ETV Bharat / technology

ಕೃತಕ ಬುದ್ಧಿಮತ್ತೆ ನಿಯಂತ್ರಣ ಕರಡು ಶೀಘ್ರ ಬಿಡುಗಡೆ: ಸಚಿವ ರಾಜೀವ್ ಚಂದ್ರಶೇಖರ್

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಶೀಘ್ರದಲ್ಲೇ ಮಾರ್ಗಸೂಚಿಗಳನ್ನು ಹೊರಡಿಸಲಿದೆ ಎಂದು ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

Centre working on draft AI regulation framework, to be released soon

author img

By ETV Bharat Karnataka Team

Published : Feb 21, 2024, 2:51 PM IST

ನವದೆಹಲಿ: ಈ ವರ್ಷದ ಜೂನ್-ಜುಲೈ ವೇಳೆಗೆ ಕೃತಕ ಬುದ್ಧಿಮತ್ತೆ (ಎಐ)ಯ ಕರಡು ನಿಯಂತ್ರಣ ಚೌಕಟ್ಟನ್ನು ಜಾರಿಗೊಳಿಸಲು ಕಾರ್ಯೋನ್ಮುಖವಾಗಿರುವುದಾಗಿ ಸರ್ಕಾರ ಮಂಗಳವಾರ ತಿಳಿಸಿದೆ. ಹೊಸ ತಂತ್ರಜ್ಞಾನದಿಂದ ತಯಾರಿಸಲಾದ ಡೀಪ್ ಫೇಕ್ ಗಳ ಹೆಚ್ಚಳ ಮತ್ತು ಬಳಕೆದಾರರಿಗೆ ಎದುರಾಗುತ್ತಿರುವ ಅಪಾಯಗಳ ಹಿನ್ನೆಲೆಯಲ್ಲಿ ಸರ್ಕಾರ ನಿಯಂತ್ರಕ ಮಾರ್ಗಸೂಚಿಗಳನ್ನು ತಯಾರಿಸುತ್ತಿದೆ.

ರಾಜಧಾನಿ ದೆಹಲಿಯಲ್ಲಿ ನಾಸ್ಕಾಮ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಸರ್ಕಾರವು ಕೃತಕ ಬುದ್ಧಿಮತ್ತೆ ನಿಯಂತ್ರಣ ಚೌಕಟ್ಟಿನ ಕರಡನ್ನು ಸಿದ್ಧಪಡಿಸುತ್ತಿದೆ ಮತ್ತು ಶೀಘ್ರದಲ್ಲೇ ಅದನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿದರು.

"ಆರ್ಥಿಕ ಬೆಳವಣಿಗೆಗೆ ಎಐ ಅನ್ನು ಬಳಸಿಕೊಳ್ಳುವುದು ಮತ್ತು ಸಂಭಾವ್ಯ ಅಪಾಯಗಳು ಮತ್ತು ಹಾನಿಗಳನ್ನು ತಡೆಗಟ್ಟುವುದು ಇದರ ಉದ್ದೇಶವಾಗಿದೆ. ನಾವು ಎಐನ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಿದ್ದೇವೆ, ಆದರೆ ಅದೇ ಸಮಯಕ್ಕೆ ಅದರ ದುರುಪಯೋಗವನ್ನು ತಡೆಗಟ್ಟಲು ನಿಯಂತ್ರಕ ಮಾರ್ಗಸೂಚಿಗಳನ್ನು ಸಹ ಜಾರಿಗೊಳಿಸಲಿದ್ದೇವೆ" ಎಂದು ಅವರು ಹೇಳಿದರು.

ಇತ್ತೀಚೆಗೆ ಬಿಡುಗಡೆಯಾದ ನಾಸ್ಕಾಮ್-ಬಿಸಿಜಿ ವರದಿಯು, ಭಾರತದ ಎಐ ಮಾರುಕಟ್ಟೆಯು ಶೇಕಡಾ 25 ರಷ್ಟು ಸಂಯೋಜಿತ ವಾರ್ಷಿಕ ಬೆಳವಣಿಗೆಯ ದರದಲ್ಲಿ (ಸಿಎಜಿಆರ್) 2027 ರ ವೇಳೆಗೆ 17 ಬಿಲಿಯನ್ ಡಾಲರ್ ತಲುಪುವ ಸಾಧ್ಯತೆಯಿದೆ ಎಂದು ಹೇಳಿದೆ.

ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಇಂಟರ್ ನೆಟ್ ಪ್ಲಾಟ್​ಫಾರ್ಮ್​ಗಳು ಮತ್ತು ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ತಮ್ಮ ಪ್ಲಾಟ್​ಫಾರ್ಮ್​ಗಳಲ್ಲಿ ಯಾವುದೇ ತಪ್ಪು ಮಾಹಿತಿ ಅಥವಾ ಡೀಪ್​ಫೇಕ್​ ಪ್ರಕಟವಾಗದಂತೆ ನೋಡಿಕೊಳ್ಳುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ ಎಂದು ಸರ್ಕಾರ ಈ ವಾರದ ಆರಂಭದಲ್ಲಿ ಪುನರುಚ್ಚರಿಸಿದೆ.

ಐಟಿ ನಿಯಮಗಳು, 2021 ಮತ್ತು ಐಟಿ ಸಚಿವಾಲಯದ ಇತ್ತೀಚಿನ ಸಲಹೆಯಲ್ಲಿ ನೀಡಿದ ನಿರ್ದೇಶನದೊಂದಿಗೆ ಪ್ಲಾಟ್​ಫಾರ್ಮ್​ಗಳ ಕಾರ್ಯಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಸರ್ಕಾರ ಈ ತಿಂಗಳ ಆರಂಭದಲ್ಲಿ ಹೇಳಿದೆ. ಹೆಚ್ಚುತ್ತಿರುವ ಇಂಟರ್ ನೆಟ್ ಬಳಕೆಯ ಬಗ್ಗೆ ಮಾತನಾಡಿದ ಸಚಿವರು, ಈಗಾಗಲೇ 900 ಮಿಲಿಯನ್​ನಷ್ಟು ಭಾರತೀಯರು ಇಂಟರ್ ನೆಟ್ ಬಳಸುತ್ತಿದ್ದು ಈ ಸಂಖ್ಯೆ ಶೀಘ್ರದಲ್ಲೇ 1.2 ಬಿಲಿಯನ್ ತಲುಪಲಿದೆ ಎಂದು ಹೇಳಿದರು.

ಕಳೆದ ಕೆಲ ತಿಂಗಳುಗಳಿಂದ ಎಐ ನಿಯಂತ್ರಣ ಚೌಕಟ್ಟನ್ನು ಬಿಡುಗಡೆ ಮಾಡಲು ಸರ್ಕಾರ ಯೋಜಿಸುತ್ತಿದೆ. ಮೇ 2023 ರಲ್ಲಿ, ಚೌಕಟ್ಟಿನ ಮೊದಲ ಕರಡನ್ನು ಬಿಡುಗಡೆ ಮಾಡುವ ಯೋಜನೆಗಳನ್ನು ಸಚಿವ ರಾಜೀವ್ ಚಂದ್ರಶೇಖರ್ ಹಂಚಿಕೊಂಡಿದ್ದರು. ಆದರೆ, ಅದು ಇನ್ನೂ ಬಿಡುಗಡೆಯಾಗಿಲ್ಲ.

ಇದನ್ನೂ ಓದಿ : ಭಾರತದ ಎಐ ಮಾರುಕಟ್ಟೆ $17 ಬಿಲಿಯನ್​ಗೆ ತಲುಪುವ ಸಾಧ್ಯತೆ: ನಾಸ್ಕಾಮ್ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.