ETV Bharat / technology

ಯಶಸ್ವಿಯಾಗಿ ಕಕ್ಷೆ ಪ್ರವೇಶಿಸಿದ ಚೀನಾದ ಚಾಂಗ್'ಇ-6 ಚಂದ್ರಯಾನ ನೌಕೆ - China Lunar Probe - CHINA LUNAR PROBE

ಚೀನಾದ ಚಾಂಗ್'ಇ-6 ಚಂದ್ರಯಾನ ನೌಕೆಯು ತನ್ನ ಪರಿಧಿಯ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ ಎಂದು ಚೀನಾ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಚಾಂಗ್'ಇ-6 ಚಂದ್ರಯಾನ ನೌಕೆ
ಚಾಂಗ್'ಇ-6 ಚಂದ್ರಯಾನ ನೌಕೆ (IANS)
author img

By ETV Bharat Karnataka Team

Published : May 8, 2024, 2:10 PM IST

ಬೀಜಿಂಗ್: ಚೀನಾದ ಚಾಂಗ್'ಇ-6 ಚಂದ್ರಯಾನ ನೌಕೆಯು ತನ್ನ ಪರಿಧಿಯ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ ಸಂಸ್ಥೆ (ಸಿಎನ್ಎಸ್ಎ) ಬುಧವಾರ ತಿಳಿಸಿದೆ. ಸಿಎನ್ಎಸ್ಎ ಪ್ರಕಾರ, ಬುಧವಾರ ಬೆಳಗ್ಗೆ 10:12 ಕ್ಕೆ (ಸ್ಥಳೀಯ ಸಮಯ) ಚಾಂಗ್'ಇ -6 ಚಂದ್ರನ ಸುತ್ತ ಬ್ರೇಕಿಂಗ್ ಕಾರ್ಯವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದೆ.

ಚಂದ್ರನಿಗೆ ಅತಿ ಸನಿಹದಲ್ಲಿ ನಡೆಸಲಾಗುವ ಬ್ರೇಕಿಂಗ್ ಕಾರ್ಯವಿಧಾನವು ಚಾಂಗ್'ಇ -6 ಯಾನದ ಪ್ರಮುಖ ಕಕ್ಷೀಯ ನಿಯಂತ್ರಣ ಪ್ರಕ್ರಿಯೆಯಾಗಿದೆ. ಬ್ರೇಕಿಂಗ್ ಪ್ರಕ್ರಿಯೆಯು ಚಂದ್ರನ ಎಸ್ಕೇಪ್ ವೆಲಾಸಿಟಿ ಅಥವಾ ತಪ್ಪಿಸಿಕೊಳ್ಳುವ ವೇಗಕ್ಕಿಂತ ನೌಕೆಯ ಸಾಪೇಕ್ಷ ವೇಗವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ನೌಕೆಯು ಚಂದ್ರನ ಗುರುತ್ವಾಕರ್ಷಣೆಯಿಂದ ಬಂಧಿಯಾಗುತ್ತದೆ ಮತ್ತು ಅದು ಚಂದ್ರನ ಸುತ್ತಲೂ ಚಲಿಸುವಂತಾಗುತ್ತದೆ.

ಕ್ವೆಕಿಯಾವೊ -2 ರಿಲೇ ಉಪಗ್ರಹದ ಸಹಾಯದಿಂದ ಚಾಂಗ್'ಇ -6 ನಂತರ ಚಂದ್ರನ ಸುತ್ತಲಿನ ಕಕ್ಷೆಯ ಎತ್ತರ ಮತ್ತು ಓರೆಯನ್ನು ಸರಿಹೊಂದಿಸಿಕೊಳ್ಳುತ್ತದೆ ಮತ್ತು ಆರ್ಬಿಟರ್-ರಿಟರ್ನರ್ ಸಂಯೋಜನೆ ಮತ್ತು ಲ್ಯಾಂಡರ್-ಅಸೆಂಡರ್ ಸಂಯೋಜನೆಯ ಬೇರ್ಪಡಿಸುವಿಕೆಯನ್ನು ಕೈಗೊಳ್ಳಲು ಸರಿಯಾದ ಸಮಯವನ್ನು ಆಯ್ಕೆ ಮಾಡುತ್ತದೆ.

ತದನಂತರ ಲ್ಯಾಂಡರ್-ಅಸೆಂಡರ್ ಸಂಯೋಜನೆಯು ಯೋಜಿಸಿದಂತೆ ಚಂದ್ರನ ದೂರದ ಭಾಗದಲ್ಲಿ ಕಲ್ಲು, ಮಣ್ಣಿನ ಮಾದರಿಗಳನ್ನು ಸಂಗ್ರಹಿಸುವ ಮತ್ತು ಹಿಂದಿರುಗುವ ಕಾರ್ಯಾಚರಣೆಯನ್ನು ಕೈಗೊಳ್ಳಲು ದಕ್ಷಿಣ ಧ್ರುವ-ಐಟ್ಕೆನ್ ಜಲಾನಯನ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಲಿದೆ ಎಂದು ವರದಿ ತಿಳಿಸಿದೆ. ಚಾಂಗ್'ಇ -6 ಬಾಹ್ಯಾಕಾಶ ನೌಕೆಯು ಮೇ 3 ರಂದು ಲಾಂಗ್ ಮಾರ್ಚ್ -5 ರಾಕೆಟ್​ ಮೂಲಕ ಚಂದ್ರನ ದೂರದ ಬದಿಗೆ ಹಾರಿತ್ತು.

ನೌಕೆಯ ಗುರಿ ಏನು?: ಆರ್ಬಿಟರ್, ಲ್ಯಾಂಡರ್, ಅಸೆಂಡರ್ ಮತ್ತು ರಿಟರ್ನರ್ ಅನ್ನು ಒಳಗೊಂಡಿರುವ ಬಾಹ್ಯಾಕಾಶ ನೌಕೆಯು ಚಂದ್ರನ ಮೇಲ್ಮೈಯ ದೂರದ ಭಾಗದಿಂದ ಮಣ್ಣು, ಕಲ್ಲುಗಳನ್ನು ಸಂಗ್ರಹಿಸಿ ಭೂಮಿಗೆ ತರುವ ಗುರಿಯನ್ನು ಹೊಂದಿದೆ. ನೌಕೆಯು ಇದು ಫ್ರಾನ್ಸ್, ಸ್ವೀಡನ್, ಇಟಲಿ ಮತ್ತು ಪಾಕಿಸ್ತಾನದ ಉಪಗ್ರಹಗಳನ್ನು ಕೂಡ ಒಳಗೊಂಡಿದೆ ಎಂದು ಹೇಳಲಾಗಿದೆ.

ಈ ಬಾಹ್ಯಾಕಾಶ ನೌಕೆಯು ಚಂದ್ರನ ದೂರದ ಭಾಗದಿಂದ ಎರಡು ಕಿಲೋಗ್ರಾಂಗಳಷ್ಟು ಮಣ್ಣು, ಕಲ್ಲಿನ ಮಾದರಿಗಳನ್ನು ಮರಳಿ ತರುವ ನಿರೀಕ್ಷೆಯಿದೆ. ಇದು ಮನುಷ್ಯನ ಇತಿಹಾಸದಲ್ಲಿ ಈ ರೀತಿಯ ಮೊದಲ ಪ್ರಯತ್ನವಾಗಿದೆ. 2020 ರಲ್ಲಿ, ಚೀನಾ ತನ್ನ ಚಾಂಗ್'ಇ -5 ಮಿಷನ್ ಸಮಯದಲ್ಲಿ ಚಂದ್ರನ ಹತ್ತಿರದ ಭಾಗದಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ತಂದಿತ್ತು.

ಇದನ್ನೂ ಓದಿ : ಅತ್ಯಧಿಕ ಮಾರಾಟವಾದ ಸ್ಮಾರ್ಟ್​ಫೋನ್ ಆಗಿ ಹೊರಹೊಮ್ಮಿದ ಆ್ಯಪಲ್​ iPhone 15 Pro Max - APPLES IPHONE

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.