ETV Bharat / technology

ಸಣ್ಣ ರೈತರಿಗಾಗಿ ಕಡಿಮೆ ಬೆಲೆಯ ಕಾಂಪ್ಯಾಕ್ಟ್​ ಟ್ರ್ಯಾಕ್ಟರ್​ ತಯಾರಿಸಿದ ಸಿಎಸ್​ಐಆರ್​ - Low Cost Compact Tractor

ಸಣ್ಣ ರೈತರಿಗೆ ಬಳಸಲು ಅನುಕೂಲವಾಗುವಂಥ ಕಾಂಪ್ಯಾಕ್ಟ್​ ಟ್ರ್ಯಾಕ್ಟರ್​ ಒಂದನ್ನು ಸಿಎಸ್​ಐಆರ್​ ತಯಾರಿಸಿದೆ.

ಸಣ್ಣ ರೈತರಿಗಾಗಿ ಕಡಿಮೆ ಬೆಲೆಯ ಕಾಂಪ್ಯಾಕ್ಟ್​ ಟ್ರ್ಯಾಕ್ಟರ್​ ತಯಾರಿಸಿದ ಸಿಎಸ್​ಐಆರ್​
ಸಣ್ಣ ರೈತರಿಗಾಗಿ ಕಡಿಮೆ ಬೆಲೆಯ ಕಾಂಪ್ಯಾಕ್ಟ್​ ಟ್ರ್ಯಾಕ್ಟರ್ ಸಿದ್ಧ (IANS)
author img

By ETV Bharat Karnataka Team

Published : Jun 28, 2024, 3:59 PM IST

ನವದೆಹಲಿ: ಸಣ್ಣ ಮತ್ತು ಅತಿ ಸಣ್ಣ ರೈತರು ಬಳಸಲು ಅನುಕೂಲವಾಗುವಂಥ, ಕಡಿಮೆ ಬೆಲೆಯ ಹಾಗೂ ಬಳಸಲು ಸುಲಭವಾದ ಕಡಿಮೆ ಅಶ್ವಶಕ್ತಿ ಶ್ರೇಣಿಯ ಕಾಂಪ್ಯಾಕ್ಟ್​ ಟ್ರ್ಯಾಕ್ಟರ್​ ಒಂದನ್ನು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್-ಸೆಂಟ್ರಲ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ರಿಸರ್ಚ್ ಇನ್ ಸ್ಟಿಟ್ಯೂಟ್ (ಸಿಎಸ್ಐಆರ್-ಸಿಎಂಇಆರ್​ಐ) ತಯಾರಿಸಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಶುಕ್ರವಾರ ತಿಳಿಸಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್ ಟಿ) ಸೈನ್ಸ್ ಫಾರ್ ಈಕ್ವಿಟಿ ಎಂಪವರ್‌ಮೆಂಟ್ ಆ್ಯಂಡ್ ಡೆವಲಪ್‌ಮೆಂಟ್ (ಎಸ್ಇಡಿ) ವಿಭಾಗದ ಬೆಂಬಲದೊಂದಿಗೆ ಸಿಎಸ್ಐಆರ್ ಈ ಟ್ರ್ಯಾಕ್ಟರ್ ತಯಾರಿಸಿದೆ.

ಭಾರತದ ಒಟ್ಟಾರೆ ಕೃಷಿಕರಲ್ಲಿ ಅತಿಸಣ್ಣ ಮತ್ತು ಸಣ್ಣ ರೈತರು ಶೇ 80 ರಷ್ಟಿದ್ದಾರೆ. ಇವರಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಇನ್ನೂ ಎತ್ತು-ಚಾಲಿತ ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ ಇದರ ನಿರ್ವಹಣಾ ವೆಚ್ಚ ಮತ್ತು ಕಡಿಮೆ ಆದಾಯಗಳಿಂದ ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

"ಎತ್ತಿನ ನೇಗಿಲುಗಳ ಬದಲಾಗಿ ಪವರ್ ಟಿಲ್ಲರ್​ಗಳನ್ನು ಬಳಸಲಾಗುತ್ತಿದ್ದರೂ, ಅವುಗಳನ್ನು ಚಾಲನೆ ಮಾಡುವುದು ಪ್ರಯಾಸದಾಯಕ. ಮತ್ತೊಂದೆಡೆ ದೊಡ್ಡ ಗಾತ್ರದ ಟ್ರ್ಯಾಕ್ಟರ್​ಗಳು ಸಣ್ಣ ರೈತರಿಗೆ ಸೂಕ್ತವಲ್ಲ ಮತ್ತು ಬಹುತೇಕ ಸಣ್ಣ ರೈತರಿಗೆ ಇವನ್ನು ಕೊಳ್ಳಲು ಸಾಧ್ಯವಾಗುವುದಿಲ್ಲ" ಎಂದು ಸಚಿವಾಲಯ ಹೇಳಿದೆ.

ಹೀಗಾಗಿ ಹೊಸದಾಗಿ ಅಭಿವೃದ್ಧಿಪಡಿಸಲಾದ ಸಣ್ಣ ಗಾತ್ರದ ಟ್ರ್ಯಾಕ್ಟರ್​ಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಸ್ಥಳೀಯ ಕಂಪನಿಗಳಿಗೆ ತಂತ್ರಜ್ಞಾನ ಪರವಾನಗಿ ನೀಡುವ ಬಗ್ಗೆ ಸಿಎಸ್ಐಆರ್-ಸಿಎಂಇಆರ್​ಐ ಚಿಂತನೆ ನಡೆಸುತ್ತಿದೆ. ಇದರಿಂದ ಈ ಸಣ್ಣ ಗಾತ್ರದ ಟ್ರ್ಯಾಕ್ಟರ್​ ಅನ್ನು ಎಲ್ಲ ರೈತರಿಗೂ ತಲುಪಿಸಬಹುದಾಗಿದೆ.

ರಾಂಚಿ ಮೂಲದ ಎಂಎಸ್ಎಂಇ ಟ್ರಾಕ್ಟರ್​ನ ಸಾಮೂಹಿಕ ಉತ್ಪಾದನೆಗಾಗಿ ಕಾರ್ಖಾನೆ ಆರಂಭಿಸಲು ಆಸಕ್ತಿ ತೋರಿಸಿದೆ. ಅಭಿವೃದ್ಧಿಪಡಿಸಿದ ಟ್ರ್ಯಾಕ್ಟರ್​ಗಳನ್ನು ವಿವಿಧ ರಾಜ್ಯ ಸರ್ಕಾರದ ಟೆಂಡರ್​ಗಳ ಮೂಲಕ ಸಬ್ಸಿಡಿ ದರದಲ್ಲಿ ರೈತರಿಗೆ ಪೂರೈಸಲು ಅವರು ಯೋಜಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಟ್ರ್ಯಾಕ್ಟರ್‌ ಹೇಗಿದೆ?: ಈ ಟ್ರಾಕ್ಟರ್ 8 ಫಾರ್ವರ್ಡ್ ಮತ್ತು 2 ರಿವರ್ಸ್ ಸ್ಪೀಡ್ ಹೊಂದಿರುವ 9 ಎಚ್ ಪಿ (ಹಾರ್ಸ್ ಪವರ್) ಡೀಸೆಲ್ ಎಂಜಿನ್, 540 ಆರ್ ಪಿಎಂನಲ್ಲಿ, ಪಿಟಿಒನೊಂದಿಗೆ 6 splines ಗಳನ್ನು ಒಳಗೊಂಡಿದೆ. ಟ್ರ್ಯಾಕ್ಟರ್​ನ ಒಟ್ಟು ತೂಕ ಸುಮಾರು 450 ಕೆಜಿ ಆಗಿದ್ದು, ಮುಂಭಾಗ ಮತ್ತು ಹಿಂಭಾಗದ ಚಕ್ರ ಕ್ರಮವಾಗಿ 4.5-10 ಮತ್ತು 6-16 ಅಳತೆಯದ್ದಾಗಿವೆ. ವ್ಹೀಲ್ ಬೇಸ್, ಗ್ರೌಂಡ್ ಕ್ಲಿಯರೆನ್ಸ್ ಮತ್ತು ಟರ್ನಿಂಗ್ ತ್ರಿಜ್ಯ ಕ್ರಮವಾಗಿ 1200 ಎಂಎಂ, 255 ಎಂಎಂ ಮತ್ತು 1.75 ಎಂಎಂ ಆಗಿದೆ.

ಇದನ್ನೂ ಓದಿ: ಗೂಗಲ್​ ಟ್ರಾನ್ಸ್​ಲೇಟ್​ಗೆ 110 ಹೊಸ ಭಾಷೆಗಳ ಸೇರ್ಪಡೆ: ಕೋಟ್ಯಂತರ ಜನರಿಗೆ ಅನುಕೂಲ - Google Translate

ETV Bharat Logo

Copyright © 2024 Ushodaya Enterprises Pvt. Ltd., All Rights Reserved.