ETV Bharat / technology

ಆಧುನಿಕ ಮಾನವರಿಂದ ನಿಯಾಂಡರ್ತಲ್​​ಗಳಿಗೆ ಜೀನ್ ವರ್ಗಾವಣೆ: ಹೊಸ ಸಂಶೋಧನೆ - gene flow of humans - GENE FLOW OF HUMANS

ಆಧುನಿಕ ಮಾನವರಿಂದ ನಿಯಾಂಡರ್ತಲ್​ಗಳಿಗೆ ಜೀನ್​ಗಳ ವರ್ಗಾವಣೆಯಾಗಿರಬಹುದು ಎಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.

ಆಧುನಿಕ ಮಾನವರ ಇತಿಹಾಸಪೂರ್ವ ಸೋದರಸಂಬಂಧಿ ನಿಯಾಂಡರ್ತಲ್​​ ಮಾನವ
ಆಧುನಿಕ ಮಾನವರ ಇತಿಹಾಸಪೂರ್ವ ಸೋದರಸಂಬಂಧಿ ನಿಯಾಂಡರ್ತಲ್​​ ಮಾನವ (IANS)
author img

By ETV Bharat Karnataka Team

Published : Jul 16, 2024, 5:00 PM IST

ನಾಂಜಿಂಗ್ (ಚೀನಾ): ಆಧುನಿಕ ಮಾನವರು ಮತ್ತು ಅವರ ಇತಿಹಾಸಪೂರ್ವ ಸೋದರಸಂಬಂಧಿಗಳಾದ ನಿಯಾಂಡರ್ತಲ್​​ಗಳ ನಡುವೆ ಜೀನ್​​ಗಳ ಸಂಬಂಧವಿರುವ (gene flow) ಬಗ್ಗೆ ಸಾಕಷ್ಟು ಪುರಾವೆಗಳನ್ನು ಚೀನಾ ಮತ್ತು ಅಮೆರಿಕದ ವಿಜ್ಞಾನಿಗಳ ಸಹಯೋಗದ ತಂಡವು ಕಂಡುಹಿಡಿದಿದೆ. ನಿಯಾಂಡರ್ತಲ್​​ಗಳು ಪ್ರಾಚೀನ ಮಾನವರ ಅಳಿದು ಹೋಗಿರುವ ಜಾತಿಯಾಗಿದ್ದು, ಸುಮಾರು 4 ಲಕ್ಷ ವರ್ಷಗಳ ಹಿಂದೆ ಇವರು ಯುರೋಪ್ ಮತ್ತು ಪಶ್ಚಿಮ ಏಷ್ಯಾದಲ್ಲಿ ವಾಸಿಸುತ್ತಿದ್ದರು. ಬೇಟೆಗಾರರಾಗಿದ್ದ ಈ ಮಾನವ ತಳಿಯು ಸುಮಾರು 30,000 ವರ್ಷಗಳ ಹಿಂದೆ ಕಣ್ಮರೆಯಾಗಿತ್ತು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆಧುನಿಕ ಮಾನವರು ಆಫ್ರಿಕಾದಿಂದ ಮಧ್ಯಪ್ರಾಚ್ಯಕ್ಕೆ ಪ್ರಯಾಣಿಸಿದಾಗ, ಅವರು ಸಮಯ ಮತ್ತು ವಾಸಸ್ಥಾನ ಎರಡನ್ನೂ ನಿಯಾಂಡರ್ತಲ್​ಗಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ಭಾವಿಸಲಾಗಿದೆ. ಇದು ಸಹಬಾಳ್ವೆ ಮತ್ತು ಸಂಭವನೀಯ ಆನುವಂಶಿಕ ಮಿಶ್ರಣದ (genetic mixing) ಅವಧಿಯನ್ನು ಸೂಚಿಸುತ್ತದೆ.

ನಾಂಜಿಂಗ್​​ನ ಆಗ್ನೇಯ ವಿಶ್ವವಿದ್ಯಾಲಯ ಮತ್ತು ಪ್ರಿನ್ಸ್​ಟನ್ ವಿಶ್ವವಿದ್ಯಾಲಯದ ಸಂಶೋಧಕರು ನಿಯಾಂಡರ್ತಲ್​ ಜೀನೋಮ್​​ನಲ್ಲಿ ಮಾನವ-ಅಂತರ್ಗತ ಅನುಕ್ರಮಗಳ ಉಪಸ್ಥಿತಿಯನ್ನು ಅಂದಾಜು ಮಾಡುವ ವಿಧಾನವನ್ನು ಅಭಿವೃದ್ಧಿಪಡಿಸಿದರು. ನಂತರ ಅವರು ಇದನ್ನು 2,000 ಸಮಕಾಲೀನ ಮಾನವರು ಮತ್ತು ಮೂವರು ನಿಯಾಂಡರ್ತಲ್​ಗಳ ವೈವಿಧ್ಯಮಯ ಮಾದರಿಯ ಸಂಪೂರ್ಣ-ಜೀನೋಮ್ ಅನುಕ್ರಮ ದತ್ತಾಂಶಕ್ಕೆ ಹೋಲಿಸಿದರು.

ನಿಯಾಂಡರ್ತಲ್ ಜೀನೋಮ್​​ಗಳು ಆಧುನಿಕ ಮಾನವರಿಂದ ಹುಟ್ಟಿಕೊಂಡ 2.5 ರಿಂದ 3.7 ಪ್ರತಿಶತದಷ್ಟು ಜಿನೋಮ್​ ಹೊಂದಿರುವುದನ್ನು ಫಲಿತಾಂಶಗಳು ತೋರಿಸಿವೆ. ಈ ಅಧ್ಯಯನ ವರದಿಯು ಇತ್ತೀಚಿನ ಸೈನ್ಸ್​ ಹೆಸರಿನ ಸಾಪ್ತಾಹಿಕ ಜರ್ನಲ್​ನಲ್ಲಿ ಪ್ರಕಟವಾಗಿವೆ.

ಆನುವಂಶಿಕ ದತ್ತಾಂಶದ ಪ್ರಕಾರ, ನಿಯಾಂಡರ್ತಲ್ ಜನಸಂಖ್ಯೆಯು ಗಮನಾರ್ಹವಾಗಿ ಚಿಕ್ಕದಾಗಿತ್ತು. ಅವರ ಜನಸಂಖ್ಯೆ ಹಿಂದಿನ ಅಂದಾಜುಗಳು ಸೂಚಿಸಿದ್ದಕ್ಕಿಂತ ಸರಿಸುಮಾರು 20 ಪ್ರತಿಶತ ಕಡಿಮೆಯಾಗಿತ್ತು. ಇದು ನಿಯಾಂಡರ್ತಲ್ ಜೀನ್ ಗುಂಪಿನಲ್ಲಿ ಹಾನಿಕಾರಕ ರೂಪಾಂತರವಾಗಿರುವುದನ್ನು ಸೂಚಿಸುತ್ತದೆ.

ಮಾನವರಿಂದ ನಿಯಾಂಡರ್ತಲ್​​ಗಳಿಗೆ ಎರಡು ವಿಭಿನ್ನ ಮಾದರಿಯ ಜೀನ್​ಗಳು ವರ್ಗಾವಣೆಯಾಗಿರುವ ಸಾಧ್ಯತೆಯಿದೆ ಎಂದು ಸಂಶೋಧಕರ ತಂಡ ಹೇಳಿದೆ. ಜೀನ್ ಹರಿದು ಹೋಗಿರುವ ಪ್ರಕ್ರಿಯೆಯು ಕ್ರಮವಾಗಿ ಸುಮಾರು 2 ಲಕ್ಷ ಮತ್ತು 1 ಲಕ್ಷ ವರ್ಷಗಳ ಹಿಂದೆ ಸಂಭವಿಸಿತ್ತು ಎಂದು ಅಂದಾಜಿಸಲಾಗಿದೆ. ಸಣ್ಣ ಜನಸಂಖ್ಯೆ ಮತ್ತು ಊಹೆ ಮಾಡಲಾದ ಮಿಶ್ರಣ ಚಲನಶಾಸ್ತ್ರದ ಕಾರಣದಿಂದ ನಿಯಾಂಡರ್ತಲ್ ಜನಸಂಖ್ಯೆಯು ಕಾಲಾನಂತರದಲ್ಲಿ ಗಾತ್ರದಲ್ಲಿ ಕಡಿಮೆಯಾಗಿ ಅಂತಿಮವಾಗಿ ಆಧುನಿಕ ಮಾನವನ ಜೀನ್ ಕೋಶದಲ್ಲಿ ವಿಲೀನಗೊಂಡಿತು ಎಂದು ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ : ಚೀನಾದ ಐಸ್ಪೇಸ್​ ರಾಕೆಟ್​ ಪತನ: 3 ಉಪಗ್ರಹಗಳು ನಾಶ - China rocket fails

ETV Bharat Logo

Copyright © 2025 Ushodaya Enterprises Pvt. Ltd., All Rights Reserved.