ETV Bharat / technology

ಟೆಲಿಗ್ರಾಮ್ ಮುಖ್ಯಸ್ಥ ಪಾವೆಲ್ ಡುರೊವ್ ಬಂಧನ ವಿಸ್ತರಣೆ - Extends Pavel Durov Detention - EXTENDS PAVEL DUROV DETENTION

ಟೆಲಿಗ್ರಾಮ್​ಗೆ ಸಂಬಂಧಿಸಿದ ಆಪಾದಿತ ಅಪರಾಧಗಳ ಮೇಲೆ ಶನಿವಾರ ಬಂಧನಕ್ಕೊಳಗಾದ ರಷ್ಯಾದ ಸಂಸ್ಥಾಪಕ ಮತ್ತು ಟೆಲಿಗ್ರಾಮ್‌ನ ಮುಖ್ಯಸ್ಥ ಪಾವೆಲ್ ಡುರೊವ್​ ಅವರ ಬಂಧನ ವಿಸ್ತರಣೆಗೊಂಡಿದೆ.

ಟೆಲಿಗ್ರಾಮ್ ಮುಖ್ಯಸ್ಥ ಪಾವೆಲ್ ಡುರೊವ್ ಬಂಧನ ವಿಸ್ತರಣೆ
ಟೆಲಿಗ್ರಾಮ್ ಮುಖ್ಯಸ್ಥ ಪಾವೆಲ್ ಡುರೊವ್ ಬಂಧನ ವಿಸ್ತರಣೆ (AFP)
author img

By ETV Bharat Tech Team

Published : Aug 27, 2024, 3:15 PM IST

ಪ್ಯಾರಿಸ್​(ಫ್ರೆಂಚ್​): ವಿವಾದಾತ್ಮಕ ಮೆಸೇಜಿಂಗ್​ ಅಪ್ಲಿಕೇಶನ್ ಟೆಲಿಗ್ರಾಮ್​ಗೆ ಸಂಬಂಧಿಸಿದ ಆಪಾದಿತ ಅಪರಾಧಗಳ ಮೇಲೆ ಶನಿವಾರ ಬಂಧನಕ್ಕೊಳಗಾದ ರಷ್ಯಾದ ಸಂಸ್ಥಾಪಕ ಮತ್ತು ಟೆಲಿಗ್ರಾಮ್‌ನ ಮುಖ್ಯಸ್ಥ ಪಾವೆಲ್ ಡುರೊವ್​ ಅವರ ಬಂಧನವನ್ನು ಫ್ರೆಂಚ್ ಅಧಿಕಾರಿಗಳು ಸೋಮವಾರ ವಿಸ್ತರಿಸಿದ್ದಾರೆ ಎಂದು ಪ್ರಕರಣದ ಮೂಲವೊಂದು ಅಧಿಕೃತ ಮಾಧ್ಯಮ ಸಂಸ್ಥೆಗೆ ತಿಳಿಸಿದೆ.

39 ವರ್ಷದ ಪಾವೆಲ್ ಡುರೊವ್ ಅವರನ್ನು ವಂಚನೆ, ಮಾದಕವಸ್ತು ಕಳ್ಳಸಾಗಣೆ, ಸೈಬರ್ ಬುಲ್ಲಿಂಗ್, ಸಂಘಟಿತ ಅಪರಾಧ ಹಾಗೂ ಭಯೋತ್ಪಾದನೆಯನ್ನು ಉತ್ತೇಜಿಸುವುದು ಸೇರಿದಂತೆ ಎಲ್ಲಾ ಆಪಾದಿತ ಅಪರಾಧಗಳ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಇದರ ಮಧ್ಯೆ 900 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಟೆಲಿಗ್ರಾಮ್​ನಲ್ಲಿ​ ಕ್ರಿಮಿನಲ್ ಚಟುವಟಿಕೆ ಹರಡಲು ಅವಕಾಶ ಮಾಡಿಕೊಟ್ಟಿರುವ ಆರೋಪವನ್ನು ಕಂಪನಿಯು ತಳ್ಳಿಹಾಕಿದೆ.

ಇನ್ನು ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ಅನಿರೀಕ್ಷಿತವಾಗಿ ಬಂಧನಗೊಂಡ ಪಾವೆಲ್ ಡುರೊವ್ 2ನೇ ದಿನ ಫ್ರೆಂಚ್ ಪೊಲೀಸರ ವಶದಲ್ಲಿ ಕಳೆದಿದ್ದು, ಇದಕ್ಕೆ ಫ್ರೆಂಚ್​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್​ ಸೋಮವಾರ ಡುರೊವ್ ಬಂಧನಕ್ಕೆ ಯಾವುದೇ ರಾಜಕೀಯ ಸಂಬಂಧವಿಲ್ಲ ಎಂದಿದ್ದಾರೆ. ಇನ್ನು ಡುರೊವ್​ ಅವರನ್ನು ಬಂಧಿಸಿದ ಸಮಯ ಮತ್ತು ಸಂದರ್ಭಗಳ ಬಗ್ಗೆ ಹಲವಾರು ಪ್ರಶ್ನೆಗಳು ಬಂದಿದ್ದು, ಇದನ್ನು ಬುಧವಾರದವರೆಗೆ ವಿಸ್ತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಫ್ರಾನ್ಸ್​ನಲ್ಲಿ ಟೆಲಿಗ್ರಾಮ್ ಸ್ಥಾಪಕ ಡುರೊವ್ ಬಂಧನ: ಆರೋಪ ಸಾಬೀತಾದರೆ 20 ವರ್ಷ ಜೈಲು - Telegram founder Durov arrested

ETV Bharat Logo

Copyright © 2024 Ushodaya Enterprises Pvt. Ltd., All Rights Reserved.