Yearender 2024: 2024 ವರ್ಷ ಮುಕ್ತಾಯಕ್ಕೆ ದಿನಗಣನೆ ಶುರುವಾಗಿದೆ. ಈ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರಿ ಬೇಡಿಕೆ ಬಂದಿದೆ. ಈ ವರ್ಷ ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟವು ಗಮನಾರ್ಹವಾಗಿ ಸುಧಾರಿಸಿದೆ. ಕಂಪನಿಗಳು ಬಿಡುಗಡೆ ಮಾಡಿದ ಹೊಸ ಎಲೆಕ್ಟ್ರಿಕ್ ಕಾರುಗಳು ಇದಕ್ಕೆ ಒಂದು ಕಾರಣ. ಈ ವರ್ಷ ಕಾರು ಉತ್ಪಾದನಾ ಕಂಪನಿಗಳು ಮಾರುಕಟ್ಟೆಯಲ್ಲಿ ಅನೇಕ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಿವೆ. ಇಲ್ಲಿ ನಾವು ನಿಮಗೆ 400 ಕಿ.ಮೀ ಗಿಂತಲೂ ಹೆಚ್ಚಿನ ವ್ಯಾಪ್ತಿಯನ್ನು ಒದಗಿಸುವ ಆ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಹೇಳಲಿದ್ದೇವೆ.
Mahindra XEV 9e: ಈ ಕಾರನ್ನು ಸ್ವದೇಶಿ ಕಾರು ತಯಾರಿಕಾ ಸಂಸ್ಥೆ ಮಹೀಂದ್ರಾ ನವೆಂಬರ್ ತಿಂಗಳಿನಲ್ಲಿಯೇ ಬಿಡುಗಡೆ ಮಾಡಿದೆ. ಇದು 59kWh ಮತ್ತು 79kWh ಎರಡು ಬ್ಯಾಟರಿ ಪ್ಯಾಕ್‌ಗಳ ಆಯ್ಕೆ ಹೊಂದಿದೆ. ದೊಡ್ಡ ಬ್ಯಾಟರಿ ಪ್ಯಾಕ್ 656 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಮತ್ತು ಚಿಕ್ಕ ಬ್ಯಾಟರಿ ಪ್ಯಾಕ್ ಈ ಕಾರಿಗೆ 542 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. 21.90 ಲಕ್ಷದ ಆರಂಭಿಕ ಬೆಲೆಯೊಂದಿಗೆ ಕಂಪನಿ ಈ ಕಾರನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ, ಮಹೀಂದ್ರಾ ಹೊಸ XEV 9e ನಲ್ಲಿ ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಸಹ ನೀಡಿದೆ.
Mahindra BE 6e: XEV 9e ಜೊತೆಗೆ ಕಂಪನಿಯು ಈ ಎಲೆಕ್ಟ್ರಿಕ್ SUV ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ಇದನ್ನು ಕೇವಲ 59kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬಿಡುಗಡೆ ಮಾಡಿದೆ. ಬ್ಯಾಟರಿ ಫುಲ್ ಚಾರ್ಜ್ ಆದ ಬಳಿ ಈ ಕಾರ್ ಅನ್ನು 556 ಕಿಮೀ ವ್ಯಾಪ್ತಿಯವರೆಗೆ ಚಲಿಸಬಹುದಾಗಿದೆ. ಮಹೀಂದ್ರಾ ಹೊಸ BE 6e ಅನ್ನು ರೂ 18.90 ಲಕ್ಷದ ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಮಾಡಿದೆ (ಎಕ್ಸ್ ಶೋ ರೂಂ). ಈ ಕೈಗೆಟುಕುವ ಬೆಲೆಯೊಂದಿಗೆ ಕಂಪನಿಯು ಹಲವಾರು ಆಧುನಿಕ ವೈಶಿಷ್ಟ್ಯಗಳನ್ನು ಸಹ ನೀಡಿದೆ.
Tata Curvv EV: ದೇಶೀಯ ಕಾರು ತಯಾರಕ ಟಾಟಾ ಮೋಟಾರ್ಸ್ ಈ ಎಲೆಕ್ಟ್ರಿಕ್ ಎಸ್‌ಯುವಿ ಕೂಪೆಯನ್ನು ಆಗಸ್ಟ್ 2024 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಕಂಪನಿಯು ಈ ಎಲೆಕ್ಟ್ರಿಕ್ ಕಾರಿನಲ್ಲಿ 45kWh ಮತ್ತು 55kWh ಎರಡು ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯನ್ನು ನೀಡುತ್ತಿದೆ. ಈ ಕಾರು ತನ್ನ ಮೊದಲ ಬ್ಯಾಟರಿ ಪ್ಯಾಕ್‌ನೊಂದಿಗೆ 502 ಕಿಮೀ ವ್ಯಾಪ್ತಿ ಒದಗಿಸಿದರೆ, ಎರಡನೇ ಬ್ಯಾಟರಿ ಪ್ಯಾಕ್‌ನೊಂದಿಗೆ 585 ಕಿಮೀ ವ್ಯಾಪ್ತಿಯನ್ನು ಒದಗಿಸುತ್ತದೆ. ಟಾಟಾ ಈ ಕಾರನ್ನು ರೂ 17.49 - 21.99 ಲಕ್ಷ (ಎಕ್ಸ್ ಶೋ ರೂಂ) ನಡುವೆ ಮಾರಾಟ ಮಾಡುತ್ತಿದೆ.
Tata Punch EV: ಕಂಪನಿಯು ಜನವರಿ 2024 ರಲ್ಲಿ ಟಾಟಾ ಪಂಚ್ EV ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಕಂಪನಿಯು ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ರೂ 9.99 ಲಕ್ಷದಿಂದ ರೂ 14.29 ಲಕ್ಷದವರೆಗೆ (ಎಕ್ಸ್ ಶೋ ರೂಂ) ಮಾರಾಟ ಮಾಡುತ್ತಿದೆ. ಕಂಪನಿಯು ಈ SUV ಅನ್ನು 25kWh ಮತ್ತು 35kWh ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ಮಾರಾಟ ಮಾಡುತ್ತದೆ. ಅದರ ಸಣ್ಣ ಬ್ಯಾಟರಿ ಈ ಕಾರಿಗೆ 315 ಕಿಮೀ ವ್ಯಾಪ್ತಿಯನ್ನು ನೀಡಿದರೆ, ದೊಡ್ಡ ಬ್ಯಾಟರಿಯು 421 ಕಿಮೀ ವ್ಯಾಪ್ತಿಯನ್ನು ಒದಗಿಸುತ್ತದೆ.
Kia EV9 GT-Line: ಕೊರಿಯನ್ ಕಾರು ತಯಾರಕರು ಈ ಕಾರ್ಯಕ್ಷಮತೆಯ ಎಲೆಕ್ಟ್ರಿಕ್ SUV ಅಕ್ಟೋಬರ್ 2024 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದರು. ಕಂಪನಿಯು 99.8 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಎಲೆಕ್ಟ್ರಿಕ್ SUV ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಕಾರು ARAI ಪ್ರಮಾಣೀಕೃತ 561 ಕಿಮೀ ವ್ಯಾಪ್ತಿಯನ್ನು ಒದಗಿಸುತ್ತದೆ. ಅತ್ಯಂತ ವಿಶೇಷವಾದ ವಿಷಯವೆಂದರೆ ಇದರಲ್ಲಿನ ಮೋಟಾರ್‌ನ ಪವರ್ ಔಟ್‌ಪುಟ್. ಇದು 379bhp ಮತ್ತು 700nm ಟಾರ್ಕ್ ಅನ್ನು ಒದಗಿಸುತ್ತದೆ. ಕಂಪನಿಯು ಈ ಕಾರನ್ನು 1.30 ಕೋಟಿ ರೂಪಾಯಿಗಳಿಗೆ (ಎಕ್ಸ್ ಶೋ ರೂಂ) ಮಾರಾಟ ಮಾಡುತ್ತಿದೆ.
Mercedes-Benz EQS: ಜರ್ಮನ್ ಕಾರು ತಯಾರಕ ತನ್ನ ಎಲೆಕ್ಟ್ರಿಕ್ ಸೆಡಾನ್ EQS ಅನ್ನು ಸೆಪ್ಟೆಂಬರ್ 2024 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಕಂಪನಿಯು ಈ ಸೆಡಾನ್ ಅನ್ನು 1.62 ಕೋಟಿ ರೂಪಾಯಿಗಳಿಗೆ (ಎಕ್ಸ್ ಶೋ ರೂಂ) ಮಾರಾಟ ಮಾಡುತ್ತಿದೆ. ಸೆಡಾನ್ AWD ಗಾಗಿ ಎರಡು ಎಲೆಕ್ಟ್ರಿಕ್ ಮೋಟರ್‌ಗಳನ್ನು ಹೊಂದಿದೆ. ಇದು 107.8 kWh ಬ್ಯಾಟರಿಗೆ ಸಂಪರ್ಕ ಹೊಂದಿದೆ. ಈ ಕಾರು ಗರಿಷ್ಠ 857 ಕಿಮೀ ವ್ಯಾಪ್ತಿಯನ್ನು ಒದಗಿಸುತ್ತದೆ. ಇದರ ಎಲೆಕ್ಟ್ರಿಕ್ ಮೋಟಾರ್ 516bhp ಮತ್ತು 855nm ಟಾರ್ಕ್ ಉತ್ಪಾದಿಸುತ್ತದೆ.
Volvo EX40: ಕಂಪನಿಯು ತನ್ನ ಎಲೆಕ್ಟ್ರಿಕ್ SUV XC40 ರೀಚಾರ್ಜ್ ಅನ್ನು ಅಕ್ಟೋಬರ್ 2024 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಆದರೆ ಇತ್ತೀಚೆಗೆ ಕಂಪನಿಯು ತನ್ನ ಹೆಸರನ್ನು EX40 ಎಂದು ಬದಲಾಯಿಸಿದೆ. ಈ ಕಾರನ್ನು 56.10 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಕಾರಿನಲ್ಲಿ 69kWh ಬ್ಯಾಟರಿ ಪ್ಯಾಕ್ ಬಳಸಲಾಗಿದ್ದು, ಇದು ಗರಿಷ್ಠ 475 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಈ SUV RWD ಕಾಂಫಿಗ್ರೇಶನ್ನೊಂದಿಗೆ ಬರುತ್ತದೆ. ಅದರ ಹಿಂಭಾಗದಲ್ಲಿ ಎಲೆಕ್ಟ್ರಿಕ್ ಮೋಟಾರ್ ಅನ್ನು ಜೋಡಿಸಲಾಗಿದೆ. ಇದು 238bhp ಮತ್ತು 420nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
BMW i5: ಐಷಾರಾಮಿ ಕಾರು ತಯಾರಕ BMW ತನ್ನ ಎಲೆಕ್ಟ್ರಿಕ್ ಸೆಡಾನ್ BMW i5 ಅನ್ನು ಏಪ್ರಿಲ್ 2024 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಕಂಪನಿಯು ಪ್ರಸ್ತುತ ಈ ಕಾರನ್ನು ರೂ 1.20 ಕೋಟಿಗೆ (ಎಕ್ಸ್ ಶೋ ರೂಂ) ಮಾರಾಟ ಮಾಡುತ್ತಿದೆ. ಈ ಕಾರು ಕೇವಲ ಒಂದು ರೂಪಾಂತರ i5 M60 xDrive ನಲ್ಲಿ ಬರುತ್ತದೆ. ಇದು 83.9 kWh ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯು ಗರಿಷ್ಠ 516 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಕಾರು AWD ಸೆಟಪ್‌ನೊಂದಿಗೆ ಬರುತ್ತದೆ. ಮುಂಭಾಗ ಮತ್ತು ಹಿಂಭಾಗದ ಆಕ್ಸಲ್‌ನಲ್ಲಿ ತಲಾ ಒಂದು ಮೋಟಾರು ಇದೆ. ಇದು 601bhp ಮತ್ತು 795nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MINI Countryman Electric: MINI ಜುಲೈ 2024 ರಲ್ಲಿ ಕಂಟ್ರಿಮ್ಯಾನ್ ಎಲೆಕ್ಟ್ರಿಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಈ ಕಾರು ಸಣ್ಣ ಹ್ಯಾಚ್ಬ್ಯಾಕ್ ಆಗಿದೆ. ಆದರೆ, ಇದರ ಹೊರತಾಗಿಯೂ ಅದರಲ್ಲಿ ಶಕ್ತಿಯ ಕೊರತೆಯಿಲ್ಲ. ಕಂಪನಿಯು ಇದನ್ನು FWD ಸೆಟಪ್‌ನೊಂದಿಗೆ ಬರುವ ಕಂಟ್ರಿಮ್ಯಾನ್ ಎಲೆಕ್ಟ್ರಿಕ್ E ಎಂಬ ಒಂದು ರೂಪಾಂತರದಲ್ಲಿ ಮಾತ್ರ ಮಾರಾಟ ಮಾಡುತ್ತದೆ. ಇದರ ಎಲೆಕ್ಟ್ರಿಕ್ ಮೋಟಾರ್ 201bhp ಪವರ್ ಮತ್ತು 250nm ಟಾರ್ಕ್ ಅನ್ನು ಒದಗಿಸುತ್ತದೆ. ಇದನ್ನು ಪವರ್ ಮಾಡಲು, ಕಾರು 66.45 kWh ಬ್ಯಾಟರಿ ಪ್ಯಾಕ್ ಪಡೆಯುತ್ತದೆ. ಇದು ಗರಿಷ್ಠ 462 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ.
BYD eMax 7: ಚೀನಾದ ಕಾರು ಕಂಪನಿ BYD ತನ್ನ ಹಲವು ಎಲೆಕ್ಟ್ರಿಕ್ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಅಕ್ಟೋಬರ್ 2024 ರಲ್ಲಿ ಕಂಪನಿಯು ತನ್ನ BYD eMAX 7 ಅನ್ನು ಭಾರತದಲ್ಲಿ ಪ್ರಾರಂಭಿಸಿತು. 55.4 kWh ಮತ್ತು 71.8 kWh ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಇದನ್ನು ಪರಿಚಯಿಸಲಾಗಿದೆ. ಇದರ ಚಿಕ್ಕ ಬ್ಯಾಟರಿಯು 420 ಕಿಮೀ ವ್ಯಾಪ್ತಿಯನ್ನು ನೀಡಿದರೆ, ಅದರ ದೊಡ್ಡ ಬ್ಯಾಟರಿಯು ಗರಿಷ್ಠ 530 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. BYD ಈ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ರೂ 26.90 ಲಕ್ಷ ಮತ್ತು ರೂ 29.90 ಲಕ್ಷ (ಎಕ್ಸ್ ಶೋ ರೂಂ) ನಡುವೆ ಮಾರಾಟ ಮಾಡುತ್ತಿದೆ.
ಓದಿ: ಈ ವರ್ಷ ಇವಿ ಬೈಕ್ಗಳ ಹಬ್ಬವೋ ಹಬ್ಬ: ಅಬ್ಬೋ! ಹೇಗಿದೆ ಗೊತ್ತಾ ಎಲೆಕ್ಟ್ರಿಕ್ ವಾಹನಗಳ ಮಾರಾಟ?