ETV Bharat / technology

Explained: ಇದೇ ನಿಯಮ ಜಾರಿಯಾದರೆ ಭಾರತ ತೊರೆಯಬೇಕಾಗುತ್ತದೆ ಎಂದು ವಾಟ್ಸ್​ಆ್ಯಪ್​ ಹೇಳಿದ್ದೇಕೆ? - WhatsApp DEBATE IN INDIA

ತನಿಖಾ ಸಂಸ್ಥೆಗಳಿಗೆ ಸಂದೇಶ ಕಳುಹಿಸಿದ ಮೂಲವನ್ನು ಕಂಡು ಹಿಡಿಯುವ ಐಟಿ ನಿಯಮದ ಪ್ರಕಾರ ಮಾಹಿತಿ ನೀಡಲು ಸಾಧ್ಯವಿಲ್ಲ. ಎನ್​​ಕ್ರಿಪ್ಶನ್​ ತೆಗೆದು ಹಾಕಲು ಆಗಲ್ಲ. ಒಂದೊಮ್ಮೆ ಮಾಹಿತಿ ನೀಡಲೇಬೇಕು ಎಂಬ ಒತ್ತಾಯ ಮಾಡಿದರೆ ತಾನು ಭಾರತೀಯ ಮಾರುಕಟ್ಟೆಯಿಂದ ಹೊರ ಹೋಗುವುದಾಗಿ ಮೆಟಾದ ವಾಟ್ಸ್​ಆ್ಯಪ್​ ಹೇಳಿದೆ.

Explained: Why WhatsApp has threatened to exit India
Explained: ಇದೇ ನಿಯಮ ಜಾರಿಯಾದರೆ ಭಾರತ ತೊರೆಯಬೇಕಾಗುತ್ತದೆ ಎಂದು ವಾಟ್ಸ್​ಆ್ಯಪ್​ ಹೇಳಿದ್ದೇಕೆ?
author img

By ETV Bharat Karnataka Team

Published : Apr 27, 2024, 6:53 AM IST

Updated : Apr 27, 2024, 8:17 AM IST

ನವದೆಹಲಿ: ಭಾರತದಲ್ಲಿ ಚರ್ಚೆ ಹುಟ್ಟುಹಾಕಿರುವ ಮೆಟಾ ಒಡೆತನದ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್​ಆ್ಯಪ್​​, ಸಂದೇಶಗಳ ಎನ್‌ಕ್ರಿಪ್ಶನ್ ನ ನಿಯಮವನ್ನು ತೆಗೆದುಹಾಕಲು ನಿರಾಕರಿಸಿದ್ದು, ಹಾಗೊಂದು ವೇಳೆ ಒತ್ತಡ ಹಾಕಿದರೆ ದೇಶೀಯ ಮಾರುಕಟ್ಟೆಯಿಂದ ನಿರ್ಗಮಿಸುವುದಾಗಿ ಹೇಳಿದೆ.

ಏನಿದು ಎನ್‌ಕ್ರಿಪ್ಶನ್ ಗೌಪ್ಯತೆ: ಎನ್​​​​​ಕ್ರಿಪ್ಶನ್ ಹಾಗೂ ವ್ಯಕ್ತಿಯ ಖಾಸಗಿ ಗೌಪ್ಯತೆ ಕಾಪಾಡಿಕೊಳ್ಳುವ ತನ್ನ ನಿಯಮಗಳನ್ನು ಮುರಿಯಲು ಸಾಧ್ಯವಿಲ್ಲ ಎಂದು ವಾಟ್ಸ್​ಆ್ಯಪ್​ ಹೇಳಿದೆ. ಆದರೆ ಸರ್ಕಾರ ಆ್ಯಪ್​​ನಲ್ಲಿರುವ ಸಂದೇಶಗಳ ಮೂಲವನ್ನು ಕಂಡುಹಿಡಿಯಲು ಕಂಪನಿ ಸಹಕರಿಸಬೇಕು ಹಾಗೂ ಎನ್ಸ್​​​ಕ್ರಿಪ್ಶನ್​​ ಅನ್ನು ತೆಗೆಯಲು ಅನುಮತಿಸಬೇಕು. ಮೂಲ ಪತ್ತೆ ಹಚ್ಚಲು ಯಾವುದೇ ಮಾರ್ಗವಿಲ್ಲದಿದ್ದರೆ, ಕಂಪನಿಯು ಬೇರೆ ಕಾರ್ಯವಿಧಾನವನ್ನು ರೂಪಿಸಬೇಕು ಎಂದು ಸರ್ಕಾರ ಈ ಹಿಂದೆ ಕಂಪನಿಗೆ ತಾಕೀತು ಮಾಡಿತ್ತು.

2019 ರಲ್ಲಿ ಗುರುತಿಸುವಿಕೆ ನಿರ್ಬಂಧಿಸುವ ಎನ್​ಕ್ರಿಪ್ಶನ್​​​​​​​ ತೆಗೆದು ಹಾಕಲು ಕೇಂದ್ರವು ವ್ಯಾಟ್ಸ್​ಆ್ಯಪ್​ಗೆ ನಿರ್ದೇಶನ ನೀಡಿತ್ತು. ಯಾವ ಸಂದೇಶವನ್ನು ಯಾರು ಕಳುಹಿಸಿದ್ದಾರೆ ಎಂಬುದನ್ನು ಅದರ ವಿಷಯಗಳನ್ನು ಓದದೆಯೇ ಗುರುತಿಸಲು ಸರ್ಕಾರ ಮತ್ತು WhatsApp ಗೆ ಇದು ಸಹಕಾರಿಯಾಗಿದೆ. ಇದೀಗ, ದೆಹಲಿ ಹೈಕೋರ್ಟ್‌ನಲ್ಲಿ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) 2021 ರ ನಿಯಮವನ್ನು ಪ್ರಶ್ನಿಸಿ WhatsApp ಮತ್ತು Meta ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ಕಂಪನಿಯು ಎನ್​ಕ್ರಿಪ್ಶನ್​ ತೆಗೆದು ಹಾಕಲು ಸಾಧ್ಯವಿಲ್ಲ. ಇದು ವ್ಯಕ್ತಿಯ ಮೂಲಭೂತ ಹಕ್ಕಿನ ಉಲ್ಲಂಘನೆ ಆಗಿದೆ ಎಂದಿದ್ದು, ಹಾಗೊಂದು ವೇಳೆ ಗೌಪ್ಯತೆ ನಿಯಮವನ್ನು ತೆಗೆದು ಹಾಕುವಂತೆ ಕೇಳಿದರೆ, ಭಾರತೀಯ ಮಾರುಕಟ್ಟೆಯನ್ನು ತೊರೆಯುವುದಾಗಿ ಹೇಳಿದೆ.

ಆಗಸ್ಟ್ 14 ರಂದು ಪ್ರಕರಣಗಳ ವಿಚಾರಣೆ - ಏನಿದು ಪ್ರಕರಣ?: ಐಟಿ ನಿಯಮ 2021 ರಲ್ಲಿನ 4(2) ನಿಯಮವು ಮೆಸೇಜಿಂಗ್​ ಸೇವೆಗಳನ್ನು ಒದಗಿಸುವಲ್ಲಿ ತೊಡಗಿರುವ ಸಾಮಾಜಿಕ ಮಾಧ್ಯಮ ಕಂಪನಿಗಳು ನ್ಯಾಯಾಲಯ ಅಥವಾ ಸಕ್ಷಮ ಪ್ರಾಧಿಕಾರದಿಂದ ಸಂದೇಶವನ್ನು ಕಳುಹಿಸಲು ಆದೇಶವಿದ್ದರೆ ಯಾರು ಸಂದೇಶವನ್ನು ಕಳುಹಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂಬ ನಿಯಮವನ್ನು ಮಾಡಿದೆ.

"ಪ್ರಾಥಮಿಕವಾಗಿ ಸಂದೇಶ ಕಳುಹಿಸುವಿಕೆಯ ಸ್ವರೂಪದಲ್ಲಿ ಸೇವೆಗಳನ್ನು ಒದಗಿಸುವ ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿಯು ತನ್ನ ಕಂಪ್ಯೂಟರ್ ಸಂಪನ್ಮೂಲದಲ್ಲಿನ ಮಾಹಿತಿಯು, ಯಾರು ಪ್ರಥಮವಾಗಿ ಸಂದೇಶ ಕಳುಹಿಸಿದ್ದಾರೆ ಎಂಬುದನ್ನು ಕಂಡು ಹಿಡಿಯಲು ನ್ಯಾಯಾಲಯವು ಅಂಗೀಕರಿಸಿದ ನ್ಯಾಯಾಂಗ ಆದೇಶ ಅಥವಾ ಸೆಕ್ಷನ್ ಅಡಿ ಇದನ್ನು ಪತ್ತೆ ಹಚ್ಚಲು ತನಿಖಾ ಸಂಸ್ಥೆಗಳಿಗೆ ಐಟಿ ನಿಯಮ 2021 ಸಹಾಯ ಮಾಡಲಿದೆ. ತನಿಖಾಧಿಕಾರಿಗಳು ಕೇಳಿದಾಗ ಆ ಮಾಹಿತಿಯನ್ನು ಮೆಸೇಜಿಂಗ್​ ಕಂಪನಿಗಳು ಒದಗಿಸಬೇಕಾಗುತ್ತದೆ. ಮಾಹಿತಿ ತಂತ್ರಜ್ಞಾನ 2009 ರ 69ನೇ ಸಕ್ಷಮ ಪ್ರಾಧಿಕಾರದ (ಮಾಹಿತಿ ಪ್ರತಿಬಂಧಕ, ಮೇಲ್ವಿಚಾರಣೆ ಮತ್ತು ಡಿ ಕ್ರಿಪ್ಶನ್‌ಗಾಗಿ ಕಾರ್ಯವಿಧಾನ ಮತ್ತು ಸುರಕ್ಷತೆ) ನಿಯಮಗಳು ಹೇಳುತ್ತವೆ.

ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಅಥವಾ ಅತ್ಯಾಚಾರ, ಅಶ್ಲೀಲ ವಿಷಯ ಅಥವಾ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಅಪರಾಧಗಳಿಗೆ ಈ ನಿಯಮದ ಅನ್ವಯ ಮೂಲ ಮಾಹಿತಿಯನ್ನ ಮೆಸೇಜಿಂಗ್​ ಸೇವೆ ಒದಗಿಸುವ ಕಂಪನಿಗಳಿಂದ ಮಾಹಿತಿ ಹುಡುಕಲಾಗುತ್ತದೆ. ಕಾನೂನು ಉಲ್ಲಂಘಿಸಿದರೆ, ಈ ನಿಯಮದ ಅನ್ವಯ ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆಯನ್ನು ಒದಗಿಸುತ್ತದೆ.

WhatsApp ಹೇಳಿದ್ದೇನು?: ತನ್ನ ಅರ್ಜಿಯಲ್ಲಿ ವಾಟ್ಸ್​ಆ್ಯಪ್​, ಸರ್ಕಾರ ರೂಪಿಸಿರುವ ನಿಯಮವನ್ನು "ಅಸಂವಿಧಾನಿಕ ಎಂದು ಘೋಷಿಸಬೇಕು ಮತ್ತು ಅನುಸರಣೆಗೆ ಯಾವುದೇ ಕ್ರಿಮಿನಲ್ ಹೊಣೆಗಾರಿಕೆ ವಿಧಿಸಬಾರದು" ಎಂದು ಕೋರಿದೆ.

ಪತ್ತೆಹಚ್ಚುವಿಕೆಯ ಅವಶ್ಯಕತೆಯು, ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಮುರಿಯಲು ಕಂಪನಿಯನ್ನು ಒತ್ತಾಯಿಸುತ್ತದೆ ಮತ್ತು ಸಂವಹನ ನಡೆಸಲು WhatsApp ನ ಪ್ಲಾಟ್‌ಫಾರ್ಮ್ ಅನ್ನು ಬಳಸುವ ನೂರಾರು ಮಿಲಿಯನ್ ಬಳಕೆದಾರರ ಗೌಪ್ಯತೆ ಮತ್ತು ಮುಕ್ತ ಭಾಷಣದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿಯಲ್ಲಿ ಮೆಟಾ ವಾದಿಸಿದೆ. ವಾಟ್ಸ್​ಆ್ಯಪ್​ ಪರವಾಗಿ ವಕೀಲ ತೇಜಸ್ ಕರಿಯಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ತಮ್ಮ ವಾದ ಮಂಡನೆ ಮಾಡಿದರು.

"ಎನ್‌ಕ್ರಿಪ್ಶನ್ ನಿಯಮವನ್ನು ಮುರಿಯಲು ನಮಗೆ ಹೇಳಿದರೆ, ವಾಟ್ಸ್​​ಆ್ಯಪ್​ ಭಾರತೀಯ ಮಾರುಕಟ್ಟೆಯಿಂದ ಹೊರ ಹೋಗಬೇಕಾಗುತ್ತದೆ ಎಂದು ನಾವು ಗ್ರಾಹಕರ ಗೌಪ್ಯತೆ ಕಾಪಾಡುವ ಜವಾಬ್ದಾರಿ ಮೇಲೆ ಹೀಗೆ ಹೇಳುತ್ತಿದ್ದೇವೆ" ಎಂದು ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರ ಪೀಠಕ್ಕೆ ತಿಳಿಸಿದ್ದಾರೆ. ನಾವು ಸಂಪೂರ್ಣ ಸರಪಳಿಯನ್ನು ಇಟ್ಟುಕೊಳ್ಳಬೇಕು ಮತ್ತು ಯಾವ ಸಂದೇಶಗಳನ್ನು ಡೀಕ್ರಿಪ್ಟ್ ಮಾಡಲು ಕೇಳಲಾಗುತ್ತದೆ ಎಂದು ನಮಗೆ ತಿಳಿದಿಲ್ಲ. ಇದರರ್ಥ ಲಕ್ಷಾಂತರ ಮತ್ತು ಮಿಲಿಯನ್ ಸಂದೇಶಗಳನ್ನು ಹಲವಾರು ವರ್ಷಗಳವರೆಗೆ ಸಂಗ್ರಹಿಸಬೇಕಾಗುತ್ತದೆ ಎಂದು ಅವರು ಪೀಠದ ಗಮನಕ್ಕೆ ತಂದರು.

ಆಗ ಪೀಠವು ಈ ನಿಯಮ ಜಗತ್ತಿನ ಬೇರೆಲ್ಲಿಯಾದರೂ ಜಾರಿಯಲ್ಲಿದೆಯೇ ಎಂದು ಪ್ರಶ್ನಿಸಿತು. ಇಲ್ಲ, ಬ್ರೆಜಿಲ್‌ನಲ್ಲಿಯೂ ಇಲ್ಲ ಎಂದು ವಕೀಲರು ಉತ್ತರಿಸಿದರು.

ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಅಂತಹ ವೇದಿಕೆಗಳಲ್ಲಿ ಸಂದೇಶಗಳ ಮೂಲವನ್ನು ಪತ್ತೆಹಚ್ಚಲು ನಿಯಮದ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ವಕೀಲರು ಪ್ರತಿಪಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು ಗೌಪ್ಯತೆ ಹಕ್ಕುಗಳು ಸಂಪೂರ್ಣವಲ್ಲ ಮತ್ತು ಎಲ್ಲೋ ಒಂದು ಸಮತೋಲನವನ್ನು ತರಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ವಾಟ್ಸ್​ಆ್ಯಪ್​ ಮತ್ತು ಫೇಸ್‌ಬುಕ್ ಬಳಕೆದಾರರ ಮಾಹಿತಿ ರವಾನೆ ಮೂಲಕ ಹಣಗಳಿಸುತ್ತವೆ ಮತ್ತು ಅದು ಗೌಪ್ಯತೆಯನ್ನು ರಕ್ಷಿಸುತ್ತದೆ ಎಂದು ಹೇಳಲು ಕಾನೂನುಬದ್ಧವಾಗಿ ಅರ್ಹತೆ ಹೊಂದಿಲ್ಲ ಎಂದು ಕೇಂದ್ರದ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಫೇಸ್‌ಬುಕ್ ಅನ್ನು ಹೆಚ್ಚು ಜವಾಬ್ದಾರಿಯುತವಾಗಿಸುವ ಪ್ರಯತ್ನಗಳು ವಿವಿಧ ದೇಶಗಳಲ್ಲಿ ನಡೆಯುತ್ತಿವೆ ಎಂಬ ವಿಚಾರವನ್ನೂ ಕೋರ್ಟ್​ ಗಮನಕ್ಕೆ ಕೇಂದ್ರದ ಪರ ವಕೀಲರು ತಂದರು.

ಇದನ್ನು ಓದಿ: 3ನೇ ತ್ರೈಮಾಸಿಕದಲ್ಲಿ 21.9 ಬಿಲಿಯನ್ ಡಾಲರ್ ನಿವ್ವಳ ಆದಾಯ ಗಳಿಸಿದ ಮೈಕ್ರೊಸಾಫ್ಟ್​ - MICROSOFT revenue

Last Updated : Apr 27, 2024, 8:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.