ಕಾನ್ಪುರ( ಉತ್ತರಪ್ರದೇಶ): ಹೈಪರ್‌ಸಾನಿಕ್ ಪರೀಕ್ಷಾ ಸಾಮರ್ಥ್ಯವನ್ನು ಹೊಂದಿರುವ ಕೆಲವೇ ಕೆಲವು ದೇಶಗಳಿವೆ. ಆ ಸಾಲಿಗೆ ಸೇರಲು ಭಾರತವು ಸನ್ನದ್ಧವಾಗುತ್ತಿದೆ. ಈ ನಡುವೆ ಐಐಟಿ ಕಾನ್ಪುರ್ ದೇಶದ ಮೊದಲ ಹೈಪರ್‌ವೆಲಾಸಿಟಿ ವಿಸ್ತರಣೆ ಸುರಂಗ ಸೌಲಭ್ಯವನ್ನು ಅಭಿವೃದ್ಧಿಪಡಿಸಿದೆ. ಇದರ ಪರೀಕ್ಷೆ ಮತ್ತು ಪರೀಕ್ಷಾರ್ಥ ಪ್ರಯೋಗಕ್ಕೆ ಬೇಕಾದ ಸೌಲಭ್ಯಗಳನ್ನು ಐಐಟಿ ಕ್ಯಾಂಪನ್ನಲ್ಲಿ ಸ್ಥಾಪಿಸಲಾಗಿದೆ. ಮತ್ತು ಕ್ಯಾಂಪಸ್ನಲ್ಲಿ ಇದನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಈ ಪರೀಕ್ಷಾರ್ಥ ಪ್ರಯೋಗಕ್ಕೆ ಪ್ರಸ್ತುತ S-2 ಸೌಲಭ್ಯ ಎಂದು ಹೆಸರಿಸಲಾಗಿದೆ. ಈ ಪ್ರಯೋಗದ ಸಹಾಯದಿಂದ ವಾಹನಗಳು ವಾತಾವರಣ ಪ್ರವೇಶದ ಸಮಯದಲ್ಲಿ ಎದುರಾಗುವ ಹೈಪರ್‌ಸಾನಿಕ್ ಪರಿಸ್ಥಿತಿಗಳು, ಸ್ಕ್ರ್ಯಾಮ್‌ಜೆಟ್ ವಿಮಾನಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳ ಹಾರಾಟದ ವೇಗದ ಬಗ್ಗೆ ಅಧ್ಯಯನ ನಡೆಸಲಾಗಿದೆ.
ಏಕೆಂದರೆ, ಈ ಸುರಂಗದಲ್ಲಿ ಪ್ರತಿ ಸೆಕೆಂಡಿಗೆ ಮೂರರಿಂದ 10 ಕಿಲೋಮೀಟರ್‌ಗಳ ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ. ಐಐಟಿ ಕಾನ್ಪುರದ ನಿರ್ದೇಶಕ ಪ್ರೊ. ಎಸ್ ಗಣೇಶ್ ಈ ಬಗ್ಗೆ ಮಾತನಾಡಿ, ಐಐಟಿ ಕಾನ್ಪುರದ ಪ್ರಾಧ್ಯಾಪಕರು ತಮ್ಮ ಸಂಶೋಧನೆಯಿಂದ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಹೇಳಿದ್ದಾರೆ.
ಮೂರು ವರ್ಷಗಳಲ್ಲಿ ಸ್ಥಳೀಯವಾಗಿ ಹೈಪರ್ವೇಲಾಸಿಟಿ ವಿಸ್ತರಣೆ ಸುರಂಗ ವಿನ್ಯಾಸಗೊಳಿಸಲಾಗಿದೆ. ಈ ಸುರಂಗಕ್ಕೆ ಪ್ರಸ್ತುತ ಎಸ್ -2 ಎಂದು ಹೆಸರಿಸಲಾಗಿದೆ ಎಂದು ಇಬ್ರಾಹಿಂ ಸುಗರ್ನೊ ಮಾಹಿತಿ ನೀಡಿದ್ದಾರೆ. ಈ ಸುರಂಗದ ಉದ್ದವು 24 ಮೀಟರ್ ಆಗಿದ್ದು, ಇದನ್ನು ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದ ಒಳಗೆ ಐಐಟಿ ಕಾನ್ಪುರದ ಹೈಪರ್ಸಾನಿಕ್ ಪ್ರಾಯೋಗಿಕ ಏರೋಡೈನಾಮಿಕ್ಸ್ ಪ್ರಯೋಗಾಲಯದಲ್ಲಿ ನಿರ್ಮಾಣ ಮಾಡಲಾಗಿದೆ. ಏರೋನಾಟಿಕಲ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಬೋರ್ಡ್ (ARDB), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು IIT ಕಾನ್ಪುರದಿಂದ ಧನಸಹಾಯ ಮತ್ತು ಬೆಂಬಲದೊಂದಿಗೆ S-2 ಅನ್ನು ಮೂರು ವರ್ಷಗಳ ಅವಧಿಯಲ್ಲಿ ಸ್ಥಳೀಯವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
STU ನಿರ್ಮಾಣವು ಸವಾಲಿನದ್ದಾಗಿತ್ತು : ’’ಎಸ್ -2 ನಿರ್ಮಾಣವು ತುಂಬಾ ಸವಾಲಿನಿಂದ ಕೂಡಿತ್ತು. ಇದಕ್ಕೆ ಭೌತಶಾಸ್ತ್ರ ಮತ್ತು ನಿಖರ ಎಂಜಿನಿಯರಿಂಗ್‌ನ ಆಳವಾದ ಜ್ಞಾನದ ಅಗತ್ಯವಿದೆ. ಅತ್ಯಂತ ಪ್ರಮುಖವಾದ ಮತ್ತು ಸವಾಲಿನ ಅಂಶವೆಂದರೆ 'ಫ್ರೀ ಪಿಸ್ಟನ್ ಡ್ರೈವರ್' ವ್ಯವಸ್ಥೆಯನ್ನು ಪರಿಪೂರ್ಣಗೊಳಿಸುವುದು. ಇದು 20-35 ವಾಯುಮಂಡಲಗಳ ನಡುವಿನ ಹೆಚ್ಚಿನ ಒತ್ತಡದಲ್ಲಿ 150-200 ಮೀ/ಸೆ ವೇಗದಲ್ಲಿ ಸಂಕೋಚನ ಟ್ಯೂಬ್‌ನಿಂದ 6.5 ಮೀಟರ್‌ನಿಂದ ಪಿಸ್ಟನ್ ಅನ್ನು ಹಾರಿಸಬೇಕಾಗಿತ್ತು. ಅಂತಿಮವಾಗಿ ಅದನ್ನು ಸಂಪೂರ್ಣ ನಿಲುಗಡೆಗೆ ಅಥವಾ 'ಸಾಫ್ಟ್ ಲ್ಯಾಂಡಿಂಗ್' ಗೆ ತರುವುದು ಸಹ ಅಗತ್ಯವಾಗಿತ್ತು. ಆದಾಗ್ಯೂ, ನಮ್ಮ ಪರಿಣತಿಯಿಂದ ಅದರಲ್ಲಿ ಯಶಸ್ವಿಯಾಗಿದ್ದೇವೆ. ಈ ವೈಶಿಷ್ಟ್ಯವನ್ನು ವಿನ್ಯಾಸಗೊಳಿಸಲು, ನಿರ್ಮಿಸಲು ಮತ್ತು ಪರೀಕ್ಷಿಸಲು ನಮ್ಮ ತಂಡವು ಹೆಮ್ಮೆಪಡುತ್ತದೆ. ಇದು ಜಾಗತಿಕ ಹೈಪರ್ಸಾನಿಕ್ ಸಂಶೋಧನಾ ವಿಭಾಗದಲ್ಲಿ ಭಾರತದ ಸ್ಥಾನವನ್ನು ಬಲಪಡಿಸಿದೆ‘‘ ಎಂದು ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗ ಮತ್ತು ಲೇಸರ್ ಮತ್ತು ಫೋಟೊನಿಕ್ಸ್ ಕೇಂದ್ರದ ಸಹ ಪ್ರಾಧ್ಯಾಪಕ ಇಬ್ರಾಹಿಂ ಸುಗರ್ನೊ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:ಎಐ ಉತ್ಪಾದಕತೆ ವೃದ್ಧಿಸುವ ಬಗ್ಗೆ ಬಹುತೇಕ ಭಾರತೀಯರಲ್ಲಿದೆ ಆಶಾವಾದ; ವರದಿ