸನಗೊಳ್ಳುತ್ತಿರುವ ತಂತ್ರಜ್ಞಾನಗಳ ಪ್ರಮಾಣೀಕರಣ ಅಭ್ಯಾಸಗಳನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಮಿತ್ತಲ್ ತಿಳಿಸಿದರು.
ಅಕ್ಟೋಬರ್ 15ರಿಂದ ಅ.18ರವರೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿ IMC 2024 ನಡಯಲಿದೆ. 50ಕ್ಕೂ ಹೆಚ್ಚು ಜಾಗತಿಕ ಮತ್ತು ಭಾರತೀಯ ತಜ್ಞರು AI ಮತ್ತು GenAI ಕುರಿತು ಚರ್ಚಿಸಲಿದ್ದಾರೆ. IMC 2024 ಮತ್ತು ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಶನ್ ಯೂನಿಯನ್ (ITU) ಕೂಡ 'AI ಫಾರ್ ಗುಡ್' ಕುರಿತು ವಿಶೇಷ ದಿನದ ಅಧಿವೇಶನವನ್ನು ಆಯೋಜಿಸುತ್ತದೆ. ಅಲ್ಲಿ ಪ್ರಪಂಚಾದ್ಯಂತದ ತಜ್ಞರು ಮತ್ತು ಪ್ರತಿನಿಧಿಗಳು ಈ ವಿಷಯದ ಬಗ್ಗೆ ಚರ್ಚಿಸುತ್ತಾರೆ.
IMC 2024ರ ಸಿಇಒ ರಾಮಕೃಷ್ಣ ಪಿ. ಮಾತನಾಡಿ, ಭಾರತ ತಂತ್ರಜ್ಞಾನ ವಿಕಾಸದ ಮುಖ್ಯ ಹಂತದಲ್ಲಿದೆ ಮತ್ತು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನಮ್ಮ ಉದ್ದೇಶವು ವಿಭಿನ್ನ ದೃಷ್ಟಿಕೋನಗಳನ್ನು ಅಭಿನಂದಿಸುವುದು ಮಾತ್ರವಲ್ಲದೆ ವಿಷಯದ ಕುರಿತು 'ಚಿಂತನಾ ಪತ್ರಿಕೆ/ವರದಿ'ಯೊಂದಿಗೆ ಬರಲು ಅನ್ವೇಷಿಸುವುದು. ಈ ವರ್ಷ ಪ್ರತಿನಿಧಿಗಳು ಮತ್ತು ಸಂದರ್ಶಕರ ಹೆಚ್ಚಿನ ಉಪಸ್ಥಿತಿಯನ್ನು ಹೊಂದಲು ಮತ್ತು ನಮ್ಮೆಲ್ಲಾ ಪಾಲುದಾರರ ಬೆಂಬಲವನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮವು 6G, 5G ಬಳಕೆ, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, IoT, ಸೆಮಿಕಂಡಕ್ಟರ್‌ಗಳು, ಸೈಬರ್‌ಸೆಕ್ಯುರಿಟಿ, ಗ್ರೀನ್ ಟೆಕ್, ಸ್ಯಾಟ್‌ಕಾಮ್ ಮತ್ತು ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಸ್ಪಾಟ್‌ಲೈಟ್ ಜೊತೆಗೆ ಕ್ವಾಂಟಮ್ ತಂತ್ರಜ್ಞಾನ ಮತ್ತು ಸರ್ಕ್ಯುಲರ್ ಎಕಾನಮಿ ವಿಷಯಗಳನ್ನು ಹೈಲೈಟ್ ಮಾಡುತ್ತದೆ. ಸ್ಟಾರ್ಟಪ್ ಪ್ರೋಗ್ರಾಂ 'ಆಸ್ಪೈರ್' ವಿವಿಧ ಕೈಗಾರಿಕೆಗಳಲ್ಲಿ AI ಆಧರಿತ ಅಪ್ಲಿಕೇಶನ್‌ಗಳ ಮೇಲೆ ಕೇಂದ್ರೀಕರಿಸುವ 140ಕ್ಕೂ ಹೆಚ್ಚು ಸ್ಟಾರ್ಟಪ್‌ಗಳಿಗೆ ಸಾಕ್ಷಿಯಾಗಲಿದೆ.
ಉದ್ಯಮದ ಹೊರತಾಗಿ, IMC 2024 15ಕ್ಕೂ ಹೆಚ್ಚು ಸಚಿವಾಲಯಗಳ ಭಾಗವಹಿಸುವಿಕೆ ಮತ್ತು ಬೂತ್‌ಗಳಿಗೆ ಸಾಕ್ಷಿಯಾಗಲು ಸಿದ್ಧವಾಗಿದೆ. ಇದು AI ಅನ್ನು ಅವರ ಇಲಾಖೆಗಳಲ್ಲಿ ಹೇಗೆ ಸಂಯೋಜಿಸಲಾಗಿದೆ ಎಂಬುದನ್ನು ತೋರಿಸುತ್ತದೆ.
ಇದನ್ನೂ ಓದಿ: ಕ್ವಾಂಟಮ್, 6G ತಂತ್ರಜ್ಞಾನಗಳಿಗೆ ಉತ್ಕೃಷ್ಟ ಕೇಂದ್ರ ಸ್ಥಾಪಿಸಲು ಸಜ್ಜಾದ ಭಾರತ - Quantum And 6G Tech