ETV Bharat / technology

ಸೌಂಡ್‌ಬೋರ್ಡ್ ಬಟನ್‌ ಮೂಲಕ ಮಾಲೀಕರ ಮಾತಿಗೆ ಪ್ರತಿಕ್ರಿಯಿಸುವ ಶ್ವಾನಗಳು: ಸಂಶೋಧನೆ - Dogs Understand Words

Dogs Understand Words : ತರಬೇತಿ ಪಡೆದ ಶ್ವಾನಗಳು ಸೌಂಡ್‌ಬೋರ್ಡ್ ಬಟನ್‌ಗಳನ್ನು ಬಳಸಿಕೊಂಡು ನಿರ್ದಿಷ್ಟ ಪದಗಳನ್ನು ಅರ್ಥಮಾಡಿಕೊಳ್ಳಬಹುದು. ಅಲ್ಲದೆ, ಅಂತಹ ಮಾತುಗಳಿಗೆ ಶ್ವಾನಗಳು ಪ್ರತಿಕ್ರಿಯಿಸಬಹುದು ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಅದು ಯಾವರೀತಿ ಎಂಬುದು ತಿಳಿಯೋಣಾ ಬನ್ನಿ..

DOGS UNDERSTAND WORDS  SOUNDBOARD BUTTONS  RESEARCH ON DOGS  STUDY REVEALS ON DOGS REACTION
ಸೌಂಡ್‌ಬೋರ್ಡ್ ಬಟನ್‌ ಮೂಲಕ ಮಾಲಿಕರ ಮಾತಿಗೆ ಪ್ರತಿಕ್ರಿಯಿಸುವ ಶ್ವಾನಗಳು (Getty Images)
author img

By ETV Bharat Tech Team

Published : Aug 30, 2024, 6:27 PM IST

Dogs Understand Words : ನೀವು ಅನೇಕ ಶ್ವಾನಗಳ ವೈರಲ್​ ವಿಡಿಯೋಗಳನ್ನು ನೋಡಿರಬಹುದು. ಅಲ್ಲಿ ಶ್ವಾನ ಮಾಲೀಕರ ಮಾತಿಗೆ ಪ್ರತಿಕ್ರಿಯಿಸುವುದನ್ನು ನೀವು ಗಮನಿಸಿರಬಹುದು. ಈಗ ಅನೇಕ ಜನರು ತಮ್ಮ ಶ್ವಾನದ ಜೊತೆ ಸಂವಹನ ನಡೆಸಲು ಸೌಂಡ್‌ಬೋರ್ಡ್ ಬಟನ್‌ಗಳನ್ನು ಬಳಸುತ್ತಿದ್ದಾರೆ. ತರಬೇತಿ ಪಡೆದ ಶ್ವಾನ ಸೌಂಡ್‌ಬೋರ್ಡ್ ಬಟನ್‌ಗಳನ್ನು ಬಳಸಿಕೊಂಡು ನಿಮ್ಮ ಪದಗಳನ್ನು ಸಹ ಗುರುತಿಸುತ್ತವೆ.

ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ನಾವು ಈ ರೀತಿಯ ವಿವಿಧ ವೀಡಿಯೊಗಳನ್ನು ನೋಡುತ್ತಿರುತ್ತವೆ. ಆದರೆ ಈ ಶ್ವಾನಗಳು ನಿಜವಾಗಿಯೂ ಸಂವಹನ ನಡೆಸುತ್ತಿವೆಯೇ ಅಥವಾ ಅವರು ತಮ್ಮ ಮಾಲೀಕರ ಸೂಚನೆಗಳಿಗೆ ಪ್ರತಿಕ್ರಿಯಿಸುತ್ತಿವೆಯಾ ಅಂತಾ ನಿಮಗೆ ಹತ್ತಾರು ಅನುಮಾನಗಳು ಮೂಡಿರಬಹುದು. ಆದ್ರೆ ಶ್ವಾನಗಳು ನಿಮ್ಮ ಮಾತಿಗೆ ಪ್ರತಿಕ್ರಿಯಿಸುತ್ತವೆ ಎಂದು ಸಂಶೋಧನೆಯೊಂದು ಸಾಬೀತುಪಡಿಸಿದೆ.

30 ನಾಯಿ ಸಂಶೋಧನೆ: PLOS ONE ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸೌಂಡ್‌ಬೋರ್ಡ್ ಬಟನ್‌ಗಳೊಂದಿಗೆ ತರಬೇತಿ ಪಡೆದ ಶ್ವಾನಗಳು ನಿರ್ದಿಷ್ಟ ಪದಗಳನ್ನು ಅರ್ಥಮಾಡಿಕೊಳ್ಳಬಹುದು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಯಾನ್ ಡಿಯಾಗೋ ಮತ್ತು ಇತರ ಸಂಸ್ಥೆಗಳ ಸಂಶೋಧಕರು ಈ ಸಂಶೋಧನೆ ಮಾಡಿದ್ದಾರೆ.

UC ಸ್ಯಾನ್ ಡಿಯಾಗೋದಲ್ಲಿ ಕಾಗ್ನಿಟಿವ್ ಸೈನ್ಸಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಫೆಡೆರಿಕೊ ರೊಸ್ಸಾನೊ ನೇತೃತ್ವದ ತಂಡ, ತರಬೇತಿ ಪಡೆದ ಸಾಕುಪ್ರಾಣಿಗಳ ಮೇಲೆ ಮೊದಲ ಅಧ್ಯಯನ ಮಾಡಿದರು. ಸಂಶೋಧನೆಯಲ್ಲಿ ಎರಡು ಪೂರಕ ಪ್ರಯೋಗಗಳನ್ನು ಕೈಗೊಳ್ಳಲಾಗಿತ್ತು. ಮೊದಲ ಸಂಶೋಧನೆಯನ್ನು ಪ್ರತ್ಯೇಕ ಶ್ವಾನಗಳ ಮೇಲೆ ಮಾಡಲಾಯಿತು. ಸೌಂಡ್‌ಬೋರ್ಡ್ ಬಟನ್‌ಗಳಿಗೆ ಶ್ವಾನಗಳ ಪ್ರತಿಕ್ರಿಯೆಯನ್ನು ಪರೀಕ್ಷಿಸಲು ಸಂಶೋಧಕರು ದೇಶಾದ್ಯಂತ 30 ಶ್ವಾನಗಳನ್ನು ಸಮೀಕ್ಷೆ ಮಾಡಿದರು. ಎರಡನೇ ಪ್ರಯೋಗದಲ್ಲಿ, 29 ಸಾಕು ಶ್ವಾನಗಳ ಪರೀಕ್ಷೆಯನ್ನು ಮಾಲೀಕರ ಮನೆಯಲ್ಲಿ ಕೈಗೊಳ್ಳಲಾಗಿತ್ತು ಎಂದು ಸಂಶೋಧಕರು ಹೇಳಿದರು.

ಪ್ರಮುಖ ಸಂಶೋಧನೆ: ಸೌಂಡ್‌ಬೋರ್ಡ್ ಅನ್ನು ಬಳಸಲು ತರಬೇತಿ ಪಡೆದ ಶ್ವಾನಗಳು "ಪ್ಲೇ" ಮತ್ತು "ಔಟ್" ನಂತಹ ಪದಗಳಿಗೆ ಸರಿಯಾಗಿ ಪ್ರತಿಕ್ರಿಯಿಸುತ್ತವೆ ಎಂದು ಅಧ್ಯಯನವು ತೋರಿಸಿದೆ. ಈ ಪದಗಳನ್ನು ಶ್ವಾನದ ಮಾಲೀಕರು ಸೌಂಡ್‌ಬೋರ್ಡ್ ಬಟನ್ ಬಳಸಿ ಮಾತನಾಡಿದ್ದಾರೆ. ನಾಯಿಗಳು ತಮ್ಮ ಮಾಲೀಕರ ದೇಹ ಭಾಷೆ, ಉಪಸ್ಥಿತಿಯನ್ನು ಗುರುತಿಸುವುದಲ್ಲದೆ, ಪದಗಳನ್ನು ಅರ್ಥಮಾಡಿಕೊಳ್ಳಲು ವಿಭಿನ್ನ ಕ್ರಿಯೆಗಳನ್ನು ಸಹ ಮಾಡುತ್ತವೆ.

ನಮ್ಮ ಸಂಶೋಧನೆಗಳು ಮುಖ್ಯವಾಗಿವೆ. ಏಕೆಂದರೆ ಮಾಲೀಕರ ಪದಗಳು ಶ್ವಾನಗಳಿಗೆ ಮುಖ್ಯವೆಂದು ತೋರಿಸುತ್ತವೆ. ಮಾಲೀಕರ ಸಂಬಂಧಿತ ಸೂಚನೆಗಳಿಗೆ ಮಾತ್ರವಲ್ಲದೆ ಇತರ ಪದಗಳಿಗೂ ಶ್ವಾನಗಳು ಪ್ರತಿಕ್ರಿಯಿಸುತ್ತವೆ ಎಂದು ವಿಜ್ಞಾನಿ ರೊಸಾನೊ ಹೇಳಿದ್ದಾರೆ.

ಅನಿಮಲ್ ಬಿಹೇವಿಯರ್ ಸ್ಟಡಿ: ಸ್ಟಡಿ ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಮುಂಗಡವಾಗಿ ನೋಂದಾಯಿಸಲಾಗಿದೆ. ಈ ಪೂರ್ವ ನೋಂದಣಿ ಸಾರ್ವಜನಿಕವಾಗಿ ಆನ್‌ಲೈನ್‌ನಲ್ಲಿ ಲಭ್ಯವಿದೆ. ಯಾವುದೇ ಡೇಟಾವನ್ನು ಸಂಗ್ರಹಿಸುವ ಮೊದಲು ಅಧ್ಯಯನದ ಕಲ್ಪನೆಗಳು, ಡೇಟಾ ಸಂಗ್ರಹಣೆ ವಿಧಾನಗಳು, ಅಸ್ಥಿರಗಳು ಮತ್ತು ವಿಶ್ಲೇಷಣೆ ಯೋಜನೆಗಳನ್ನು ವಿವರಿಸುತ್ತದೆ.

ಭವಿಷ್ಯದ ಅಧ್ಯಯನಗಳು ಈ ಬಟನ್​ಗಳನ್ನು ಶ್ವಾನಗಳು ಹೇಗೆ ಸಕ್ರಿಯವಾಗಿ ಬಳಸುತ್ತವೆ ಎಂಬುದನ್ನು ಬಹಿರಂಗಪಡಿಸುತ್ತದೆ. ಇದರಲ್ಲಿ ಬಟನ್ ಪ್ರೆಸ್ ಅನುಕ್ರಮಗಳ ಹಿಂದಿನ ಅರ್ಥ ಮತ್ತು ವ್ಯವಸ್ಥಿತತೆಗಳು ಸೇರಿವೆ. ನಮ್ಮ ಸಂಶೋಧನೆಯು ಪ್ರಾಣಿಗಳನ್ನು ಅವರ ಮನೆಯ ಪರಿಸರದಲ್ಲಿ ಅಧ್ಯಯನ ಮಾಡುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದು ರೊಸಾನೊ ವಿವರಿಸುತ್ತಾರೆ.

ಓದಿ: ಪ್ರೀತಿ ಕುರುಡು: ಲೈಂಗಿಕ ಸಮಯದಲ್ಲಿ ದೈಹಿಕ ಅಪಾಯ ಮರೆಯುವ ಗಂಡು ನೊಣಗಳು! - Love is Blind

ETV Bharat Logo

Copyright © 2024 Ushodaya Enterprises Pvt. Ltd., All Rights Reserved.