ETV Bharat / technology

ಪಡಿತರ ಚೀಟಿ ಇಕೆವೈಸಿ ಮಾಡಿಸದಿದ್ದಲ್ಲಿ ರೇಷನ್​ ಕಟ್​; ಈ ದಿನಾಂಕದೊಳಗೆ ಎಚ್ಚೆತ್ತುಕೊಳ್ಳಿ​! - Ration Card eKYC

author img

By ETV Bharat Tech Team

Published : Aug 29, 2024, 7:51 PM IST

Ration Card eKYC: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪಡಿತರ ಚೀಟಿದಾರರಿಗೆ ಉಚಿತ ಪಡಿತರ ವಿತರಣೆಯನ್ನು ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದೆ. ದೇಶದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ ನೀಡಲಾಗುತ್ತಿದೆ. ಇದೀಗ ಆಹಾರ ಮತ್ತು ಜಾರಿ ಇಲಾಖೆಯು ಪಡಿತರ ಚೀಟಿ ಹೊಂದಿರುವವರು ಕೆವೈಸಿ ಮಾಡುವುದನ್ನು ಕಡ್ಡಾಯಗೊಳಿಸಿದೆ. ಪಡಿತರ ಚೀಟಿಗಾಗಿ ನೀವು KYC ಅನ್ನು ಹೇಗೆ ಮಾಡಬಹುದು ಮತ್ತು ಅದರ ಕೊನೆಯ ದಿನಾಂಕ ಯಾವುದು ಎಂಬುದನ್ನು ತಿಳಿಯೋಣಾ ಬನ್ನಿ..

EKYC OF RATION CARD  HOW TO APPLY RATION CARD ONLINE  RATION CARD EKYC DETAILS  RATION CARD
ಪಡಿತರ ಚೀಟಿ ಇಕೆವೈಸಿ ಮಾಡಿಸುವುದು ಮುಖ್ಯ (ETV Bharat)

Ration Card eKYC: ಇಂದಿಗೂ ಭಾರತದಲ್ಲಿ ಎರಡು ಹೊತ್ತಿನ ಊಟವೂ ಸಿಗದ ಲಕ್ಷಾಂತರ ಜನರಿದ್ದಾರೆ. ಇದಕ್ಕಾಗಿ ಅವರು ಕಷ್ಟಪಟ್ಟು ತಮ್ಮ ಕುಟುಂಬವನ್ನು ಪೋಷಿಸುತ್ತಾರೆ. ಆದರೆ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಜನರು ಆಹಾರವಿಲ್ಲದೆ ಪರದಾಡಿದರು. ಇದನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನದಿಂದಾಗಿ ದೇಶಾದ್ಯಂತ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರವನ್ನು ನೀಡಲಾಗುತ್ತಿದೆ. ಸರ್ಕಾರದ ಈ ಯೋಜನೆಯು ಕೋವಿಡ್ ಸಾಂಕ್ರಾಮಿಕದ ನಂತರ ಪ್ರಾರಂಭವಾಯಿತು.

ಈಗ ಸರ್ಕಾರದ ಸೂಚನೆಯ ಮೇರೆಗೆ ಕಾರ್ಡ್ ಹೊಂದಿರುವವರು ಪಡಿತರ ಚೀಟಿ ಮೂಲಕ ಪಡಿತರವನ್ನು ಪಡೆಯಲು ಇಕೆವೈಸಿ ಮಾಡಬೇಕಾಗಿದೆ. ಎಲ್ಲಾ ಪಡಿತರ ಚೀಟಿದಾರರಿಗೆ ಆಹಾರ ಮತ್ತು ಜಾರಿ ಇಲಾಖೆಯಿಂದ ಈ ಸೂಚನೆಗಳನ್ನು ನೀಡಲಾಗಿದೆ. ಪಡಿತರ ಚೀಟಿದಾರರು ಇಕೆವೈಸಿ ಮಾಡದಿದ್ದರೆ ಪಡಿತರ ಪಡೆಯಲು ತೊಂದರೆಯಾಗಬಹುದು. ಆದ್ದರಿಂದ ಯಾವುದೇ ಪಡಿತರ ಚೀಟಿದಾರರು eKYC ಅನ್ನು ಹೇಗೆ ಮತ್ತು ಎಲ್ಲಿ, ಇದರ ಕೊನೆಯ ದಿನಾಂಕದ ಬಗ್ಗೆ ತಿಳಿಯೋಣಾ ಬನ್ನಿ..

ಕೆವೈಸಿ ಕೊನೆಯ ದಿನಾಂಕ ಯಾವಾಗ: ಆಹಾರ ಮತ್ತು ಜಾರಿ ಇಲಾಖೆಯಿಂದ ಪಡಿತರ ಚೀಟಿಗಾಗಿ ಕೆವೈಸಿ ಮಾಡಲು ಕೊನೆಯ ದಿನಾಂಕವನ್ನು ಮೊದಲು ಜೂನ್ 30, 2024 ಎಂದು ನಿಗದಿಪಡಿಸಲಾಗಿತ್ತು. ಆದರೆ ನಂತರ ಇಲಾಖೆಯಿಂದ ಕೆವೈಸಿ ಮಾಡಲು ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30, 2024ರ ವರೆಗೆ ವಿಸ್ತರಿಸಿದೆ. ಆದ್ದರಿಂದ, ಈಗ ನೀವು ನಿಮ್ಮ ಪಡಿತರ ಚೀಟಿಯ KYC ಅನ್ನು ಸೆಪ್ಟೆಂಬರ್ 30 ರ ಮೊದಲು ಮಾಡಿಕೊಳ್ಳಬೇಕಾಗಿದೆ.

eKYC ಪಡೆಯುವ ಪ್ರಕ್ರಿಯೆ: ನಿಮ್ಮ ಪಡಿತರ ಚೀಟಿಗೆ KYC ಮಾಡುವ ಪ್ರಕ್ರಿಯೆಯು ತುಂಬಾ ಸರಳವಾಗಿದೆ. ಇದಕ್ಕಾಗಿ, ನೀವು ಅದೇ ಪಡಿತರ ಅಂಗಡಿಗೆ ಅಥವಾ ನಿಮ್ಮ ರಾಜ್ಯದ ಅಡಿಯಲ್ಲಿ ಯಾವುದೇ ಪಡಿತರ ಅಂಗಡಿಗೆ ತೆರಳಿ ಅಲ್ಲಿ ನಿಮ್ಮ KYC ಮಾಡಿಸಿಕೊಳ್ಳಬೇಕು. ಗಮನಿಸಬೇಕಾದ ವಿಷಯವೆಂದರೆ, ಕೆವೈಸಿಗಾಗಿ ಪಡಿತರ ಚೀಟಿಯಲ್ಲಿ ಯಾರ ಹೆಸರು ನೋಂದಾಯಿಸಲ್ಪಟ್ಟಿದೆ ಮತ್ತು ಯಾರ ಹೆಸರಿನಲ್ಲಿ ಪಡಿತರವನ್ನು ತೆಗೆದುಕೊಳ್ಳಲಾಗುತ್ತಿದೆ ಅವರೆಲ್ಲರೂ ಪಡಿತರ ಅಂಗಡಿಗೆ ತೆರಳಬೇಕಾಗುತ್ತದೆ.

ಯಾವ ದಾಖಲೆಗಳು ಬೇಕು: ಪಡಿತರ ಅಂಗಡಿಯನ್ನು ತಲುಪಿದ ನಂತರ, ನೀವು ಪಡಿತರ ಚೀಟಿದಾರರನ್ನು ಭೇಟಿಯಾಗಿ ಪಡಿತರ ಚೀಟಿಯ ಇಕೆವೈಸಿಗಾಗಿ ಬಂದಿರುವಾಗಿ ತಿಳಿಸಿ. ಇದರೊಂದಿಗೆ ನಿಮ್ಮ ಪಡಿತರ ಚೀಟಿ, ಅದರ ನಕಲು ಪ್ರತಿ ಮತ್ತು ಆಧಾರ್ ಕಾರ್ಡ್ ಅನ್ನು ಸಹ ನೀವು ಪಡಿತರ ಅಂಗಡಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಪಡಿತರ ವಿತರಕರು ನಿಮ್ಮ ದಾಖಲೆಗಳನ್ನು ತೆಗೆದುಕೊಂಡು ಪೋಸ್ ಯಂತ್ರದಲ್ಲಿ ನಿಮ್ಮ ಬೆರಳಚ್ಚುಗಳನ್ನು ಸ್ಕ್ಯಾನ್ ಮಾಡುತ್ತಾರೆ. ಅವುಗಳನ್ನು ನೋಂದಾಯಿಸಿದ ನಂತರ ನಿಮ್ಮ KYC ರೆಡಿಯಾಗುತ್ತದೆ.

KYC ಮಾಡಲು ಕಾರಣವೇನು?: ಕೋವಿಡ್ ಸಾಂಕ್ರಾಮಿಕವಾಗಿ ನಾಲ್ಕು ವರ್ಷಗಳಿಗಿಂತ ಹೆಚ್ಚು ಕಳೆದಿದೆ. ಈ ಅವಧಿಯಲ್ಲಿ, ಪಡಿತರ ಚೀಟಿಯಲ್ಲಿ ಹೆಸರು ನೋಂದಾಯಿಸಿದ ಕೆಲವು ಸದಸ್ಯರು ನಿಧನರಾದ ಹಲವಾರು ಕುಟುಂಬಗಳು ದೇಶದಲ್ಲಿವೆ. ಆದರೆ ಅವರ ಸಾವಿನ ನಂತರವೂ ಅವರ ಹೆಸರಿನಲ್ಲಿ ಪಡಿತರವನ್ನು ತೆಗೆದುಕೊಳ್ಳಲಾಗುತ್ತಿದ್ದು, ಇದರಿಂದ ಸರ್ಕಾರಕ್ಕೆ ಹೆಚ್ಚುವರಿ ಹೊರೆಯಾಗುತ್ತಿದೆ. ಆದ್ದರಿಂದ, ಮರಣ ಹೊಂದಿದ ಸದಸ್ಯರ ಹೆಸರನ್ನು ತೆಗೆದುಹಾಕಲು ಮಾತ್ರ eKYC ಮಾಡಲಾಗುತ್ತಿದೆ.

ಓದಿ: ಉಚಿತವಾಗಿ ಆಧಾರ್ ಕಾರ್ಡ್ ಅಪ್​ಡೇಟ್​ ಮಾಡಲು ಹೀಗೆ ಮಾಡಿ - Aadhaar Card Free Update

ETV Bharat Logo

Copyright © 2024 Ushodaya Enterprises Pvt. Ltd., All Rights Reserved.