ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆ ವಿಪರೀತವಾಗಿ ಹೆಚ್ಚುತ್ತಿದೆ. ಹೈಸ್ಪೀಡ್ ಡೇಟಾ ಲಭ್ಯವಾದ ನಂತರ, ಇಂಟರ್ನೆಟ್ ಬಳಕೆ ಕೂಡ ಅಪಾರವಾಗಿ ಹೆಚ್ಚಾಗಿದೆ. ಮತ್ತೊಂದೆಡೆ, ಸೈಬರ್ ಅಪರಾಧಿಗಳು ಅನೇಕ ರೀತಿಯಲ್ಲಿ ದಾಳಿ ಮಾಡಲು ತಂತ್ರಜ್ಞಾನ ಬಳಸುತ್ತಿದ್ದಾರೆ. ಅದಕ್ಕಾಗಿಯೇ ನಮ್ಮ ವೈಯಕ್ತಿಕ ಮಾಹಿತಿ ಮತ್ತು ಬ್ಯಾಂಕಿಂಗ್ ವಿವರಗಳನ್ನು ರಕ್ಷಿಸುವುದು ಬಹಳ ಮುಖ್ಯವಾಗಿದೆ.
ನಾವು ಸ್ಮಾರ್ಟ್‌ಫೋನ್‌ಗಳಲ್ಲಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದಾಗ, ಅವರು ಕ್ಯಾಮೆರಾ, ಮೈಕ್ರೋಫೋನ್ ಮತ್ತು ಲೊಕೇಶನ್ ಅನ್ನು ಪ್ರವೇಶಿಸಲು ಅನುಮತಿಗಳನ್ನು ಕೇಳುತ್ತಾರೆ. ಆದರೆ, ಕೆಲವು ಆ್ಯಪ್‌ಗಳು ಅಗತ್ಯವಿಲ್ಲದಿದ್ದರೂ ಈ ವಿವರಗಳನ್ನು ಕೇಳುತ್ತವೆ. ಇದು ನಮ್ಮ ವೈಯಕ್ತಿಕ ಡೇಟಾ ಮತ್ತು ಗೌಪ್ಯತೆಗೆ ಅಪಾಯವನ್ನುಂಟು ಮಾಡಬಹುದು. ಅದಕ್ಕಾಗಿಯೇ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡುವಾಗ ಅನಗತ್ಯ ಅನುಮತಿಗಳನ್ನು ನೀಡಬೇಡಿ. ಆಗ ಮಾತ್ರ ನಮ್ಮ ಮಾಹಿತಿ ಗೌಪ್ಯವಾಗಿ ಉಳಿಯುತ್ತದೆ.
ನೀವು ಬಳಸುತ್ತಿರುವ ಅಪ್ಲಿಕೇಶನ್‌ಗಳು ಫೋನ್‌ನ ಕ್ಯಾಮೆರಾ, ಮೈಕ್ ಮತ್ತು ಸ್ಥಳಗಳನ್ನು ನಿಮಗೆ ತಿಳಿಯದೇ ಬಳಸುತ್ತಿದ್ದರೆ, ತಕ್ಷಣವೇ ಅವುಗಳನ್ನು ನಿರ್ಬಂಧಿಸಿ. ಅಥವಾ ಅನುಮತಿ ಸೆಟ್ಟಿಂಗ್‌ಗಳನ್ನು ಬದಲಾಯಿಸಿ.
Allow Only While Using the app: ಯಾವುದೇ ಆಪ್ ಇನ್‌ಸ್ಟಾಲ್ ಮಾಡುವಾಗ ಕ್ಯಾಮೆರಾ, ಮೈಕ್ರೊಫೋನ್ ಮತ್ತು ಲೊಕೇಶನ್ ವಿವರಗಳನ್ನು ಕೇಳಲಾಗುತ್ತದೆ. ನಂತರ ಅದನ್ನು ಯಾವಾಗಲೂ ಬಳಸುವ ಬದಲು, ಅಪ್ಲಿಕೇಶನ್ ಬಳಕೆ ಮಾಡುವಾಗ ಮಾತ್ರ ಅದನ್ನು ಬಳಸಲು ಅನುಮತಿ ನೀಡಿ.
Ask Every Time : ಪ್ರತಿ ಬಾರಿ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್ ತೆರೆದಾಗ, ಲೊಕೇಶನ್, ಕ್ಯಾಮೆರಾ ಮತ್ತು ಮೈಕ್ರೊಫೋನ್ ಅನುಮತಿ ಕೇಳಲು Ask Every Time ಎಂಬ ಆಯ್ಕೆಯನ್ನು ಬಳಸಬೇಕು. ಅಂತಹ ತಾತ್ಕಾಲಿಕ ಅನುಮತಿ ನೀಡುವ ಮೂಲಕ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀವು ವಂಚಕರಿಂದ ರಕ್ಷಿಸಬಹುದಾಗಿದೆ.
Don't allow : ಸ್ಮಾರ್ಟ್‌ಫೋನ್‌ನಲ್ಲಿರುವ ಲೊಕೇಶನ್, ಕ್ಯಾಮೆರಾ ಮತ್ತು ಮೈಕ್ರೊಫೋನ್‌ನ ಅನುಮತಿ ಸಂಪೂರ್ಣವಾಗಿ ನಿರಾಕರಿಸಲು Don't allow ಎಂಬುದನ್ನು ಬಳಸಬಹುದು. ಆದರೆ, ಕೆಲವು ಅಪ್ಲಿಕೇಶನ್‌ಗಳಿಗೆ ಈ ಅನುಮತಿಗಳ ಅಗತ್ಯವಿದೆ. ಅಂತಹವರಿಗೆ ಮೇಲೆ ನೀಡಲಾದ ಆಯ್ಕೆಗಳನ್ನು ಬಳಸುವುದು ಉತ್ತಮ.
How To Change App Permissions: ನೀವು ಈಗಾಗಲೇ ಹಲವಾರು ಅಪ್ಲಿಕೇಶನ್‌ಗಳಿಗೆ ಕ್ಯಾಮೆರಾ, ಮೈಕ್, ಲೊಕೇಶನ್ ಪ್ರವೇಶವನ್ನು ನೀಡಿದ್ರೆ ಈ ಕೆಳಗೆ ನೀಡಿರುವ ಮಾಹಿತಿಗಳನ್ನು ಫಾಲೋ ಮಾಡಿ..
- ಅಪ್ಲಿಕೇಶನ್ ಅನುಮತಿಗಳನ್ನು ಬದಲಾಯಿಸಲು, ಫೋನ್‌ನಲ್ಲಿ ಸೆಟ್ಟಿಂಗ್ ಅಪ್ಲಿಕೇಶನ್ ತೆರೆಯಿರಿ
- ಅಪ್ಲಿಕೇಶನ್‌ಗಳ ವಿಭಾಗಕ್ಕೆ ಹೋಗಿ ಮತ್ತು ನೀವು ಬದಲಾಯಿಸಲು ಬಯಸುವ ಅನುಮತಿಗಳ ಅಪ್ಲಿಕೇಶನ್ ಅನ್ನು ಕ್ಲಿಕ್ ಮಾಡಿ.
- ಪರ್ಮಿಷನ್ ಆಯ್ಕೆ ಕ್ಲಿಕ್ ಮಾಡಿದರೆ ಕ್ಯಾಮೆರಾ, ಲೊಕೇಶನ್, ಕಾಂಟ್ಯಾಕ್ಟ್, ಮೈಕ್ರೊಫೋನ್ ಎಲ್ಲವೂ ಕಾಣಿಸುತ್ತದೆ.
- ನೀವು ಬದಲಾಯಿಸಲು ಬಯಸುವ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ.
- ತಕ್ಷಣವೇ ನೀವು 'Allow while using the app', Don’t allow' and 'Ask Every Time' ಆಯ್ಕೆಗಳನ್ನು ನೋಡುತ್ತೀರಿ.
- ಅವುಗಳಲ್ಲಿ ನಿಮಗೆ ಬೇಕಾದದ್ದನು ಆರಿಸಿಕೊಳ್ಳಿ. ಅದು ಸರಳವಾಗಿದೆ!
How To Change Permissions Based On App Type : ನೀವು ಪ್ರತಿ ಅಪ್ಲಿಕೇಶನ್‌ಗೆ ಬದಲಾಗಿ ಎಲ್ಲಾ ಅಪ್ಲಿಕೇಶನ್‌ಗಳಿಗೆ ಒಂದೇ ಬಾರಿಗೆ ಅನುಮತಿಗಳನ್ನು ಬದಲಾಯಿಸಲು ಬಯಸಿದರೆ ಈ ಕೆಳಗೆ ನೀಡಿರುವ ಮಾಹಿತಿ ಫಾಲೋ ಆಗಿ..
- ಫೋನ್ ಸೆಟ್ಟಿಂಗ್‌ಗಳ ಅಪ್ಲಿಕೇಶನ್‌ಗೆ ಹೋಗಿ.
- ಪ್ರವೈಸಿ ಇಲ್ಲ ಅಥವಾ ಸೆಕ್ಯೂರಿಟಿ ಮತ್ತು ಪ್ರವೈಸಿ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಪರ್ಮಿಷನ್ ಅಥವಾ ಅಪ್ಲಿಕೇಶನ್ ಪರ್ಮಿಷನ್ ಮೇಲೆ ಕ್ಲಿಕ್ ಮಾಡಿ.
- ಇದು ಎಲ್ಲ ರೀತಿಯ ಅನುಮತಿಗಳನ್ನು ತೋರಿಸುತ್ತದೆ.
- ಅದರಲ್ಲಿ ಕ್ಯಾಮೆರಾ, ಲೊಕೇಶನ್, ಕಾಂಟ್ಯಾಕ್ಟ್, ಮೈಕ್ರೊಫೋನ್ ಆಯ್ಕೆಗಳಲ್ಲಿ ನಿಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳಬೇಕು.
- ಅವುಗಳ ಮೇಲೆ ಕ್ಲಿಕ್ ಮಾಡಿದ ನಂತರ,'Allow while using the app', 'Don’t allow' and 'Ask Every Time' ಆಯ್ಕೆಗಳು ಕಾಣಿಸಿಕೊಳ್ಳುತ್ತವೆ.
- ಈ ಅನುಮತಿಗಳಲ್ಲಿ ನಿಮಗೆ ಬೇಕಾದುದನ್ನು ಆಯ್ಕೆಮಾಡಿ. ಅದು ಸರಳವಾಗಿದೆ!