Google Pixel 9 Pro Pre Orders Start in India: ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರಿಗೆ ಇದು ಉತ್ತಮ ಸಮಯ. ಮಾರುಕಟ್ಟೆಯಲ್ಲಿ ಗೂಗಲ್ ಪಿಕ್ಸೆಲ್ 9 ಪ್ರೊ ಫೋನ್‌ನ ಪ್ರಿ - ಆರ್ಡರ್ ಮಾರಾಟ ಪ್ರಾರಂಭವಾಗಿದೆ. ಈ ವರ್ಷದ ಆಗಸ್ಟ್‌ನಲ್ಲಿ, ಗೂಗಲ್ ತನ್ನದೇ ಆದ ಬ್ರಾಂಡ್ ಪಿಕ್ಸೆಲ್ ಅನ್ನು ಬಿಡುಗಡೆ ಮಾಡಿತು. ಇದು ಪಿಕ್ಸೆಲ್ 9 ಸರಣಿಯ ಮೊಬೈಲ್‌ಗಳ ಹೊಸ ಮಾದರಿಯಾಗಿದೆ. ಇವುಗಳಲ್ಲಿ Google Pixel 9, Pixel 9 Pro XL ಮತ್ತು Pixel 9 Pro ಫೋಲ್ಡ್ ಫೋನ್‌ಗಳು ಸೇರಿವೆ.
Pixel Pro ರೂಪಾಂತರವು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ. Pixel 9 Proವನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿಲ್ಲ. ಆದರೆ, ಇತ್ತೀಚೆಗೆ ಅಮೆರಿಕದ ಕ್ಯಾಲಿಫೋರ್ನಿಯಾದ ಟೆಕ್ ದೈತ್ಯ ಗೂಗಲ್ ಇವುಗಳ ಮಾರಾಟ ಆರಂಭಿಸಿದೆ.
ಶುಕ್ರವಾರ ಮಧ್ಯಾಹ್ನ 12 ಗಂಟೆಯಿಂದ ಭಾರತೀಯ ಮಾರುಕಟ್ಟೆಯಲ್ಲಿ ಗೂಗಲ್ ಪಿಕ್ಸೆಲ್ 9 ಪ್ರೊ ಮಾರಾಟ ಆರಂಭವಾಗಿದೆ. ಈ ಹೊಸ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್ ಮತ್ತು ಆಫ್‌ಲೈನ್ ರಿಟೇಲ್ ಸ್ಟೋರ್‌ಗಳಾದ ರಿಲಯನ್ಸ್ ಡಿಜಿಟಲ್ ಮತ್ತು ಕ್ರೋಮಾದಲ್ಲಿ ಲಭ್ಯವಿರುತ್ತದೆ ಎಂದು ಗೂಗಲ್ ಹೇಳಿದೆ. Google Pixel 9 Pro ಬೆಲೆ, ವೈಶಿಷ್ಟ್ಯಗಳು ಮತ್ತು ವಿಶೇಷತೆಗಳ ಕುರಿತು ಹೆಚ್ಚಿನ ವಿವರಗಳ ಬಗ್ಗೆ ಈಗ ಅರಿತುಕೊಳ್ಳೋಣ.
Google Pixel 9 Pro ವಿಶೇಷತೆ ಮತ್ತು ವೈಶಿಷ್ಟ್ಯಗಳು:
- ಡಿಸ್ಪ್ಲೇ: 6.3-ಇಂಚಿನ LTOP OLED
- ರೆಸಲ್ಯೂಶನ್: 1280 x 2856 ಪಿಕ್ಸೆಲ್ ರೆಸಲ್ಯೂಶನ್
- ಬ್ಯಾಟರಿ: 4,700mAh
- ರಿಫ್ರೆಶ್ ರೇಟ್: 120Hz
- ಬ್ರೈಟ್ನೆಸ್: 3,000 ನಿಟ್ಸ್
- ಸೆಕ್ಯೂರಿಟಿ ಚಿಪ್ಸೆಟ್: ಟೈಟಾನ್ M2
- ರಿಯರ್ ಕ್ಯಾಮೆರಾ: 50MP
- ಅಲ್ಟ್ರಾವೈಡ್ ಕ್ಯಾಮೆರಾ: 48MP
- ಫ್ರಂಟ್ ಕ್ಯಾಮೆರಾ: 42MP
- ವಿಶೇಷತೆ: ಡಸ್ಟ್ ಮತ್ತು ವಾಟರ್ ರೆಸಿಸ್ಟನ್ಸಿ
Google Pixel 9 Pro ಕನೆಕ್ಟಿವಿಟಿ ವೈಶಿಷ್ಟ್ಯಗಳು:
- WI-FI
- ಬ್ಲೂಟೂತ್ 5.3
- NFC
- Google Cast
- ಜಿಪಿಎಸ್
- ಡ್ಯುಯಲ್ ಬ್ಯಾಂಡ್ GNSS
- ಗ್ಲೋನಾಸ್
- USB ಟೈಪ್-ಸಿ ಪೋರ್ಟ್
- ಆಂಡ್ರಾಯ್ಡ್14 ಆಪರೇಟಿಂಗ್ ಸಿಸ್ಟಮ್
- ಈ ಹೊಸ Google Pixel 9 Pro ಫೋನ್ Google Tensor G4 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ.
Google Pixel 9 Pro ಮೊಬೈಲ್‌ನಲ್ಲಿ ಕಲರ್ ಆಯ್ಕೆ:
- ಹ್ಯಾಝೆಲ್
- ಪೋರ್ಸೆಲಿಯನ್
- ರೋಜ್ ಕ್ವಾರ್ಟ್ಜ್
- ಅಬ್ಸಿಡಿಯನ್
Google Pixel 9 Pro ಬೆಲೆ:
- 16GB+256GB ರೂಪಾಂತರ ಬೆಲೆ: ರೂ. 1,09,999 ಅನ್ನು ಗೂಗಲ್ ನಿರ್ಧರಿಸಿದೆ.
ಓದಿ: ಸ್ಯಾಮ್ಸಂಗ್ ಹೊಸ 5G ಸ್ಮಾರ್ಟ್‌ಫೋನ್ ಬಿಡುಗಡೆ: ಏನಿದರ ವಿಶೇಷತೆ?