ETV Bharat / technology

ಗೂಗಲ್​ನಿಂದ ಉಚಿತ AI ಕೋರ್ಸ್‌ಗಳು; ಕಲಿತರೆ ಉದ್ಯೋಗ ಪಡೆಯಲು ಹೆಚ್ಚು ಅನುಕೂಲ - Attention Mechanism

Google Free Online AI Courses: ನೀವು ಕೃತಕ ಬುದ್ಧಿಮತ್ತೆ (AI) ಕೋರ್ಸ್‌ಗಳನ್ನು ಮಾಡಲು ಬಯಸುವಿರಾ?. ದೊಡ್ಡ ದೊಡ್ಡ ಶಿಕ್ಷಣ ಕೇಂದ್ರಗಳಿಗೆ ಹೋಗಿ ಕೋರ್ಸ್‌ ಪಡೆಯಲು ಸಾಧ್ಯವಾಗುತ್ತಿಲ್ಲವೇ?. ಚಿಂತೆ ಬೇಡ!. ತಂತ್ರಜ್ಞಾನ ದಿಗ್ಗಜ ಕಂಪನಿ ಗೂಗಲ್ ಸಂಪೂರ್ಣವಾಗಿ ಉಚಿತ ಆನ್‌ಲೈನ್ AI ಕೋರ್ಸ್‌ಗಳನ್ನು ನೀಡುತ್ತಿದೆ.

free online AI courses  google free online courses  Generative AI Fundamentals  Attention Mechanism
v
author img

By ETV Bharat Karnataka Team

Published : Mar 5, 2024, 9:16 AM IST

ಜಾಗತಿಕ ಟೆಕ್‌ ದೈತ್ಯ ಕಂಪನಿ ಗೂಗಲ್ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಸಂಪೂರ್ಣ ಉಚಿತ 'AI (ಕೃತಕ ಬುದ್ಧಿಮತ್ತೆ) ಆನ್‌ಲೈನ್ ಕೋರ್ಸ್‌ಗಳನ್ನು ನೀಡುತ್ತಿದೆ. ಆಸಕ್ತರು ಈ ಕೋರ್ಸ್‌ಗಳನ್ನು ಉಚಿತವಾಗಿ ಪಡೆಯಬಹುದು. ಈ ಮೂಲಕ ನಿಮ್ಮ ಕೌಶಲ್ಯಗಳನ್ನು ಅಪ್​ಗ್ರೇಡ್​ ಮಾಡಿಕೊಂಡು ಹೊಸ ಉದ್ಯೋಗಾವಕಾಶಗಳನ್ನು ಪಡೆಯಲು ಸಾಧ್ಯವಿದೆ. ಈ ಕೋರ್ಸ್‌ಗಳ ಬಗ್ಗೆ ವಿವರವಾಗಿ ತಿಳಿಯೋಣ.

1. Introduction To Large Language Models: ಈ ಕೋರ್ಸ್ 'ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ಸ್' (LLMs) ಒಳಗೊಂಡಿದೆ. LLMಗಳ ಉಪಯೋಗವೇನು? ಯಾವ ಸಂದರ್ಭಗಳಲ್ಲಿ ಇದನ್ನು ಬಳಸಬೇಕು? ಪ್ರಾಂಪ್ಟ್ ಟ್ಯೂನಿಂಗ್ ಮಾಡುವುದು ಹೇಗೆ? ಎಂಬೆಲ್ಲ ವಿಷಯಗಳನ್ನು ಈ ಕೋರ್ಸ್‌ನಲ್ಲಿ ಕಲಿಸಲಾಗುತ್ತದೆ.

2. Introduction To Responsible AI: ಈ ಕೋರ್ಸ್ ಜವಾಬ್ದಾರಿಯುತ AI ಪರಿಕಲ್ಪನೆ ಮತ್ತು ಅದರ ಪ್ರಾಮುಖ್ಯತೆಯನ್ನು ವಿವರಿಸುತ್ತದೆ. ಗೂಗಲ್ ತಮ್ಮ ಉತ್ಪನ್ನಗಳಲ್ಲಿ 'ಜವಾಬ್ದಾರಿ AI' ತಂತ್ರಜ್ಞಾನವನ್ನು ಹೇಗೆ ಅಳವಡಿಸುತ್ತಿದೆ ಎಂಬುದನ್ನು ಸಹ ಅವರು ವಿವರಿಸುತ್ತಾರೆ.

3. Generative AI Fundamentals: ಜನರೇಟಿವ್ ಎಐ, ಲಾರ್ಜ್ ಲ್ಯಾಂಗ್ವೇಜ್ ಮಾದರಿಗಳು, ಜವಾಬ್ದಾರಿಯುತ ಎಐ ತಂತ್ರಜ್ಞಾನಗಳನ್ನು ಈ ಕೋರ್ಸ್ ಮೂಲಕ ಸುಲಭವಾಗಿ ಕಲಿಯಬಹುದು.

4. Introduction To Image Generation: ಈ ಕೋರ್ಸ್‌ನಲ್ಲಿ ಸಿದ್ಧಾಂತದ ಜೊತೆಗೆ ಚಿತ್ರ ರಚನೆಯನ್ನು ಕಲಿಸಲಾಗುತ್ತದೆ. ವರ್ಟೆಕ್ಸ್ AI ತರಬೇತಿ ಮತ್ತು ನಿಯೋಜನೆಯ ಬಗ್ಗೆ ವಿವರಿಸುತ್ತಾರೆ.

5. Encoder - Decoder Architecture: ಇದರಲ್ಲಿ 'ಮೆಷಿನ್ ಲರ್ನಿಂಗ್ ಆರ್ಕಿಟೆಕ್ಚರ್' ಕಲಿಸಲಾಗುವುದು. ಇದನ್ನು ಬಳಸಿಕೊಂಡು ಸಿಕ್ವನ್ಸ್ ಟು ಸಿಕ್ವನ್ಸ್​ ಟಾಸ್ಕ್​ಗಳನ್ನು ಹೇಗೆ ಪೂರ್ಣಗೊಳಿಸುವುದು?, ಮುಖ್ಯವಾಗಿ, ಪ್ರಶ್ನೆಗಳಿಗೆ ಉತ್ತರಿಸುವುದು, ನೀಡಿದ ಮಾಹಿತಿಯನ್ನು ಸಂಕ್ಷಿಪ್ತಗೊಳಿಸುವುದು ಮತ್ತು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಪಠ್ಯಗಳನ್ನು ಭಾಷಾಂತರಿಸುವುದು ಮುಂತಾದ ಕಾರ್ಯಗಳನ್ನು ಹೇಗೆ ಪೂರ್ಣಗೊಳಿಸಬೇಕು ಎಂದು ಅವರಿಗೆ ತಿಳಿಸಿಕೊಡಲಾಗುತ್ತದೆ.

6. Attention Mechanism : ಇನ್‌ಪುಟ್ ಸಿಕ್ವೆನ್ಸ್​ಗಳಲ್ಲಿ ನಿರ್ದಿಷ್ಟ ಭಾಗಗಳ ಮೇಲೆ ಫೋಕಸ್​ ಮಾಡುವುದಕ್ಕೆ ನ್ಯೂರಲ್​ ನೆಟ್​ವರ್ಕ್​ ಅನ್ನು ಯಾವ ರೀತಿ ಎನೇಬುಲ್​ ಮಾಡಬೇಕು ಎಂಬು ಟೆಕ್ನಿಕ್​ಗಳನ್ನು ಈ ಕೋರ್ಸ್ ಮೂಲಕ ಕಲಿಯಬಹುದು.

7. Create Image Captioning Models: ಹೊಸ ಕೋರ್ಸ್‌ನಲ್ಲಿ ಇಮೇಜ್ ಕ್ಯಾಪ್ಷನಿಂಗ್​ ಮಾಡಲ್ಸ್​ಗಳ ಬಗ್ಗೆ ಮತ್ತು ಎನ್‌ಕೋಡರ್-ಡಿಕೋಡರ್ ಆರ್ಕಿಟೆಕ್ಚರ್ ಬಗ್ಗೆ ಕಲಿಸಲಾಗುತ್ತದೆ.

8. Introduction To Generative AI Studio : ಈ ಕೋರ್ಸ್ ಜನರೇಟಿವ್ ಎಐ ಸ್ಟುಡಿಯೊದ ಪ್ರಾಥಮಿಕ ಅಂಶಗಳ ಬಗ್ಗೆ ವಿವರಿಸುತ್ತಾರೆ. ಇದನ್ನು ಬಳಸಿ ನಿಮ್ಮ ಅಪ್ಲಿಕೇಶನ್‌ಗಳಿಗಾಗಿ ಕಸ್ಟಮೈಜ್ಡ್​ ಜನರೆಟೀವ್​ AI ಮಾಡಲ್ಸ್​ ಅನ್ನು ರಚಿಸಬಹುದಾಗಿದೆ. ಅದೇ ರೀತಿ ಪ್ರೋಟೊಟೈಪ್​ ಮಾಡಲ್ಸ್​ಗಳನ್ನು ಸಹ ಕ್ರಿಯೇಟ್​ ಮಾಡಿಕೊಳ್ಳಬಹುದಾಗಿದೆ.

ಇಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಕೋರ್ಸ್‌ಗಳಿಗೆ ಉತ್ತಮ ಬೇಡಿಕೆಯಿದೆ. ಏಕೆಂದರೆ ಟೆಕ್ ಉದ್ಯೋಗಾವಕಾಶಗಳು ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಹಾಗಾಗಿ ಆಸಕ್ತರು ಗೂಗಲ್ ನೀಡುವ ಈ ಉಚಿತ ಆನ್‌ಲೈನ್ ಎಐ ಕೋರ್ಸ್‌ಗಳನ್ನು ಮಾಡುವುದು ಉತ್ತಮ.

ಇದನ್ನೂ ಓದಿ: ಅಮೆಜಾನ್​ ಪೇ, ಫೋನ್​ಪೆಗೆ ಪೈಪೋಟಿ: UPI ಇಂಟರ್​ಫೇಸ್​ ಆರಂಭಿಸಿದ ಫ್ಲಿಪ್​ಕಾರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.