ETV Bharat / technology

ಬೇಸಿಗೆಯಲ್ಲಿ ವಾಹನಗಳ ಬಗ್ಗೆಯೂ ಇರಲಿ ಕಾಳಜಿ: ನಿಯಮಿತ ತಪಾಸಣೆಯಿಂದ ತಪ್ಪಿಸಬಹುದು ಅನಾಹುತ - summer vehicle Maintenance

author img

By ETV Bharat Karnataka Team

Published : Apr 4, 2024, 11:27 AM IST

ಬೇಸಿಗೆಯಲ್ಲಿ ವಾಹನಗಳ ಬಗ್ಗೆ ಜಾಗ್ರತೆ ಅವಶ್ಯವಾಗಿ ವಹಿಸಬೇಕು. ಬಿಸಿಲಿನಿಂದಾಗುವ ಅಗ್ನಿ ಅವಘಡದಂತಹ ಅನಾಹುತ ತಪ್ಪಿಸಲು ಇದು ಅಗತ್ಯವಾಗಿದೆ.

in-summer-vehicles-should-be-taken-maintenance

ಹೈದರಾಬಾದ್​: ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಅತಿ ಹೆಚ್ಚಿನ ಕಾಳಜಿವಹಿಸುವ ನಾವು, ಅನೇಕ ಬಾರಿ ನಮ್ಮ ಮೆಚ್ಚಿನ ವಾಹನಗಳ ಬಗ್ಗೆ ಚಿಂತಿಸುವುದೇ ಇಲ್ಲ. ಬೇಸಿಗೆಯಲ್ಲಿ ದೇಹಕ್ಕೆ ಬೇಕಾಗುವಂತೆ ವಾಹನಗಳ ಆರೈಕೆಗೂ ಮುಂದಾಗಬೇಕು. ಅದರಲ್ಲೂ ಬೇಸಿಗೆಯಲ್ಲಿ ವಾಹನದಿಂದ ಬರುವ ಹೊಗೆ, ಬೆಂಕಿ ಪ್ರಕರಣ, ದ್ವಿಚಕ್ರವಾಹನದ ಟೈರ್​ಗಳು ಸ್ಪೋಟಗೊಳ್ಳುವ ವಿಚಾರದ ಕುರಿತು ಅಸಡ್ಡೆ ಬೇಡ. ಬಹುತೇಕ ಮಂದಿ ವಾಹನದ ಇಂಜಿನ್​​ನಿಂದ ಬೆಂಕಿ ಕಾಣಿಸಿಕೊಳ್ಳುವುದರಿಂದ ಬೆಂಕಿ ಅನಾಹುತದಂತಹ ಘಟನೆ ನಡೆಯುತ್ತದೆ ಎಂದು ಭಾವಿಸುತ್ತಾರೆ. ಆದರೆ, ತಜ್ಞರು ಹೇಳುವ ಪ್ರಕಾರ, ವಾಹನದಲ್ಲಿ ಬೆಂಕಿ ಕಾಣಿಸಿಕೊಳ್ಳುವುದಕ್ಕೆ ಅನೇಕ ಕಾರಣಗಳಿವೆ.

ಈ ರೀತಿ ಸುರಕ್ಷತಾ ಕ್ರಮ ನಡೆಸಿ: ಕಾರ್​ ಇಂಜಿನ್​ನಲ್ಲಿ ಕೂಲಿಂಗ್​ ವ್ಯವಸ್ಥೆ ಇರಲಿ. ರೇಡಿಯೇಟರ್​​ಗೆ ಹೆಚ್ಚಿನ ನೀರು ಹಾಕಬೇಡಿ. ಈ ವೇಳೆ ಕಾರಿನ ಕೂಲೆಂಟ್​ (ತಂಪಾಗಿಸುವಿಕೆ) ಕಡಿಮೆ ಇದ್ದರೆ, ಅದನ್ನು ಡಿಸ್ಟಿಲ್ಟ್​ ವಾಟರ್​ನೊಂದಿಗೆ ಸರಿಪಡಿಸಿ. ಏನಾದರೂ ಸೋರಿಕೆ ಇದ್ದರೆ, ಅದನ್ನು ಸರಿ ಮಾಡಿ. ಇಂಜಿನ್​ ಹೆಚ್ಚು ಬಿಸಿಯಾದರೆ, ಕೂಲೆಂಟ್​​ ಸೋರಿಕೆ ಆಗುತ್ತಿದ್ಯಾ ಎಂದು ಗಮನಿಸಿ, ಮೆಕಾನಿಕ್​ ಸಂಪರ್ಕಿಸಿ.

ಕೂಲೆಂಟ್​ ರೀತಿಯಲ್ಲಿ ಕಾರಿನ ಇಂಜಿನ್​ ಆಯಿಲ್​ಗಳನ್ನು ನಿಯಮಿತವಾಗಿ ಪರೀಕ್ಷೆ ಮಾಡಬೇಕು. ಅಲ್ಲಿ ಏನಾದರೂ ಸೋರಿಕೆ ಇದ್ದರೆ, ವಾಹನವೂ ಅಧಿಕ ಬಿಸಿಯಾಗುತ್ತದೆ. ಈ ಅಧಿಕ ಶಾಖದಿಂದಲೇ ಬೆಂಕಿ ಹೊತ್ತಿಕೊಳ್ಳುವ ಅಪಾಯ ಇರುತ್ತದೆ. ಇಂಜಿನ್​ ಆಯಿಲ್​ ಕಡಿಮೆ ಇದ್ದರೂ ಶಾಖ ಹೆಚ್ಚುತ್ತದೆ. ನಿಲ್ಲಿಸಿದಂತೆ ನಿರಂತರವಾಗಿ ಕಾರನ್ನು ಚಲಾಯಿಸುವುದು ಕೂಡ ಇಂಜಿನ್​ ಬಳಲಿಕೆಗೆ ಕಾರಣವಾಗುತ್ತದೆ.

ಕಾರುಗಳ ಟೈರ್​​ಗಳು ಸರಿಯಾದ ಪರಿಸ್ಥಿತಿಯಲ್ಲಿದೆಯಾ ಎಂಬುದನ್ನು ಕೂಡ ಗಮನಿಸಬೇಕು. ತಜ್ಞರು ಶಿಫಾರಸು ಮಾಡಿದಂತೆ ಟೈರ್‌ಗಳು ಗಾಳಿ ತುಂಬಿವೆಯೇ ಎಂದು ಖಚಿತಪಡಿಸಿಕೊಳ್ಳಿ. ಕಾರಿಗೆ ಮತ್ತೆ ಪ್ರತ್ಯೇಕವಾಗಿ ಲೈಟ್​, ಹಾರ್ನ್​ ಸೇರಿದಂತೆ ಮತ್ತಿತ್ತರ ವಸ್ತುಗಳನ್ನು ಅನಗತ್ಯವಾಗಿ ಅಳವಡಿಸಬೇಡಿ. ಪ್ರತ್ಯೇಕ ಲೈಟ್​ಗಳಲ್ಲಿ ಸ್ಥಳೀಯವಾಗಿ ಲಭ್ಯವಿರುವ ಹೆಚ್ಚು ಬಾಳಿಕೆ ಬಾರದ ತಂತಿಗಳ ಅಳವಡಿಕೆಯು ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಮತ್ತು ಬೆಂಕಿಗೆ ಕಾರಣವಾಗಬಹುದು.

ದ್ವಿಚಕ್ರದ ಬಗ್ಗೆ ಜಾಗ್ರತೆ ಇರಲಿ: ಬೇಸಿಗೆಯಲ್ಲಿ ಡಿಸೇಲ್​ ಮತ್ತು ಪೆಟ್ರೋಲ್​ ಕಾರಿನಂತೆ ದ್ವಿಚಕ್ರ ವಾಹನದ ಬಗ್ಗೆ ಕೂಡ ಕಾಳಜಿ ಹೊಂದುವುದು ಅಗತ್ಯ. ದ್ವಿಚಕ್ರ ವಾಹನದಲ್ಲಿನ ಏನಾದರೂ ಸಣ್ಣ ಸೋರಿಕೆ ಕೂಡ ಬೆಂಕಿಗೆ ಕಾರಣವಾಗುತ್ತದೆ. ಯಾವುದೇ ಸಣ್ಣ ಪ್ರಮಾಣದ ರಿಪೇರಿಯನ್ನು ತಕ್ಷಣಕ್ಕೆ ಮಾಡಿಸಿ.

ಬೇಸಿಗೆಯಲ್ಲಿ 1.2 ಲೀಟರ್​​ಗಿಂತ ಹೆಚ್ಚಿನ ಪೆಟ್ರೋಲ್​ ಅನ್ನು ದ್ವಿಚಕ್ರ ವಾಹನಕ್ಕೆ ಹಾಕಿಸಬೇಡಿ. ಟ್ಯಾಂಕ್​ ಸಂಪೂರ್ಣವಾಗಿದ್ದರೆ, ತಾಪಮಾನದ ಒತ್ತಡ ಹೆಚ್ಚುತ್ತದೆ. ಇದರಿಂದ ಟ್ಯಾಂಕ್​ ಸ್ಪೋಟಗೊಳ್ಳುವ ಅಪಾಯ ಎದುರಾಗುತ್ತದೆ. ಪೆಟ್ರೋಲ್​ ಬಂಕ್​ನಲ್ಲಿ ಸಾಲಿನಲ್ಲಿ ಜನ ನಿಂತಿರುತ್ತಾರೆ. ನಿಮ್ಮ ಸರದಿಯ ಮೊದಲು ಟ್ಯಾಂಕ್ ಮುಚ್ಚಳವನ್ನು ತೆಗೆಯಬೇಡಿ.

ದ್ವಿಚಕ್ರವಾಹನದಲ್ಲಿ ಆಯಿಲ್​ ಕಡಿಮೆ ಇದ್ದರೂ ಹೆಚ್ಚು ಶಾಖಕ್ಕೆ ಗುರಿಯಾಗುತ್ತದೆ. ದ್ವಿಚಕ್ರ ವಾಹನ ಸರಪಳಿಗೆ ನಿಯಮಿತ ಲೂಬ್ರಿಕೇಶನ್ ಅಗತ್ಯವಿರುತ್ತದೆ. ವಾಹನವು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಈ ಲೂಬ್ರಿಕಂಟ್‌ ಬಿಸಿ ಆಗುತ್ತದೆ. ಪ್ರೀಮಿಯಂ ವಾಹನಗಳಲ್ಲಿ ಕೂಲಂಟ್ ಅನ್ನು ನಿಯಮಿತವಾಗಿ ಪರಿಶೀಲಿಸಬೇಕು.

ಬ್ಯಾಟರಿ ಕರೆಂಟ್​ ಮತ್ತು ಪೆಟ್ರೊಲ್​ ಸೋರಿಕೆಯನ್ನು ನಿಯಮಿತವಾಗಿ ಪರೀಕ್ಷಿಸಿ. ಯಥೇಚ್ಛ ಬಿಸಿಲಿನಿಂದ ಸಣ್ಣಪುಟ್ಟ ಬೆಂಕಿ ಹೊತ್ತಿಕೊಳ್ಳುವ ಅಪಾಯವಿದೆ. ಪೆಟ್ರೋಲ್ ಟ್ಯಾಂಕ್ ಮೇಲೆ ಕವರ್ ಹಾಕುವುದನ್ನು ಮರೆಯಬೇಡಿ. ಬೇಸಿಗೆಯಲ್ಲಿ ಚಕ್ರಗಳು ಕೂಡ ಸ್ಪೋಟವಾಗುತ್ತದೆ. ನಿಮ್ಮ ವಾಹನದ ಚಕ್ರ ಹಳೆಯದಾಗಿದ್ದು, ಯಾವುದೇ ಗ್ರಿಪ್​ ಇಲ್ಲ ಎಂದರೆ ತಕ್ಷಣ ಬದಲಾಯಿಸಿ. ಅದಕ್ಕೆ ನೆಟ್ರೋಜನ್​ ಗಾಳಿ ತುಂಬಿಸಿ. ನೆರಳಿನಲ್ಲಿ ಗಾಡಿಯನ್ನು ನಿಲ್ಲಿಸಿ.

ಕಾರುಗಳನ್ನು ಓಡಿಸುವಾಗ ಎಂಜಿನ್ ಆಯಿಲ್ ಮತ್ತು ಕೂಲಂಟ್ ಅನ್ನು ಪರಿಶೀಲಿಸಿ. ವಾಹನ ಸುಸ್ಥಿತಿಯಲ್ಲಿದ್ದರೆ ಅದು ತಡೆ ಇಲ್ಲದೇ 200 - 300 ಕಿ.ಮೀ ಸಾಗಬಹುದು. ಬೇಸಿಗೆಯಲ್ಲಿ ವಾಹನಗಳನ್ನು ಶೋರೂಂನಲ್ಲಿ ನಿಯಮಿತ ತಪಾಸಣೆಗೆ ಒಳಗಾಗಿಸಬೇಕು ಎನ್ನುತ್ತಾರೆ ಶೋರೂಂ ಮ್ಯಾನೇಜರ್​ ಆಗಿರುವ ಬಿ ಐಲಯ್ಯ.

ದ್ವಿಚಕ್ರವಾಹನದ ಸಮಸ್ಯೆಗಳು ಬೇಸಿಗೆಯಲ್ಲಿ ಹೆಚ್ಚು ಕಾಣುತ್ತದೆ. ಟ್ಯಾಂಕ್​ನಲ್ಲಿ ಪೂರ್ತಿ ಪೆಟ್ರೋಲ್​ ಹಾಕಿಸುವುದರಿಂದ ಅಪಘಾತವಾಗುವ ಸಂಭವ ಹೆಚ್ಚು. ಚಕ್ರದ ಸಾಮರ್ಥ್ಯಕ್ಕೆ ಅನುಗುಣವಾಗಿ ಗಾಳಿ ತುಂಬಿಸಿ. ಆಯಿಲ್​ ಅನ್ನು ನಿಯಮಿತವಾಗಿ ಪರೀಕ್ಷಿಸಿ. ದಿನದಲ್ಲಿ ನಿರ್ದಿಷ್ಟ ದೂರವಷ್ಟೇ ಪ್ರಯಾಣಿಸುವುದು ಸೂಕ್ತ ಎನ್ನುತ್ತಾರೆ ಹಿರಿಯ ಮೆಕಾನಿಕ್​ ಆರ್​ ಮಹೇಶ್​.

ಇದನ್ನೂ ಓದಿ: ರಾಜ್ಯದಲ್ಲಿ ಒಂದು ವಾರ ಬಿಸಿಗಾಳಿ ಎಚ್ಚರಿಕೆ​: ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.