ETV Bharat / technology

ಮೂರು ವರ್ಷಗಳ ಬಳಿಕ ಮತ್ತೆ ಭಾರತಕ್ಕೆ ಕಾಲಿಟ್ಟ ಫೋರ್ಡ್​ ಕಂಪನಿ - Ford Motor Restart In India

author img

By ETV Bharat Tech Team

Published : Sep 13, 2024, 5:13 PM IST

Ford Motor Restart In India: 3 ವರ್ಷಗಳ ಹಿಂದೆ ಭಾರತ ತೊರೆದಿದ್ದ ಅಮೆರಿಕದ ಫೋರ್ಡ್ ಕಂಪನಿ ತನ್ನ ವಾಪಾಸಾತಿ ಘೋಷಿಸಿದೆ. ಕಂಪನಿಯು ತಮಿಳುನಾಡಿನ ತನ್ನ ಸ್ಥಾವರದಲ್ಲಿ ವಾಹನ ಮರು - ತಯಾರಿಸುವ ಬಗ್ಗೆ ಚರ್ಚೆ ಪ್ರಾರಂಭಿಸಿದೆ.

CAR MANUFACTURER COMPANY FORD  FORD MOTOR  FORD PRODUCTION IN TAMILNADU
ಮೂರು ವರ್ಷಗಳ ಬಳಿಕ ಮತ್ತೆ ಭಾರತಕ್ಕೆ ಕಾಲಿಟ್ಟ ಫೋರ್ಡ್​ ಕಂಪನಿ (IANS Photo)

Ford Motor Restart In India: ಸುಮಾರು 3 ವರ್ಷಗಳ ಹಿಂದೆ ಭಾರತದಲ್ಲಿ ತನ್ನ ವ್ಯಾಪಾರವನ್ನು ಮುಚ್ಚುವುದಾಗಿ ಘೋಷಿಸಿದ್ದ ಅಮೆರಿಕದ ಕಾರು ತಯಾರಕ ಫೋರ್ಡ್ ಮತ್ತೆ ಭಾರತಕ್ಕೆ ಬರುತ್ತಿದೆ. ಭಾರತದಲ್ಲಿ ಉತ್ಪಾದನೆ ಪ್ರಾರಂಭಿಸುವುದಾಗಿ ಕಂಪನಿಯು ಮತ್ತೊಮ್ಮೆ ಹೇಳಿದೆ. ತಮಿಳುನಾಡಿನಲ್ಲಿರುವ ತಮ್ಮ ಸ್ಥಾವರದಲ್ಲಿ ಈ ಕಾರನ್ನು ಮತ್ತೆ ತಯಾರಿಸಲಾಗುವುದು. ಈ ಬಗ್ಗೆ ಕಂಪನಿ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ನೀಡಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅಮೆರಿಕ ಭೇಟಿ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

ಫೋರ್ಡ್​ ಹೇಳಿದ್ದು ಹೀಗೆ: ಕಂಪನಿಯು ಭಾರತಕ್ಕೆ ಬದ್ಧವಾಗಿದೆ. ಏಕೆಂದರೆ ಹೊಸ ಜಾಗತಿಕ ಮಾರುಕಟ್ಟೆಗಳಿಗೆ ಸೇವೆ ನೀಡಲು ತಮಿಳುನಾಡಿನಲ್ಲಿ ಲಭ್ಯವಿರುವ ಉತ್ಪಾದನಾ ಪರಿಣತಿಯನ್ನು ಬಳಸಿಕೊಳ್ಳಲು ನಾವು ಉದ್ದೇಶಿಸಿದ್ದೇವೆ ಎಂದು ಫೋರ್ಡ್ ಇಂಟರ್​​ನ್ಯಾಷನಲ್​ ಮಾರ್ಕೆಟ್ ಗ್ರೂಪ್ ಅಧ್ಯಕ್ಷ ಕೆ. ಹಾರ್ಟ್ ಹೇಳಿದ್ದಾರೆ.

ಉತ್ಪಾದನೆ ಆರಂಭಿಸಲು ಚಿಂತನೆ: ಅಮೆರಿಕದ ಆಟೊಮೊಬೈಲ್ ತಯಾರಕ ಫೋರ್ಡ್ ಶುಕ್ರವಾರ ಭಾರತದಿಂದ ರಫ್ತು ಮಾಡಲು ಮಾತ್ರ ವಾಹನಗಳ ತಯಾರಿಕೆಯನ್ನು ಪ್ರಾರಂಭಿಸುವುದಾಗಿ ಹೇಳಿದೆ. ಇದಕ್ಕಾಗಿ ಕಂಪನಿಯು ಚೆನ್ನೈನಲ್ಲಿ ಉತ್ಪಾದನಾ ಘಟಕದ ತಯಾರಿಯನ್ನೂ ಆರಂಭಿಸಿದೆ. ಈ ಬಗ್ಗೆ ತಮಿಳುನಾಡು ಸರ್ಕಾರಕ್ಕೂ ತಿಳಿಸಿರುವುದಾಗಿ ಕಂಪನಿ ತಿಳಿಸಿದೆ.

ತಮಿಳುನಾಡು ಸರ್ಕಾರಕ್ಕೆ ಪತ್ರ: ಕಂಪನಿಯು 2021 ರಲ್ಲಿ ಭಾರತದಲ್ಲಿ ವಾಹನಗಳ ಉತ್ಪಾದನೆಯನ್ನು ನಿಲ್ಲಿಸುವುದಾಗಿ ಘೋಷಿಸಿತ್ತು. ಆದರೆ ಈಗ ಅದು ತಮಿಳುನಾಡು ಸರ್ಕಾರಕ್ಕೆ ಉದ್ದೇಶ ಪತ್ರವನ್ನು (LOI) ನೀಡಿದೆ. ಚೆನ್ನೈ ಸ್ಥಾವರವನ್ನು ರಫ್ತು ಉತ್ಪಾದನೆಗೆ ಬಳಸಲು ನಿರ್ಧರಿಸಲಾಗಿದೆ. ಫೋರ್ಡ್ ನಾಯಕತ್ವ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಅಮೆರಿಕ ಭೇಟಿಯ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಗಿದೆ ಎಂದು ಫೋರ್ಡ್ ಹೇಳಿಕೆಯಲ್ಲಿ ತಿಳಿಸಿದೆ.

ಈ ಕಾರ್ಯತಂತ್ರದ ಕಂಪನಿಯ ಮಹತ್ವಾಕಾಂಕ್ಷೆಯ 'ಫೋರ್ಡ್ + ಬೆಳವಣಿಗೆಯ ಯೋಜನೆ'ಯ ಭಾಗವಾಗಿದೆ. ತಯಾರಿಕೆಯ ಪ್ರಕಾರ ಮತ್ತು ಇತರ ವಿವರಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸಲಾಗುವುದು ಎಂದು ಫೋರ್ಡ್ ಹೇಳಿದೆ.

ಕಂಪನಿಯು ತಮಿಳುನಾಡಿನಲ್ಲಿ ತನ್ನ ಜಾಗತಿಕ ವ್ಯಾಪಾರ ಕಾರ್ಯಾಚರಣೆಗಳಲ್ಲಿ ಪ್ರಸ್ತುತ 12,000 ಜನರನ್ನು ನೇಮಿಸಿಕೊಂಡಿದೆ. ಮುಂದಿನ ಮೂರು ವರ್ಷಗಳಲ್ಲಿ ಈ ಸಂಖ್ಯೆಯು 2,500 ರಿಂದ 3,000 ಉದ್ಯೋಗಗಳು ಹೆಚ್ಚಾಗುವ ನಿರೀಕ್ಷೆಯಿದೆ.

ಓದಿ: 32 ಕಿ.ಮೀ ಮೈಲೇಜ್​ ನೀಡುವ ಸ್ವಿಫ್ಟ್ ಸಿಎನ್‌ಜಿ ಕಾರು ಪರಿಚಯಿಸಿದ ಮಾರುತಿ ಸುಜುಕಿ! ಗ್ರಾಹಕರು ಫುಲ್​ ಖುಷ್​ - New Swift CNG Car Launched

ETV Bharat Logo

Copyright © 2024 Ushodaya Enterprises Pvt. Ltd., All Rights Reserved.