ಹೈದರಾಬಾದ್: ಮಾನವ ವಾಸಕ್ಕೆ ಯೋಗ್ಯವಾಗಿರುವ ಏಕೈಕ ಗ್ರಹವೆಂದರೆ ಅದು ಭೂಮಿ. ಈ ಗ್ರಹ ಬಿಟ್ಟರೆ ಸೌರಮಂಡಲದ ಯಾವುದೇ ಗ್ರಹದಲ್ಲಿ ಜೀವಿಗಳು ಬದುಕಲು ಸಾಧ್ಯವಿಲ್ಲ. ಈ ಬಗ್ಗೆ ಹಲವು ಸಂಶೋಧನೆಗಳು ನಡೆಯುತ್ತಿವೆಯಾದರೂ, ಯಾವುದೇ ಉತ್ತರ ಸಿಕ್ಕಿಲ್ಲ. ಇಂತಿಪ್ಪ, ಮಾನವನ ಏಕೈಕ ಪ್ರಾಣವಾಯುವಾದ ಭೂಮಿಯ ವೇಗ ಕಡಿಮೆಯಾಗುತ್ತಿದೆ ಎಂಬ ಆತಂಕಕಾರಿ ವಿಚಾರವನ್ನು ತಜ್ಞರು ತಿಳಿಸಿದ್ದಾರೆ.
ಭೂಮಿಯು ತನ್ನ ಸುತ್ತಲೂ ತಿರುಗುವ ಮೂಲಕ ಸೂರ್ಯನ ಸುತ್ತಲೂ ಗಿರಕಿ ಹೊಡೆಯುತ್ತದೆ. ಭೂಮಿಯು ತನ್ನ ಸುತ್ತಲೂ ಒಂದು ಸುತ್ತು ಹಾಕಲು 24 ಗಂಟೆ ಅವಧಿ (ನಿಖರವಾಗಿ 23 ಗಂಟೆ 56 ನಿಮಿಷ) ತೆಗೆದುಕೊಳ್ಳುತ್ತದೆ. ಆದರೆ, ಮಾನವ ನಿರ್ಮಿತ ಅವಾಂತರಗಳಿಂದಾಗಿ ಅದರ ವೇಗಕ್ಕೆ ಧಕ್ಕೆ ಉಂಟಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭೂಮಿಯ ಸುತ್ತುವ ವೇಗ ಗಣನೀಯವಾಗಿ ಕಡಿಮೆಯಾಗಿದೆ ಎನ್ನುತ್ತಾರೆ ಸಂಶೋಧಕರು. ಪ್ರತಿ ನೂರು ವರ್ಷಗಳಿಗೊಮ್ಮೆ ದಿನದ ಗಾತ್ರವು 1.8 ಸೆಕೆಂಡುಗಳಷ್ಟು ಹೆಚ್ಚುತ್ತಿದೆ. ಇದು ಮುಂದುವರಿದರೆ, 2100ರ ಇಸವಿ ಹೊತ್ತಿಗೆ, ಇದು ದಿನಕ್ಕೆ 2.2 ಮಿಲಿಸೆಕೆಂಡ್ಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
24 ಗಂಟೆ ಅವಧಿಗೆ ಒಂದು ದಿನ ಎಂದು ಅಂದಾಜಿಸುತ್ತೇವೆ. ಅಂದರೆ, ಭೂಮಿಯು ತನ್ನ ಅಕ್ಷದ ಮೇಲೆ ಒಂದು ಸುತ್ತು ಪೂರ್ಣಗೊಳಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ನಾವು ದಿನವನ್ನು ಲೆಕ್ಕ ಹಾಕುತ್ತೇವೆ. 1.4 ಬಿಲಿಯನ್ ವರ್ಷಗಳ ಹಿಂದೆ ದಿನಕ್ಕೆ 19 ಗಂಟೆ ಲೆಕ್ಕ ಇತ್ತು. ಅದು ಈಗ 24 ಗಂಟೆವರೆಗೆ ಹೆಚ್ಚಿದೆ. ಇದಕ್ಕೆ ಅನೇಕ ಅಂಶಗಳು ಕಾರಣವಾಗಿವೆ ಎಂಬುದು ಸಂಶೋಧಕರ ಅಭಿಮತ.
ಹವಾಮಾನ ಬದಲಾವಣೆಯ ಪರಿಣಾಮಗಳಿಂದ ಧ್ರುವಗಳಲ್ಲಿನ ಮಂಜುಗಡ್ಡೆ ಕರಗುತ್ತಿದೆ. ಇದು ಭೂಮಿಯ ತಿರುಗುವಿಕೆಯ ಮೇಲೆ ಪರಿಣಾಮ ಬೀರಿ, ನಿಧಾನಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಭೂಮಿಯು ಮೂರು ಪದರಗಳನ್ನು ಹೊಂದಿದೆ. ಮೊದಲ ಅಂದರೆ ಮೇಲಿನ ಪದರದ ಮೇಲೆ ಜೀವಿಗಳಾದ ನಾವು ವಾಸಿಸುತ್ತೇವೆ. ಇದರ ನಂತರ ಕೆಳಗಿನ ಪದರ ಲೋಹದಿಂದ ಕೂಡಿದೆ. ಮೂರನೆಯ ಒಳ ಪದರವನ್ನು ಕೋರ್ ಎಂದು ಕರೆಯಲಾಗುತ್ತದೆ. ಈ ಕೋರ್ ಪದರವು ಭೂಮಿಯ ತಿರುಗುವಿಕೆಯನ್ನು ನಿಧಾನಗೊಳಿಸುತ್ತಿರುವಂತೆ ಭಾಸವಾಗುತ್ತಿದೆ. ಇದರರ್ಥ ಭೂಮಿಯ ಒಳಭಾಗವು ಭೂಮಿಯ ಮೇಲ್ಮೈಗಿಂತ ಹೆಚ್ಚು ನಿಧಾನವಾಗಿ ತಿರುಗುತ್ತಿದೆ.
ಭೂಮಿಯ ತಿರುಗುವಿಕೆ ನಿಧಾನವಾಗುತ್ತಿರುವ ಕಾರಣ, ದಿನದ ಅವಧಿಯೂ ಹೆಚ್ಚಾಗುತ್ತಿದೆ. ದಿನದ ಅವಧಿಯಲ್ಲಿ ಸ್ವಲ್ಪ ಹೆಚ್ಚಳವು ದೊಡ್ಡ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ. ಆದರೆ ಈ ಬದಲಾವಣೆಗಳು ಕ್ರಮೇಣ ಹೆಚ್ಚಾದರೆ ಸಮಸ್ಯೆ ಸೃಷ್ಟಿಯಾಗಲಿದೆ. ಚಿಲಿಯಲ್ಲಿ 2010 ರಲ್ಲಿ ಸಂಭವಿಸಿದ ಭೂಕಂಪವು ಗ್ರಹದ ತಿರುಗುವಿಕೆಯನ್ನು ವೇಗಗೊಳಿಸಿತ್ತು. ದಿನವನ್ನು 1.26 ಮೈಕ್ರೋಸೆಕೆಂಡ್‌ಗಳಷ್ಟು ಕಡಿಮೆಗೊಳಿಸಿದೆ. ಇಂತಹ ಘಟನೆಗಳಿಂದ ಭವಿಷ್ಯದಲ್ಲಿ ದಿನಕ್ಕೆ ಎಷ್ಟು ಗಂಟೆ ಎಂಬ ಪ್ರಶ್ನೆಗೆ ನಾವು 25 ಗಂಟೆ ಎಂದು ಹೇಳಬೇಕಾಗಿ ಬರಬಹುದು.
ಇದನ್ನೂ ಓದಿ: ಕೀಟ ನಿಯಂತ್ರಣ, ಸ್ವಚ್ಛತೆ ಕಾಪಾಡುವ ಮೂಲಕ ಚಂಡಿಪುರ ವೈರಸ್ ನಿಯಂತ್ರಣ ಸಾಧ್ಯ: ತಜ್ಞರ ಸಲಹೆ - Chandipura virus