ETV Bharat / technology

ಭಾರತದ ಭೇಟಿ ಮುಂದೂಡಿದ ಎಲೋನ್​ ಮಸ್ಕ್​: ಕಾರಣ ಇದು! - Elon Musk will not visit India

author img

By IANS

Published : Apr 20, 2024, 11:16 AM IST

ಪ್ರಧಾನಿ ಮೋದಿ ಎದುರು ನೋಡುತ್ತಿರುವುದಾಗಿ ಕಳೆದ ವಾರ ದೃಢಪಡಿಸಿದ್ದ ಮಸ್ಕ್​, ಇದೀಗ ತಮ್ಮ ಪ್ರವಾಸ ಮುಂದೂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

Elon Musk confirmed that he will not visit India

ನವದೆಹಲಿ: ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಲು ಸಜ್ಜಾಗಿದ್ದ ಟೆಸ್ಲಾ ಸಂಸ್ಥಾಪಕ ಎಲೋನ್​ ಮಸ್ಕ್​ ಇದೀಗ ತಮ್ಮ ಈ ಪ್ರವಾಸವನ್ನು ಮುಂದೂಡಿದ್ದಾರೆ. ಕಳೆದ ವಾರ ಭಾರತಕ್ಕೆ ಭೇಟಿ ನೀಡುವ ಕುರಿತು ಖಚಿತ ಪಡಿಸಿದ್ದ ಅವರು, ಇದೀಗ ತಮ್ಮ ಪ್ರವಾಸ ರದ್ದುಗೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ದೃಢಪಡಿಸಿದ್ದಾರೆ.

'ದುರಾದೃಷ್ಟವಶಾತ್​​ ಟೆಸ್ಲಾ ಬಾದ್ಯತೆಗಳ ಹಿನ್ನಲೆ ಭಾರತಕ್ಕೆ ಭೇಟಿ ನೀಡುವುದನ್ನು ಮುಂದೂಡುವ ಅಗತ್ಯ ಏರ್ಪಟಿದೆ. ಈ ವರ್ಷಾಂತ್ಯದಲ್ಲಿ ಭಾರತ ಪ್ರವಾಸ ಕುರಿತು ಯೋಚಿಸಲಾಗುವುದು' ಎಂದು ಅವರು ಪೋಸ್ಟ್​ ಮಾಡಿದ್ದಾರೆ.

ಈ ಮೊದಲು ವಿಶ್ವದ ಬಿಲೇನಿಯರ್ ಮತ್ತು​ ಪ್ರಧಾನಿ ನರೇಂದ್ರ ಮೋದಿ ಭೇಟಿ ಈ ತಿಂಗಳು ನಿಗದಿಯಾಗಿತ್ತು. ಈ ಕುರಿತು ಕಳೆದ ವಾರ ಟೆಸ್ಲಾ ಸಂಸ್ಥಾಪಕ ಕೂಡ ಎಕ್ಸ್​ನಲ್ಲಿ ಖಚಿತಪಡಿಸಿದ್ದರು. ಈ ಭೇಟಿಯ ಮೂಲ ಉದ್ದೇಶ ಭಾರತದಲ್ಲಿ ಟೆಸ್ಲಾ ಇವಿ ಘಟಕ ಸ್ಥಾಪನೆಯಾಗಿತ್ತು. ಇದರ ಜೊತೆ ದೇಶದಲ್ಲಿ ತಮ್ಮ ಸಾಟಲೈಟ್​​ ಇಂಟರ್​ನೆಟ್​ ಸೇವೆ ಸ್ಟಾರ್​ಲಿಂಕ್​ ಪ್ರವೇಶ ಕುರಿತು ಕೂಡ ಚರ್ಚಿಸಲಿದ್ದಾರೆ ಎನ್ನಲಾಗಿತ್ತು. ಪ್ರಧಾನಿ ಭೇಟಿ ಹೊರತಾಗಿ ಮಸ್ಕ್​ ಭಾರತೀಯ ಬಾಹ್ಯಾಕಾಶ ಕಂಪನಿಗಳ ಪ್ರತಿನಿಧಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದರು.

ಟೆಸ್ಲಾ ತ್ರೈಮಾಸಿಕ ಫಲಿತಾಂಶ: ಇತ್ತೀಚೆಗೆ ಟೆಸ್ಲಾದ ಪ್ರಮುಖ ಮಾರುಕಟ್ಟೆಗಳಾದ ಯುನೈಟೆಡ್​​​​ ​ ಸ್ಟೇಟ್ಸ್​ ಮತ್ತು ಚೀನಾದಲ್ಲಿ ಮಾರಾಟ ಕುಗ್ಗಿದೆ. ಜಾಗತಿಕವಾಗಿ ಟೆಸ್ಲಾ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಶೇ 10ರಷ್ಟು ಅಂದರೆ 14 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದಾದ ಬಳಿಕದ ಟೆಸ್ಲಾದ ತ್ರೈಮಾಸಿಕ ಫಲಿತಾಂಶಗಳ ಕುರಿತು ವಿಶ್ಲೇಷಕರೊಂದಿಗೆ ಚರ್ಚೆ ನಡೆಸುವ ಹಿನ್ನೆಲೆಯಲ್ಲಿ ಮಸ್ಕ್​​ ಈ ಭೇಟಿ ಮುಂದೂಡಿದ್ದಾರೆ.

ಕಳಪೆ ಆರ್ಥಿಕ ಸಾಧನೆ ಹಿನ್ನೆಲೆ ಟೆಸ್ಲಾ, ಹಲವು ವಿಭಾಗದಲ್ಲಿ ಶೇ 20ರಷ್ಟು ಉದ್ಯೋಗ ಕಡಿಮೆ ಮಾಡಿತ್ತು. ಇದರಿಂದ ಸಂಸ್ಥೆಯ ಉತ್ತಮ ಕಾರ್ಯಕ್ಷಮತೆ ತೋರುವ ಉದ್ಯೋಗಿಗಳು ಕಂಪನಿ ತೊರೆಯುವ ಸ್ಥಿತಿ ಎದುರಾಯಿತು. ಟೆಸ್ಲಾದ ಹೈ ಪ್ರೊಫೈಲ್​ ಕಾರ್ಯದರ್ಶಿಗಳಾಗಿದ್ದ ಸಾರ್ವಜನಿಕ ನೀತಿ ಮತ್ತು ವ್ಯವಹಾರ ಅಭಿವೃದ್ಧಿಯ ವಿಪಿ ರೋಹನ್ ಪಟೇಲ್ ಮತ್ತು ಟೆಸ್ಲಾದ ಪವರ್‌ಟ್ರೇನ್ ಮತ್ತು ಎನರ್ಜಿಯ ಎಸ್‌ವಿಪಿ ಡ್ರೂ ಬಾಗ್ಲಿನೊ ಸಹ ಹುದ್ದೆ ತ್ಯಜಿಸಿದ್ದರು.

ಅಷ್ಟೇ ಅಲ್ಲದೆ ಅಗ್ಗದ ದರದಲ್ಲಿ ಅಂದರೆ 25.000 ಡಾಲರ್​ ಮೊತ್ತದಲ್ಲಿ ಇವಿ ಅಭಿವೃದ್ಧಿ ಮಾಡುವ ಯೋಜನೆಯನ್ನು ಸಂಸ್ಥೆ ಸ್ಥಗಿತಗೊಳಿಸಿದೆ. (ಐಎಎನ್​ಎಸ್​​)

ಇದನ್ನೂ ಓದಿ: ಭಾರತಕ್ಕೆ ಟೆಸ್ಲಾ ಪ್ರವೇಶ: ಮೂಲ ಸೌಕರ್ಯಾಭಿವೃದ್ಧಿ, ಉದ್ಯೋಗ ಸೃಷ್ಟಿ ನಿರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.